ಶರಶಯ್ಯೆಯ ಮೇಲೆ ಸಾವಿಗಾಗಿ ಸಂಕ್ರಾಂತಿವರೆಗೆ ಕಾದ ಭೀಷ್ಮ; 58 ದಿನ ಕಾದಿದ್ದು ಏಕಾಗಿ?

By Suvarna NewsFirst Published Jan 14, 2024, 10:26 AM IST
Highlights

ಭೀಷ್ಮ ಪಿತಾಮಹರು ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಮಕರ ಸಂಕ್ರಾಂತಿವರೆಗೂ ಕಾಯುತ್ತಿದ್ದರು. ಯಾಕೆ, ಏನಂಥ ವಿಶೇಷ ಗೊತ್ತಾ?

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ಸಾಮಾನ್ಯವಾಗಿ ಉಳಿದೆಲ್ಲ ಹಬ್ಬಗಳ ದಿನಾಂಕ ತಿಥಿ ಪ್ರಕಾರದಲ್ಲಿ ಬದಲಾಗುತ್ತಿರುತ್ತದೆ. ಏಕೆಂದರೆ ಅವೆಲ್ಲ ಚಂದ್ರನ ಚಲನೆಯನ್ನು ಅನುಸರಿಸುತ್ತವೆ. ಆದರೆ, ಸಂಕ್ರಾಂತಿಯನ್ನು ಸೂರ್ಯನ ಚಲನೆಯ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ. ಹಾಗಾಗಿ, ಇದು ಪ್ರತಿ ವರ್ಷ ಜನವರಿ 14 ಇಲ್ಲವೇ 15ರಂದೇ ಬರುತ್ತದೆ.  ಈ ವರ್ಷ, ಮಕರ ಸಂಕ್ರಾಂತಿ ಹಬ್ಬವನ್ನು ದೇಶದಾದ್ಯಂತ ಸೋಮವಾರ, 15 ಜನವರಿ 2024 ರಂದು ಆಚರಿಸಲಾಗುತ್ತದೆ.

ಕೇರಳ ಮತ್ತು ತಮಿಳುನಾಡಿನಲ್ಲಿ ಪೊಂಗಲ್, ಕರ್ನಾಟಕದಲ್ಲಿ ಸಂಕ್ರಾಂತಿ, ಹರಿಯಾಣದಲ್ಲಿ ಮಾಘಿ, ಗುಜರಾತ್ನಲ್ಲಿ ಉತ್ತರಾಯಣ, ಉತ್ತರಾಖಂಡದ ಉತ್ತರಾಯಣಿ ಮುಂತಾದ ಹೆಸರುಗಳಿಂದ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. 

ಮಕರ ಸಂಕ್ರಾಂತಿಯಂದು, ಸೂರ್ಯ ದೇವರು ಉತ್ತರದ ಕಡೆಗೆ ಚಲಿಸುತ್ತಾನೆ. ಧನು ರಾಶಿಯಿಂದ ಹೊರ ಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅದಕ್ಕಾಗಿಯೇ ಇದನ್ನು ಉತ್ತರಾಯಣ ಮತ್ತು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಉತ್ತರಾಯಣದ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ, ದಾನ ಮತ್ತು ಪೂಜಿಸುವುದು ಶುಭ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ. 

ನಾಮಕರಣಕ್ಕೆ ಜ.22ಕ್ಕಿಂತ ಉತ್ತಮ ದಿನವೆಲ್ಲಿದೆ? ನಿಮ್ಮ ಮಗುವಿಗೆ ರಾಮ, ಸೀತೆಯ ಈ ಹೆಸರನ್ನು ಇರಿಸಬಹುದು

ಅಂದ ಹಾಗೆ, ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ಯುದ್ಧದಲ್ಲಿ ಕೌರವರ ಪರವಾಗಿ ಹೋರಾಡುತ್ತಿದ್ದರು.  ಅವರು ಅರ್ಜುನನ ಬಾಣಗಳಿಂದ ಗಾಯಗೊಂಡರು ಮತ್ತು ಶರಶಯ್ಯೆಯಲ್ಲಿ ಮಲಗಿದ್ದರು. ಭೀಷ್ಮ ಪಿತಾಮಹರಿಗೆ ಸ್ವಯಂಪ್ರೇರಿತ ಮರಣದ ವರವಿತ್ತು. ಆದ್ದರಿಂದ, ಅವರು ಬಯಸಿದಾಗ ಮತ್ತು ಯಾವುದೇ ದಿನ ತಮ್ಮ ಜೀವವನ್ನು ತ್ಯಾಗ ಮಾಡಬಹುದಾಗಿತ್ತು. ಇಚ್ಚಾ ಮರಣಿಯಾಗಿದ್ದ ಅವರು ಸೂರ್ಯನು ಉತ್ತರಾಯಣವಾಗಿರುವ ಸಮಯದಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡಬೇಕೆಂದು ಬಯಸಿದರು.  ಆದರೆ ಅರ್ಜುನನ ಬಾಣಗಳಿಂದ ಅವರು ಗಾಯಗೊಂಡಾಗ, ಸೂರ್ಯನು ದಕ್ಷಿಣಾಯನದಲ್ಲಿದ್ದನು. ಹಾಗಾಗಿ, ಅವರು 58 ದಿನಗಳ ಕಾಲ ತಮ್ಮ ಪ್ರಾಣ ತ್ಯಾಗ ಮಾಡಲು ಕಾದರು. ಕಡೆಗೆ ಸಂಕ್ರಾಂತಿಯ ದಿನ ಅವರು ಆಕಾಶದತ್ತ ನೋಡುತ್ತಾ ಪ್ರಾಣ ತ್ಯಜಿಸಿದರು. ಇದಕ್ಕೊಂದು ವಿಶೇಷ ಕಾರಣವಿತ್ತು. ಅದೆಂದರೆ, ಉತ್ತರಾಯಣ ಪುಣ್ಯ ಕಾಲದಲ್ಲಿ ಸಾವನ್ನಪ್ಪಿದ್ದರೆ ಮೋಕ್ಷ ದೊರೆಯುತ್ತದೆ ಎಂಬುದು. 

ನೆಲದ ಮೇಲೆ ಊಟ ಮಾಡಿದ ಸುಂದರಿ; ನಮ್ಮ ಸಂಸ್ಕೃತಿಯ ರಾಯಭಾರಿ ಎಂದ ನೆಟ್ಟಿಗರು

ಹೌದು, ಉತ್ತರಾಯಣ ಕಾಲದಲ್ಲಿ ಪ್ರಾಣ ತ್ಯಾಗ ಮಾಡಿದವರು ಜೀವನ್ಮರಣದ ಬಂಧನದಿಂದ ಮುಕ್ತರಾಗುತ್ತಾರೆ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗುತ್ತದೆ. 
 

click me!