Astro Tips: ಈ ರಾಶಿಯವರು ಪಚ್ಚೆ ಹರಳನ್ನು ಧರಿಸಿದರೆ ಸಮಸ್ಯೆಗಳು ಹೆಚ್ಚುತ್ತವೆ..

By Suvarna News  |  First Published Jan 24, 2022, 3:04 PM IST

ರತ್ನಗಳಲ್ಲಿ ಎಲ್ಲವೂ ಎಲ್ಲರಿಗೂ ಆಗಿ ಬರುವುದಿಲ್ಲ. ಪಚ್ಚೆಯು ಈ ಕೆಲ ರಾಶಿಯವರಿಗೆ ಆಗಿ ಬರೋಲ್ಲ. 


ಬದುಕಿನಲ್ಲಿ ಮುತ್ತು ರತ್ನ ಹವಳಗಳ ಪ್ರಾಮುಖ್ಯತೆ ಇಂದು ನಿನ್ನೆಯದಲ್ಲ. ಅವು ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಆಗಿವೆ. ನಮ್ಮ ಸೌಂದರ್ಯ ಹೆಚ್ಚಿಸುವ ಜೊತೆಗೆ, ಜಾತಕಕ್ಕೆ ಸರಿಯಾದ ರತ್ನ(gem)ವನ್ನು ಧರಿಸಿದರೆ ಅದರಿಂದ ಜೀವನಕ್ಕೆ ಹಲವಾರು ಲಾಭಗಳಿವೆ. ಮಗು ಹುಟ್ಟಿದ ಸಮಯ ನೋಡಿಕೊಂಡು ಜಾತಕ(horoscope) ತಯಾರಿಸಲಾಗುತ್ತದೆ. ಆ ಸಂದರ್ಭದಲ್ಲಿ ಗ್ರಹಗಳು ಎಲ್ಲೆಲ್ಲಿ ಇರುತ್ತವೆ ಎಂಬ ಆಧಾರದ ಮೇಲೆ ಆಯಾ ವ್ಯಕ್ತಿಯ ರಾಶಿ, ನಕ್ಷತ್ರ ನಿರ್ಧರಿತವಾಗುತ್ತದೆ. ಪ್ರತಿ ರಾಶಿಗೂ ಅದರದೇ ಆದ ಕಾರಕ ಗ್ರಹಗಳು(friend planet) ಹಾಗೂ ಮಾರಕ ಗ್ರಹಗಳು(enemy planet) ಇರುತ್ತವೆ. 

ಪ್ರತಿ ರಾಶಿಗೂ, ಅದರ ಕಾರಕ ಗ್ರಹಕ್ಕೂ ಹೊಂದುವ ಹಾಗೂ ಹೊಂದದ ರತ್ನಗಳಿರುತ್ತವೆ. ವ್ಯಕ್ತಿಯ ಜೀವನದಲ್ಲಿ ಸಮಸ್ಯೆಯಾದಾಗ ಆತನ ಜಾತಕ ನೋಡಿ ಜ್ಯೋತಿಷಿಗಳು ಯಾವುದಾದರೂ ರತ್ನ ಧರಿಸುವಂತೆ ಸಲಹೆ ಮಾಡುವುದು ಗೊತ್ತೇ ಇದೆ. ಇದಕ್ಕೆ ಕಾರಣ ಕೆಲ ರತ್ನಗಳು ಕೆಲ ಗ್ರಹಗಳಿಗೆ ತುಂಬಾ ಚೆನ್ನಾಗಿ ಆಗಿಬಂದರೆ ಮತ್ತೆ ಕೆಲವಕ್ಕೆ ಆಗಿ ಬರುವುದಿಲ್ಲ. ಕೆಲ ಗ್ರಹಗಳಿಂದಾಗುವ ಸಮಸ್ಯೆಗಳನ್ನು ಅವು ತಗ್ಗಿಸಬಲ್ಲವು. 
ರತ್ನಗಳ ಧರಿಸುವಿಕೆಯಿಂದ ಜೀವನದಲ್ಲಿ ನೆಮ್ಮದಿಯೂ, ಯಶಸ್ಸೂ ದೊರೆಯುವುದು. ಅವು ನಮ್ಮ ಜಾತಕ ಸ್ನೇಹಿ ಗ್ರಹಕ್ಕೆ ಬಲ ತಂದುಕೊಡುತ್ತವೆ. ರತ್ನವನ್ನು ಯಾವುದೆಂದರೆ ಆ ಮೆಟಲ್ ಜೊತೆ ಸೇರಿಸಿ ಧರಿಸಕೂಡದು. ಸಾಮಾನ್ಯವಾಗಿ ರತ್ನವನ್ನು ಬಂಗಾರ(gold) ಇಲ್ಲವೇ ಬೆಳ್ಳಿ(silver)ಯೊಂದಿಗೆ ಧರಿಸಬೇಕು. 

Horoscope Benefits: ನಿಮಗಿದೆಯೇ ಧೀರ್ಘಾಯುಷ್ಯ, ಅಧಿಕಾರ ತರುವ ಶಶ ಯೋಗ?

