Chikkamagaluru: ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಸಂಭ್ರಮ

By Govindaraj S  |  First Published Apr 15, 2022, 4:32 PM IST

* ಶ್ರೀಗಳಿಂದ ಶಾರದಾ ದೇವಿಗೆ ಮಹಾಕುಂಭಾಭಿಷೇಕ ಪೂಜೆ.
* ಯಾವುದೇ ಭೇದ-ಭಾವವಿಲ್ಲದೇ ಎಲ್ಲರಿಗೂ ಆಹ್ವಾನ ಪತ್ರಿಕೆ.
* ಹಿಂದೂ ಕುಂಭಾಭಿಷೇಕಕ್ಕೆ ಮಸೀದಿಯಿಂದ ಶುಭ ಹಾರೈಕೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.15): ಮಲೆನಾಡಿನ ತುಂಗಾ ನದಿ ತೀರದಲ್ಲಿ ಹಲವು ಧಾರ್ಮಿಕ ಕೇಂದ್ರಗಳಿವೆ. ಇಲ್ಲಿನ ಧಾರ್ಮಿಕ ಕೇಂದ್ರಗಳು ಜಗತ್ ಪ್ರಸಿದ್ದಿ ಪಡೆದು ಸನಾತನ ಧರ್ಮವನ್ನು ಎಲ್ಲೆಡೆ ಪ್ರಸರಿಸುತ್ತಿದೆ. ಇದರ ಸಾಲಿನಲ್ಲೇ ಬರುವ ಹರಿಹರಪುರದ ಶ್ರೀ ಮಠವೂ (Hariharpur Mutt) ಒಂದು. ಕಳೆದ 12 ವರ್ಷಗಳಿಂದ ದೇವಾಲಯಗಳ ಪುನರ್ ನಿರ್ಮಾಣದ ಕಾರ್ಯ ಸಂಪನ್ನಗೊಂಡ ಬಳಿಕ ವೈಭವ್ಯದಿಂದ ಮಹಾಕುಂಭಾಭಿಷೇಕ (Maha Kumbhabhishekha) ನಡೆಯಿತು. 

Latest Videos

undefined

ಯಾವುದೇ ಭೇದ-ಭಾವವಿಲ್ಲದೇ ಆಹ್ವಾನ ಪತ್ರಿಕೆ ನೀಡಿರುವ ಸ್ವಯಂ ಸೇವಕರು: ಮಲೆನಾಡಿನ ಹತ್ತು ತಾಲೂಕಿನ ಎಲ್ಲಾ ಸಮುದಾಯದ ಸುಮಾರು ಎರಡು ಲಕ್ಷ ಮನೆಗಳಿಗೆ ಅಕ್ಷತೆಯೊಂದಿಗೆ ಆಹ್ವಾನ ಪತ್ರಿಕೆಯನ್ನು ಸ್ವಯಂ ಸೇವಕರು ಖುದ್ದಾಗಿ ಕೊಟ್ಟು ಈ ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಆತ್ಮೀಯವಾಗಿ ಆಮಂತ್ರಿಸಿರುವುದು ಮತ್ತೊಂದು ವಿಶೇಷವಾಗಿದೆ. ಈ ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವೂ ಹಲವು ವಿಶೇಷಗಳನ್ನು ಹೊಂದಿರುವ ಧಾರ್ಮಿಕ ಕಾರ್ಯಕ್ರಮವಾಗಿತ್ತು. ಮಹಾಕುಂಭಾಭಿಷೇಕಕ್ಕೆ ಶ್ರೀಗಳ ಇಚ್ಚೇಯಂತೆ ಯಾವುದೇ ಜಾತಿ ಭೇದಭಾವವನ್ನು ಮಾಡಿದೇ ಮಲೆನಾಡಿನ 10 ತಾಲ್ಲೂಕು ಯಾದ ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಕಳಸ ,ಮೂಡಿಗೆರೆ,ತೀರ್ಥಹಳ್ಳಿ,ಸಾಗರದ ಜನರಿಗೆ ಮಂತ್ರಅಕ್ಷತೆಯೊಂದಿಗೆ ಆಹ್ವಾನ ನೀಡಲಾಗಿತ್ತು.

Chikkamagaluru: ಐತಿಹಾಸಿಕ ಮಹಾಕುಂಭಾಭಿಷೇಕಕ್ಕೆ ಹರಿಹರಪುರ ಸಾಕ್ಷಿ

ಮಠದಲ್ಲಿ ಹದಿನೈದು ದಿನಗಳ ಕಾಲ ಅದ್ಧೂರಿ ಹಾಗೂ ವೈಭವದಿಂದ ನಡೆಯುತ್ತಿರುವ ಮಹಾ ಕುಂಭಾಭಿಷೇಕಕ್ಕೆ ಶ್ರೀಗಳು ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರತಿಷ್ಠಾ ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 10 ರಿಂದ ಏಪ್ರಿಲ್ 24 ರ ವರೆಗೆ ಆಯೋಜನೆಗೊಂಡಿದೆ.ಮಹಾಕುಂಭಾಭಿಷೇಕ ಹಾಗೂ ಪುನಃಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಮಠದಲ್ಲಿ ಆಯೋಜನೆಗೊಂಡಿದ್ದು ಇಂದು ಶ್ರೀಗಳು ಶಾರದಾ ದೇವಿಗೆ ಮಹಾ ಕುಂಭಾಭಿಷೇಕವನ್ನು ಮಾಡಿದರು. 

