ಮಹಾಶಿವರಾತ್ರಿ ದಿನ ರುದ್ರಾಕ್ಷಿ ಧಾರಣೆ ಸಮೃದ್ಧಿಯ ಸಂಕೇತ; ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು

By Ravi Janekal  |  First Published Feb 8, 2023, 2:51 PM IST

ಸಾಕ್ಷಾತ್ ಪರಶಿವನಿಂದ ಭೂಮಿಯ ಮೇಲೆ ಸೃಷ್ಟಿ ಆಗಿರುವ ರುದ್ರಾಕ್ಷಿ ಎಂಬ ಪವಿತ್ರ ವಸ್ತು ಭೌತಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಾಧನವಾಗಿದ್ದು ಗುರುಭಕ್ತರು ರುದ್ರಾಕ್ಷಿ ಧರಿಸುವುದರಿಂದ ಕಷ್ಟಗಳು ದೂರವಾಗಿ ಸುಖ, ಸಮೃದ್ಧಿ, ಆರೋಗ್ಯ ವೃದ್ಧಿಸುತ್ತದೆ ಎಂದು ಸುಳ್ಳ ಪಂಚಗೃಹ ಹಿರೇಮಠದ ಪಟ್ಟಾಧ್ಯಕ್ಷರಾದ ಷಟಸ್ಥಲ ಬ್ರಹ್ಮಿ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.


 ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಫೆ.8) : ಸಾಕ್ಷಾತ್ ಪರಶಿವನಿಂದ ಭೂಮಿಯ ಮೇಲೆ ಸೃಷ್ಟಿ ಆಗಿರುವ ರುದ್ರಾಕ್ಷಿ ಎಂಬ ಪವಿತ್ರ ವಸ್ತು ಭೌತಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಾಧನವಾಗಿದ್ದು ಗುರುಭಕ್ತರು ರುದ್ರಾಕ್ಷಿ ಧರಿಸುವುದರಿಂದ ಕಷ್ಟಗಳು ದೂರವಾಗಿ ಸುಖ, ಸಮೃದ್ಧಿ, ಆರೋಗ್ಯ ವೃದ್ಧಿಸುತ್ತದೆ ಎಂದು ಸುಳ್ಳ ಪಂಚಗೃಹ ಹಿರೇಮಠದ ಪಟ್ಟಾಧ್ಯಕ್ಷರಾದ ಷಟಸ್ಥಲ ಬ್ರಹ್ಮಿ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Tap to resize

Latest Videos

ಅವರು ಇಂದು ಬೆಳಗ್ಗೆ ನಗರದ ಕೊಪ್ಪದಕೇರಿ ಶಿವಾಲಯದಲ್ಲಿ ಧಾರವಾಡ ವೀರಶೈವ ಜಂಗಮ ಸಂಸ್ಥೆ ಮಹಾಶಿವರಾತ್ರಿಯಂದು ಹಮ್ಮಿಕೊಂಡಿರುವ ಶಿವ ಭಕ್ತರಿಗೆ ಲಕ್ಷ ರುದ್ರಾಕ್ಷಿ ಉಚಿತ ವಿತರಣಾ ಅಭಿಯಾನ ಕಾರ್ಯಕ್ರಮದ ನಿಮಿತ್ಯ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ, ಮಾತನಾಡಿದರು ಮಹಾಶಿವರಾತ್ರಿ ಶಿವಭಕ್ತರಿಗೆ ಪವಿತ್ರ ದಿನ ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದವರು ಅಂದು ಶಿವನ ಹೆಸರಿನಲ್ಲಿ ಉಪವಾಸ ವೃತ ಮಾಡುತ್ತಾರೆ ಶಿವನಾಮ ಜಪಿಸಿ, ಬಹುತೇಕರು ರಾತ್ರಿ ಇಡಿ ಜಾಗರಣೆ ಮಾಡುತ್ತಾರೆ. ದೈವ ಭಕ್ತಿಯಿಂದ ಶಿವರಾತ್ರಿಯನ್ನು ಆಚರಿಸುತ್ತಾರೆ ಎಂದು ಅವರು ಹೇಳಿದರು.

ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಅನೇಕ ಜನ ದೈವಿ ಪುರುಷರು ಜನಿಸಿ, ಭಕ್ತರ, ಸಮಾಜದ ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ್ದಾರೆ. ಇದು ಅನೇಕ ಲೀಲಾಪುರುಷರ ನಾಡಾಗಿದೆ ಎಂದು ಶ್ರೀಗಳು ತಿಳಿಸಿದರು ಧಾರ್ಮಿಕ ಜಾಗೃತಿಗಾಗಿ ಮತ್ತು ನಾಡಿನ ಸಂಸ್ಕೃತಿ, ಸಂಸ್ಕಾರಗಳ ಸಂರಕ್ಷಣೆಗಾಗಿ ವಿಭಿನ್ನವಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಜಿಲ್ಲೆಯ ಶಿವಭಕ್ತರಿಗೆ ಲಕ್ಷ ರುದ್ರಾಕ್ಷಿ ಅಭಿಯಾನದ ಮೂಲಕ ಉಚಿತವಾಗಿ ರುದ್ರಾಕ್ಷಿಯನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಕಾಶಿ ಹಾಗೂ ನೇಪಾಳದಿಂದ ರುದ್ರಾಕ್ಷಿಗಳನ್ನು ತರಿಸಲಾಗಿದ್ದು, ಕುಂದಗೋಳ, ಹುಬ್ಬಳ್ಳಿ, ಧಾರವಾಡದಲ್ಲಿನ ವಿವಿಧ ಮಹಿಳಾ ಮಂಡಳ ಸದಸ್ಯರು, ಸ್ತ್ರಿ ಶಕ್ತಿ ಸಂಘಗಳ ಸದಸ್ಯರು ರುದ್ರಾಕ್ಷಿಗೆ ಶಿವದಾರ ಪೋನಿಸುವ ಸೇವೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಸಂಶಿ, ಶಿರೂರ ಮತ್ತು ಕುಂದಗೋಳದಲ್ಲಿ ಮುಸ್ಲಿಂ ಮಹಿಳೆಯರು ಭಕ್ತಿಯಿಂದ ರುದ್ರಾಕ್ಷಿ ಜೋಡಣೆ ಮಾಡಿದ್ದು, ಅವರ ಸೌಹಾರ್ದತೆ, ಭಾವೈಕ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀಗಳು ತಿಳಿಸಿದರು ವೀರಶೈವ ಜಂಗಮ ಸಂಸ್ಥೆಯಿಂದ ಜಂಗಮ ಮಕ್ಕಳಿಗೆ ವೈದಿಕ ತರಬೇತಿ ಶಿಬಿರವನ್ನು ಜಿಲ್ಲೆಯ ಮೂರು ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಅಯ್ಯಾಚಾರ, ಶಿವಧೀಕ್ಷೆ ಮೂಲಕ ಇಷ್ಟಲಿಂಗ ಪೂಜೆ, ರುದ್ರಾಕ್ಷಿ, ವಿಭೂತಿ ಧಾರಣೆಯನ್ನು ಸ್ವಯಂ ಪ್ರೇರಣೆಯಿಂದ ಮಾಡುವಂತೆ ಸಂಸ್ಕಾರ ಬೆಳೆಸಲಾಗುತ್ತಿದೆ ಎಂದು ಅವರು ಹೇಳಿದರು. 

ಬರುವ ಫೆ. 12 ರಂದು ಬೆಳಗ್ಗೆ ಧಾರವಾಡ ಸೋಮೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಬಸಯ್ಯ ಬಳ್ಳಾರಿಮಠ ನೇತ್ರತ್ವದಲ್ಲಿ ವಿವಿಧ ಪುರೋಹಿತ ತಂಡದವರು ಅಭಿಷೇಕ ಹಾಗೂ ವೈದಿಕ ಕ್ರಮಗಳ ಮೂಲಕ ರುದ್ರಾಕ್ಷಿಗಳ ಶುದ್ಧೀಕರಣ ಕಾರ್ಯ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಮಹಾಶಿವರಾತ್ರಿಯಂದ ಮಹಾಮೃತ್ಯುಂಜಯ ಮಂತ್ರ ಪಠಿಸಿದ್ರೆ ಮನೋಕಾಮನೆಗಳು ಈಡೇರುತ್ತೆ