Tap to resize

Latest Videos

undefined

ಪಚ್ಚೆ(emerald)
ಈಗ ಪಚ್ಚೆಯ ವಿಷಯಕ್ಕೆ ಬರೋಣ. ಪಚ್ಚೆಯು ಬುಧ ಗ್ರಹದ ಪ್ರತಿನಿಧಿ. ಜಾತಕದಲ್ಲಿ ಬುಧ ಗ್ರಹ ಬಲವಾಗಿದ್ದರೆ, ಆ ವ್ಯಕ್ತಿಯ ಸಂವಹನ ಕಲೆ, ವ್ಯಾಪಾರಿ ಕೌಶಲ ತುಂಬಾ ಚೆನ್ನಾಗಿರುತ್ತದೆ. ಬುಧನನ್ನು ಬಲಗೊಳಿಸಲು ಪಚ್ಚೆ ಧರಿಸುವುದು ಸರಿಯಷ್ಟೇ. ಆದರೆ, ಅದಕ್ಕೂ ಮುನ್ನ ಜಾತಕವನ್ನು ಒಳ್ಳೆಯ ಜ್ಯೋತಿಷಿಯಲ್ಲಿ ತೋರಿಸಿ ಸಲಹೆ ಪಡೆಯಬೇಕು. ಇಲ್ಲದಿದ್ದರೆ ಪಚ್ಚೆ ನಿಮಗೆ ಹೊಂದದೆ ಮನಸ್ಸು ಹಾಗೂ ಬುದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊತ್ತು ತರಬಹುದು. ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು. ಹಾಗಿದ್ದರೆ, ಯಾರು ಪಚ್ಚೆ ಧರಿಸಕೂಡದು, ಅವರು ಧರಿಸಿದರೆ ಆಗುವ ಸಮಸ್ಯೆಗಳೇನು ನೋಡೋಣ. 

           Cancer Bad Traits: ಕಟಕ ರಾಶಿಯವರ ಕೆಟ್ಟ ಗುಣಗಳಿವು..

ಇವರು ಪಚ್ಚೆ ಧರಿಸಬಾರದು

  • ವ್ಯಕ್ತಿಯ ಜಾತಕದ 6, 8, 12ನೇ ಮನೆಯ ಅಧಿಪತಿ ಬುಧ(Mercury)ನಾಗಿದ್ದರೆ, ಅಂಥವರು ಪಚ್ಚೆ ಧರಿಸಕೂಡದು. ಒಂದು ವೇಳೆ ಪಚ್ಚೆ ಧರಿಸಿದರೆ ಅದರಿಂದ ಇದ್ದಕ್ಕಿದ್ದಂತೆ ಬಹಳಷ್ಟನ್ನು ಕಳೆದುಕೊಳ್ಳುವ ಸ್ಥಿತಿ ಉಂಟಾಗಬಹುದು. 
  • ವ್ಯಕ್ತಿಯ ಜೀವನದಲ್ಲಿ ಬುಧನ ಮಹಾದಶ ನಡೆಯುತ್ತಿದ್ದರೆ ಹಾಗೂ ಬುಧನು ಜಾತಕದ 8 ಮತ್ತು 12ನೇ ಮನೆಯಲ್ಲಿದ್ದರೆ, ಆಗ ಪಚ್ಚೆ ಧರಿಸುವುದು ಕ್ಷೇಮವಲ್ಲ. 
  • ಇದರ ಹೊರತಾಗಿ ಈ ರಾಶಿಯವರು ಅಪ್ಪಿ ತಪ್ಪಿಯೂ ಪಚ್ಚೆ ಧರಿಸಬಾರದು. 

ಮೇಷ(Aries): ಈ ರಾಶಿಯವರಿಗೆ ಮಂಗಳ(Mars) ಪ್ರಮುಖ ಗ್ರಹ. ಬುಧನಿಗೂ ಮಂಗಳಕ್ಕೂ ಅಷ್ಟಕ್ಕಷ್ಟೇ. ಹಾಗಾಗಿ, ಬುಧನು 3, 7 ಅಥವಾ 10ನೇ ಮನೆಯಲ್ಲಿಲ್ಲದ ಹೊರತು ಮೇಷ ರಾಶಿಯವರು ಪಚ್ಚೆ ಧರಿಸಕೂಡದು. 
ಕಟಕ(Cancer): ಈ ರಾಶಿಯವರೂ ಬುಧನ ಅನುಗ್ರಹ ಜೋರಾಗಿಲ್ಲವೆಂದರೆ ಪಚ್ಚೆ ಧರಿಸಬಾರದು. 
ವೃಶ್ಚಿಕ(Scorpio): ನಿಮ್ಮದು ವೃಶ್ಚಿಕ ರಾಶಿಯಾಗಿದ್ದರೆ, ಪಚ್ಚೆ ನಿಮಗೆ ಆಗಿಬರುವುದಿಲ್ಲ. ಬುಧನು ನಿಮಗೆ ಮಧ್ಯ ಗ್ರಹವಾಗಿದ್ದರೆ ಆಗ ಮಾತ್ರ ಪಚ್ಚೆ ಧರಿಸಬಹುದು. 

ಇದರ ಹೊರತಾಗಿ ಮೀನ ಹಾಗೂ ಕುಂಭ ರಾಶಿಗಳು ಕೂಡಾ ನಂಬಿಕಸ್ಥ ಜ್ಯೋತಿಷಿಗಳನ್ನು ಭೇಟಿ ಮಾಡಿ ಪಚ್ಚೆ ಧರಿಸಬಹುದೇ ಎಂದು ಜಾತಕ ತೋರಿಸಿ ಸಲಹೆ ಪಡೆಯಬೇಕು. 

click me!