ಹಿಂದೂ ಕುಂಭಾಭಿಷೇಕಕ್ಕೆ ಮಸೀದಿಯಿಂದ ಶುಭ ಹಾರೈಕೆ: ಪ್ರಸ್ತುತ ಸಮಾಜದಲ್ಲಿ ಧರ್ಮ ಯುದ್ಧದ ಕಹಳೆ ಕೂಗು ಜೋರಿದೆ. ನಾವೇ ಶ್ರೇಷ್ಠ ಹಾಗೂ ಸಮಾನತೆಯ ಪಾಠದ ಮಧ್ಯೆ ಸಾವು-ನೋವು ಕೂಡ ಸಂಭವಿಸ್ತಿದೆ. ಆದರೆ, ಇಂತಹಾ ಧರ್ಮಯುದ್ಧ ಕಾಲದಲ್ಲಿ ಮುಸ್ಲಿಂ ಸಮುದಾಯ ಮಸೀದಿ ಮುಂದೆ ಹಿಂದೂಗಳ ಕುಂಬಾಭಿಷೇಕಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿ ಸಮಾನತೆ ಸಾರಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ಆದಿ ಶಂಕರಾಚಾರ್ಯರ ಮಹಾ ಕುಂಬಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ. 

ಈ ಕಾರ್ಯಕ್ರಮಕ್ಕೆ ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಿಂದ ಮಸೀದಿ ಮುಂದೆ ಫ್ಲೆಕ್ಸ್ ಹಾಕಿ ಕುಂಬಾಭಿಷೇಕಕ್ಕೆ ಶುಭಕೋರಿದ್ದಾರೆ. ಫ್ಲೆಕ್ಸ್‌ನಲ್ಲಿ ಹರುಲಿಹರಪುರ ಮಠದ ಸ್ವಾಮೀಜಿಗಳಾದ ಸಚ್ಚಿದಾನಂದ ಸರಸ್ವತಿ ಶ್ರೀಗಳ ಫೋಟೋ ಹಾಕಿಲ್ಲ, ಆ ಫ್ಲೆಕ್ಸ್‌ನ ಮಸೀದಿ ಕಾಂಪೌಂಡ್ ಮೇಲೆ ಹಾಕಿ ಕುಂಬಾಭಿಷೇಕಕ್ಕೆ ಶುಭ ಹಾರೈಸಿದ್ದಾರೆ. ಮುಸ್ಲಿಮರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಮೆಚ್ವುಗೆ ವ್ಯಕ್ತವಾಗುತ್ತಿದ್ದು, ಮುಸ್ಲಿಮರಲ್ಲೂ ಒಳ್ಳೆಯವರು, ಸಮಾನತೆ ಸಾರುವವರು ಇದ್ದಾರೆ ಎಂದು ಸ್ಥಳಿಯರು ಮುಸ್ಲಿಂ ಸಮುದಾಯದ ಬಗ್ಗೆ ಸಂತಸ ತೋರಿದ್ದಾರೆ.

Chikkamagaluru: ಹರಿಹರಪುರ ಮಠದಲ್ಲಿ ಮಹಾಕುಂಭಾಭಿಷೇಕ ಮಹೋತ್ಸವ

ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ: ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ 15 ದಿನಗಳ ಕಾಲ ನಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹರಿಹರಪುರದಲ್ಲಿ ನಡೆಯುತ್ತಿವೆ ಏ.15ರಂದು ದೇವತಾ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ ನಡೆಯಲಿದೆ. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ತಮ್ಮ ಅಮೃತಹಸ್ತದಿಂದ ಮಹಾಕುಂಭಾಭಿಷೇಕ ನೆರವೇರಿಸಲಿದ್ದಾರೆ. ಏ.16ರಿಂದ ಏ.24ರವರೆಗೆ ಕೋಟಿ ತುಳಸಿ ಅರ್ಚನೆ, ಲಕ್ಷ ಮೋದಕ ಗಣಪತಿ ಮಹಾಯಾಗ, ಸಹಸ್ರ ಚಂಡಿಕಾ ಮಹಾಯಾಗ, ಕೋಟಿ ಕುಂಕುಮಾರ್ಚನೆ, ಮಹಾಮೃತ್ಯುಂಜಯ ಯಾಗ, ಆಂಜನೇಯ ಮಹಾಯಾಗ, ಲಕ್ಷ್ಮೀನಾರಾಯಣಹೃದಯ ಹೋಮ, ಧನ್ವಂತರೀ ಮಹಾಯಾಗ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ, ಮಹಾರಥೋತ್ಸವ ನಡೆಯಲಿದೆ.

click me!