ಸಂಕ್ರಾಂತಿಯ ದಿನ ಸೂರ್ಯ ಹಾಗೂ ಶನಿಗೆ ಎಳ್ಳು ಅರ್ಪಿಸುವುದರ ಹಿಂದಿದೆ ಒಂದು ಕತೆ. ಈ ಕತೆಯನ್ನು ಓದುವುದರಿಂದ ಶನಿ ದೋಷ ಪರಿಹಾರವಾಗುತ್ತದೆ.
ಈ ಬಾರಿ ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಸೂರ್ಯ ದೇವರು ಧನು ರಾಶಿಯಿಂದ ಹೊರಟು ಮಕರ ರಾಶಿ ಪ್ರವೇಶಿಸುತ್ತಾನೆ. ಈ ಗ್ರಹ ಚಲನೆ ಬದಲಾವಣೆಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮಕರ ರಾಶಿಯ ಅಧಿಪತಿ ಶನಿ ದೇವ. ಸೂರ್ಯನಿಗೂ ಪುತ್ರ ಶನಿ ದೇವನಿಗೂ ನಡುವೆ ದ್ವೇಷವಿದೆ. ಆದರೆ, ಈ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸೂರ್ಯನು ತನ್ನ ಮಗ ಶನಿ ದೇವನ ಮನೆಯಲ್ಲಿ ಒಂದು ತಿಂಗಳ ಕಾಲ ವಾಸವಾಗಿರುತ್ತಾನೆ. ನಂತರ ಅವನು ಕುಂಭ ರಾಶಿಗೆ ಹೋಗುತ್ತಾನೆ.
ಮಕರ ಸಂಕ್ರಾಂತಿಯ ದಿನದಂದು ಸೂರ್ಯ ದೇವನು ತನ್ನ ಮಗ ಶನಿ ದೇವನನ್ನು ಭೇಟಿಯಾಗಲು ಬರುತ್ತಾನೆ. ಶನಿ ದೇವನಿಗೂ ಮತ್ತು ಸೂರ್ಯ ದೇವನಿಗೂ ಹೊಂದಿಕೆಯಾಗುವುದಿಲ್ಲ. ಒಮ್ಮೆ ಕೋಪದ ಭರಾಟೆಯಲ್ಲಿ, ಸೂರ್ಯ ದೇವನು ಶನಿ ದೇವ ಮತ್ತು ಅವನ ತಾಯಿ ಛಾಯಾಳ ಮನೆಯನ್ನು ಸುಟ್ಟುಹಾಕಿದ್ದನು. ಆದಾಗ್ಯೂ, ನಂತರ ಸೂರ್ಯ ದೇವನು ಶನಿ ದೇವನಿಗೆ ಮಕರ ಸಂಕ್ರಾಂತಿಗೆ ಸಂಬಂಧಿಸಿದ ವರವನ್ನು ನೀಡಿದರು. ಈ ದಂತಕಥೆಯನ್ನು ಓದೋಣ.
ಶನಿದೇವನಿಗೆ ವಿಶೇಷವಾದ ವರವಿದೆ
ಶನಿದೇವನ ಬಣ್ಣ ಕಪ್ಪು. ಇದರಿಂದಾಗಿ ಆತನ ತಂದೆ ಸೂರ್ಯ ದೇವನಿಗೆ ಶನಿ ಎಂದರೆ ಇಷ್ಟವಿಲ್ಲ. ಹೀಗಾಗಿ ಸೂರ್ಯ ದೇವ ಶನಿಯನ್ನು ತಾಯಿ ಛಾಯಾಳಿಂದ ಬೇರ್ಪಡಿಸಿದ್ದ. ಇದರಿಂದ ದುಃಖಿತಳಾದ ಛಾಯಾ, ಸೂರ್ಯ ದೇವನಿಗೆ ಕುಷ್ಠರೋಗ ಬರುವಂತೆ ಶಾಪ ನೀಡಿದಳು. ಸೂರ್ಯ ದೇವ ಕುಷ್ಠರೋಗ ಪೀಡಿತನಾದ. ಆಗ ಸೂರ್ಯ ದೇವನ ಎರಡನೇ ಹೆಂಡತಿಯ ಮಗ ಯಮರಾಜನು ತನ್ನ ಕಠೋರ ತಪಸ್ಸಿನಿಂದ ತನ್ನ ತಂದೆ ಸೂರ್ಯ ದೇವನನ್ನು ಗುಣಪಡಿಸಿದನು.
ದ್ವಾರಕೆಯಿಂದ ಕೃಷ್ಣ ಉಡುಪಿಗೆ ಬಂದ ಆಸಕ್ತಿದಾಯಕ ಕತೆ ಕೇಳಿದ್ದೀರಾ?
