Gayatri Mantra: ಧೀ ಶಕ್ತಿ ಹೆಚ್ಚಿಸುವ ಗಾಯತ್ರಿ ಮಂತ್ರ, ಪಠಣದ ಲಾಭ ಒಂದೆರಡಲ್ಲ..

By Suvarna NewsFirst Published Jan 29, 2022, 11:10 AM IST
Highlights

ಗಾಯತ್ರಿ ಮಂತ್ರವು ಸುಮಾರು 3500 ವರ್ಷಗಳಷ್ಟು ಪುರಾತನವಾದುದು. ಅಂದಿನಿಂದ ಇಂದಿನವರೆಗೂ ಇದು ಅತ್ಯಂತ ಪರಿಣಾಮಕಾರಿ ಎಂದೇ ಎನಿಸಿಕೊಂಡಿದೆ. 
 

ಮಂತ್ರ ಪಠಣವು ಬಹಳಷ್ಟು ಸಮಸ್ಯೆಗಳನ್ನು ನೀಗಿಸುವುದು ಈಗಾಗಲೇ ಸಾಬೀತಾಗಿದೆ. ವೇದಗಳಲ್ಲಿ ಮಂತ್ರಗಳ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಮಂತ್ರಗಳಲ್ಲಿ ಅತಿ ಪರಿಣಾಮಕಾರಿ ಮಂತ್ರವಾಗಿ ಗಾಯತ್ರಿ ಮಂತ್ರ ಗುರುತಿಸಿಕೊಂಡಿದೆ. 
ಗಾಯತ್ರಿ ಮಂತ್ರವು ಮೊದಲಿಗೆ ಋಗ್ವೇದದಲ್ಲಿ ದಾಖಲಾಗಿದ್ದು, ಸಂಸ್ಕೃತದಲ್ಲಿದೆ. ಸುಮಾರು 2500-3500 ವರ್ಷಗಳ ಹಿಂದೆ ರಚನೆಯಾಗಿರುವ ಈ ಮಂತ್ರ ಅಂದಿನಿಂದ ಇಂದಿನವರೆಗೂ ಅತ್ಯಂತ ಪರಿಣಾಮಕಾರಿ ಎಂದೇ ಎನಿಸಿಕೊಂಡಿದೆ. ಗಾಯತ್ರಿ ಮಂತ್ರವನ್ನು 8 ಅಕ್ಷರಗಳ ಮೂರು ಉಚ್ಚಾರಾಂಶಗಳಾಗಿ ವಿಭಾಗಿಸಿದ್ದು, ಒಟ್ಟು 24 ಬೀಜಾಕ್ಷರಗಳಿವೆ. ಗಾಯತ್ರಿ ಮಂತ್ರ(Gayatri Mantra) ಪಠಣವು ಹೇಳುವವರಿಗೆ ಮಾತ್ರವಲ್ಲ, ಕೇಳುವವರಿಗೂ ಅಷ್ಟೇ ಲಾಭಗಳನ್ನು ತರಲಿದೆ. ಬ್ರಹ್ಮನೇ ಈ ಮಂತ್ರದ ಮುಂದೆ ಬೇರೆ ಜಪತಪವಿಲ್ಲ ಎಂದು ಹೇಳಿದನೆಂದು ಪ್ರತೀತಿ ಇದೆ. 

ಗಾಯತ್ರಿ ಮಂತ್ರ ಹೀಗಿದೆ:

ಓಂ ಭೂರ್ಭುವಃ ಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿಃ
ಧಿಯೋಯೋನಃ ಪ್ರಚೋದಯಾತ್

ಗಾಯತ್ರಿ ಮಂತ್ರದ ಅರ್ಥ(meaning)
ಭೂ, ಭುವ ಮತ್ತು ಸುವ ಲೋಕಗಳಲ್ಲಿ ಬೆಳಕನ್ನು ಪಸರಿಸಿ ಜೀವಿಗಳಿಗೆ ಚೈತನ್ಯವನ್ನು ನೀಡುತ್ತಿರುವ ಸೂರ್ಯನೇ ನಮಗೆ ಧೀಶಕ್ತಿಯನ್ನು ಪ್ರಚೋದಿಸು ಎಂಬುದು ಈ ಮಂತ್ರದ ಅರ್ಥ. ಅಂದರೆ ಇದು ಸೂರ್ಯನ ಪ್ರಾರ್ಥನೆಯಾಗಿದೆ. ಗಾಯತ್ರಿ ಎಂದರೆ ಕತ್ತಲನ್ನು ಕಳೆದು ಬೆಳಕನ್ನು ನೀಡುವಾಕೆ. ನಮ್ಮ ಮನಸ್ಸಿನ ಕತ್ತಲನ್ನು ತೊಲಗಿಸಿ ಜ್ಞಾನ ತುಂಬುವಾಕೆ. ಆಕೆ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವ ವೇದಗಳ ತಾಯಿಯಾಗಿದ್ದಾಳೆ. 

