Margi Shukra 2022: ಇಂದಿನ ಶುಕ್ರ ಮಾರ್ಗಿಯಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

By Suvarna News  |  First Published Jan 29, 2022, 1:07 PM IST

ಇಂದು ಶುಕ್ರ ಮಾರ್ಗಿ ಘಟಿಸಲಿದೆ. ಇದರಿಂದ ಬಹಳಷ್ಟು ರಾಶಿಗಳ ಅದೃಷ್ಟ ಖುಲಾಯಿಸಲಿದೆ. ನಿಮ್ಮ ರಾಶಿಗೆ ಶುಕ್ರನ ಅನುಗ್ರಹ ದೊರೆಯುವುದೇ ನೋಡಿ..


ಗ್ರಹಗಳು ಹಿಮ್ಮುಖ ಚಲನೆಗೆ ತೊಡಗಿದಾಗ ಅದರಿಂದ ಬಹಳಷ್ಟು ನಕಾರಾತ್ಮಕ ಫಲಿತಾಂಶಗಳು ಎದುರಾಗುತ್ತವೆ. ಇದನ್ನು ವಕ್ರಿ ಎನ್ನಲಾಗುತ್ತದೆ. ಅದೇ ಗ್ರಹಗಳ ನೇರ ಚಲನೆಯನ್ನು ಮಾರ್ಗಿ ಎನ್ನಲಾಗುತ್ತದೆ. ಜನವರಿ 29ರ ಶುಕ್ರ ಮಧ್ಯಾಹ್ನ 2.14ಕ್ಕೆ ಮಾರ್ಗಿ ಆರಂಭವಾಗುತ್ತಿದೆ. ಶುಕ್ರನು ಸಧ್ಯ ಮಕರ(Capricorn) ರಾಶಿಯಲ್ಲಿದ್ದು, ಶುಕ್ರನ ಈ ನಡೆಯಿಂದ ಎಲ್ಲ ರಾಶಿಗಳ ಮೇಲೂ ಪರಿಣಾಮವಾಗುತ್ತದೆ. ಆದರೆ, ಕೆಲ ರಾಶಿಗಳಿಗೆ ಶುಕ್ರ ಮಾರ್ಗಿ(Margi Venus)ಯಿಂದ ಬಹಳಷ್ಟು ಲಾಭಗಳಿವೆ.. ಶುಕ್ರ ಮಾರ್ಗಿಯಿಂದ ಯಾವ ರಾಶಿಗೆ ಏನು ಲಾಭ ನೋಡೋಣ. 

ಮೇಷ(Aries)
ಶುಕ್ರನು ಈಗ ಮೇಷ ರಾಶಿಯ 9ನೇ ಮನೆಯಲ್ಲಿದ್ದಾನೆ. ಈ ಮನೆಯು ಅದೃಷ್ಟ(luck)ದ ಸ್ಥಳವಾಗಿದೆ. ಈ ರಾಶಿಯ ಜನರಿಗೆ ಶುಕ್ರನು ಸಾಕಷ್ಟು ಅದೃಷ್ಟವನ್ನು ತರಲಿದ್ದಾನೆ. ಅರ್ಧಕ್ಕೆ ನಿಂತ ಕೆಲಸಗಳೆಲ್ಲ ಮುಂದುವರಿದು ಕೊನೆ ಕಾಣಲಿದ್ದಾನೆ. ಜೊತೆಗೆ, ನೀವು ಮಾಡುವ ಕೆಲಸಗಳಲ್ಲೆಲ್ಲ ಈ ಸಮಯದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ. ಆರ್ಥಿಕ(economic)ವಾಗಿ ಬಲವಾಗಿರಲಿದ್ದೀರಿ. ಹಣದ ವಿಷಯಕ್ಕೆ ಈಗ ಹೆದರುವ ಅಗತ್ಯವೇ ಇಲ್ಲ. ಪ್ರತಿದಿನ ಲಕ್ಷ್ಮೀ ದೇವಿಗೆ ಆರತಿ ಮಾಡಲು ಮರೆಯಬೇಡಿ. 

