Mantra Benefits: ಲಲಿತಾ ಸಹಸ್ರನಾಮ ಪಠಣದಿಂದ ಗ್ರಹದೋಷ ನಿವಾರಣೆ

By Suvarna News  |  First Published Feb 5, 2022, 6:34 PM IST

ಲಲಿತಾ ಸಹಸ್ರನಾಮವು ಅತ್ಯಂತ ನಿಗೂಢವಾಗಿದ್ದು ಲಲಿತಾಂಬಿಕೆಯು ಈ ಸಹಸ್ರನಾಮದ ಕುರಿತು ಬಹಳ ಅಕ್ಕರೆಯುಳ್ಳವಳಾಗಿದ್ದಾಳೆ. ಇದರ ನಿತ್ಯ ಪಠಣದಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?


ನಮಗೆ ಏನೇ ಬೇಕಾದರೂ ಮೊದಲು ತಾಯಿ(Mother)ಯಲ್ಲಿ ಕೇಳಿ, ತಾಯಿಯ ಮೂಲಕ ತಂದೆಗೆ ಹೇಳಿಸುವುದು ಮನುಷ್ಯ ಸ್ವಭಾವ. ತಾಯಿಗೆ ಮಕ್ಕಳ ಮೇಲೆ ಮಮತೆ ಹೆಚ್ಚು. ಹಾಗಾಗಿ, ಆಕೆಯಲ್ಲಿ ಬೇಡಿಕೆ ಇಟ್ಟರೆ ಆಕೆ ತಂದೆ(Father)ಯ ಬಳಿ ಜಗಳವಾಡಿಯಾದರೂ ಮಕ್ಕಳ ಬೇಡಿಕೆ ಈಡೇರಿಸುತ್ತಾಳೆ. ಮನೆಯಲ್ಲಿ ಅಮ್ಮನನ್ನು ಮೆಚ್ಚಿಸುವ ಹಲವು ಮಾರ್ಗಗಳು ಮಕ್ಕಳಿಗೆ ಗೊತ್ತಿರುತ್ತದೆ. ಅದು ತನ್ನನ್ನು ಮೆಚ್ಚಿಸಲಿಕ್ಕಾಗೇ ಎಂದು ಗೊತ್ತಿದ್ದರೂ ತಾಯಿಗೆ ಅದರಿಂದ ಸಂತೋಷ(happy)ವೇ ಆಗುತ್ತದೆ. ದೇವರ ವಿಷಯಕ್ಕೆ ಬಂದರೂ ಇದು ನಿಜವೇ. ಅಮ್ಮನವರನ್ನು ಪ್ರಾರ್ಥಿಸಿದರೆ ಅವರು ಬೇಗ ಒಲಿಯುತ್ತಾರೆ. ಅಮ್ಮನವರನ್ನು ಮೆಚ್ಚಿಸುವ ಮಾರ್ಗಗಳೇನು? 

ಪಾರ್ವತಿ, ಲಲಿತಾ, ಮೂಕಾಂಬಿಕೆ, ಶಾರದೆ, ಸರಸ್ವತಿ- ಯಾರೇ ಆದರೂ ಸರಿ ಅಮ್ಮನವರೆಂದರೆ ಅವರ ಶಕ್ತಿ ಅಪಾರ. ಅವರನ್ನು ಮೆಚ್ಚಿಸಲು ಮನುಷ್ಯ ಕಂಡುಕೊಂಡಿರುವ ಸುಲಭ ಮಾರ್ಗವೆಂದರೆ ಶ್ಲೋಕ ಪಠಣ ಹಾಗೂ ವಿವಿಧ ಪೂಜಾ ವಿಧಾನಗಳು. ಅದರಲ್ಲೂ ಅಮ್ಮನವರಿಗೆ ಶ್ರೇಷ್ಠವಾದ ಹಾಗೂ ಇಷ್ಟವಾದ ಶ್ಲೋಕವೆಂದರೆ ಲಲಿತಾ ಸಹಸ್ರನಾಮ. ಈ ಶ್ಲೋಕದ ಶಕ್ತಿ ಅಪಾರವಾಗಿದೆ. ಲಲಿತಾ ಸಹಸ್ರನಾಮದ ಪ್ರತಿಯೊಂದು ನಾಮದಲ್ಲೂ ರಹಸ್ಯವಾದ ಬೀಜಾಕ್ಷರಗಳು ಹುದುಗಿವೆ ಎನ್ನಲಾಗುತ್ತದೆ. 

