ಮಡಿಕೇರಿ ತಾಲ್ಲೂಕಿನ ರಾಜರಾಜೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಬೃಹತ್ ಶಿವನ ಮೂರ್ತಿಗೆ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ಹಸಿರು ಪ್ರಕೃತಿಯ ನಡುವೆ ಕಂಗೊಳಿಸುತ್ತಿದ್ದ ಬೃಹತ್ ಶಿವನ ಮೂರ್ತಿಗೆ ಬೃಹತ್ ಹಾರ ಹಾಕಿ ಸಿಂಗರಿಸಲಾಗಿತ್ತು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.18): ನಾಡಿನೆಲ್ಲೆಡೆ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಶಿವರಾತ್ರಿ ಸಂಭಮ ಮನೆ ಮಾಡಿದೆ. ಮಡಿಕೇರಿ ತಾಲ್ಲೂಕಿನ ರಾಜರಾಜೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಬೃಹತ್ ಶಿವನ ಮೂರ್ತಿಗೆ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ಹಸಿರು ಪ್ರಕೃತಿಯ ನಡುವೆ ಕಂಗೊಳಿಸುತ್ತಿದ್ದ ಬೃಹತ್ ಶಿವನ ಮೂರ್ತಿಗೆ ಬೃಹತ್ ಹಾರ ಹಾಕಿ ಸಿಂಗರಿಸಲಾಗಿತ್ತು. ಮಹಾಶಿವರಾತ್ರಿ ಅಂಗವಾಗಿ ರಾಜರಾಜೇಶ್ವರಿ ದೇವಾಲಯ ಆವರಣವನ್ನೆಲ್ಲಾ ವಿವಿಧ ಪುಷ್ಪ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಆರು ಗಂಟೆಯಿಂದಲೇ ದೇವಾಲಯದಲ್ಲಿ ಗಣಪತಿ ಹೋಂ ನೆರವೇರಿಸುವ ಮೂಲಕ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮೊದಲಿಗೆ ರಾಜರಾಜೇಶ್ವರಿ ದೇವಿಗೆ ಧರ್ಮದರ್ಶಿ ಗೋವಿಂದ ಸ್ವಾಮಿ ಅವರು ಪೂಜೆ ನೆರವೇರಿಸಿದರು. ಬಳಿಕ ಕಾಶಿಯಿಂದ ತಂದು ಪ್ರತಿಷ್ಠಾಪಿಸಿರುವ ಶಿವನ ಲಿಂಗಕ್ಕೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಅಭಿಷೇಕಗಳನ್ನು ನೆರವೇರಿಸಿದರು. ಬಳಿಕ ಮಹಾಮಂಗಳಾರತಿ ನೆರವೇರಿಸಿದರು.
undefined
ಪ್ರತೀ ವರ್ಷವೂ ಮಹಾಶಿವರಾತ್ರಿ ನಡೆಯುತ್ತದೆ ಆದರೂ, ಇಲ್ಲಿ ಬೃಹತ್ ಶಿವನ ಮೂರ್ತಿಗೆ ಆರು ವರ್ಷಗಳಿಗೊಮ್ಮೆ ಒಮ್ಮೆ ಮಾತ್ರವೇ ವಿಶೇಷ ಅಭಿಷೇಕ, ಅರ್ಚನೆಗಳು ನಡೆಯುತ್ತವೆ. ಈ ಬಾರಿಯೂ ಐದು ವರ್ಷಗಳ ಬಳಿಕ ವಿಶೇಷ ಶಿವರಾತ್ರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ಕೊಡಗು ಅಷ್ಟೇ ಅಲ್ಲದೆ ವಿವಿಧ ಜಿಲ್ಲೆ ಹಾಗೂ ತಮಿಳುನಾಡಿನಿಂದಲೂ ಬಂದಿದ್ದ ನೂರಾರು ಭಕ್ತರು ಪೂಜೆ ಸಲ್ಲಿಸಿ ಮುಕ್ಕಣ್ಣನ ಕೃಪೆಗೆ ಪಾತ್ರರಾದರು.
