Healing Temple: ಸರ್ವ ರೋಗ ನಿವಾರಕ, ವೈದ್ಯರಿಗೇ ವೈದ್ಯ ಈ ವೈದ್ಯನಾಥೇಶ್ವರ

By Suvarna News  |  First Published Jan 24, 2022, 5:02 PM IST

ಈ ದೇವಾಲಯ ಡಾಕ್ಟರ್ಸ್ ಟೆಂಪಲ್ ಎಂದೇ ಹೆಸರಾಗಿದೆ. ಇದಕ್ಕೆ ಆರೋಗ್ಯ ಸಮಸ್ಯೆಗಳನ್ನು ನೀಗಿಸುವ ಇದರ ವಿಶೇಷ ಶಕ್ತಿಯೇ ಕಾರಣ. ಯಾವುದು ಈ ದೇವಾಲಯ?


ದಕ್ಷಿಣ ಕನ್ನಡ ದೇವಾಲಯಗಳ ಬೀಡು. ಅಲ್ಲಿನ ಬಹುತೇಕ ದೇವಾಲಯಗಳು ವಿಶಾಲವಾಗಿದ್ದು ಹೆಚ್ಚು ಪ್ರಸಿದ್ಧಿ ಪಡೆದಿವೆ. ಇವುಗಳಲ್ಲಿ ತನ್ನ ವೈಶಿಷ್ಠ್ಯತೆಗಾಗಿ ಹೆಸರು ಮಾಡಿರುವುದು ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಾಲಯ(Vaidyanatheshwara temple). ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡ ಕ್ಷೇತ್ರವು ಧನ್ವಂತರಿ ಕ್ಷೇತ್ರವೆಂದೇ ಹೆಸರಾಗಿದೆ. ಇದು ಧರ್ಮಸ್ಥಳದಿಂದ 15 ಕಿಲೋಮೀಟರ್ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಎರಡೂವರೆ ಕಿಲೋಮೀಟರ್ ದೂರದಲ್ಲಿದೆ. 

ಈ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ದೇವರು ಭಕ್ತರ ಅನಾರೋಗ್ಯ ದೂರ ಮಾಡಿ ಆರೋಗ್ಯ ಕೊಡುವುದರಿಂದ ಆತನನ್ನು ವೈದ್ಯನಾಥೇಶ್ವರ ಎನ್ನಲಾಗುತ್ತದೆ. ಆತನ ಅಪಾರ ಪವಾಡಗಳಿಂದಾಗಿ ಈ ದೇವಾಲಯಕ್ಕೆ ಡಾಕ್ಟರ್ಸ್ ಟೆಂಪಲ್(doctor’s temple) ಎಂದೇ ಹೇಳಲಾಗುತ್ತದೆ. ಸರ್ವ ವೈದ್ಯರಿಗೂ ವೈದ್ಯನೆನಿಸಿಕೊಂಡಿದ್ದಾನೆ ವೈದ್ಯನಾಥೇಶ್ವರ. ಸರ್ವ ರೋಗ ಹರನಾಗಿದ್ದಾನೆ. ಎಲ್ಲಿಯೂ ಗುಣವಾಗದ ಕಾಯಿಲೆಗಳು ಇಲ್ಲಿನ ದೇವರಲ್ಲಿ ಹರಕೆ ಹೇಳಿಕೊಂಡಾಗ ನಿವಾರಣೆಯಾಗಿ ಅಚ್ಚರಿ ಮೂಡಿಸಿವೆ. ವೈದ್ಯನಾಥನ ಹೊರತಾಗಿ ಇಲ್ಲಿ ಗಣಪತಿ, ವಿಷ್ಣು, ದೈವಗಳು, ಪಂಜುರ್ಳಿ ಸೇರಿದಂತೆ ಬಹಳಷ್ಟು ದೇವರಿಗೆ ಪೂಜೆ ನಡೆಯುತ್ತದೆ. 