ದೇವಸ್ಥಾನಗಳಿಗೆ ರುದ್ರಾಕ್ಷಿ ವಿತರಣಾ ಕಾರ್ಯಕ್ರಮ: ಫೆ.12 ರಂದು ಬೆಳಿಗ್ಗೆ 9-30 ಗಂಟೆಗೆ ಧಾರವಾಡ ಸೋಮೇಶ್ವರ ದೇವಸ್ಥಾನದಲ್ಲಿ ಜಿಲ್ಲೆಯ 80 ಕ್ಕೂ ಹೆಚ್ಚು ದೇವಸ್ಥಾನಗಳಿಗೆ ರುದ್ರಾಕ್ಷಿ ಭಕ್ತಿಯ ಬುತ್ತಿಯನ್ನು ವಿತರಿಸಲಾಗುತ್ತದೆ. ಧಾರವಾಡ ಮುರಘಾಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಮುಕ್ತಿಮಂದಿರ ಧರ್ಮಕ್ಷೇತ್ರದ ಒಡೆಯ ವಿಮಲ ರೇಣುಕ ವೀರಮುಕ್ತಿಮನಿ ಶಿವಾಚಾರ್ಯರು ದೇವಸ್ಥಾನಗಳ ಮುಖ್ಯಸ್ಥರಿಗೆ, ಮುಖ್ಯ ಅರ್ಚಕರಿಗೆ ಆಶಿರ್ವಾದಿಸಿ, ರುದ್ರಾಕ್ಷಿ ನೀಡಲಿದ್ದಾರೆ ಎಂದು ಶ್ರೀಗಳು ಹೇಳಿದರು ಅಂದಿನ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಡಿ. ಭಾರತಿ ಅವರು ಮುಖ್ಯ ಅತಿಥಿಗಳಾಗಿದ್ದು, ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವರ ಅಪರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಅಖಿಲಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಉಳವಿ ಚನ್ನಬಸವೇಶ್ವರ ಟ್ರಸ್ಟ್ ಫಂಡ್‍ನ ಅಧ್ಯಕ್ಷ ಡಾ: ರಾಮನಗೌಡ ಪಾಟೀಲ, ಧಾರವಾಡ ಮುರಘಾ ಮಠದ ಮುರುಘರಾಜೇಂದ್ರ ಉಚಿತ ಪ್ರಸಾದ ನಿಲಯ ಟ್ರಸ್ಟ್‍ದ ಸದಸ್ಯ ಮಂಜುನಾಥ ಸಾಲಿಮಠ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ಧನಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಅನ್ನಪೂರ್ಣ ಸಂಗಳದ, ಡಾ: ಕಮಲಾ ಬೈಲೂರ ಉಪಸ್ಥಿತರಿರುವರೆಂದು ಶ್ರೀಗಳು ತಿಳಿಸಿದರು. 