ಯಾವಾಗ ಪಠಣ ಮಾಡಬೇಕು?
ಪ್ರತಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ದೀಪ ಹಚ್ಚಿದ ಮೇಲೆ ಮಾಡಬಹುದು. ಪ್ರತಿ ನಿತ್ಯ ಲಲಿತಾ ಸಹಸ್ರನಾಮ ಮಾಡಲು ಸಾಧ್ಯವಾಗದಿದ್ದರೆ, ಮಂಗಳವಾರ, ಶುಕ್ರವಾರ ಮಾಡಬಹುದು. ಕನಿಷ್ಠ ಪಕ್ಷ ಹಬ್ಬ ಹರಿದಿನಗಳಲ್ಲಾದರೂ ಪಠಿಸಬೇಕು. ಮುಖ್ಯವಾದ ದಿವಸಗಳೆಂದರೆ, ಸಂಕ್ರಾಂತಿ, ಉತ್ತಾರಾಯಣ ಮತ್ತು ದಕ್ಷಿಣಾಯನ ಪುಣ್ಯಕಾಲಗಳು, ದಸರಾ, ದೀಪಾವಳಿ ಮೊದಲಾದವು. ಸಹಸ್ರನಾಮವನ್ನು ಪಠಿಸಲು ಇತರೇ ಶುಭದಿನಗಳೆಂದರೆ ಅಷ್ಟಮೀ, ನವಮೀ ಮತ್ತು ಚತುರ್ದಶೀ ತಿಥಿಗಳು. ತನ್ನ ಹಾಗು ತನ್ನ ಸಂಗಾತಿಯ ಮತ್ತು ಮಕ್ಕಳ ಜನ್ಮ ನಕ್ಷತ್ರಗಳಿರುವ ದಿನಗಳೂ ಸಹ ಲಲಿತಾ ಸಹಸ್ರನಾಮ ಪಠಣಕ್ಕೆ ಅತ್ಯಂತ ಪ್ರಶಸ್ತ ದಿನಗಳೆಂದು ಪರಿಗಣಿತವಾಗಿವೆ. ಇಷ್ಟೇ ಅಲ್ಲದೆ, ಹುಣ್ಣಿಮೆ ಚಂದ್ರನನ್ನು ನೋಡಿಯೂ ಪಠಿಸಬಹುದು. 

Tap to resize

Latest Videos

undefined

ಲಲಿತಾ ಸಹಸ್ರನಾಮ ಪಠಣವು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದಕ್ಕಿಂತ ಉತ್ತಮವಾದುದು ಎಂದು ಪರಿಗಣಿತವಾಗಿದೆ. ಅಷ್ಟೇ ಅಲ್ಲ, ಗಂಗೆಯ ತಟದಲ್ಲಿ ಮಾಡುವ ಅಶ್ವಮೇಧ ಯಾಗಕ್ಕಿಂತ ಉತ್ತಮ ಫಲ ನೀಡುತ್ತದೆ ಎಂಬ ಹೆಗ್ಗಳಿಕೆ ಈ ಮಂತ್ರಕ್ಕಿದೆ. ಶಾಸ್ತ್ರವಿಧಿತ ಕರ್ಮಗಳನ್ನು ಮಾಡದೇ ಇರುವುದರಿಂದ ಉಂಟಾಗುವ ಪಾಪಗಳೂ ನಿರ್ಮೂಲವಾಗುತ್ತವೆ. ಇದರ ಪಠಣದಿಂದ ಸಿಗುವ ಫಲಗಳು..

