Cancer Bad Traits: ಕಟಕ ರಾಶಿಯವರ ಕೆಟ್ಟ ಗುಣಗಳಿವು..

By Suvarna NewsFirst Published Jan 23, 2022, 4:11 PM IST
Highlights

ಎಲ್ಲ ರಾಶಿಯಲ್ಲೂ ಒಂದಿಷ್ಟು ಒಳ್ಳೆಯ ಮತ್ತೊಂದಿಷ್ಟು ಕೆಟ್ಟ ಸ್ವಭಾವಗಳಿರುತ್ತವೆ. ಇಂದು ಕಟಕ ರಾಶಿಯ ಕೆಟ್ಟ ಸ್ವಭಾವವೇನು ನೋಡೋಣ. 

ಎಲ್ಲರಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳಿರುತ್ತವೆ. ಕೆಟ್ಟದೆಂದ ಕೂಡಲೇ ಅಪರಾಧಿ ವರ್ತನೆ ಎಂದುಕೊಳ್ಳಬೇಕಿಲ್ಲ, ಸಣ್ಣಪುಟ್ಟದ್ದಕ್ಕೆ ಕೊರಗುವುದು, ಕೋಪ ಇತ್ಯಾದಿಗಳು ಎಲ್ಲರಲ್ಲೂ ಇರುತ್ತವೆ. ಕೆಲವರಲ್ಲಿ ಹೆಚ್ಚಿರುತ್ತದೆ. ಕಟಕ(Cancer) ರಾಶಿಯ ವಿಷಯಕ್ಕೆ ಬಂದರೆ ಅವರು ತುಂಬಾ ಸೂಕ್ಷ್ಮ ಸ್ವಭಾವದವರು, ಸಹಾನುಭೂತಿ(empathy) ಹೆಚ್ಚು, ಅದರ ಜೊತೆಗೆ ಪ್ರೀತಿ ಹೆಚ್ಚು. ಸೃಜನಶೀಲರಾದ ಇವರು ಭಾವಜೀವಿಗಳು. ಆದರೆ ಕೆಲವೊಮ್ಮೆ ಸಂಕೀರ್ಣರೆನಿಸುತ್ತಾರೆ. ಈ ಎಲ್ಲ ಸದ್ಗುಣಗಳೊಂದಿಗೆ ಕಟಕ ರಾಶಿಗೆ ಒಂದಿಷ್ಟು ದುರ್ಗುಣಗಳೂ ಇವೆ. ಅವು ಯಾವುವು ನೋಡೋಣ..

ಋಣಾತ್ಮಕ ಯೋಚನೆ ಹೆಚ್ಚು(Pessimistic)
ಕಟಕ ರಾಶಿಯವರನ್ನು ನೋಡಿ, ಅವರು ಪ್ರಯತ್ನಿಸುವ ಮುಂಚೆಯೇ ಕೆಲಸ ಕೈ ಬಿಡುವುದು ಹೆಚ್ಚು. ಎಲ್ಲ ವಿಷಯಗಳ ಒಳ್ಳೆಯ ಮುಖ ನೋಡುವುದಕ್ಕಿಂತ ಹೆಚ್ಚಾಗಿ ನೆಗೆಟಿವ್ ಬದಿಯನ್ನೇ ನೋಡುತ್ತಾರೆ. ಸೋಲಿಗಾಗಿ ಹೆದರಿ ಪ್ರಯತ್ನಿಸುವುದನ್ನೇ ನಿಲ್ಲಿಸುತ್ತಾರೆ. 

ಮೂಡಿ(Moody)
ಈಗ ನಗುತ್ತಿರುತ್ತಾರೆ. ಇನ್ನೊಂದು ಕ್ಷಣದಲ್ಲಿ ಮನಸ್ಸು ಹಾಳಾಗಿರುತ್ತದೆ.  ಸಣ್ಣ ಮಾತು, ಕೊಂಚ ತುಟಿ ಓರೆಯ ನಗು ಸಾಕು ಇವರ ಮೂಡ್ ಹಾಳಾಗಲು. ಇವರಿರುವುದೇ ಹಾಗೆ, ತುಂಬಾ ಮೂಡಿ ಸ್ವಭಾವ ಇವರದು. ಎಲ್ಲ ಭಾವನೆಗಳೂ ಹೆಚ್ಚಾದ್ದರಿಂದ ಖುಷಿಯೂ ಹೆಚ್ಚು, ಅಳುವೂ ಹೆಚ್ಚು. 
 
ತರ್ಕರಹಿತ(Irrational)
ಇವರಲ್ಲಿ ಭಾವನೆಗಳು ಹೆಚ್ಚು. ಕೆಲವೊಮ್ಮೆ ಅತಿ ಎನಿಸಿಬಿಡುತ್ತದೆ. ಇದರಿಂದಾಗಿ ತರ್ಕರಹಿತವಾಗಿ ಯಾವುದೇ ವಿಷಯಕ್ಕೂ ಭಾವುಕರಾಗಿ ಬಿಡುತ್ತಾರೆ. ನಿರ್ಧಾರಗಳನ್ನು ಕೈಗೊಳ್ಳುವಾಗ ತಾರ್ಕಿಕವಾಗಿ ಯೋಚಿಸುವ ಬದಲು ಭಾವನೆಗಳ ಕೈಗೆ ಮನಸ್ಸಿನ ಹಿಡಿತ ಕೊಡುತ್ತಾರೆ. ಹಾಗಾಗಿ, ನಿರ್ಧಾರದ ವಿಷಯದಲ್ಲಿ ಎಡವುವುದೇ ಹೆಚ್ಚು. 

