Numerology: ಪಾದಾಂಕ 5ರ ವ್ಯಕ್ತಿಗಳ 2022ರ ದಾಂಪತ್ಯ ರಹಸ್ಯ

Suvarna News   | Asianet News
Published : Jan 25, 2022, 09:19 AM IST
Numerology: ಪಾದಾಂಕ 5ರ ವ್ಯಕ್ತಿಗಳ 2022ರ ದಾಂಪತ್ಯ ರಹಸ್ಯ

ಸಾರಾಂಶ

ಸಂಖ್ಯೆಗಳನ್ನು ಆಧರಿಸಿ ಭವಿಷ್ಯವನ್ನು ಹೇಳುವ ಶಾಸ್ತ್ರವೇ ಸಂಖ್ಯಾಶಾಸ್ತ್ರ. ಸಂಖ್ಯಾ ಶಾಸ್ತ್ರದಲ್ಲಿ ಹುಟ್ಟಿದ ದಿನಾಂಕ ದಿಂದ ಬರುವ ಪಾದಾಂಕವನ್ನು ನೋಡಿ ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯಬಹುದು. ಪಾದಾಂಕ 5ರಲ್ಲಿ ಜನಿಸಿದ ವ್ಯಕ್ತಿಗಳ 2022ರ ಭವಿಷ್ಯದ ಕೆಲವು ವಿಚಾರಗಳ ಬಗ್ಗೆ ತಿಳಿಯೋಣ...

ಜ್ಯೋತಿಷ್ಯ ಶಾಸ್ತ್ರದ (Astrology) ಭಾಗವಾದ ಸಂಖ್ಯಾ ಶಾಸ್ತ್ರದಲ್ಲಿ (Numerology) ಹುಟ್ಟಿದ ದಿನಾಂಕದ ಆಧಾರದ ಮೇಲೆ ಭವಿಷ್ಯದ (Future) ವಿಚಾರಗಳನ್ನು ಅರಿಯಬಹುದು.
ಹೊಸ ಕ್ಯಾಲೆಂಡರ್ ವರ್ಷ ಆರಂಭವಾಗಿದೆ. ಹೀಗಾಗಿ ಭವಿಷ್ಯದಲ್ಲಿ ಮುಖ್ಯವಾಗಿ ಆರ್ಥಿಕ ಸ್ಥಿತಿ (Economy), ಆರೋಗ್ಯ (Health) ಹೀಗೆ  ಇನ್ನಿತರ ವಿಚಾರಗಳ ಬಗ್ಗೆ  ತಿಳಿಯುವ ಆಸಕ್ತಿ (Interest) ಎಲ್ಲರಿಗೂ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕದ (Horoscope) ಆಧಾರದ ಮೇಲೆ ಭವಿಷ್ಯವನ್ನು ತಿಳಿಯುವಂತೆ, ಸಂಖ್ಯಾ ಶಾಸ್ತ್ರದಲ್ಲಿ ತಿಳಿದು ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಸಲಾಗುತ್ತದೆ. ಇಲ್ಲಿ ಪಾದಾಂಕ ಐದರಲ್ಲಿ (Padanka 5) ಜನಿಸಿದ ವ್ಯಕ್ತಿಗಳ  2022ರ  ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿಯೋಣ....

