ಶಿವರಾತ್ರಿಗೆ ಜಗತ್ತಿನ ಭವಿಷ್ಯ ನುಡಿಯುವ ಬಬಲಾದಿ ಮುತ್ಯಾ: ಈವರೆಗೆ ಹೇಳಿದ್ದೆಲ್ಲ ಭವಿಷ್ಯವೂ ಸತ್ಯವಾಗಿದೆ

By Sathish Kumar KH  |  First Published Feb 8, 2023, 2:22 PM IST

• ಮತ್ತೆ ಸತ್ಯವಾದ ಬಬಲಾದಿ ಭವಿಷ್ಯ, ಸಿರಿಯಾ-ಟರ್ಕಿಯಲ್ಲಿ ನರಕ ಸೃಷ್ಟಿ..!
• ಪಾಪಿ ಪಾಕಿಸ್ತಾನದ ಅದೋಗತಿಯ ಬಗ್ಗೆಯು ಹೇಳಿದ್ದ ಸದಾಶಿವ ಅಜ್ಜನ ಕಾಲಜ್ಞಾನ..!
• ಇದೆ ಶಿವರಾತ್ರಿಗೆ ಮತ್ತೊಂದು ಭವಿಷ್ಯ ನುಡಿಯಲು ಸಜ್ಜಾದ ಬೆಂಕಿ ಮಠ..!


ವರದಿ- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಫೆ.08) : ಕಾಲಜ್ಞಾನದ ಮಠ, ಬೆಂಕಿ ಮಠ ಎಂದು ಕರೆಯಿಸಿಕೊಳ್ಳುವ ಬಬಲಾದಿ ಮಠದಲ್ಲಿ ನುಡಿದ ಕಾಲಜ್ಞಾನದ ಭವಿಷ್ಯ ಮತ್ತೆ ನಿಜವಾಗಿದೆ. ಸಿರಿಯಾ ಹಾಗೂ ಟರ್ಕಿಯಲ್ಲಿ ಉಂಟಾದ ಭಯಾನಕ ಭೂಕಂಪನದ ಮೂಲಕ ಬಬಲಾದಿ ಮಠದಲ್ಲಿ ನುಡಿಯಲಾದ ಭವಿಷ್ಯ ಮತ್ತೆ ನಿಜವಾಗಿದೆ. ಕಳೆದ 2022ರ ಶಿವರಾತ್ರಿಯಂದು ಬಬಲಾದಿ ಕ್ಷೇತ್ರದಲ್ಲಿ ನಡೆದ ಜಾತ್ರೆಯ ವೇಳೆ ಸಿದ್ದು ಮುತ್ಯಾ ಮಠದಲ್ಲಿ ಬರೆದಿಡಲಾಗಿರುವ ಕಾಲಜ್ಞಾನವನ್ನ ಓದಿ ಭವಿಷ್ಯ ನುಡಿದಿದ್ದರು. ಆ ಭವಿಷ್ಯವೀಗ ಮತ್ತೊಂದು ಶಿವರಾತ್ರಿ ಬರುವ ಮುನ್ನವೇ ವರ್ಷದೊಳಗೆ ಸತ್ಯವಾಗಿದೆ. ಬೆಂಕಿ ನುಡಿಗಳು ನಿಜವಾಗಿದ್ದು, ಭಕ್ತರು ಸದಾಶಿವ ಅಜ್ಜನವರ ಕಾಲಜ್ಞಾನಕ್ಕೆ ಬಹುಪರಾಕ್‌ ಹೇಳ್ತಿದ್ದಾರೆ..