ಆರೋಗ್ಯ(health)
ಆರೋಗ್ಯ ಪ್ರತಿ ಮನುಷ್ಯನಿಗೂ ಅತಿ ಮುಖ್ಯವಾದುದು. ಅದೊಂದಿದ್ದರೆ ಮತ್ತೆಲ್ಲವನ್ನೂ ಸಾಧಿಸಬಹುದು. ಲಲಿತಾ ಸಹಸ್ರನಾಮ ಪಠಣದಿಂದ ಆರೋಗ್ಯ ವೃದ್ಧಿಸುವುದು. ರೋಗರಹಿತವಾದ ಉತ್ತಮ ಜೀವನ, ಅಸಹಜ ಮರಣ ಹಾಗೂ ಅಪಘಾತಗಳಿಂದ ಸಾವುಗಳು ಉಂಟಾಗದಂತೆ ಮಾಡುತ್ತದೆ. ಈಗಾಗಲೇ ಕಾಯಿಲೆಯಿಂದಿರುವವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಅರ ತಲೆ ಮೇಲೆ ಕೈಯಿರಿಸಿ ಲಲಿತಾ ಸಹಸ್ರನಾಮ ಪಠಣ ಮಾಡುವುದರಿಂದಲೂ ಫಲ ಪ್ರಾಪ್ತಿಯಾಗುತ್ತದೆ. 

ಜಾತಕದಲ್ಲಿ ಈ ದೋಷಗಳಿದ್ದರೆ ಪರಿಹರಿಸಿಕೊಳ್ಳಿ!!!

ಸಂತಾನಭಾಗ್ಯ
ಮಕ್ಕಳಿಲ್ಲದ ದಂಪತಿಗೆ, ಈ ಸಹಸ್ರನಾಮದಿಂದ ಪವಿತ್ರಗೊಂಡ ಬೆಣ್ಣೆಯನ್ನು ತಿನ್ನಲು ಕೊಡಬೇಕು. ಅದರಿಂದ ಅವರಿಗೆ ಸಂತಾನಫಲ ಉಂಟಾಗುವುದೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಮಗುವು ಆರೋಗ್ಯಕರವಾಗಿ, ಶ್ರೇಯಸ್ಕರವಾದ ಬೆಳವಣಿಗೆ ಕಾಣುತ್ತದೆ. 

ಆರ್ಥಿಕ ಲಾಭ(monetary gains)
ಐಹಿಕ ಜೀವನಕ್ಕೆ ಬೇಕಾದ ಸಕಲ ಸಂಪತ್ತನ್ನೂ ತಾಯಿ ಕರುಣಿಸುತ್ತಾಳೆ. ಸಾಲಗಳನ್ನು ತೀರಿಸುವ ಶಕ್ತಿ ನೀಡಿ, ಮನೆಯಲ್ಲಿ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. 

Bedroom Vastu : ಹಾಸಿಗೆಯಲ್ಲಿ ಕುಳಿತು ತಿನ್ನುತ್ತೀರಾ? ಇದರಿಂದಲೇ ಹಣ ಕೈಲಿ ನಿಲ್ಲುತ್ತಿಲ್ಲ!

ಗ್ರಹದೋಷಗಳಿಗೆ ಮುಕ್ತಿ
ಗ್ರಹದೋಷಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ಕೆಲ ಗ್ರಹಗಳು ವಿಪರೀತ ಆಟ ಆಡಿಸುತ್ತವೆ. ಅಂಥ ಸಂದರ್ಭದಲ್ಲಿ ಮಡಿ ನೀರನ್ನು ಇಟ್ಟು ಲಲಿತಾ ಸಹಸ್ರನಾಮ ಪಠಿಸಿದರೆ, ಲಲಿತಾಂಬಿಕೆಯು ಅವನ ಗ್ರಹದೋಷಗಳನ್ನು ನಿವಾರಿಸುತ್ತಾಳೆ. 

ಇವೇ ಅಲ್ಲದೆ, ಶತ್ರುನಾಶ, ಸಕಲ ಸಂಪತ್ತು, ಆರೋಗ್ಯ, ಆಯಸ್ಸು, ಮುಕ್ತಿ ಎಲ್ಲವೂ ದಕ್ಕುತ್ತವೆ.
 

click me!