ನೆಲದ ಮೇಲೆ ಊಟ ಮಾಡಿದ ಸುಂದರಿ; ನಮ್ಮ ಸಂಸ್ಕೃತಿಯ ರಾಯಭಾರಿ ಎಂದ ನೆಟ್ಟಿಗರು

By Suvarna News  |  First Published Jan 13, 2024, 6:00 PM IST

ಇನ್ಸ್ಟಾಗ್ರಾಂ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳು ನೆಲದ ಮೇಲೆ ಶಿಸ್ತಾಗಿ ಕುಳಿತು ಖಾಲಿ ನೆಲದ ಮೇಲೆ ಬಡಿಸಿದ ಅನ್ನ ಸಾಂಬಾರನ್ನು ಯಾವುದೇ ಅಸಹ್ಯ ಮಾಡಿಕೊಳ್ಳದೆ ತಿನ್ನುತ್ತಿರುವುದನ್ನು ಕಾಣಬಹುದು. 


ಇನ್ಸ್ಟಾಗ್ರಾಂ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳು ನೆಲದ ಮೇಲೆ ಶಿಸ್ತಾಗಿ ಕುಳಿತು ಖಾಲಿ ನೆಲದ ಮೇಲೆ ಬಡಿಸಿದ ಅನ್ನ ಸಾಂಬಾರನ್ನು ಯಾವುದೇ ಅಸಹ್ಯ ಮಾಡಿಕೊಳ್ಳದೆ ತಿನ್ನುತ್ತಿರುವುದನ್ನು ಕಾಣಬಹುದು. 

ವಿಡಿಯೋಗೆ 'ಸರ್ವೇಜನ ಸುಖಿನೋ ಭವಂತು' ಎಂದು ವಿಡಿಯೋದಲ್ಲಿರುವ ಕನಕ ಎಸ್ ಗೌಡ ಕ್ಯಾಪ್ಶನ್ ಕೊಟ್ಟಿದ್ದಾರೆ. ಜೊತೆಗೆ ಮಂಜುನಾಥ ಮಂಜುನಾಥ ಹಾಡನ್ನು ಹಿನ್ನೆಲೆಯಲ್ಲಿ ಹಾಕಿದ್ದಾರೆ. ವಿಡಿಯೋ ಎಲ್ಲಿ ತೆಗೆದಿದ್ದು ಎಂಬ ಬಗ್ಗೆ ಆಕೆ ಯಾವುದೇ ಮಾಹಿತಿ ನೀಡದಿದ್ದರೂ ಇದು ಉಡುಪಿ ಕೃಷ್ಣ ಮಠದ ವಿಶಿಷ್ಠ ಆಚರಣೆಯಾಗಿದೆ. ಹಾಗಾಗಿ, ಇದು ಅಲ್ಲಿಯೇ ತೆಗೆದಿದ್ದಿರಬಹುದು.

Latest Videos

undefined

ಉಡುಪಿ ಮಠದಲ್ಲಿ ಹರಕೆ ಹೊತ್ತಿರುವ ಕೆಲವರು ಹೀಗೆ ಬಾಳೆಲೆ ಇಲ್ಲದೆ, ನೆಲವನ್ನೇ ಬಾಳೆಲೆ ಎಂದು ಭಾವಿಸಿ ಊಟ ಮಾಡುತ್ತಾರೆ. ಬಾಳೆಲೆಯ ಮೇಲೆ ಬಡಿಸುವ ರೀತಿಯಲ್ಲೇ ಆಯಾ ಜಾಗದಲ್ಲಿ ಅನ್ನ, ಉಪ್ಪು, ಪಲ್ಯ ಬಡಿಸಲಾಗುತ್ತದೆ. ಹೀಗೆ ಊಟ ಮಾಡುವವರು ಕೊಂಚವೂ ಅಸಹ್ಯ ಮಾಡಿಕೊಳ್ಳದೆ ದೇವರ ಪ್ರಸಾದ ಎಂದು ಕಣ್ಣಿಗೊತ್ತಿಕೊಂಡು ತಿನ್ನುವುದನ್ನು ಪ್ರತಿ ದಿನ ಕಾಣಬಹುದು. 

ಈ ವಿಡಿಯೋಗೆ ಸುಮಾರು 7 ಲಕ್ಷ ಜನ ಲೈಕ್ ಒತ್ತಿದ್ದು, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ನಮ್ಮ ಸಂಸ್ಕೃತಿಯ ಭಾಗ ಎಂದಿದ್ದರೆ ಮತ್ತೆ ಕೆಲವರು ಸ್ವಚ್ಛತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕ್ರಿಯೇಟಿವ್ ಮ್ಯೂಸಿಕ್ ಲೈಫ್ ಎಂಬ ಖಾತೆ ಹೊಂದಿರುವವರು ಕಾಮೆಂಟ್ ಮಾಡಿದ್ದು, 'ನೀವು ಈ ರೀತಿಯ ವೀಡಿಯೊಗಳನ್ನು ಪೋಸ್ಟ್ ಮಾಡಿದಾಗಲೆಲ್ಲಾ ಕಾಮೆಂಟ್ ವಿಭಾಗವನ್ನು ನಿಷ್ಕ್ರಿಯಗೊಳಿಸಬೇಕು, ಇಲ್ಲದಿದ್ದರೆ ಇದರ ಬಗ್ಗೆ ಅಥವಾ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಏನೂ ತಿಳಿದಿಲ್ಲದ ಜನರು ನಿಮ್ಮ ಕಾಮೆಂಟ್‌ಗಳ ವಿಭಾಗದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಆ ವಿಷಯದ ಪ್ರಕ್ರಿಯೆ ಮತ್ತು ಕಾರ್ಯವಿಧಾನವನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಇತರ ಮಾಹಿತಿಗಾಗಿ- ಅವಳು ತಿನ್ನುವ ಸ್ಥಳದಲ್ಲಿ ಯಾರೂ ನಡೆಯುವುದಿಲ್ಲ ಮತ್ತು ಬಡಿಸುವವರು ಅಲ್ಲಿ ತಿನ್ನುವ ಜನರ ಹಾದಿಯನ್ನು ಯಾರೂ ದಾಟದಂತೆ ನೋಡಿಕೊಳ್ಳುತ್ತಾರೆ. ಈ ಸ್ಥಳವನ್ನು ನಿರಂತರ ಸ್ವಚ್ಛಗೊಳಿಸಲಾಗುತ್ತದೆ. ಹೀಗೆ ನೆಲದಿಂದ ಆಹಾರವನ್ನು ತಿನ್ನುವವರ ಜೀವನದಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ ಎಂಬ ನಂಬಿಕೆ ಇದೆ. ಅರ್ಧ ಜ್ಞಾನದ ಆಧಾರದ ಮೇಲೆ ಇತರ ಜನರನ್ನು ಅಥವಾ ಧರ್ಮವನ್ನು ಕಡಿಮೆ ಅಂದಾಜು ಮಾಡಬೇಡಿ,' ಎಂದು ವಿವರಣೆ ನೀಡಿದ್ದಾರೆ.

ಈ ವಿಡಿಯೋದಲ್ಲಿರುವ ಕನಕ ಗೌಡ ಎಂಬಾಕೆ ಬ್ರೈಡಲ್ ಹೌಸ್ ಬೆಂಗಳೂರು ಇದರ ಸಂಸ್ಥಾಪಕಿಯಾಗಿದ್ದಾರೆ. ಇವರು ಸುಮಾರು 2,23,000 ಫಾಲೋವರ್‌ಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Kanaka_S (@kanaka_gowda)

click me!