Tap to resize

Latest Videos

"ಭೂಕಾಂತಿ ನಡಗಿತ".. ಸಿರಿಯಾ-ಟರ್ಕಿಯಲ್ಲಿ ನರಕ ಸೃಷ್ಟಿ..!!
ಕಳೆದ ಶಿವರಾತ್ರಿಯಂದು ಇದೆ ಬಬಲಾದಿ ಮಠದಲ್ಲಿ ಶತಮಾನಗಳ ಹಿಂದೆ ಬರದಿಡಲಾಗಿರುವ ಕಾಲಜ್ಞಾನವನ್ನ ಓದಿ ಹೇಳಿದ್ದರು. ಈ ವೇಳೆ ಭೂಕಾಂತಿ ನಡುಗಿತು ಎನ್ನುವ ಮೂಲಕ ಭೂಕಂಪನ ಸಂಭವಿಸುವ ಮುನ್ನೆಚ್ಚರಿಕೆ ನೀಡಿದ್ದರು. "ಉತ್ತರ ದಿಕ್ಕಿನ ಮುಂದೆ ಮುರುಕದಿತು" ಎನ್ನುವ ಮೂಲಕ ಸಿರಿಯಾ ಟರ್ಕಿ ಭಾಗದಲ್ಲಿಯೆ ಅನಾಹುತ ನಡೆಯಲಿದೆ ಎನ್ನುವುದನ್ನ ಕಾಲಜ್ಞಾನದ ಮೂಲಕ ಹೇಳಿದ್ದರು. ಇದಾದ ಒಂದೆ ವರ್ಷದಲ್ಲಿ ಶಿವರಾತ್ರಿಗೆ ಇನ್ನು 10 ದಿನಗಳ ಭಾಕಿ ಇರುವಾಗಲೇ ಭಯಾನಕ ಭೂಕಂಪನ ಸಂಭವಿಸಿದೆ. ಅಪಾರಪ್ರಮಾಣದಲ್ಲಿ ಸಾವು ನೋವು ಉಂಟಾಗಿದೆ. ಸರಣಿ ಭೂಕಂಪನಗಳಿಂದ ಸಿರಿಯಾ, ಟರ್ಕಿ ತತ್ತರಿಸಿ ಹೋಗಿವೆ..

ಜಗತ್ತು ಯುದ್ಧಭೂಮಿಯಾಗುತ್ತೆ ಎಂದು ಬಾಂಬ್ ಸಿಡಿಸಿದ ಬಬಲಾದಿ ಭವಿಷ್ಯ!

ಕಲಿಪುರುಷನ ಆಟ ಬಹಳ ಕೆಟ್ಟದಾಗಿದೆ ಎಂದಿದ್ದ ಬಬಲಾದಿ ಮುತ್ಯಾ..!
ಕಳೆದ ಶಿವರಾತ್ರಿಯಂದು ಭವಿಷ್ಯ ನುಡಿಯುವಾಗಲೇ 2022ರಿಂದ 2023ರ ಶಿವರಾತ್ರಿಯ ವರೆಗೆ ಕಲಿಪುರುಷನ ಆಟ ಬಹಳ ಕೆಟ್ಟದಾಗಿದೆ ಎಂದು ಹೇಳಿದ್ದರು. ಅಂತೆಯೆ ಕಳೆದ ವರ್ಷವು ಅನಾಹುತಗಳ ಸರಣಿ ತಪ್ಪಿಲ್ಲ. "ಸೃಷ್ಠಿಯ ಮುಂದ ದುಃಖ.. ನಷ್ಟ.. ಲೋಕಕ್ಕೆ ಬಲು ಕಷ್ಟ" ಅಂತ ಮುತ್ಯಾ ಕಾಲಜ್ಞಾನದಲ್ಲಿ ಹೇಳಿದ್ದಾನೆ ಎಂದು ಸಿದ್ದು ಮುತ್ಯಾ ವಿವರಿಸಿದ್ದರು. ಈಗ ಅಂತೆಯೆ ಸಿರಿಯಾ-ಟರ್ಕಿಯಲ್ಲಿ ಕಂಡು ಕೇಳರಿಯದ ಅನಾಹುತ ನಡೆದಿದೆ. ಎಲ್ಲಿ ನೋಡಿದ್ರು ರವರವ ನರಕವೇ ಕಣ್ಮುಂದೆ ಕಾಣ್ತಿದೆ.