Latest Videos

undefined

ಇತಿಹಾಸ
ದ್ವಾಪರ ಯುಗದಲ್ಲಿ ಇಲ್ಲಿನ ಉದ್ಭವ ಮೂರ್ತಿಯನ್ನು ಪಾಂಡವರು ದರ್ಶನ ಮಾಡಿದ್ದರು. ಇಲ್ಲಿನ ಕಲ್ಯಾಣಿಯನ್ನು ಭೀಮಸೇನ ನಿರ್ಮಿಸಿರುವ ಬಗ್ಗೆ ಐತಿಹ್ಯವಿದೆ.

ಮಧ್ವಾಚಾರ್ಯರು(Madhva)
ಹಿಂದೆ ಇಲ್ಲಿ ಬರಗಾಲ ಬಂದಾಗ ಮಧ್ವಾಚಾರ್ಯರು ಇಲ್ಲಿ ಪರ್ಜನ್ಯ ಜಪ ಮಾಡಿದ್ದರು. ನಂತರ ವರುಣ ಒಲಿದು ಕ್ಷೇತ್ರ ಸುಭಿಕ್ಷವಾಯಿತು. ಇಂದಿಗೂ ಮಳೆ ಕೊರತೆಯಾದಾಗ ಇಲ್ಲಿ ಪರ್ಜನ್ಯ ಹೋಮ ನಡೆಸಲಾಗುತ್ತದೆ. 

ಅನಾರೋಗ್ಯ ನಿವಾರಿಸುವ ದೇವರು
ಆರು ವರ್ಷದ ಹಿಂದೆ ಇಲ್ಲಿ ಇಡೀ ಊರು ಚಿಕನ್‌ಗೂನ್ಯಾ(chickengunya)ದಿಂದ ನರಳುತ್ತಿತ್ತಂತೆ. ಆಗ ಪ್ರತಿಯೊಬ್ಬರೂ ವೈದ್ಯನಾಥೇಶ್ವರನಿಗೆ ಎಳನೀರು ಅರ್ಪಿಸುವುದಾಗಿ ಹೇಳಿಕೊಂಡರಂತೆ. ಪವಾಡವೆಂಬಂತೆ ಪ್ರತಿಯೊಬ್ಬರೂ ಸಂಪೂರ್ಣ ಚೇತರಿಸಿಕೊಂಡರು. ನಂತರದಿಂದ ಸೀಯಾಳ ಅಭಿಷೇಕ ಮಾಡಿಸುವುದು ಇಲ್ಲಿ ಜನಪ್ರಿಯವಾಗಿದೆ. ತಮ್ಮ ಕಾಯಿಲೆಗಳ ನಿವಾರಣೆಗಾಗಿ ಪ್ರಾರ್ಥನೆ ಮಾಡುವವರು ವೈದ್ಯನಾಥೇಶ್ವರನಿಗೆ ಎಳನೀರು(tender coconut) ಅಭಿಷೇಕ ಮಾಡಿಸುತ್ತಾರೆ. 
ಅಸ್ತಮಾ, ಉಸಿರಾಟ ಸಮಸ್ಯೆ, ಉಬ್ಬಸವಿರುವವರು ತಮಗೆ ಗುಣವಾದರೆ ಇಲ್ಲಿ ಬಂದು ಹಗ್ಗ ಸಮರ್ಪಿಸುವುದಾಗಿ ಹೇಳಿಕೊಳ್ಳಬೇಕು. ಅವು ಗುಣವಾಗುವುದು ಮಾತ್ರವಲ್ಲ, ಮತ್ತೆಂದೂ ಆ ಕಾಯಿಲೆಗಳು ಕಾಣಸಿಕೊಳ್ಳುವುದಿಲ್ಲ. 

Astro Tips: ಈ ರಾಶಿಯವರು ಪಚ್ಚೆ ಹರಳನ್ನು ಧರಿಸಿದರೆ ಸಮಸ್ಯೆಗಳು ಹೆಚ್ಚುತ್ತವೆ..

