Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?

By Suvarna News  |  First Published Feb 5, 2022, 2:22 PM IST

ಫೆಬ್ರವರಿ ಎಂದರೆ ಪ್ರೀತಿ ಪ್ರೇಮ ಪ್ರಣಯದ ತಿಂಗಳು. ಈ ತಿಂಗಳು ಪ್ರೀತಿಯ ವಿಷಯದಲ್ಲಿ ನಿಮ್ಮ ರಾಶಿ ಫಲ ಏನೇನಿದೆ ನೋಡಿ.


ಫೆಬ್ರವರಿ(February) ಎಂದರೆ ಪ್ರೇಮಿಗಳ ತಿಂಗಳು. ಜನರು ವರ್ಷವಿಡೀ ಕಾದು ಫೆಬ್ರವರಿಯಲ್ಲಿ ಪ್ರೇಮ ನಿವೇದನೆ ಮಾಡುತ್ತಾರೆ. ಒಂಟಿಯಾಗಿರುವ ಹಲವರ ಬಾಳಿನಲ್ಲಿ ಪ್ರೀತಿಯ ಬುಗ್ಗೆ ಅರಳುತ್ತದೆ. ಈ ತಿಂಗಳು ಪ್ರೀತಿ ಪ್ರೇಮದ ವಿಷಯದಲ್ಲಿ ಯಾವ ರಾಶಿಗೆ ಏನೆಲ್ಲ ಸರ್ಪ್ರೈಸ್ ಇಟ್ಟುಕೊಂಡಿದೆ ನೋಡೋಣ. 

ಮೇಷ(Aries)
ಈ ತಿಂಗಳು ಮೇಷ ರಾಶಿಗೆ ಬಹಳ ಅದೃಷ್ಟ(luck)ದಾಯಕವಾಗಿದೆ. ಒಂಟಿಯಾಗಿರುವವರಿಗೆ ಒಬ್ಬರ ಮೇಲೆ ಬಲವಾದ ಪ್ರೀತಿಯ ಭಾವನೆಗಳು ಹುಟ್ಟಲಿವೆ. ವಿವಾಹಿತರು ಸಂಗಾತಿಯ ಜೊತೆಯ ತಮ್ಮ ಸಂಬಂಧವನ್ನು ಹೆಚ್ಚು ಗಟ್ಟಿಗೊಳಿಸಿಕೊಳ್ಳುತ್ತಾರೆ. ಈಗಾಗಲೇ ಪ್ರೀತಿಯಲ್ಲಿರುವವರು ಹಾಗೆಯೇ ಮುಂದುವರಿಯುತ್ತಾರೆ. 

Tap to resize

Latest Videos

undefined

ವೃಷಭ(Taurus)
ಈ ತಿಂಗಳು ಪ್ರೀತಿ ಪ್ರೇಮದ ವಿಷಯದಲ್ಲಿ ವೃಷಭಕ್ಕೆ ಅಷ್ಟೊಂದು ಉತ್ತಮವಾಗಿಲ್ಲ. ತಮ್ಮ ಈಗಿರುವ ಸಂಬಂಧದಲ್ಲಿ ಮುಂದುವರಿಯಲು ಇಲ್ಲವೇ ಹೊಸ ಸಂಬಂಧ(relationship) ಆರಂಭಿಸಲು ಈ ರಾಶಿಯವರು ಒದ್ದಾಡಿ ಹೋಗುತ್ತಾರೆ. ಸಂಬಂಧದ ವಿಷಯವಾಗಿ ಮನಸ್ಸು ಆಗಾಗ ಕೆಡುತ್ತಲೇ ಇರುವುದು. 

