ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯವರಿಗೆ ಉದ್ಯೋಗ, ಹಣದಲ್ಲಿ ಬಂಪರ್ ಯೋಗ!

By Suvarna NewsFirst Published Jun 30, 2022, 6:21 PM IST
Highlights

ಶುಕ್ರ ಗ್ರಹ ಮತ್ತು ಬುಧ ಗ್ರಹದ ಯುತಿಯಿಂದಾಗಿ ಕೆಲವು ಗ್ರಹಗಳಿಗೆ ಅತ್ಯಂತ ಶುಭ ಫಲ ದೊರಕಲಿದೆ. ಈ ಯುತಿಯು ಶಶಾಂಕ ಮತ್ತು ಮಾಳವ್ಯದಂತಹ ರಾಜಯೋಗವನ್ನು ಉಂಟುಮಾಡುತ್ತದೆ. ಹಾಗಾದರೆ ಈ ರಾಜಯೋಗದ  ಶುಭ ಫಲವನ್ನು ಪಡೆಯುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

ಶುಕ್ರ ಮತ್ತು ಬುಧ ಗ್ರಹದ (Venus and Mercury Planet) ಯುತಿಯು (ಜಾತಕದ ಒಂದೇ ಮನೆಯಲ್ಲಿ ಎರಡು ಗ್ರಹಗಳು ಸ್ಥಿತವಾದರೆ ಅದನ್ನು ಯುತಿ ಎಂದು ಕರೆಯುತ್ತಾರೆ) ಹಲವಾರು ರಾಶಿಯ ವ್ಯಕ್ತಿಗಳಿಗೆ ಶುಭವನ್ನುಂಟು ಮಾಡಲಿದೆ. ಮೂರು ದಶಕದ ಬಳಿಕ ಶನಿ ತನ್ನ ತ್ರಿಕೋನ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಗ್ರಹಗಳ ಈ ಸ್ಥಿತಿಯು 4 ರಾಶಿಯವರ ಜಾತಕದಲ್ಲಿ ಶಶ ಯೋಗ ಮತ್ತು ಮಾಲವ್ಯ ಯೋಗ (Shasha and Malavya Yoga) ಎಂಬ ಎರಡು ಮಹಾ ಪುರಷ ರಾಜ ಯೋಗವನ್ನು ಉಂಟು ಮಾಡುತ್ತಿದೆ. 

ಶುಕ್ರ ಮತ್ತು ಬುಧ ಗ್ರಹವು ಪ್ರಸ್ತುತ ವೃಷಭ ರಾಶಿಯಲ್ಲಿ ಸ್ಥಿತವಾಗಿವೆ. ಈ ಗ್ರಹಗಳು ಮಿತ್ರ ಭಾವದಲ್ಲಿವೆ. ಹಾಗಾಗಿ ಈ 2 ಗ್ರಹಗಳ ಯುತಿಯು ಕೆಲವು ರಾಶಿಗಳಿಗೆ ಶುಭವನ್ನು ತಂದುಕೊಡಲಿದೆ. ಹೀಗಾಗಿ ಅಂತಹ ಯೋಗವನ್ನು ಪಡೆದುಕೊಳ್ಳುವ ರಾಶಿಗಳು ಯಾವುವು ಎಂಬುದರ ಬಗ್ಗೆ ಈಗ ನೋಡಣ.

ವೃಷಭ ರಾಶಿ (Taurus):
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ವೃಷಭ ರಾಶಿಯವರ ಲಗ್ನ ಭಾವದಲ್ಲಿ ರಾಜಯೋಗ ಉಂಟಾಗುವುದರಿಂದ ವೃತ್ತಿಜೀವನದ ದಿಕ್ಕನ್ನೇ ಇದು ಬದಲಾಯಿಸುತ್ತದೆ. ಉದ್ಯೋಗದಲ್ಲಿ ಬಡ್ತಿ (Promotion) ಸಿಗುವ ಸಾಧ್ಯತೆ ದಟ್ಟವಾಗಿದ್ದು, ದೀರ್ಘಕಾಲದಿಂದ ಉದ್ಯೋಗಗಳನ್ನು (Job) ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಅಲ್ಲದೆ, ಸಮಾಜದಲ್ಲಿ ಗೌರವಾದರಗಳು ಹೆಚ್ಚಾಗುತ್ತದೆ. ವ್ಯವಹಾರ ಕ್ಷೇತ್ರದಲ್ಲಿರುವವರಿಗೂ ಈ ಯೋಗವು ಉತ್ತಮ ಫಲವನ್ನೇ ತಂದುಕೊಡಲಿದೆ. 