ಮಹಾಶಿವರಾತ್ರಿ ದಿನ ದೇವಸ್ಥಾನಗಳಲ್ಲಿ ನಸುಕಿನ ಜಾವದ ಪೂಜೆಯ ನಂತರ ಬರುವ ಭಕ್ತರಿಗೆ, ಅಭಿಷೇಕ ಮಾಡಿಸುವ ಭಕ್ತರಿಗೆ ಉಚಿತವಾಗಿ ರುದ್ರಾಕ್ಷಿ ವಿತರಿಸಲಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಒಂದಾಗಿರುವ ರುದ್ರಾಕ್ಷಿ ಧಾರಣೆ ಅತ್ಯಂತ ಮಹತ್ವದ್ದಾಗಿದ್ದು, ಮಹಾಶಿವರಾತ್ರಿಯಂದು ರುದ್ರಾಕ್ಷಿ ಧಾರಣೆ ಶ್ರೇಷ್ಟವಾಗಿದೆ ಎಂದು ಶ್ರೀಗಳು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕೊಪ್ಪದಕೇರಿ ಶಿವಾಲಯದ ಕಾರ್ಯಾಧ್ಯಕ್ಷ ಬಸವರಾಜ ಕಡಕೋಳ, ಕಾರ್ಯದರ್ಶಿ ಬಸವರಾಜ ಕೌಜಲಗಿ, ನಿರ್ದೇಶಕ ಸಿ.ಎಸ್. ಪಾಟೀಲ, ನಿವೃತ್ತ ಎಸಿಪಿ ಜಿ.ಆರ್. ಹಿರೇಮಠ, ಜಂಗಮ ಸಂಸ್ಥೆಯ  ನಿರ್ದೇಶಕ ಡಾ: ಎಸ್.ಜಿ.ಮಠದ, ರುದ್ರಯ್ಯ ಹೊಸಮಠ, ವೈದಿಕ ತರಬೇತಿ ಶಿಬಿರದ ಸಂಚಾಲಕರಾದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ವೀರಭದ್ರ ದೇವಾಲಯದ ದಾನಯ್ಯಶಾಸ್ತ್ರಿ ಹಿರೇಮಠ,  ಕೊಪ್ಪದಕೇರಿ ಶಿವಾಲಯದ ಸುರೇಶ ಶಾಸ್ತ್ರಿ, ರಾಣಿ ಚನ್ನಮ್ಮ ನಗರದ ಗಣಪತಿ ದೇವಸ್ಥಾನದ ಶಿವಾನಂದ ಶಾಸ್ತ್ರಿಗಳು ಸೇರಿದಂತೆ ಇತರರು ಇದ್ದರು ಸಂಸ್ಥೆಯ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರಭು ಕೆಂಡದಮಠ ಸ್ವಾಗತಿಸಿ, ಸಭೆ ನಿರ್ವಹಿಸಿದರು ಮಹಾಶಿವರಾತ್ರಿಯಂದು ರುದ್ರಾಕ್ಷಿ ಉಚಿತವಾಗಿ 

ದೇವಸ್ಥಾನದ ವಿವರ : ಶಿವಾಲಯ, ಕುಮಾರೇಶ್ವರ ನಗರ, ಧಾರವಾಡ, ಈಶ್ವರ ದೇವಸ್ಥಾನ ಜಯನಗರ, ಧಾರವಾಡ, ಈಶ್ವರ  ದೇವಸ್ಥಾನ ಸಿ.ಬಿ.ನಗರ ಧಾರವಾಡ, ವೀರಭದ್ರೇಶ್ವರ  ಯು.ಬಿ.ಹಿಲ್. ದೇವಸ್ಥಾನ, ಚನ್ನಬಸವೇಶ್ವರ ಮತ್ತು ಶಿವದೇವಾಲಯ ಉಣಕಲ್, ಹುಬ್ಬಳ್ಳಿ, ಈಶ್ವರ ದೇವಸ್ಥಾನ ಜಯನಗರ, ವಿದ್ಯಾನಗರ ಹುಬ್ಬಳ್ಳಿ, ವಿಶ್ವೇಶ್ವರ ದೇವಸ್ಥಾನ, ವಿಶ್ವೇಶ್ವರ ನಗರ, ಹುಬ್ಬಳ್ಳಿ, ಕಲ್ಮೇಶ್ವರ ದೇವಸ್ಥಾನ, ಕ್ಯಾರಕೊಪ್ಪ ಧಾರವಾಡ, ವೀರಭದ್ರೇಶ್ವರ ದೇವಸ್ಥಾನ ಕಮನಕಟ್ಟಿ ಹೊಸ ಯಲ್ಲಾಪುರ, ಧಾರವಾಡ, ಭ್ರಹ್ಮಲಿಂಗೇಶ್ವರ ದೇವಸ್ಥಾನ, ಕಾಮನಕಟ್ಟೆ, ಹೊಸಯಲ್ಲಾಪುರ, ಕಲ್ಮೇಶ್ವರ ದೇವಸ್ಥಾನ ಹಂಗರಕಿ, ಧಾರವಾಡ, ಶ್ರೀ ಶಿವಾಲಯ ಶಿವಾಗಿರಿ, ವೀರಭದ್ರೇಶ್ವರ ದೇವಸ್ಥಾನ ಗುಲಗಂಜಿಕೊಪ್ಪ, ಈಶ್ವರ ದೇವಸ್ಥಾನ ವಿಜಯನಗರ.