Tap to resize

Latest Videos

undefined

ವೃಷಭ(Taurus)
ವೃಷಭದ 8ನೇ ಮನೆಯಲ್ಲಿ ಶುಕ್ರನ ಚಲನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಹಣ ದೊರಕುವ ಸಾಧ್ಯತೆ ಇರುತ್ತದೆ. ಪ್ರತಿದಿನ ಲಕ್ಷ್ಮೀ ದೇವಿಗೆ ಆರತಿ ಮಾಡಿ.

ಮಿಥುನ(Gemini)
ಈ ರಾಶಿಯ 7ನೇ ಮನೆಯಲ್ಲಿ ಶುಕ್ರನ ಚಲನೆ ನಡೆಯುತ್ತಿದೆ. ಉದ್ಯೋಗ ಸ್ಥಳದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಭಡ್ತಿಗೂ ಅವಕಾಶಗಳಿವೆ. ನಿಮ್ಮ ಸಂಗಾತಿಯಿಂದ ಸಂಪೂರ್ಣ ಸಹಕಾರ ಸಿಕ್ಕಿ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತದೆ. ಪ್ರತಿ ಶುಕ್ರವಾರ ಲಕ್ಷ್ಮೀ ಪೂಜೆ ನಡೆಸಿ. 

ಕಟಕ(Cancer)
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಯಶ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಶತ್ರುಗಳು(enemies) ಎಷ್ಟೇ ಪ್ರಯತ್ನ ಪಟ್ಟರೂ ಈ ಸಂದರ್ಭದಲ್ಲಿ ನಿಮ್ಮನ್ನವರು ಸೋಲಿಸಲಾರರು. ಶುಕ್ರವಾರದಂದು ಹಸುವಿಗೆ ಹಸಿರು ಮೇವು(green fodder) ತಿನ್ನಿಸಿ. 

ಸಿಂಹ(Leo)
ನಿಮ್ಮ ಯೋಜನೆಗಳೆಲ್ಲ ಯಶಸ್ಸಿನ ಹೊಸ್ತಿಲು ದಾಟುತ್ತವೆ. ಮಕ್ಕಳಿಂದ ಅಪಾರ ಸಂತೋಷವಿದೆ. ಶಿಕ್ಷಣ(education) ಕ್ಷೇತ್ರದಲ್ಲಿರುವವರಿಗೆ ಬಹಳಷ್ಟು ದೊಡ್ಡ ಲಾಭಗಳಿವೆ. ಯಾವುದೋ ವಿಷಯಗಳಿಗಾಗಿ ಹಣ ಎಲ್ಲೆಲ್ಲೋ ನಿಂತಿದ್ದರೆ ಅದು ಈ ಸಂದರ್ಭದಲ್ಲಿ ಕೈಗೆ ದೊರಕುತ್ತದೆ. ಮನೆಯ ಹೆಂಗಸರನ್ನು ಖುಷಿಯಾಗಿಟ್ಟುಕೊಳ್ಳಿ. ಲಕ್ಷ್ಮಿಯನ್ನು ಪೂಜಿಸಿ, ಬಿಳಿ ವಸ್ತ್ರ ಧರಿಸಿ. 

Gayatri Mantra: ಧೀ ಶಕ್ತಿ ಹೆಚ್ಚಿಸುವ ಗಾಯತ್ರಿ ಮಂತ್ರ, ಪಠಣದ ಲಾಭ ಒಂದೆರಡಲ್ಲ..

ಕನ್ಯಾ(Virgo)
ಆಸ್ತಿ ಖರೀದಿ ಯೋಚನೆಯಲ್ಲಿರುವ ಕನ್ಯಾ ರಾಶಿಗೆ ಈ ಸಮಯ ಬಹಳ ಚೆನ್ನಾಗಿರಲಿದೆ. ನೀವು ಮಾಡುವ ಎಲ್ಲ ಕೆಲಸಗಳಿಗೂ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರತಿ ದಿನ ರಾಧಾಕೃಷ್ಣನನ್ನು ಪೂಜಿಸಿ. 