ಮಿಥುನ(Gemini)
ಪ್ರೀತಿ, ಸಂಬಂಧದ ವಿಷಯದಲ್ಲಿ ಈ ತಿಂಗಳು ಮಿಥುನ ರಾಶಿಗೆ ಅಷ್ಟು ಚೆನ್ನಾಗಿಲ್ಲ. ತಮ್ಮ ಬದುಕಿನಲ್ಲಿ ಪ್ರೇಮಿಯ ಎಂಟ್ರಿಯಾಗುತ್ತದೆ ಎಂದು ಕಾಯುವ ಸಿಂಗಲ್‌ಗಳಿಗೆ ನಿರಾಸೆ ಕಾದಿದೆ. ವಿವಾಹಿತರ ನಡುವೆ ಕೂಡಾ ಪ್ರೀತಿಯ ಕೊರತೆ ಎದ್ದು ಕಾಣುತ್ತದೆ. 

ಕಟಕ(Cancer)
ಕುಟುಂಬ ಸದಸ್ಯರ ಮೂಗು ತೂರಿಸುವಿಕೆಯಿಂದ ವಿವಾಹಿತರ ನಡುವೆ ಸಮಸ್ಯೆಗಳು ಏಳಬಹುದು. ಪ್ರೇಮ ಸಂಬಂಧಗಳಲ್ಲಿರುವವರ ನಡುವೆ ಸಮಸ್ಯೆ ಜಗಳ ಹೆಚ್ಚಿ ಬೇರಾಗುವ ಯೋಚನೆಗಳು ಸುಳಿದಾಡಬಹುದು. 

ಸಿಂಹ(Leo)
ವಿವಾಹಿತರು ತಮ್ಮ ಸಂಗಾತಿಯಿಂದ ಬೇರ್ಪಟ್ಟರೂ ಆಶ್ಚರ್ಯವಿಲ್ಲ. ಪ್ರೇಮ ಸಂಬಂಧದಲ್ಲಿರುವವರು ಇದುವರೆಗೂ ಹೇಗಿದ್ದರೋ ಹಾಗೇ ಮುಂದುವರಿಯಲಿದ್ದಾರೆ. ಸಿಂಗಲ್ ಆಗಿರುವವರಿಗೆ ಪ್ರೀತಿ ದೊರೆಯಬಹುದು. ಆದರೆ ಅದಕ್ಕಾಗಿ ಹೆಚ್ಚಿನ ಶ್ರಮ ಹಾಕಬೇಕಾಗಬಹುದು.

ಕನ್ಯಾ(Virgo)
ಈ ರಾಶಿಯವರು ಸಂಗಾತಿಯೊಂದಿಗೆ ಎಷ್ಟೇ ಹೊಂದಿಕೊಳ್ಳಲು ಪ್ರಯತ್ನಿಸಿದರೂ ಅದನ್ನು ಸಂಗಾತಿ ಗಮನಿಸಿದೆ ಹೋಗಿ ನಿರಾಶೆಯಾಗಬಹುದು. ಒಂಟಿಯಾಗಿರುವವರು ಈ ಪ್ರೇಮದ ತಿಂಗಳಲ್ಲೂ ಒಂಟಿಯಾಗಿಯೇ ಉಳಿಯುತ್ತಾರೆ. ಪ್ರೇಮದಲ್ಲಿರುವವರು ಬ್ರೇಕಪ್ ಕಾಣಬಹುದು. 

ಶ್ರೀಮಂತರಾಗುವ ತರಾತುರಿಯಲ್ಲಿ ಅಪ್ಪಿತಪ್ಪಿಯೂ ಈ ರತ್ನ ಧರಿಸಬೇಡಿ

ತುಲಾ(Libra)
ಈ ತಿಂಗಳು ವಿವಾಹಿತರಿಗೆ ಬಹಳ ಚೆನ್ನಾಗಿರಲಿದೆ. ತಮ್ಮೆಲ್ಲ ಮುನಿಸು ಮರೆತು ಚೆನ್ನಾಗಿ ಬದುಕಲು ನಿರ್ಧರಿಸುತ್ತಾರೆ. ಹೊಸ ಜೀವನ ಪ್ರಾರಂಭಿಸುತ್ತಾರೆ. ಸಿಂಗಲ್ ಆಗಿರುವವರು ಸಿಂಗಲ್ ಆಗಿರುವುದೇ ಒಳ್ಳೆಯದು, ಇಲ್ಲದಿದ್ದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಪ್ರೇಮದಲ್ಲಿರುವವರು ಖುಷಿಯಾಗಿ ಮುಂದುವರಿಯಲಿದ್ದಾರೆ. 