ಶಿವಾಲಯ ಕೊಪ್ಪದಕೇರಿ ಗೌರಿಶಂಕರ ದೇವಾಲಯ, ಕೊಪ್ಪದಕೇರಿ, ಕಂಪ್ಲಿ ಬಸವೇಶ್ವರ ದೇವಸ್ಥಾನ ಹೆಬ್ಬಳ್ಳಿ ಪಾರ್ಮ್, ನಿಲಕಂಠೇಶ್ವರ ದೇವಸ್ಥಾನ, ರೆವೆನ್ಯೂ ಕಾಲೋನಿ, ಧಾರವಾಡ, ಮಳೆಪ್ಪಜ್ಜನ ಮಠ ಹೊನಾಯಲ್ಲಾಪುರ ಹಿರೇಮಠ, ಕಲ್ಮೇಶ್ವರ ದೇವಸ್ಥಾನ ಹೊಸಯಲ್ಲಾಪುರ ಹೊಸಓಣಿ, ಕಾಶಿ ವಿಶ್ವನಾಥ ದೇವಸ್ಥಾನ ಹೆಬ್ಬಳ್ಳಿ, ಮಲ್ಲಯ್ಯಜ್ಜನ ಗುಡಿ, ಕೋಟುರು, ಶಿವಾಲಯ ಶ್ರೀನಗರ, ಧಾರವಾಡ, ಕಲ್ಮೇಶ್ವರ ದೇವಸ್ಥಾನ ಕೆಲಗೇರಿ ಧಾರವಾಡ, ಶ್ರೀ ಸೋಮೇಶ್ವರ ದೇವಸ್ಥಾನ ಶಿವಾಲಯ, ಕುಮಾರೇಶ್ವರ ನಗರ,ಧಾರವಾಡ, ಈಶ್ವರ ದೇವಸ್ಥಾನ ಜಯನಗರ, ಧಾರವಾಡ, ಈಶ್ವರ ದೇವಸ್ಥಾನ ಸಿ.ಬಿ. ನಗರ ಧಾರವಾಡ, ವೀರಭದ್ರೇಶ್ವರ  ಯು.ಬಿ.ಹಿಲ್. ದೇವಸ್ಥಾನ, ಚನ್ನಬಸವೇಶ್ವರ ಮತ್ತು ಶಿವದೇವಾಲಯ ಉಣಕಲ್, ಹುಬ್ಬಳ್ಳಿ, ಈಶ್ವರ ದೇವಸ್ಥಾನ ಜಯನಗರ, ವಿದ್ಯಾನಗರ ಹುಬ್ಬಳ್ಳಿ, ವಿಶ್ವೇಶ್ವರ ದೇವಸ್ಥಾನ, ವಿಶ್ವೇಶ್ವರ ನಗರ, ಹುಬ್ಬಳ್ಳಿ, ಕಲ್ಮೇಶ್ವರ ದೇವಸ್ಥಾನ, ಕ್ಯಾರಕೊಪ್ಪ ಧಾರವಾಡ, ವೀರಭದ್ರೇಶ್ವರ ದೇವಸ್ಥಾನ ಕಮನಕಟ್ಟಿ ಹೊಸ ಯಲ್ಲಾಪುರ, ಧಾರವಾಡ,

