Gadag: ದಿನದಿಂದ ದಿನಕ್ಕೆ ಬೆಳೆಯುತ್ತಿದೆ ವಿಠ್ಠಲ ರುಕ್ಮಿಣಿ ಕಲ್ಲಿನ ವಿಗ್ರಹ!

By Suvarna News  |  First Published Feb 18, 2023, 5:29 PM IST

ಗದಗದ ದಾಸರ ಓಣಿಯಲ್ಲಿನ ವಿಠ್ಠಲ ರುಕ್ಮಿಣಿ ದೇವಸ್ಥಾನದ ವಿಗ್ರಹಗಳು ಬೆಳೆದಿದ್ದು, ಭಕ್ತರಲ್ಲಿ ಕುತೂಹಲ ಮೂಡಿಸಿದೆ. ದೇವರಿಗೆ ಉಡಿಸುವ ಬಟ್ಟೆಯ ಗಾತ್ರದಲ್ಲಿ ವ್ಯತ್ಯಾಸವಾಗಿದ್ದು, ಮೂರ್ತಿಗಳು ಬೆಳದಿರುವ ಬಗ್ಗೆ ಅರ್ಚಕರಿಗೆ ತಿಳಿದಿದೆ.


ಗದಗ (ಫೆ.18): ನಗರದ ದಾಸರ ಓಣಿಯಲ್ಲಿನ ವಿಠ್ಠಲ ರುಕ್ಮಿಣಿ ದೇವಸ್ಥಾನದ ವಿಗ್ರಹಗಳು ಬೆಳೆದಿದ್ದು, ಭಕ್ತರಲ್ಲಿ ಕುತೂಹಲ ಮೂಡಿಸಿದೆ. ದೇವರಿಗೆ ಉಡಿಸುವ ಬಟ್ಟೆಯ ಗಾತ್ರದಲ್ಲಿ ವ್ಯತ್ಯಾಸವಾಗಿದ್ದು, ಮೂರ್ತಿಗಳು ಬೆಳದಿರುವ ಬಗ್ಗೆ ಅರ್ಚಕರಿಗೆ ತಿಳಿದಿದೆ. ವಿಠ್ಠಲ ಮೂರ್ತಿ ಒಂದು ಇಂಚು ಹಾಗೂ ರುಕ್ಮಿಣಿ ಮೂರ್ತಿ ಒಂದು ಇಂಚು ಬೆಳೆದಿದೆ.. ಪ್ರತಿವರ್ಷ ದೇವರ ಮೂರ್ತಿಗಳಿಗೆ ಸೀರೆ, ಧೋತಿ, ಜುಬ್ಬಾ ಹೊಲಿಸಲಾಗುತ್ತೆ.. ಇತ್ತೀಚೆಗೆ ಹೆಚ್ಚಿಗೆ ಬಟ್ಟೆ ಬಳಕೆಯಾಗ್ತಿದೆ ಅಂತಾ ಮೂರ್ತಿಗಳಿಗೆ ಬಟ್ಟೆ ಹೊಲೆಯುವ ಟೇಲರ್ ಲಕ್ಷ್ಮಣ ಸಾ ಹಬೀಬ್ ಹೇಳ್ತಾರೆ.. 

60 ವರ್ಷದಲ್ಲಿ ಒಂದು ಇಂಚು ಬೆಳದ ವಿಗ್ರಹಗಳು!
1990 ರಿಂದ ಲಕ್ಷ್ಮಣ ನಿರಂತರವಾಗಿ ಮೂರ್ತಿಗಳಿಗರ ಬಟ್ಟೆ ಹೊಲೆದು ಕೊಡ್ತಾರೆ.. ಕೆಲ ವರ್ಷದ ಹಿಂದೆ 1 ವರೆ ಮೀಟರ್ ನಲ್ಲಿ ವಿಠ್ಠಲ ಮೂರ್ತಿಗೆ ಬಟ್ಟೆ ಹೊಲೆಯುತ್ತಿದ್ದರಂತೆ. ಆದ್ರೀಗ 2 ಮೀಟರ್ ಬಟ್ಟೆ ಬೇಕಾಗುತ್ತಂತೆ. ಒಂಭತ್ತು ಇಂಚು ಸೀರಿಯನ್ನ ರುಕ್ಮಿಣಿಗೆ ಉಡಿಸುತ್ತಿದ್ದರಂತೆ. ಆದ್ರೀಗ 10 ಇಂಚು ಬೇಕಾಗುತ್ತೆ ಅಂತಾರೆ ಲಕ್ಷ್ಮಣ ಹಬೀಬ್.

