13ನೇ ಶತಮಾನದವರೆಗೆ ಆಳ್ವಿಕೆ ನಡೆಸಿದ ವಿವಿಧ ರಾಜರು ಕಟ್ಟಿಸಿದ ಬಹಳಷ್ಟು ದೇವಾಲಯಗಳು ಕಾಶ್ಮೀರದಲ್ಲಿವೆ. ಕೆಲವು ಶಿಥಿಲಾವಸ್ಥೆ ತಲುಪಿದ್ದರೆ, ಮತ್ತೆ ಕೆಲವು ಚೆನಾನಗಿಯೇ ಇವೆ.
ಬಹಳ ಹಿಂದಿನಿಂದಲೂ ಕಾಶ್ಮೀರ(Kashmir)ವು ಹಿಂದೂ ಧರ್ಮದ ಪ್ರಮುಖ ಕೇಂದ್ರ. ವಿವಿಧ ಹಿಂದೂ ದೇವರಿಗೆ ಸಂಬಂಧಿಸಿದ ನೂರಾರು ದೇವಾಲಯಗಳನ್ನು(temples) ಇಲ್ಲಿ 13ನೇ ಶತಮಾನದವರೆಗೆ ಆಳಿದ ವಿವಿಧ ರಾಜರು ಕಟ್ಟಿಸಿದ್ದರು. ಈ ಪುರಾತನ ದೇವಾಲಯಗಳಲ್ಲಿ ಬಹುತೇಕವು ಶಿವನಿಗೆ ಸಂಬಂಧಿಸಿದ್ದು. 9ನೇ ಶತಮಾನದ ನಂತರ ಕಾಶ್ಮೀರದಲ್ಲಿ ಶೈವ ಧರ್ಮ(Shaivism) ಪಾಲನೆ ಹೆಚ್ಚಾಯಿತು. 13ನೇ ಶತಮಾನದಲ್ಲಿ ಮುಸ್ಲಿಂ ಆಡಳಿತಗಾರರು(Islamic rulers) ಕಾಶ್ಮೀರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು 15ನೇ ಶತಮಾನದವರೆಗೂ ಆಳ್ವಿಕೆ ನಡೆಸಿದರು. ಇದರಿಂದ ಕಾಶ್ಮೀರದಲ್ಲಿ ಶೈವ ಧರ್ಮ ಪಾಲನೆ ನಿಧಾನವಾಗಿ ನೆಲ ಕಚ್ಚಿತು.
ಈ ಸಂದರ್ಭದಲ್ಲಿ ದೇವಾಲಯಗಳ ಮೇಲಿನ ಆಕ್ರಮಣದಿಂದ ಅವು ಬಹಳಷ್ಟು ನಾಶವಾದರೂ ಕೆಲವು ಕೊಂಚ ಪಳೆಯುಳಿಕೆಗಳನ್ನು ಇಂದಿಗೂ ಉಳಿಸಿಕೊಂಡಿವೆ. ಮತ್ತೆ ಕೆಲವು ಚೆನ್ನಾಗಿಯೇ ಉಳಿದಿವೆ.
ಶಂಕರಾಚಾರ್ಯ ದೇವಾಲಯ
ಶಂಕರಾಚಾರ್ಯ ದೇವಾಲಯವು ಶ್ರೀನಗರ(Srinagar)ದ ಶಂಕರಾಚಾರ್ಯ ಬೆಟ್ಟದ ಮೇಲಿದೆ. ಬೆಟ್ಟದ ಮೇಲೆ ನಿಂತರೆ ಕೆಳಗೆ ಶ್ರೀನಗರದ ಪಕ್ಷಿ ವೀಕ್ಷಣೆ ಸಾಧ್ಯವಾಗುತ್ತದೆ. ಈ ದೇವಾಲಯವನ್ನು 371 B.C.Eನಲ್ಲಿ ರಾಜ ಗೋಪದಾಟ್ಯ ಕಟ್ಟಿಸಿದ ಎಂದು ಕಲ್ಹಣ ಪುಸ್ತಕದಲ್ಲಿದೆ. ಆ ಸಂದರ್ಭದಲ್ಲಿ ಈ ದೇವಾಲಯಕ್ಕೆ ಗೋಪಾದ್ರಿ ಎಂಬ ಹೆಸರಿತ್ತು. 9ನೇ ಶತಮಾನದಲ್ಲಿ ಆದಿಗುರು ಶಂಕರಾಚಾರ್ಯರು ಕಾಶ್ಮೀರಕ್ಕೆ ಭೇಟಿ ಇಟ್ಟಾಗ ಈ ಬೆಟ್ಟದ ಮೇಲೆ ಉಳಿದಿದ್ದರು. ಅದರ ನಂತರ ಇಲ್ಲಿಗೆ ಶಂಕರಾಚಾರ್ಯ(Shankaracharya) ದೇವಾಲಯ ಎಂಬ ಹೆಸರು ಬಂದಿದೆ. ಶಂಕರಾಚಾರ್ಯರು ಜಮ್ಮು ಹಾಗೂ ಕಾಶ್ಮೀರದಲ್ಲಿ ಶಿವ ಆರಾಧನೆ ಹೆಚ್ಚಲು ಕಾರಣರಾಗಿದ್ದರು. ಮಹಾರಾಜ ಗುಲಾಬ್ ಸಿಂಗ್ ಈ ಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ್ದಾನೆ.
Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?