ಭ್ರಹ್ಮಲಿಂಗೇಶ್ವರ ದೇವಸ್ಥಾನ, ಕಾಮನಕಟ್ಟೆ,ಹೊಸ ಯಲ್ಲಾಪುರ, ಕಲ್ಮೇಶ್ವರ ದೇವಸ್ಥಾನ ಹಂಗರಕಿ ಧಾರವಾಡ,  ಶ್ರೀ ಶಿವಾಲಯ ಶಿವಗಿರಿ, ವೀರಭದ್ರೇಶ್ವರ ದೇವಸ್ಥಾನ ಗುಲಗಂಜಿಕೊಪ್ಪ, ಈಶ್ವರ ದೇವಸ್ಥಾನ ವಿಜಯನಗರ, ಶಿವಾಲಯ ಕೊಪ್ಪದಕೇರಿ, ಗೌರಿಶಂಕರ ದೇವಾಲಯ, ಕೊಪ್ಪದಕೇರಿ ಕಂಪ್ಲಿ ಬಸವೇಶ್ವರ  ಹೆಬ್ಬಳ್ಳಿ ಪಾರ್ಮ್, ನಿಲಕಂಠೇಶ್ವರ ದೇವಸ್ಥಾನ, ಧಾರವಾಡ, ಶ್ರೀ ಗಣೇಶ ಗುಡಿ ಕಲ್ಯಾಣ ನಗರ, ಧಾರವಾಡ, ವೀರಭದ್ರೇಶ್ವರ ದೇವಸ್ಥಾನ ಪರಮೇಶ್ವರ ದೇವಸ್ಥಾನ ತಡಕೊಡ, ಬಸವೇಶ್ವರ ಹಾಗೂ ಕಲ್ಮೇಶ್ವರ ದೇವಸ್ಥಾನ ಪುಡಲಕಟ್ಟಿ, ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನ ವನಹಳ್ಳಿ, ವೀರಭದ್ರೇಶ್ವರ ದೇವಸ್ಥಾನ, ಕೋಟೂರು, ವೀರಭದ್ರೇಶ್ವರ ದೇವಸ್ಥಾನ, ಪರಮೇಶ್ವರ್ ದೇವಸ್ಥಾನ ತಡಕೊಡ, ಈಶ್ವರ ದೇವಸ್ಥಾನ ತಿಮ್ಮಪುರ, ಕಲ್ಮೇಶ್ವರ ದೇವಸ್ಥಾನ ಉಪ್ಪಿನಬೆಟಗೇರಿ, ಕಲ್ಮೇಶ್ವರ ದೇವಸ್ಥಾನ ಸಿದ್ದರೂಡ ಗುಡಿ, ಕಮದೇನು, ವೀರಭದ್ರೇಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನ, ಹಾರೋಬೆಳವಡಿ, ಕಲ್ಮೇಶ್ವರ ದೇವಸ್ಥಾನ ಮಲ್ಲಿಕಾರ್ಜುನ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನ ತೆಗೂರ,

ಕಲ್ಮೇಶ್ವರ ದೇವಸ್ಥಾನ ಹಿಂಡಸಗೇರಿ, ಕಲ್ಮೇಶ್ವರ ದೇವಸ್ಥಾನ ಅದರಗುಂಚಿ, ಕಲ್ಮೇಶ್ವರ ದೇವಸ್ಥಾನ ಹೊರರಹೊನ್ನಳ್ಳಿ, ವೀರಭದ್ರೇಶ್ವರ ದೇವಸ್ಥಾನ ಕಸಬಾಪೇಟೆ, ಹಳೆ ಹುಬ್ಬಳ್ಳಿ, ಕಲ್ಮೇಶ್ವರ ದೇವಸ್ಥಾನ ಬೈರಿದೇವರಕೊಪ್ಪ, ಸಂಗಮೇಶ್ವರ ದೇವಸ್ಥಾನ ಬಸವೇಶ್ವರ ನಗರ ಗೋಕುಲ ರಸ್ತೆ ಹುಬ್ಬಳ್ಳಿ, ಈಶ್ವರ ದೇವಸ್ಥಾನ ವೀರಭದ್ರೇಶ್ವರ ರೊಟ್ಟಿಗವಾಡ, ಈಶ್ವರ ದೇವಸ್ಥಾನ ಶಕ್ತಿ ಕಾಲೋನಿ ಧಾರವಾಡ, ಕಲ್ಮೇಶ್ವರ ದೇವಸ್ಥಾನ ಜಿನ್ನೂರ, ಶ್ರೀ ಮುರಾಘ ಮಠ ಧಾರವಾಡ, ಮಲ್ಲಯ್ಯ ದೇವಗುಂಡಿ ಹನುಮಸಾಗರ ಕುಷ್ಟಗಿ ತಾಲೂಕ ಕೊಪ್ಪಳ, ಶಿವಾಲಯ ಮಹಾಂತೇಶ್ ನಗರ ಕೆಲಗೇರಿ, ಶಂಕರ ಲಿಂಗ ದೇವಸ್ಥಾನ ಧಾರವಾಡ, ಶಿವಾಲಯ ಹಿಂದಿ ಪ್ರಚಾರ ಸಭಾ ಧಾರವಾಡ, ಕಲ್ಮೇಶ್ವರ ದೇವಸ್ಥಾನ ಸೈದಾಪುರ ಧಾರವಾಡ, ಈಶ್ವರ ದೇವಸ್ಥಾನ ಲಕ್ಷ್ಮೀ ನಗರ ಧಾರವಾಡ, ಈಶ್ವರ ದೇವಸ್ಥಾನ ಗಾಂಧಿ ನಗರ ಧಾರವಾಡ.

