ಜ್ಯೋತಿಷ್ಯ ಶಾಸ್ತ್ರದಂತೆಯೇ ಸಂಖ್ಯಾಶಾಸ್ತ್ರದಲ್ಲಿಯೂ ಜನ್ಮ ದಿನಾಂಕವನ್ನು ಆಧರಿಸಿ ಭವಿಷ್ಯದ ವಿಚಾರಗಳನ್ನು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಪಾದಾಂಕ 7ರಲ್ಲಿ ಜನಿಸಿದ ವ್ಯಕ್ತಿಗಳ ಭವಿಷ್ಯದ ಬಗ್ಗೆ ತಿಳಿಯೋಣ...
ಸಂಖ್ಯಾಶಾಸ್ತ್ರದಲ್ಲಿ (Numerology) ಹುಟ್ಟಿದ ದಿನಾಂಕದ ಆಧಾರದ ಮೇಲೆ ವ್ಯಕ್ತಿಗಳ ಭವಿಷ್ಯವನ್ನು (Future ) ತಿಳಿಯಬಹುದಾಗಿದೆ. ಪ್ರಸ್ತುತ ನಾವು 2022ರ ಹೊಸ್ತಿಲಿನಲ್ಲಿದ್ದೇವೆ. ಈ ಸಂದರ್ಭದಲ್ಲಿ ಎಲ್ಲರಿಗೂ ತಮ್ಮ ವಾರ್ಷಿಕ ಭವಿಷ್ಯ ಹೇಗಿರಲಿದೆ ಎಂಬ ಕುತೂಹಲ ಇದ್ದೇ ಇರಲಿದೆ. ಈ ವರ್ಷ ಆರ್ಥಿಕ ಸ್ಥಿತಿ (Economy), ವಿವಾಹ (Marriage), ವಿದ್ಯಾಭ್ಯಾಸ (Education), ಉದ್ಯೋಗ (Job), ಆರೋಗ್ಯ (Health) ಮತ್ತು ಅದೃಷ್ಟ (Luck) ಹೀಗೆ ನಾನಾ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಹೀಗಾಗಿ ಪಾದಾಂಕ 7ರಲ್ಲಿ ಜನಿಸಿದ ವ್ಯಕ್ತಿಗಳ ವಾರ್ಷಿಕ ಭವಿಷ್ಯವೇನು..? ಪಾದಾಂಕ 7 ಅಂದರೆ ಯಾವ ಯಾವ ದಿನಾಂಕದಲ್ಲಿ ಜನಿಸಿದವರ ಬಗ್ಗೆ ತಿಳಿದುಕೊಳ್ಳಬಹುದು. ಅವರ ವ್ಯಕ್ತಿತ್ವಗಳೇನು ಎಂಬಿತ್ಯಾದಿ ಅಂಶಗಳ ಬಗ್ಗೆ ತಿಳಿಯೋಣ....
ಪಾದಾಂಕವನ್ನು ತಿಳಿಯುವುದು ಹೇಗೆ?
ಹುಟ್ಟಿದ ದಿನಾಂಕವನ್ನು ಕೂಡಿದಾಗ ಬಂದ ಸಂಖ್ಯೆಯನ್ನು ಪಾದಾಂಕವೆಂದು ಪರಿಗಣಿಸಲಾಗುತ್ತದೆ. ಉದಾಹರಣೆ ಸಹಿತ ಹೇಳುವುದಾದರೆ ಹುಟ್ಟಿದ ದಿನಾಂಕ 4 ಎಂದಾದರೆ ಪಾದಾಂಕ 4 ಆಗುತ್ತದೆ. ಅದೇ ಜನಿಸಿದ ದಿನಾಂಕವು 14 ಆಗಿದ್ದರೆ ಒಂದು ಮತ್ತು ನಾಲ್ಕನ್ನು ಕೂಡಿದಾಗ ಬರುವ ಸಂಖ್ಯೆ ಐದು (Five) (1 + 4= 5) ಇದು ಪಾದಾಂಕವಾಗಿರುತ್ತದೆ. ಪಾದಾಂಕದ ಮೂಲಕ ವ್ಯಕ್ತಿ ಬಗೆಗಿನ ವಿಚಾರಗಳನ್ನು ತಿಳಿಯಬಹುದೆಂದು ಸಂಖ್ಯಾಶಾಸ್ತ್ರ (Numerology) ಹೇಳುತ್ತದೆ.
ಪಾದಾಂಕ 7ರ (Six) ತಾರೀಖುಗಳು ಯಾವುವು?
ಪಾದಾಂಕ 7ರ ದಿನಾಂಕದ ಬಗ್ಗೆ ಗಮನಿಸುವುದಾದರೆ, ಯಾವುದೇ ತಿಂಗಳ 7, 16 ಮತ್ತು 25ನೇ ತಾರೀಖಿನಂದು ಜನಿಸಿದವರು ಈ ಪಾದಾಂಕಕ್ಕೆ ಸೇರುತ್ತಾರೆ.
ಇದನ್ನು ಓದಿ: Numerology: ಪಾದಾಂಕ 6ರ ವ್ಯಕ್ತಿಗಳಿಗೆ ಈ ವರ್ಷ ಉದ್ಯೋಗದಲ್ಲಿ ಬಂಪರ್!