ಕುಷ್ಠರೋಗವನ್ನು ತೊಡೆದುಹಾಕಿದ ನಂತರ, ಸೂರ್ಯ ದೇವನು ಕೋಪಗೊಂಡು ಶನಿದೇವ ಮತ್ತು ಛಾಯಾಳ ಮನೆಯಾದ ಕುಂಭವನ್ನು ಸುಟ್ಟುಹಾಕಿದನು. ಇದರಿಂದ ಛಾಯಾ ಮತ್ತು ಶನಿ ದೇವ ತುಂಬಾ ದುಃಖಿತರಾದರು. ಮತ್ತೊಂದೆಡೆ, ಯಮರಾಜ ಸೂರ್ಯ ದೇವನಿಗೆ ಛಾಯಾ ಮತ್ತು ಶನಿ ದೇವ ಜೊತೆ ಈ ರೀತಿ ವರ್ತಿಸಬೇಡಿ ಎಂದು ಸಲಹೆ ನೀಡಿದನು. ಸೂರ್ಯ ದೇವ್ನ ಕೋಪ ಶಾಂತವಾದಾಗ, ಅವನು ಒಂದು ದಿನ ಮಗ ಶನಿ ದೇವ ಮತ್ತು ಹೆಂಡತಿ ಛಾಯಾ ಅವರ ಮನೆಗೆ ಹೋದನು.
ಶನಿಯ ಮನೆಯಲ್ಲಿ ಏನೂ ಉಳಿದಿಲ್ಲ ಎಂಬುದನ್ನು ಸೂರ್ಯ ನೋಡಿದನು. ಎಲ್ಲವೂ ಸುಟ್ಟು ಬೂದಿಯಾಗಿತ್ತು. ಶನಿದೇವನ ಮನೆಯಲ್ಲಿ ಕಪ್ಪು ಎಳ್ಳು ಮಾತ್ರ ಉಳಿದಿತ್ತು. ಆ ಕಪ್ಪು ಎಳ್ಳಿನೊಂದಿಗೆ, ಶನಿ ದೇವ ತಂದೆ ಸೂರ್ಯ ದೇವನನ್ನು ಸ್ವಾಗತಿಸಿದನು. ಇದನ್ನು ಕಂಡು ಸಂತಸಗೊಂಡ ಸೂರ್ಯ ದೇವ ಶನಿಗೆ ಮಕರ ರಾಶಿ ಎಂಬ ಎರಡನೇ ಮನೆಯನ್ನು ಕೊಟ್ಟ. ಮಕರ ಸಂಕ್ರಾಂತಿಯಂದು ಮಕರ ರಾಶಿಯಲ್ಲಿ ಸೂರ್ಯನು ಬಂದಾಗ ಶನಿಯ ಈ ಮನೆ ಸಂಪತ್ತು ಮತ್ತು ಧಾನ್ಯಗಳಿಂದ ತುಂಬುತ್ತದೆ ಎಂದು ವರವನ್ನು ಕೊಟ್ಟನು. ಅಲ್ಲದೆ, ಈ ದಿನ ಸೂರ್ಯ ದೇವರನ್ನು ಕಪ್ಪು ಎಳ್ಳಿನಿಂದ ಪೂಜಿಸುವ ವ್ಯಕ್ತಿಯ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಯಿತು.
ಈ ದೇವಾಲಯ ಆವರಣದಲ್ಲಿ ಮಲಗಿದರೆ ಸಾಕು, ಮಕ್ಕಳಿಲ್ಲದ ಮಹಿಳೆ ಗರ್ಭವತಿಯಾಗುತ್ತಾಳೆ!
ಮಕರ ಸಂಕ್ರಾಂತಿಯಂದು ಸೂರ್ಯ ದೇವನು ಮಕರ ರಾಶಿಯಲ್ಲಿ ಶನಿದೇವನ ಮನೆಗೆ ಪ್ರವೇಶಿಸಿದಾಗ, ಅವನ ಇಡೀ ಮನೆ ಸಂಪತ್ತು ಮತ್ತು ಧಾನ್ಯಗಳಿಂದ ತುಂಬಿತ್ತು. ಇದರಿಂದಾಗಿ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಸೂರ್ಯನಿಗೆ ಕಪ್ಪು ಎಳ್ಳು ಮತ್ತು ಎಳ್ಳುಂಡೆಗಳನ್ನು ದಾನ ಮಾಡಲಾಗುತ್ತದೆ. ಸೂರ್ಯ ಮತ್ತು ಶನಿದೇವ ಕಪ್ಪು ಎಳ್ಳಿನಿಂದ ಪೂಜಿಸುವುದರಲ್ಲಿ ಸಂತೋಷಪಡುತ್ತಾರೆ.