ಪಾಪಿ ಪಾಕಿಸ್ತಾನದ ಬಗ್ಗೆ ನುಡಿದ ಭವಿಷ್ಯವು ಸತ್ಯ..!
ಆಗಲೇ ಹೇಳಿದಂತೆ ವರ್ಷದ ಹಿಂದೆಯೇ ಸದಾಶಿವ ಅಜ್ಜನ ಕಾಲಜ್ಞಾನದ ಪ್ರಕಾರ ಕಲಿಪುರುಷನ ಆಟ ಕೆಟ್ಟದಾಗಿದೆ. ದುಃಖ, ಲೋಕಕ್ಕೆ ನಷ್ಟ ಅಂತ ಹೇಳಿದ್ರು. ಜೊತೆಗೆ ಪಡವಣ ದಿಕ್ಕಿಗೆ ತ್ರಾಸ ಇದೆ ಎಂದಿದ್ದರು. ಈಗ ಪಾಪಿ ಪಾಕಿಸ್ತಾನ ದೇಶ ದೀವಾಳಿಯತ್ತ ಸಾಗುತ್ತಿದೆ. ಗೋಧಿ ಹಿಟ್ಟಿಗು ಬಡಿದಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಪಾಕಿನ ಸ್ಥಿತಿ ಅದೋಗತಿಯಾಗ್ತಿದೆ. ಈ ವಿಚಾರವನ್ನ ಬಬಲಾದಿ ಮಠ ಗೂಡಾರ್ಥದ ಮೂಲಕ ವರ್ಷದ ಮೊದಲೇ ಹೇಳಿತ್ತು. ಬಬಲಾದಿ ಮಠದಲ್ಲಿ ನುಡಿದ ಬೆಂಕಿ  ಭವಿಷ್ಯ ಪಾಕಿಸ್ತಾನದ ದೀವಾಳಿ ಮೂಲಕ ನಿಜವಾಗಿದೆ. 

ರಾಜಕೀಯ ಭವಿಷ್ಯಗಳು ಸತ್ಯವಾಗಿವೆ..!
ಇಲ್ಲಿ ನುಡಿದ ರಾಜಕೀಯದ ಭವಿಷ್ಯಗಳು ಸತ್ಯವಾಗಿವೆ. ಕಳೆದ 2021ರಲ್ಲಿ ಓರ್ವ ದೊಡ್ಡ ವ್ಯಕ್ತಿಯ ಏರಿಳಿತವಾಗಲಿದೆ ಎಂದು ಬಬಲಾದಿ ಮಠದಲ್ಲಿ ಭವಿಷ್ಯ ನುಡಿಯಲಾಗಿತ್ತು. ಇಲ್ಲಿ ಭವಿಷ್ಯ ನುಡಿದ ಬಳಿಕ ಸಿಎಂ ಆಗಿದ್ದ ಯಡಿಯೂರಪ್ಪ ಪದತ್ಯಾಗ ಮಾಡಬೇಕಾಗಿ ಬಂತು. ಅಷ್ಟೆ ಅಲ್ಲದೆ ಪುನೀತ್‌ ರಾಜಕುಮಾರ್‌ ಅವರ ನಿಧನದ ಬಗ್ಗೆಯು ಇಲ್ಲಿ ಭವಿಷ್ಯ ನುಡಿಯಲಾಗಿತ್ತು. ಮಾಣಿಕ್ಯ ಮರೆಯಾಗುವ ಸೂಚನೆ ಈ ಮಠದಲ್ಲಿ ಸಿಕ್ಕಿತ್ತು ಎನ್ನಲಾಗಿದೆ..