ಈ ಪಾದಾಂಕದವರಿಗೆ ಮಿಶ್ರ ಪರಿಣಾಮ
ಪಾದಾಂಕ ಏಳರ ವ್ಯಕ್ತಿಗಳಿಗೆ ಈ ವರ್ಷದಲ್ಲಿ ಮಿಶ್ರ ಪರಿಣಾಮ ಸಿಗಲಿದೆ. ವರ್ಷದ ಆರಂಭದಲ್ಲಿ ಈ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿಗಿನ ಕಷ್ಟ (Difficulties) ಎದುರಾಗುತ್ತದೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕಷ್ಟಗಳು ಕೊಂಚ ಕಡಿಮೆಯಾಗುತ್ತಾ ಹೋಗುತ್ತದೆ. ಮುಖ್ಯವಾದ ವಿಚಾರವೆಂದರೆ ಈ ವರ್ಷ ಪಾದಾಂಕ ಏಳರ ವ್ಯಕ್ತಿಗಳ ಆರ್ಥಿಕ ಸ್ಥಿತಿ (Finance) ಚೆನ್ನಾಗಿರುತ್ತದೆ. ಹಾಗಾಗಿ ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಇವರಿಗಿರುತ್ತದೆ. ಈ ವ್ಯಕ್ತಿಗಳಿಗೆ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು (Success) ಸಿಗುತ್ತದೆ.
ಉದ್ಯೋಗದಲ್ಲಿ ಬಡ್ತಿ ಸಿಗಲಿದೆ
ಉದ್ಯೋಗದಲ್ಲಿರುವ ಪಾದಾಂಕ ಏಳರ ವ್ಯಕ್ತಿಗಳಿಗೆ ಈ ವರ್ಷದ ಮೊದಲು ಬಡ್ತಿ (Promotion) ಸಿಗಲಿದೆ. ಅಷ್ಟೇ ಅಲ್ಲದೆ ಈ ವರ್ಷ ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸಹಾಯ (Help) ಸಹಕಾರ ಸಹ ದೊರೆಯಲಿದೆ.
ವ್ಯಾಪಾರಸ್ಥರೇ ಎಚ್ಚರ
ವ್ಯಾಪಾರಸ್ಥರು (Business) ಈ ವರ್ಷ ಎಚ್ಚರಿಕೆಯಿಂದ ಇರುವುದು ಉತ್ತಮ. ವ್ಯಾಪಾರದಲ್ಲಿ ಹಲವಾರು ಸವಾಲುಗಳನ್ನು ಎದುರಿಸುವ ಸಂಭವ ಎದುರಾಗುತ್ತದೆ. ಈ ವರ್ಷ ಲಾಭ (Profit) ಗಳಿಸಲು ಹೆಚ್ಚಿನ ಪರಿಶ್ರಮವನ್ನೂ ಪಡಬೇಕಾಗುತ್ತದೆ. ಈ ವರ್ಷ ದೊಡ್ಡ ನಿರ್ಧಾರಗಳು ಅಂದರೆ ಮನೆ ಖರೀದಿ ಜಾಗ ಖರೀದಿಗಳನ್ನು ಮಾಡದಿರುವುದು ಉತ್ತಮ.
ಇದನ್ನು ಓದಿ: ಈ ನಾಲ್ಕು ರಾಶಿಗಳಿಂದ Break up ನೋವನ್ನು ಸಹಿಸೋದು ಸಾಧ್ಯವೇ ಇಲ್ಲ..
ಸಂಗಾತಿ ಜೊತೆ ಬಾಂಧವ್ಯ ಗಟ್ಟಿ
ಈ ವರ್ಷ ಹತ್ತಿರದವರ ಜೊತೆ ಸಂಬಂಧ ಉತ್ತಮವಾಗಿರಲಿದೆ. ಸಂಗಾತಿ (Partner) ಜೊತೆಗಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಸಹೋದರ, ಸಹೋದರಿಯರ ನಡುವೆ ಜಗಳಗಳು (Quarrel) ಆಗುವ ಸಾಧ್ಯತೆ ಹೆಚ್ಚಿದೆ. ವರ್ಷದ ಎರಡನೇ ತ್ರೈಮಾಸಿಕ ಅವಧಿಯ ಹೊತ್ತಿಗೆ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೆ ಅಲ್ಲದೆ ಸಂಬಂಧಗಳ ನಡುವೆ ಇರುವ ಭಿನ್ನಾಭಿಪ್ರಾಯ (Misunderstanding) ದೂರವಾಗುತ್ತವೆ.
ಶಿಕ್ಷಣ – ಆರೋಗ್ಯ ಹೀಗಿದೆ
ಶೈಕ್ಷಣಿಕ ಕ್ಷೇತ್ರದ ಬಗ್ಗೆ ತಿಳಿಯುವುದಾದರೆ ಈ ವರ್ಷ ಪಾದಾಂಕ 7ರಲ್ಲಿ ಜನಿಸಿದವರಿಗೆ ಸಮಯ ಉತ್ತಮವಾಗಿದೆ. ಹಿಂದೆ ಮಾಡಿದ ಸಾಧನೆಗಳಿಗೆ ಉತ್ತಮ ಪ್ರತಿಫಲ (Result) ಈ ಸಮಯದಲ್ಲಿ ದೊರೆಯಲಿದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಈ ವರ್ಷ ಅಷ್ಟೇನೂ ಉತ್ತಮವಾಗಿಲ್ಲ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ (Care) ವಹಿಸುವುದು ಉತ್ತಮ.