ಮೂಲಾಂಕವನ್ನು ತಿಳಿಯುವುದು ಹೇಗೆ?
ಹುಟ್ಟಿದ ದಿನಾಂಕವನ್ನು ಕೂಡಿದಾಗ ಬಂದ ಸಂಖ್ಯೆಯನ್ನು ಪಾದಾಂಕವೆಂದು ಕರೆಯುತ್ತಾರೆ. ಹುಟ್ಟಿದ ದಿನಾಂಕ 3 ಎಂದಾದರೆ ಪಾದಾಂಕ 3 ಆಗುತ್ತದೆ. ಅದೇ ಜನಿಸಿದ ದಿನಾಂಕವು 13 ಆಗಿದ್ದರೆ ಒಂದು ಮತ್ತು ಮೂರನ್ನು ಕೂಡಿದಾಗ ಬರುವ ಸಂಖ್ಯೆ ನಾಲ್ಕು (Four) (1 + 3 = 4) ಇದು ಪಾದಾಂಕವಾಗಿರುತ್ತದೆ. ಪಾದಾಂಕದಿಂದ ವ್ಯಕ್ತಿ ಬಗೆಗಿನ ವಿಚಾರಗಳನ್ನು ತಿಳಿಯಬಹುದೆಂದು ಸಂಖ್ಯಾಶಾಸ್ತ್ರ ಹೇಳುತ್ತದೆ.  

ಪಾದಾಂಕ 5ರ (Five) ತಾರೀಖುಗಳು ಯಾವುವು?
ಪಾದಾಂಕ 5ರ ದಿನಾಂಕದ ಬಗ್ಗೆ ಗಮನಿಸುವುದಾದರೆ, ಯಾವುದೇ ತಿಂಗಳ 5, 14 ಮತ್ತು 23ನೇ ತಾರೀಖಿನಂದು ಜನಿಸಿದವರು ಈ ಪಾದಾಂಕಕ್ಕೆ ಸೇರುತ್ತಾರೆ. 

ಇದನ್ನು ಓದಿ: Horoscope Benefits: ನಿಮಗಿದೆಯೇ ಧೀರ್ಘಾಯುಷ್ಯ, ಅಧಿಕಾರ ತರುವ ಶಶ ಯೋಗ?

ಸಂಖ್ಯಾ ಶಾಸ್ತ್ರದ ಪ್ರಕಾರ ಪಾದಾಂಕ ಐದರಲ್ಲಿ ಜನಿಸಿದ ವ್ಯಕ್ತಿಗಳಿಗೆ  ಈ ವರ್ಷ ಅಂದರೆ 2022  ಸಾಮಾನ್ಯವಾಗಿರಲಿದೆ. ಕಾರ್ಯ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ (Improvement) ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಉದ್ಯೋಗ (Job) ಸ್ಥಳದಲ್ಲಿ ಮಾಡಿದ ಕೆಲಸಕ್ಕೆ ತಕ್ಕ ಫಲ ಸಿಗುತ್ತದೆ. ಈ ವರ್ಷ ಉದ್ಯೋಗದಲ್ಲಿ ಬಡ್ತಿ (Promotion) ಸಿಗುವ ಸಾಧ್ಯತೆಯಿದೆ ಇಲ್ಲವೇ, ಉತ್ತಮ ಆದಾಯ (Income) ಬರುವ ಉದ್ಯೋಗ ಅವಕಾಶವೂ ಲಭಿಸುತ್ತದೆ. ಪಾದಾಂಕ ಐದರ ವ್ಯಕ್ತಿಗಳು ಈ ವರ್ಷ ಉತ್ತಮ ಮಿತ್ರರನ್ನು, ಸಹೋದ್ಯೋಗಿಗಳನ್ನು ಪಡೆಯುತ್ತಾರೆ. ವ್ಯಾಪಾರಸ್ಥರಿಗೆ ಈ ವರ್ಷ ಉತ್ತಮವಾಗಿದೆ. ವ್ಯಾಪಾರದಲ್ಲಿ (Business) ಹೆಚ್ಚಿನ ಲಾಭ (Profit) ಗಳಿಸಲು ಹಲವಾರು ಅವಕಾಶಗಳು  ವರ್ಷ ಲಭಿಸುತ್ತದೆ.  ಹೊಸ ವ್ಯಕ್ತಿಗಳ ಸಂಪರ್ಕವು ಈ ವರ್ಷ ಲಾಭ ತರಲಿದೆ. ಈ ವರ್ಷದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.