ಶಿವರಾತ್ರಿಗೆ ಜಗತ್ತಿನ ಭವಿಷ್ಯ ನುಡಿಯುವ ಬಬಲಾದಿ ಮುತ್ಯಾ: ಈವರೆಗೆ ಹೇಳಿದ್ದೆಲ್ಲ ಭವಿಷ್ಯವೂ ಸತ್ಯವಾಗಿದೆ

ಶ್ರೀ ರೇಣುಕಾ ಮಂದಿರ ಕುರಬಗಟ್ಟಿ, ಕಲ್ಮೇಶ್ವರ ದೇವಸ್ಥಾನ ಕುರಬಗಟ್ಟಿ, ಶರಣ ಬಸವೇಶ್ವರ ದೇವಸ್ಥಾನ ಈಶ್ವರ ದೇವಸ್ಥಾನ ಗಾಂಧಿ ನಗರ, ವೀರಭದ್ರೇಶ್ವರ ದೇವಸ್ಥಾನ ನವನಗರ ಧಾರವಾಡ., ಶ್ರೀ ಮಲ್ಲಿಕಾರ್ಜುನ ಕಲ್ಮೇಶ್ವರ ಬಸವೇಶ್ವರ ದೇವಸ್ಥಾನ ಅಮ್ಮಿನಬಾವಿ, ಶ್ರೀ ಈಶ್ವರ ದೇವಸ್ಥಾನ ಗಳಗಿಹುಲಿಕೊಪ್ಪ, ಶ್ರೀ ಕಲ್ಮೇಶ್ವರ ದೇವಸ್ಥಾನ ನೀರಸಾಗರ, ಕಲ್ಮೇಶ್ವರ ದೇವಸ್ಥಾನ ಕಲಘಟಗಿ, ಶಿವಾಲಯ ಹಳೆ ಎಪಿಎಂಸಿ ಧಾರವಾಡ, ಶ್ರೀ ವೀರಭದ್ರೇಶ್ವರ  ದೇವಸ್ಥಾನ ನರೇಂದ್ರ, ಈಶ್ವರ ದೇವಸ್ಥಾನ ಹಳ್ಳಿಗೆರೆ,ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ನರೇಂದ್ರ,ಶ್ರೀ ಬಸವೇಶ್ವರ ದೇವಸ್ಥಾನ ಗೋವನಕೊಪ್ಪ,ಶ್ರೀ ಬೆನಕನಕೊಪ್ಪ ದೇವಸ್ಥಾನ ಬೆನಕಟ್ಟಿ, ಶ್ರೀ ಈಶ್ವರ್ ದೇವಸ್ಥಾನ ನಿಗದಿ, ಶ್ರೀ ಪರ್ವತ ಮಲ್ಲಿಕಾರ್ಜುನ ದೇವಸ್ಥಾನ ಡಿವಂಗಪೇಟೆ, ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಘಂಟಿಕೆರೆ ಓಣೆ, ಶ್ರೀ ಸೋಮೇಶ್ವರ ದೇವಸ್ಥಾನ ನಾಗರಕಟ್ಟಿ ಕೊಪ್ಪ, ಶ್ರೀ ಈಶ್ವರ ದೇವಸ್ಥಾನ ನೇಕಾರಿಕೆ ನಗರ ಹುಬ್ಬಳ್ಳಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಕೊಂಕಣ ಕುರುಹಟ್ಟಿ, ಶ್ರೀ ಕಲ್ಮೇಶ್ವರ ದೇವಸ್ಥಾನ ಕವಲಗೇರಿ.

click me!