ವೃಶ್ಚಿಕ(Scorpio)
ಈ ರಾಶಿಯ ಒಂಟಿ ಯುವಕ, ಯುವತಿಯರು ಸಂಬಂಧಕ್ಕೆ ಕಾಲಿಡಲಿದ್ದಾರೆ. ವಿವಾಹಿತರ ನಡುವೆ ಉತ್ತಮ ಪ್ರೀತಿ, ಸಂತೋಷ ಇರಲಿದೆ. ಆದರೆ, ಪ್ರೇಮದಲ್ಲಿರುವವರ ನಡುವೆ ಗೊಂದಲ, ಅನುಮಾನ ಮೂಡಬಹುದು. 

ಧನು(Sagittarius)
ವಿವಾಹಿತರು ಹಾಗೂ ಪ್ರೇಮ ಸಂಬಂಧಗಳಲ್ಲಿರುವವರು ಸಂಗಾತಿ ಜೊತೆ ಕೊಂಚ ದೂರವಿರಲು ನಿರ್ಧರಿಸಬಹುದು. ಸಂಬಂಧದ ನಡುವೆ ಮೂರನೆಯವರ ಮೂಗು ತೂರಿಸುವಿಕೆ ಹೆಚ್ಚಬಹುದು. ಒಂಟಿಯಾಗಿರುವವರು ಹಾಗೆಯೇ ಮುಂದುವರಿಯುವುದೇ ಉತ್ತಮ.

ಮಕರ(Capricorn)
ಈ ತಿಂಗಳು ಸಂಬಂಧದಲ್ಲಿರುವವರು ತಮ್ಮ ಸಂಗಾತಿಯ ಜೊತೆ ಅತ್ಯುತ್ತಮ ಸಮಯ ಕಳೆಯುವರು. ತಮ್ಮ ಸಂಬಂಧವನ್ನು ಹಬ್ಬದಂತೆ ಆಚರಿಸುವರು. ಒಂಟಿಯಾಗಿರುವವರ ಬದುಕು ಬದಲಾಗುವುದಿಲ್ಲ. ಅವರು ಮುಂದಿನ ಮಾಸಗಳಿಗೆ ಎದುರು ನೋಡುವುದು ಉತ್ತಮ. 

Job Security And Zodiac: ಈ ರಾಶಿಯವರು ಸಧ್ಯದಲ್ಲೇ ಕೆಲಸ ಕಳೆದುಕೊಳ್ಳಲಿದ್ದಾರೆ!

ಕುಂಭ(Aquarius)
ಪ್ರೇಮ ಸಂಬಂಧದಲ್ಲಿರುವವರ ನಡುವೆ ವಿವಾಹ ನಿಶ್ಚಯವಾಗುವುದು. ವಿವಾಹಿತರ ನಡುವೆ ಇರುವ ಸಮಸ್ಯೆಗಳು ಪರಿಹಾರ ಕಾಣುವುವು. ಒಂಟಿಯಾಗಿರುವವರಿಗೆ ಪ್ರೀತಿ ದೊರಕಿ ಸಂತಸವಾಗುವುದು.

ಮೀನ(Pisces)
ವಿವಾಹಿತರಿಗೆ ಕೊಂಚ ಕಷ್ಟದ ತಿಂಗಳು. ಆದರೆ, ಪ್ರೇಮಿಗಳಾಗಿದ್ದವರು ವಿವಾಹವಾಗುವ ಸಾಧ್ಯತೆಗಳಿವೆ. ಒಂಟಿಯಾಗಿರುವವರು ಗಂಭೀರ ಸಂಬಂಧಕ್ಕೆ ಎಂಟ್ರಿಯಾಗುತ್ತಾರೆ. 

click me!