ಬಬಲಾದಿ ಬೆಂಕಿ ಕಾಲಜ್ಞಾನದ ಹಿಂದಿನ ರಹಸ್ಯವೇನು?!
ಬಬಲಾದಿ ಮಠದಲ್ಲಿ ನುಡಿದ ಯಾವೊಂದು ಭವಿಷ್ಯಗಳು ಸುಳ್ಳಾಗಿದ್ದಿಲ್ಲ. ಕಳೆದ 300 ವರ್ಷಗಳಿಂದ ಇಲ್ಲಿ ನುಡಿಯುತ್ತಿರುವ ಕಾಲಜ್ಞಾನ ಸತ್ಯವಾಗ್ತಿದೆ. 3 ಶತಮಾನಗಳ ಹಿಂದೆ ಬಬಲಾದಿ ಮಠದಲ್ಲಿ ಜೀವಿಸಿದ್ದ ಸದಾಶಿವ ಅಜ್ಜನವರು ಪವಾಡ ಪುರುಷರಾಗಿದ್ದರು. ಆಗ ಅವರು ಮುಂಡಗಿ ಪದಗಳ ರೂಪದಲ್ಲಿ ಕಾಲಜ್ಞಾನವನ್ನ ಹೇಳಿದ್ದರು. ಹಿಂದೆ ನಡೆದದ್ದು, ಮುಂದೆ ನಡೆಯೋದನ್ನ ಮುಂಡಗಿ  ಪದಗಳ ಮೂಲಕ ಹೇಳಿದ್ದರು. ಆಗ ಸದಾಶಿವ ಅಜ್ಜನವರ ಜೊತೆಗಿದ್ದ ಚಿಕ್ಕಯ್ಯಪ್ಪನವರು ಸದಾಶಿವ ಅಜ್ಜ ನುಡಿದ ಮುಂಡಗಿ ಪದಗಳನ್ನ ಕಾಲಜ್ಞಾನವಾಗಿ ದಾಖಲಿಸುತ್ತಾ ಹೋದರು. ತಾಮ್ರದ ಹಾಳೆಗಳಲ್ಲಿ ಸದಾಶಿವ ಅಜ್ಜ ನುಡಿದ ಕಾಲಜ್ಞಾನವನ್ನ ಬರೆದಿಡಲಾಗಿದೆ.

ಮತ್ತೆ ಸತ್ಯವಾಯ್ತು ಬೆಂಕಿ ಬಬಲಾದಿ ಅಜ್ಜನ ಭವಿಷ್ಯ: ಜಗತ್ತಿನಲ್ಲಿ ಶುರುವಾಗಲಿದೆ ಕಲಿಪುರುಷನ ಅಸಲಿ ಆಟ..!

ಮತ್ತೆ ಶಿವರಾತ್ರಿಯ ಭವಿಷ್ಯಕ್ಕೆ ಕಾಯುತ್ತಿರುವ ಭಕ್ತರು..!
ಪ್ರತಿ ವರ್ಷವು ಶಿವರಾತ್ರಿ ದಿನ ಸದಾಶಿವ ಅಜ್ಜನವರು ನುಡಿದ, ಚಿಕ್ಕಯ್ಯಪ್ಪನವರು ಬರೆದಿಟ್ಟ ಕಾಲಜ್ಞಾನದ ಒಂದು ಪೇಜ್‌ನ್ನ ಓದಿ ಹೇಳಲಾಗುತ್ತೆ. ಆ ವರ್ಷದ ಹೇಳಿದ ಆ ನುಡಿಗಳು ಮುಂದಿನ ಶಿವರಾತ್ರಿಯ ಒಳಗೆ ಸತ್ಯವಾಗಯತ್ವೆ. ಮೂರು ಶತಮಾನಗಳಿಂದ ಇದು ನಡೆದುಕೊಂಡು ಬಂದಿದೆ. ಈ ಶಿವರಾತ್ರಿಯ ಮೂರನೇ ದಿನ ಅಂದರೆ ಫೆಬ್ರವರಿ 20 ರಂದು ಮತ್ತೆ ಕಾಲಜ್ಞಾನದ ನುಡಿಗಳು ಆಗುತ್ವೆ. ಈ ಕಾಲಜ್ಞಾನದ ನುಡಿಗಳನ್ನ ಕೇಳಲು ಭಕ್ತರು ಉತ್ಸುಕರಾಗಿದ್ದಾರೆ.

click me!