ಈ ವರ್ಷ ಖಾಸಗಿ ಜೀವನ (Life) ಉತ್ತಮವಾಗಿರಲಿದ್ದು, ಪ್ರೀತಿ (Love) ಪಾತ್ರರೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡುವುದಲ್ಲದೆ, ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಾರೆ. 

ಪಾದಾಂಕ ಐದರಲ್ಲಿ ಜನಿಸಿದ ವ್ಯಕ್ತಿಗಳ ದಾಂಪತ್ಯ ಜೀವನ (Married Life) ಈ ವರ್ಷ ಸಂತೋಷದಿಂದ ಕೂಡಿರಲಿದೆ. ಸಂಗಾತಿ ಜತೆಗಿನ ಬಾಂಧವ್ಯ ಹೆಚ್ಚು ಗಟ್ಟಿಗೊಳ್ಳುತ್ತದೆ. ಸಂತಾನಕ್ಕಾಗಿ ಯೋಚಿಸುತ್ತಿರುವವರಿಗೆ, ಸಂತಾನ ಪಡೆಯಲು ಇದು ಅನುಕೂಲ ಸಮಯವಾಗಿದೆ. ಮದುವೆಗಾಗಿ ಯೋಚಿಸುತ್ತಿರುವವರಿಗೆ ಈ ವರ್ಷ ಕಂಕಣಭಾಗ್ಯ ಕೂಡಿ ಬಂದು ವಿವಾಹ ವಾಗುವ ಯೋಗವಿದೆ. 

ಇದನ್ನು ಓದಿ: No Moon Day: ಅಮಾವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರಬೇಡಿ..

ಶೈಕ್ಷಣಿಕ ಪ್ರಗತಿ ಹೇಗೆ?
ಶೈಕ್ಷಣಿಕ ಕ್ಷೇತ್ರದ (Education Sector) ಬಗ್ಗೆ ಹೇಳುವುದಾದರೆ ಈ ವರ್ಷ ಪಾದಾಂಕ ಐದರಲ್ಲಿ ಜನಿಸಿದವರಿಗೆ, ಕಲಿಕೆಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಮೀಡಿಯಾ (Media), ಬರವಣಿಗೆ (Writing) ಮತ್ತು ಗಣಿತ (Mathematics)  ಕ್ಷೇತ್ರದಲ್ಲಿನ ಈ ಪಾದಾಂಕದವರಿಗೆ ಉತ್ತಮ ಪರಿಣಾಮಗಳು ಈ ವರ್ಷದಲ್ಲಿ ಲಭಿಸಲಿವೆ. ಉನ್ನತ ಶಿಕ್ಷಣಕ್ಕಾಗಿ ಹೊರದೇಶಗಳಿಗೆ ಹೋಗುವ ಯೋಚನೆ ಹಾಕಿಕೊಂಡಿದ್ದರೆ ಅದು ಈ ವರ್ಷ ಸಫಲವಾಗಲಿದೆ. ಆರೋಗ್ಯದ (Health) ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಉತ್ತಮ. ಸಾಮಾನ್ಯ ಶೀತ ಜ್ವರ ಗಳು ಬಾಧಿಸುವ ಸಾಧ್ಯತೆ ಇದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಲ್ಲಿ ಇವುಗಳಿಂದ ಪಾರಾಗಬಹುದಾಗಿದೆ. 

PREV
Read more Articles on
click me!

Recommended Stories

ಮಂಗಳ-ಶನಿ ಘರ್ಷಣೆಯಿಂದ ಈ ರಾಶಿ ಅದೃಷ್ಟ ಬದಲು, ಕೈ ತುಂಬಾ ಹಣ.. ಹೆಜ್ಜೆ ಹೆಜ್ಜೆಗೂ ಯಶಸ್ಸು
ಈ ಅದ್ಭುತ ರಾಜಯೋಗಗಳು 2026 ರಲ್ಲಿ, ಈ ರಾಶಿಗೆ ಬೊಂಬಾಟ್‌ ಲಕ್‌, ಲಾಟರಿ