ಇನ್ನು ಕುಷ್ಠ ರೋಗ ಸೇರಿದಂತೆ ಚರ್ಮದ ಯಾವುದೇ ರೋಗಗಳಿರುವವರು(skin diseases) ಇಲ್ಲಿ ಭೀಮಸೇನ ನಿರ್ಮಿಸಿರುವ ಕಲ್ಯಾಣಿಯಲ್ಲಿ ಮುಳುಗೆದ್ದರೆ, ಆ ತೀರ್ಥ ಪ್ರೋಕ್ಷಣೆ ಮಾಡಿಕೊಂಡರೆ ಗುಣಮುಖರಾಗುತ್ತಾರೆ. ವೈದ್ಯರಿಂದಲೂ ಗುಣಪಡಿಸಲಾಗದ ಕಾಯಿಲೆಗಳನ್ನು ಈ ಕಲ್ಯಾಣಿಯ ಔಷಧಯುಕ್ತ ನೀರು ಗುಣಪಡಿಸಿದೆ ಎಂಬುದು ಗಮನಾರ್ಹ. 
ತಮಗೆ ಇಲ್ಲವೇ ತಮ್ಮ ಜಾನುವಾರುವಿಗೆ ಅನಾರೋಗ್ಯ ಕಾಡಿದಾಗ ಸ್ಥಳೀಯರು ದೇವರಿಗೆ ಹಸಿರು ಹುಲ್ಲ(Green grass)ನ್ನು ಸಮರ್ಪಿಸುವುದಾಗಿ ಹೇಳಿಕೊಳ್ಳುತ್ತಾರೆ. ನಂತರ ದೇವಾಲಯ ಆಡಳಿತದ ಭತ್ತದ ಗದ್ದೆಗೆ ಹಸಿರು ಹುಲ್ಲು ಕೊಡುವ ಜೊತೆಗೆ ತಮ್ಮ ಜಾನುವಾರುವನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಇಷ್ಟು ಮಾಡಿದರೆ ಜಾನುವಾರುಗಳು ಸಂಪೂರ್ಣ ಹುಷಾರಾಗುತ್ತವೆ. ಆಗ ಭಕ್ತರಿಗೆ ಇಲ್ಲಿನ ಗದ್ದೆಯ ಮಣ್ಣು ಹಾಗೂ ನೀರನ್ನೇ ತೀರ್ಥ ಪ್ರಸಾದವಾಗಿ ವಿತರಿಸಲಾಗುತ್ತದೆ. 

Science Behind Culture: ಸೋಮವಾರ, ಶನಿವಾರ ಮಾಂಸಾಹಾರ ತಿನ್ನಬೇಡಿ ಅನ್ನೋದು ಏಕೆ?

ಔಷಧ(Medicine)
ಸಾಮಾನ್ಯವಾಗಿ ವೈದ್ಯನಾಥೇಶ್ವರನಿಗೆ ಅಭಿಷೇಕ ನಡೆಸುವ ತೈಲ(oil)ವನ್ನೇ ಮದ್ದಾಗಿ ಇಲ್ಲಿ ಕೊಡುತ್ತಾರೆ.
ಆಟಿ ಅಮಾವಾಸ್ಯೆಯಂದು ಪ್ರಾತಃಕಾಲ ಮರದ ಕೆತ್ತೆಯ ರಸವನ್ನು ಸ್ವಾಮಿಗೆ ಅಭಿಷೇಕ ಮಾಡಿ ಭಕ್ತರಿಗೆ ತೀರ್ಥವಾಗಿ ಕೊಡಲಾಗುತ್ತದೆ. 

ಮುಂದಿನ ಬಾರಿ ದಕ್ಷಿಣ ಕನ್ನಡಕ್ಕೆ ಹೋದಾಗ ಕೊಕ್ಕಡ ಶ್ರೀ ಕ್ಷೇತ್ರಕ್ಕ ಭೇಟಿ ಕೊಡುವುದು ಮರೆಯಬೇಡಿ.
 

click me!