ತುಲಾ(Libra)
ತುಲಾ ರಾಶಿಯ ಅಧಿಪತಿಯೇ ಶುಕ್ರ. ಹಾಗಾಗಿ, ತುಲಾ ರಾಶಿಗೆ ಈ ಸಂದರ್ಭದಲ್ಲಿ ಬಹಳಷ್ಟು ಲಾಭಗಳಿವೆ. ನಿರುದ್ಯೋಗಿಗಳಿಗೆ ಸುಲಭವಾಗಿ ಕೆಲಸ ದೊರಕಲಿದೆ. ಪ್ರತಿ ದಿನ ದುರ್ಗಾ ಚಾಲೀಸ್ ಹೇಳಿಕೊಳ್ಳಿ. 

Astrology Tips : ಮದುವೆಯಾಗ್ತಿಲ್ವ? ಕಂಕಣ ಭಾಗ್ಯ ಕೂಡಿ ಬರಲು ಮಾಡಿ ಈ ಕೆಲಸ

ವೃಶ್ಚಿಕ(Scorpio)
ಈ ಸಂದರ್ಭದಲ್ಲಿ ಆರ್ಥಿಕವಾಗಿ ಸಾಕಷ್ಟು ಲಾಭಗಳನ್ನು ಪಡೆಯಲಿದ್ದೀರಿ. ಶುಕ್ರವಾರದ ದಿನ ಬಿಳಿ ಧಾನ್ಯ, ವಸ್ತ್ರ ಇತ್ಯಾದಿಯನ್ನು ದಾನ ಮಾಡಿ. 

ಧನು(Sagittarius)
ಸಧ್ಯ ಶುಕ್ರ ಇದೇ ರಾಶಿಯಲ್ಲಿದ್ದಾನೆ. ಹಾಗಾಗಿ, ಈ ರಾಶಿಯ ಜನರು ಬಹಳ ಗೌರವಗಳನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿಯೂ ಯಶ ಪಡೆಯಲಿದ್ದೀರಿ. ವಿಷ್ಣು ಹಾಗೂ ಲಕ್ಷ್ಮೀಯ ಪೂಜೆ ನಡೆಸಿ. 

ಮಕರ(Capricorn)
ಶುಕ್ರನು ಈ ರಾಶಿಯ 12ನೇ ಮನೆಯಲ್ಲಿರಲಿದ್ದಾನೆ. ಹೀಗಾಗಿ, ಈ ಸಂದರ್ಭ ನಿಮ್ಮ ರಾಶಿಗೆ ಅಷ್ಟೊಂದು ಯೋಗ್ಯವಾಗಿಲ್ಲ. ಸಾಧ್ಯವಾದಷ್ಟು ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಿ. ಪ್ರತಿ ದಿನ ದುರ್ಗಾ ಚಾಲೀಸ್ ಪಠಣ ಮಾಡಿ. 

ಕುಂಭ(Aquarius)
ಶುಕ್ರ ಮಾರ್ಗಿಯಿಂದ ಕುಂಭಕ್ಕೆ ಆರ್ಥಿಕವಾಗಿ ಸಾಕಷ್ಟು ಲಾಭಗಳಿವೆ. ಸ್ವಂತ ಉದ್ಯಮ ಹೊಂದಿರುವವರಿಗೆ ಲಾಭ ಹೆಚ್ಚಲಿದೆ. ಲಕ್ಷ್ಮೀ ಪೂಜೆ ನಡೆಸಿ. 

ಮೀನ(Pisces)
ಈ ಸಂದರ್ಭದಲ್ಲಿ ಮೀನ ರಾಶಿಯ ಸಾಮರ್ಥ್ಯ ಹೆಚ್ಚಲಿದ್ದು, ಯಶಸ್ಸು ಕೂಡಾ ದೊರಕಲಿದೆ. ಲಾಭ ಹೆಚ್ಚಲಿದೆ. ವಿಷ್ಣು ಹಾಗೂ ಲಕ್ಷ್ಮೀಯನ್ನು ಆರಾಧಿಸಿ. 

click me!