ಅಂಟುವ ಸ್ವಭಾವ(Clingy)
ಬಹಳ ಬೇಗ ಮತ್ತೊಬ್ಬರನ್ನು ಹಚ್ಚಿಕೊಳ್ಳುವ ಜೊತೆಗೆ ಸದಾ ಅವರನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ. ಈ ಭಯದ ಕಾರಣದಿಂದ ಮತ್ತಷ್ಟು ಅಂಟಲು ಶುರು ಮಾಡುತ್ತಾರೆ. ಇವರ ಈ ಅತಿಯಾದ ಅವಲಂಬನೆ ಮತ್ತೊಬ್ಬರಿಗೆ ಉಸಿರು ಕಟ್ಟಿಸಬಹುದು. ತಮ್ಮ ಸುತ್ತಲಿದ್ದವರನ್ನೆಲ್ಲ ಜೊತೆಯಲ್ಲೇ ಇಟ್ಟುಕೊಳ್ಳುವ ಹಟ ಇವರದು. 

Vastu Tips: ಮಂಗಳವಾರ ಈ ಕೆಲ್ಸಗಳ್ನ ಮಾಡಿ ಅಮಂಗಳಕ್ಕೆ ಕಾರಣವಾಗ್ಬೇಡಿ..
 
ಹೇಳಿದ್ದೇ ಹೇಳುವುದು(nagger)
ಈ ವಿಷಯದಲ್ಲಿ ಚಿಕ್ಕ ಮಕ್ಕಳ ಹಾಗೆ ವರ್ತಿಸುತ್ತಾರೆ. ತಮಗೇನಾದರೂ ಬೇಕಾದರೆ ಅದು ಸಿಗುವವರೆಗೂ ಹೇಳುತ್ತಿರುವುದು, ಯಾರಾದರೂ ಏನಾದರೂ ಅಂದರೆ ಅದನ್ನು ಪದೇ ಪದೆ ನೆನೆದು ಹೇಳುತ್ತಲೇ ಇರುವುದು, ತಮ್ಮಿಂದಲೇ ಏನೋ ತಪ್ಪಾದಾಗಲೂ ಅದರ ಬಗ್ಗೆ ಅತಿಯಾದ ಪಶ್ಚಾತ್ತಾಪ ವ್ಯಕ್ತಪಡಿಸಿ ತಲೆ ಚಿಟ್ಟು ಹಿಡಿಸುವುದು ಇವರದೊಂದು ಕೆಟ್ಟ ಸ್ವಭಾವ. 

 Astrology tips: ಮಕ್ಕಳಾಗ್ತಿಲ್ವಾ? ಸಂತಾನ ಯೋಗ ಹೆಚ್ಚಿಸಲು ಹೀಗ್ಮಾಡಿ..

ಅನುಮಾನ(Suspicious)
ಸಂಬಂಧ(relationship)ದಲ್ಲಿ ಸಂಗಾತಿಯ ಮೇಲೆ ಆಗಾಗ ಅನುಮಾನ ಇವರಲ್ಲಿ ಮೂಡುತ್ತಿರುತ್ತದೆ. ಸಣ್ಣ ಪುಟ್ಟ ವಿಷಯಕ್ಕೂ ಮನೆಯ ಸದಸ್ಯರ ಮೇಲೆ ಅನುಮಾನಿಸುವುದು, ಅವರ ಮಾತಿನ ಹಿಂದಿನ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಕಟಕದ ಸ್ವಭಾವ. 

ಅವ್ಯಕ್ತ
ಈ ರಾಶಿಯವರಿಗೆ ಭಾವನೆಗಳು ಜಾಸ್ತಿಯಾದರೂ ಅದನ್ನು ಸರಿಯಾದ ರೀತಿಯಲ್ಲಿ ಹೇಳಿಕೊಳ್ಳುವವರಲ್ಲ. ಹೆಚ್ಚಾಗಿ ತಮ್ಮ ಫೀಲಿಂಗ್ಸನ್ನು ಒಳಗೇ ಅದುಮಿಟ್ಟುಕೊಳ್ಳುತ್ತಾರೆ(Suppress feelings). ಇದರಿಂದ ಕೇವಲ ಇವರ ಸಂಬಂಧಗಳ ಮೇಲೆ ಪರಿಣಾಮವಾಗುವುದಲ್ಲ, ಸ್ವತಃ ಇವರ ಮೇಲೇ ನಕಾರಾತ್ಮಕ ಪರಿಣಾಮಗಳಾಗುತ್ತವೆ. ಎಲ್ಲವನ್ನೂ ಮುಚ್ಚಿಟ್ಟುಕೊಂಡಿದ್ದರಿಂದ ಒತ್ತಡ ಅನುಭವಿಸುತ್ತಾರೆ. 

ತಿರಸ್ಕಾರದ ಭಯ(Fear of rejection)
ಇವರಿಗೆ ತಿರಸ್ಕಾರದ ಭಯ ಹೆಚ್ಚು. ತಾವು ಇಷ್ಟ ಪಡುವವರು ತಮ್ಮನ್ನು ದೂರವಿಟ್ಟರೆ ಎಂಬ ಭಯಕ್ಕೇ ಅವರು ಮುಂದುವರಿಯದೆ ನಿಂತಲ್ಲೇ ನಿಂತು ಬಿಡುತ್ತಾರೆ. ಮುಂದೇನಾಗಬಹುದೋ ಎಂಬ ಆತಂಕಕ್ಕೆ ಯಾವುದನ್ನೂ ಮುಂದುವರಿಯಲೇ ಬಿಡುವುದಿಲ್ಲ. ಭಯದಿಂದಲೇ ಬಹಳಷ್ಟನ್ನು ಕಳೆದುಕೊಂಡು ಕಡೆಗೆ ಕೊರಗುತ್ತಾರೆ. 
 

click me!