ಸಿಂಹ ರಾಶಿ (Leo):
ಬುಧ ಮತ್ತು ಶುಕ್ರನ ಸಂಯೋಗದಿಂದ ಸಿಂಹರಾಶಿಯಲ್ಲಿ ಶಶ ಮತ್ತು ಮಾಳವ್ಯ ಎಂಬ ಎರಡು ರಾಜಯೋಗಗಳೂ ಉಂಟಾಗಿವೆ. ಈ ರಾಶಿಚಕ್ರದ ವ್ಯಕ್ತಿಗಳಿಗೆ ದಿಡೀರ್ ಹಣ (Money) ಪ್ರಾಪ್ತಿಯಾಗುವ ಯೋಗವಿದೆ. ಇದು ಯಾವ ಮೂಲದಿಂದ ಬೇಕಿದ್ದರೂ ಬರಬಹುದಾಗಿದ್ದು, ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಇನ್ನು ವಿದೇಶಕ್ಕೆ (Abroad) ಹೋಗುವ ಕನಸನ್ನು ಹೊಂದಿರುವವರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲು ಇದು ಸಕಾಲವಾಗಿದ್ದು, ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.  ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸಬೇಕೆಂದಿದ್ದರೆ ಇದು ಉತ್ತಮ ಸಮಯವಾಗಿದೆ. ಆಸ್ತಿಯಲ್ಲಿ (Property) ಸಹ ಹೂಡಿಕೆಯನ್ನು (Investment) ಮಾಡಬಹುದಾಗಿದ್ದು, ಇದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ರಿಯಲ್ ಎಸ್ಟೇಟ್‌ಗೆ ಸಂಬಂಧಪಟ್ಟಂತೆ ಯಾವುದಾದರೂ ಕೆಲಸಗಳನ್ನು ಮಾಡುತ್ತಿದ್ದರೆ ಸಹ ಇದು ಉತ್ತಮವಾದ ಸಂದರ್ಭವಾಗಿದ್ದು, ಆ ನಿಟ್ಟಿನಲ್ಲಿ ಮುನ್ನಡೆಯಬಹುದಾಗಿದೆ. 

ಇದನ್ನೂ ಓದಿ: ಇನ್ನೊಂದು ವರ್ಷ ಈ 3 ರಾಶಿಯವರಿಗೆ ಕೇತುವಿನ ಕೃಪೆ - ಧನಲಾಭ

ವೃಶ್ಚಿಕ ರಾಶಿ (Scorpio):
ವೃಶ್ಚಿಕ ರಾಶಿಯವರಿಗೆ ಈಗ ಬಂದಿರುವ ಯೋಗವು ಬಹಳ ಅನುಕೂಲವನ್ನು ಮಾಡಿಕೊಡಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಇರುವವರಿಗೆ ಇದು ಸಕಾಲವಾಗಿದ್ದು, ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ದೀರ್ಘಕಾಲದಿಂದ ಡೋಲಾಯಮಾನವಾಗಿದ್ದ ಆರ್ಥಿಕ ಪರಿಸ್ಥಿತಿಯು ಈ ಸಂದರ್ಭದಲ್ಲಿ ಹಳಿಗೆ ಬರಲಿದೆ. ಎಲ್ಲದಕ್ಕೂ ಸೂಕ್ತ ಪರಿಹಾರ ಈಗ ಒದಗಿ ಬರಲಿದೆ. ಹೊಸ ಕೆಲಸವನ್ನು (New Job) ಪ್ರಾರಂಭಿಸಲು ಅಥವಾ ಹೊಸ ವಾಹನವನ್ನು ಖರೀದಿಸಲು ಈ ಸಮಯವು ತುಂಬಾ ಶುಭಕರವಾಗಿದೆ.

ಕುಂಭ ರಾಶಿ (Aquarius):
ಕುಂಭರಾಶಿಯಲ್ಲಿ ಶಶ ಮತ್ತು ಮಾಳವ್ಯ ರಾಜಯೋಗಗಳು ಸಹ ರೂಪುಗೊಳ್ಳುತ್ತಿವೆ. ಇದರಿಂದ ನಿಮ್ಮ ಸಂತೋಷ (Happy) ಇಮ್ಮಡಿಗೊಳ್ಳುವುದಲ್ಲದೆ, ಸಂಪನ್ಮೂಲಗಳ ಅಭಿವೃದ್ಧಿ ಆಗಲಿದೆ. ಮನೆಗೆ ಸಂಬಂಧಿಸಿದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕೆಲಸಗಳನ್ನು ಪೂರ್ಣಗೊಳಿಸಲು ಇದು ಉತ್ತಮವಾದ ಸಮಯವಾಗಿದೆ. ಆದಾಯದ (Income) ಹೊಸ ಮೂಲಗಳು ಹುಟ್ಟಿಕೊಳ್ಳಬಹುದಾಗಿದ್ದು, ನೀವು ಇವುಗಳ ಬಗ್ಗೆ ಸ್ವಲ್ಪ ಗಮನ ಹರಿಸುವುದು ಉತ್ತಮ. 

ಇದನ್ನೂ ಓದಿ: ಬಂದಿದೆ ಅಂಗಾರಕ ಯೋಗ - ಈ ನಾಲ್ಕು ರಾಶಿಯವರಿಗೆ ಕೆಟ್ಟ ದಿನಗಳ ಆರಂಭ? ಇಲ್ಲಿದೆ ಪರಿಹಾರ

ಹೀಗಾಗಿ ಈ ರಾಜಯೋಗವು ಇರುವವರೆಗೂ ಈ ನಾಲ್ಕೂ ರಾಶಿಯವರ ಅದೃಷ್ಟದ ಬಾಗಿಲು ಸದಾ ತೆರೆದುಕೊಂಡಿರಲಿದೆ. ಒಟ್ಟಿನಲ್ಲಿ ಇವರು ಮುಟ್ಟಿದ್ದೆಲ್ಲ ಚಿನ್ನವೆಂಬಂತೆ ಆಗುತ್ತದೆ. 

click me!