Tap to resize

Latest Videos

undefined

Mahashivratri 2023: ಶಿವನ ಆಶೀರ್ವಾದ ಈ ರಾಶಿಗಳಿಗೆ ಭರಪೂರ!

ಬೇಡಿದ್ದನ್ನು ಕೊಡುವ ವಿಠ್ಠಲ ರುಕ್ಮಿಣಿ:
1960 ರಲ್ಲಿ ಇಲ್ಲಿ ದೇವರ ಮೂರ್ತಿಗಳ ಸ್ಥಾಪನೆಯಾಗಿದೆ.. ಗದಗ ನಗರದ ಮಾನು ಸಾ ಬಾಂಡಗೆ ಅನ್ನೋರು ಈ ಮೂರ್ತಿಗಳನ್ನ ದಾನ ಕೊಟ್ಟಿದ್ದಾರೆ.. ಮಾನು ಸಾ ಬಾಂಡಗೆ ಅವರು ಸಂತಾನಕ್ಕಾಗಿ ವಿಠ್ಠಲ ರುಕ್ಮಿಣಿ ದೇವರಿಗೆ ಹರಕೆ ಕಟ್ಟಿಕೊಂಡಿದ್ರು. ಸಂತಾನ ಪ್ರಾಪ್ತಿಯಾಗಿದ್ರಿಂದ ಪಂಡರಾಪುರದಿಂದ ವಿಠ್ಠಲ ರುಕ್ಮಿಣಿ ಕಲ್ಲಿನ ಮೂರ್ತಿಗಳನ್ನ ತರೆಸಿ ದೇವಸ್ಥಾನಕ್ಕೆ ನೀಡಿದ್ರು. ಅಲ್ಲಿಯವರೆಗೆ ಲೋಹದ ಮೂರ್ತಿಗಳನ್ನ ಪೂಜಿಸುತ್ತಿದ್ದೆವು, ನಂತರದ ದಿನಗಳಲ್ಲಿ ಕಲ್ಲಿನ ಮೂರ್ತಿಗಳನ್ನ ಪೂಜಿಸಲಾಗ್ತಿದೆ ಅಂತಾರೆ ದೇವಸ್ಥಾನದ ಭಕ್ತ ಪ್ರಕಾಶ್ ಬಾಕಳೆ.

ನೋಡ ಬನ್ನಿ ಬೆಂಗಳೂರಿನ ವಿವಿಧ ಶಿವ ದೇವಾಲಯಗಳಲ್ಲಿ MAHASHIVRATRI 2023 ಸಂಭ್ರಮ

ದೇವಸ್ಥಾನಕ್ಕೆ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಭೇಟಿ:
ದೇವರ ಮಹಿಮೆ ಕೇಳಿ ತಿಳಿದುಕೊಳ್ತಿರೋ ಅನೇಕ ರಾಜಕೀಯ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡ್ತಿದಾರೆ. ಇತ್ತೀಚೆಗೆ ಗದಗ ನಗರಕ್ಕೆ ಭೇಟಿ ನೀಡಿದ್ದ ಯತೀಂದ್ರ ಸಿದ್ದರಾಮಯ್ಯ ದೇವರ ಸನ್ನಿಧಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ರು.  ವಿಠ್ಠಲ ರುಕ್ಮಿಣಿ ದೇವಸ್ಥಾನಕ್ಕೆ ಅನಿಲ್ ಮೆಣಸಿನಕಾಯಿ, ಡಿಆರ್ ಪಾಟೀಲ ಸೇರಿದಂತೆ ಅನೇಕ ನಾಯಕರೂ ಭೇಟಿ ನೀಡಿದ್ದಾರೆ.

click me!