Zodiac signs:ಈ ರಾಶಿಯ ಮಹಿಳೆ ಜೊತೆ ಸಂಬಂಧ ಬೆಸೆಯೋ ಮುನ್ನ ಯೋಚಿಸಿ

ಗಾಯತ್ರಿ ಮಂತ್ರ ಯಾವಾಗ ಪಠಣ ಮಾಡಬೇಕು?
ಗಾಯತ್ರಿ ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಠಣ ಮಾಡಬೇಕು. ಬೆಳಗ್ಗೆ ಸೂರ್ಯೋದಯ(sunrise)ಕ್ಕೂ ಮುನ್ನ ಆರಂಭಿಸಬೇಕು. ಸೂರ್ಯೋದಯದ ನಂತರವೂ ಕೆಲ ಸಮಯ ಮುಂದುವರೆಸಬೇಕು. ಬೆಳಗಿನ ಜಾವ 4 ಗಂಟೆಯಿಂದ 8 ಗಂಟೆಯ ನಡುವೆ ಯಾವಾಗಾದರೂ ಹೇಳಿಕೊಳ್ಳಬಹುದು.
ಮಧ್ಯಾಹ್ನ(afternoon)ದ ಹೊತ್ತು ಕೂಡಾ ಗಾಯತ್ರಿ ಮಂತ್ರ ಹೇಳುವುದು ಒಳ್ಳೆಯದೇ. ಇನ್ನು ಸಂಜೆ ಹೊತ್ತು ಸೂರ್ಯಾಸ್ತ(sunset)ಕ್ಕೂ ಮುನ್ನ ಗಾಯಂತ್ರಿ ಮಂತ್ರ ಹೇಳಲು ಆರಂಭಿಸಿ ಸೂರ್ಯಾಸ್ತದ ನಂತರವೂ ಮುಂದುವರೆಸಬೇಕು. ಸಂಜೆ 4 ಗಂಟೆಯಿಂದ ರಾತ್ರಿ 8ರವರೆಗೆ ಸಮಯವಾದಾಗ ಹೇಳಿಕೊಳ್ಳಬಹುದು.

ರಾತ್ರಿ ಎಂಟು ಗಂಟೆಯ ನಂತರ, ಬೆಳಗ್ಗೆ 4 ಗಂಟೆಯವರೆಗೆ ತಮಸ್ಸಾದ್ದಾರಿಂದ ಆ ಸಂದರ್ಭದಲ್ಲಿ ಗಾಯತ್ರಿ ಮಂತ್ರ ಹೇಳಕೂಡದು. 

Numerology: ಪಾದಾಂಕ 7, ಸಹಜ ನಿಮಗೆ ಏಳು ಬೀಳು

ಹೇಗೆ ಹೇಳಬೇಕು?
ಮಂತ್ರವನ್ನು ತುಂಬಾ ದೊಡ್ಡ ದನಿಯಲ್ಲಿ ಹೇಳಬಾರದು. ಮನಸ್ಸಿನಲ್ಲೇ ಹೇಳಿದರೂ ಸರಿ, ಸಣ್ಣ ದನಿಯಲ್ಲಿ ಹೇಳಿದರೂ ತೊಂದರೆಯಿಲ್ಲ. 
ಗಾಯತ್ರಿ ಮಂತ್ರ ಹೇಳುವ ಮುನ್ನ ಸ್ನಾನ ಮಾಡಿರಬೇಕು. 
ಕೈಲಿ ರುದ್ರಾಕ್ಷಿ ಮಾಲೆ ಹಿಡಿದು ಜಪಿಸುವುದು ಒಳ್ಳೆಯದು. 
ಒಂದು ಬಾರಿ ಹೇಳಲು ಕುಳಿತರೆ ಕನಿಷ್ಠ 108 ಬಾರಿ ಹೇಳಬೇಕು. 
ಮಂತ್ರವನ್ನು ಹೇಳಲು ನಿರ್ಜನವಾದ, ಗಲಾಟೆರಹಿತ ಸ್ಥಳದಲ್ಲಿ ಕುಳಿತು ಹೇಳಬೇಕು. 

ಏನು ಲಾಭ?(Benefits)

  • ಉತ್ಸಾಹ(enthusiasm) ಹಾಗೂ ಧನಾತ್ಮಕ ಯೋಚನೆಗಳನ್ನು ಹೆಚ್ಚಿಸುತ್ತದೆ. 
  • ಮನಸ್ಸು ಉತ್ತಮ ಸೇವಾ ಮನೋಭಾವದಿಂದ ಎಚ್ಚೆತ್ತುಕೊಳ್ಳುತ್ತದೆ. 
  • ಆಶೀರ್ವಾದ ಮಾಡುವ ಶಕ್ತಿ ಹೆಚ್ಚುತ್ತದೆ. 
  • ಕನಸುಗಳು ಸಾಕಾರವಾಗುತ್ತವೆ. 
  • ಕೋಪತಾಪ ಕಡಿಮೆಯಾಗುತ್ತದೆ. 
  • ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ.
  • ಮನಸ್ಸು ಕೆಟ್ಟ ಯೋಚನೆಗಳಿಂದ ದೂರವಾಗುತ್ತದೆ. 
  • ಕಲಿಕಾ ಶಕ್ತಿ, ಸ್ಮರಣ ಶಕ್ತಿ ಎರಡೂ ಹೆಚ್ಚುತ್ತವೆ. 
  • ಉಸಿರಾಟವನ್ನು ಸರಾಗವಾಗಿಸಿ, ನರಗಳು ಸರಿಯಾಗಿ ಕೆಲಸ ನಿರ್ವಹಣೆ ಮಾಡುವಂತೆ ಮಾಡುತ್ತವೆ.
  • ಒತ್ತಡ ಹಾಗೂ ಆತಂಕ ಕಡಿಮೆ ಮಾಡಿ ಮನಸ್ಸು ಶಾಂತತೆಯಿಂದ ಕೂಡಿರುವಂತೆ ಮಾಡುತ್ತದೆ.
  • ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
click me!