ಇನ್ನು ಬೃಹತ್ ಶಿವನ ಮೂರ್ತಿಯ ಸುತ್ತಮುತ್ತ ಇರುವ ನೂರಾಒಂದು ಶಿವನ ಲಿಂಗಕ್ಕೆ ಧರ್ಮದರ್ಶಿ ಗೋವಿಂದ ಸ್ವಾಮಿ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರು ನೂರಾ ಒಂದು ಲಿಂಗಗಳಿಗೂ ಪೂಜೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಭಕ್ತರಾದ ರಾಜೇಶ್ವರಿ ಅವರು ನಾವು ಹಲವು ವರ್ಷಗಳಿಂದ ಇಲ್ಲಿಗೆ ಭಕ್ತರಾಗಿದ್ದೇವೆ. ನಾವು ಬೇಡಿಕೊಂಡ ಎಲ್ಲಾ ಅರಕೆಗಳು ಈಡೇರಿವೆ. ಅದಕ್ಕಾಗಿ ಒಂಭತ್ತು ದಿನ ಅಥವಾ ಒಂಭತ್ತು ವಾರಗಳ ಕಾಲ ವ್ರತಗಳನ್ನು ಮಾಡುತ್ತೇವೆ. ಇದರಿಂದ ನಮ್ಮ ಎಲ್ಲಾ ಬೇಡಿಕೆಗಳು ಸಿದ್ದಿವೆ.
ನೋಡ ಬನ್ನಿ ಬೆಂಗಳೂರಿನ ವಿವಿಧ ಶಿವ ದೇವಾಲಯಗಳಲ್ಲಿ Mahashivratri 2023 ಸಂಭ್ರಮ
ಹೀಗಾಗಿ ಪ್ರತೀ ವರ್ಷವೂ ತಪ್ಪದೇ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತೇವೆ. ಈ ಬಾರಿಯೂ ಶಿವರಾತ್ರಿ ಉತ್ಸವಕ್ಕೆ ಭಾಗವಹಿಸಿದ್ದೇವೆ. ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದೇವೆ. ಶಿವರಾತ್ರಿ ಉತ್ಸವಕ್ಕಾಗಿ ಭಾಗವಹಿಸಿರುವ ಎಲ್ಲಾ ಭಕ್ತರಿಗೂ ಅನ್ನಸಂತರ್ಪಣೆ ನಡೆಯುತ್ತಿದೆ ಎಂದರು. ಇನ್ನು ಧರ್ಮದರ್ಶಿ ಗೋವಿಂದಸ್ವಾಮಿ ಅವರು ಮಾತನಾಡಿ 70 ವರ್ಷಗಳಿಂದ ತಾಯಿ ಸನ್ನಿಧಿ ಇದ್ದು, ಕಳೆದ 6 ವರ್ಷಗಳ ಹಿಂದೆ ಬೃಹತ್ ಶಿವನ ಮೂರ್ತಿಯನ್ನು ಧರ್ಮಸ್ಥಳದಲ್ಲಿ ಧರ್ಮದರ್ಶಿಗಳಾದ ವೀರೇಂದ್ರ ಹೆಗ್ಗಡೆ ಅವರು ಲೋಕಾರ್ಪಣೆ ಮಾಡಿದ್ದರು.
GADAG: ದಿನದಿಂದ ದಿನಕ್ಕೆ ಬೆಳೆಯುತ್ತಿದೆ ವಿಠ್ಠಲ ರುಕ್ಮಿಣಿ ಕಲ್ಲಿನ ವಿಗ್ರಹ!
ಆರು ವರ್ಷಗಳಿಗೆ ಒಮ್ಮೆ ವಿಶೇಷ ಅಭಿಷೇಕವನ್ನು ಮಾಡಲಾಗುತ್ತಿದ್ದು, ಈ ವರ್ಷ ಎರಡನೇ ಬಾರಿಗೆ ಶಿವನ ಮೂರ್ತಿಗೆ ವಿಶೇಷ ಅಭಿಷೇಕಗಳನ್ನು ನೆರವೇರಿಸಿದ್ದೇವೆ. ಇಂದು ಕೂಡ ದೇವಾಲಯದಲ್ಲಿ ಗಣಪತಿ ಹೋಮದ ಮೂಲಕ ಪೂಜಾ ವಿಧಿ ವಿಧಾನಗಳನ್ನು ಆರಂಭಿಸಿ ನಂತರ ರುದ್ರಾಭಿಷೇಕ, ಕ್ಷೀರಾಭಿಷೇಕ, ತುಪ್ಪಾಭಿಷೇಕ, ಬಿಲ್ವಪತ್ರೆ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಅರ್ಚನೆಗಳನ್ನು ನೆರವೇರಿಸಿದ್ದೇವೆ. ವಿವಿಧ ಅಭಿಷೇಕ ನೆರವೇರಿಸಿದ್ದೇವೆ ಎಂದರು. ಸಂಜೆ ಬಳಿಕ ನಡೆದ ದೀಪೋತ್ಸವದಲ್ಲಿ ನೂರಾರು ಭಕ್ತರು ಶಿವನ ಮೂರ್ತಿ ಎದುರು ಸಾವಿರಾರು ದೀಪಗಳನ್ನು ಹಚ್ಚಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.