ಮಾರ್ತಾಂಡ ದೇವಾಲಯ
ಮಾರ್ತಾಂಡ ದೇವಾಲಯವು ಸೂರ್ಯ ದೇವ(Sun God)ನಿಗೆ ಮೀಸಲಾಗಿದ್ದು, ಕಾರ್ಕೋಟ ರಾಜವಂಶದ ಮೂರನೇ ಆಡಲಿತಕಾರ ಲಲಿತಾದಿತ್ಯ ಮುಕ್ತಪಿಡ ಎಂಬಾತ 8ನೇ ಶತಮಾನದಲ್ಲಿ ಈ ದೇವಾಲಯ ಕಟ್ಟಿಸಿದ. ಇದಕ್ಕೆ ನಾಲ್ಕನೇ ಶತಮಾನದಲ್ಲೇ ಅಡಿಗಟ್ಟು ಹಾಕಲಾಗಿತ್ತು. 15ನೇ ಶತಮಾನದಲ್ಲಿ ಮುಸ್ಲಿಂ ರಾಜ(Muslim ruler) ಸಿಕಂದರ್ ಬಟ್ಶಿಕಾನ್ ಆಡಳಿತ ಸಂದರ್ಭದಲ್ಲಿ ಈ ದೇವಾಲಯವನ್ನು ಸಂಪೂರ್ಣ ನಾಶ ಮಾಡಲಾಯಿತು. ಅನಂತ್‌ನಾಗ್ ಜಿಲ್ಲಾಕೇಂದ್ರದಿಂದ 5 ಕಿಲೋಮೀಟರ್ ದೂರದಲ್ಲಿ ಇದರ ಪಳೆಯುಳಿಕೆಯನ್ನು ಕಾಣಬಹುದು.
Job Security And Zodiac: ಈ ರಾಶಿಯವರು ಸಧ್ಯದಲ್ಲೇ ಕೆಲಸ ಕಳೆದುಕೊಳ್ಳಲಿದ್ದಾರೆ!
ಪಂಡ್ರೆತನ್ ದೇವಾಲಯ
ಸ್ಥಳೀಯವಾಗಿ ಈ ದೇವಾಲಯಕ್ಕೆ ಪಾನಿ ಮಂದಿರ ಎನ್ನಲಾಗುತ್ತದೆ. ಇದು ಶ್ರೀನಗರದಿಂದ 5 ಕಿಲೋಮೀಟರ್ ದೂರದಲ್ಲಿದೆ. ಈ ಪುರಾತನ ದೇವಾಲಯವನ್ನು 921 ಎಡಿ ಸಂದರ್ಭದಲ್ಲಿ ಕಾಶ್ಮೀರಿ ವಾಸ್ತುಶಿಲ್ಪ(architecture) ಕಲೆ ಬಳಸಿ ಕಟ್ಟಲಾಗಿದೆ. ವಿಷ್ಣುವಿನ ದೇವಾಲಯವಾದ ಇದನ್ನು ಮೇರು ವರ್ಧನ ಎಂಬ ರಾಜ ಕಟ್ಟಸಿದ. ದೇವಾಲಯದ ಸುತ್ತ ಕೊಳವಿದ್ದು, ಅದಕ್ಕಾಗಿ ಬಳಸಿದ ಗಣಿತ ಜ್ಞಾನಕ್ಕಾಗಿ ಪ್ರಖ್ಯಾತಿ ಪಡೆದಿದೆ.
ಪಾಯರ್ ದೇವಾಲಯ
11ನೇ ಶತಮಾನದ ಪಾಯರ್ ದೇವಾಲಯ ಶಿವನದಾಗಿದ್ದು, ಪಾಯರ್ ಎಂಬ ಹಳ್ಳಿಯಲ್ಲಿದೆ. ಪುಲ್ವಾಮಾ ಜಿಲ್ಲೆಯಲ್ಲಿರುವ ಈ ದೇವಾಲಯವನ್ನು 10 ಕಲ್ಲುಗಳಿಂದ ಕಟ್ಟಲಾಗಿದೆ.
ಸಂಕರ ಗುರುವಾರಂ ದೇವಾಲಯ
ಶಿವನ ದೇವಾಲಯವಾದ ಇದು ಬಾರಾಮುಲ್ಲಾ(Baramulla) ಬಳಿಯಿದೆ. 883-902 ಎಡಿ ಸಮಯದಲ್ಲಿ ಶಂಕರವರ್ಮಾನ್ ರಾಜ ಕಟ್ಟಿಸಿದ. ಪಾಳು ಬಿದ್ದಿರುವ ಈ ದೇವಾಲಯದಲ್ಲಿ ಈಗ ಪೂಜೆ ನಡೆಯುವುದಿಲ್ಲ.
ವಜ್ರ ಭೈರವ ದೇಗುಲ
ವಜ್ರ ಭೈರವ ದೇಗುಲ ಲೇಹ್‌ನಿಂದ ೧೦ ಕಿ.ಮೀ. ದೂರದಲ್ಲಿದೆ. ಇದನ್ನು ಯಲ್ಲೋವ್ ಹ್ಯಾಟ್ ಪಂಗಡದ ರಕ್ಷಕ ತಾಂತ್ರಿಕ್ ದೇವತೆಯ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಸಾಮಾನ್ಯ ನಾಗರಿಕರು, ಭಕ್ತರ ಪ್ರವೇಶಕ್ಕೆ ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಲಭಿಸುತ್ತದೆ.
ಇವಿಷ್ಟೇ ಅಲ್ಲದೆ, ಇನ್ನೂ ಹತ್ತು ಹಲವಾರು ದೇವಾಲಯಗಳು ಕಾಶ್ಮೀರದ ನೆಲದಲ್ಲಿ ತಣ್ಣನೆಯ ಮೌನದಲ್ಲಿ ನಿಂತಿವೆ.