ಇಂದು ಮಹಾವೀರ ಜಯಂತಿ: ಜೈನಧರ್ಮದ ಕೀರ್ತಿಪುರುಷ ಕಲಿಸಿದ Life Lessons

Published : Apr 14, 2022, 11:16 AM IST
ಇಂದು ಮಹಾವೀರ ಜಯಂತಿ: ಜೈನಧರ್ಮದ ಕೀರ್ತಿಪುರುಷ ಕಲಿಸಿದ Life Lessons

ಸಾರಾಂಶ

ಇಂದು ಮಹಾವೀರ ಜಯಂತಿ. ಜೈನ ಮಹಾಪುರುಷ ಸಾರಿದ ಜೀವನಪಾಠಗಳು ಇಲ್ಲಿವೆ.

ಸುಮಾರು 2500 ವರ್ಷಗಳ ಹಿಂದೆ ಬಿಹಾರದ ಕುಂದಗ್ರಾಮಂ ವೈಶಾಲಿ(ಬಸಾಢ)ಯಲ್ಲಿ ಮಹಾವೀರ(Mahavir)ರು ಜನಿಸಿದ್ದು ರಾಜಕುಮಾರನಾಗಿ. ದೊಡ್ಡದೊಂದು ರಾಜ್ಯ ಆಳುವ ಬದಲು ಜನರ ಮನಸ್ಸನ್ನು ಪರಿವರ್ತಿಸಿ ಅವರ ಹೃದಯ ಸಾಮ್ರಾಜ್ಯ ಆಳುವಲ್ಲಿ ಮಹಾವೀರರ ಹಿರಿಮೆಯಿದೆ. ರಾಜ ಮನೆತನ, ವೈಭೋಗ, ರಾಜ್ಯ, ಕುಟುಂಬ ಎಲ್ಲವನ್ನೂ 30ನೇ ವಯಸ್ಸಿನಲ್ಲಿ ತೊರೆದು ಸಮಾಜ ಸುಧಾರಣೆಗಾಗಿ ಜೈನ ಧರ್ಮ(jainism)ದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಹುಟ್ಟುಹಾಕಿದ್ದು ಮಹಾವೀರರ ಸಾಧನೆ. 

ಇಂದು ಮಹಾವೀರ ಜಯಂತಿ(Mahavir Jayanti). ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರರ ಜನ್ಮದಿನ. ಅವರ ಕುರಿತ ಅಪರೂಪದ ಸಂಗತಿಗಳು ಹಾಗೂ ಅವರು ಕಲಿಸಿದ ಜೀವನ ಪಾಠಗಳನ್ನಿಂದು ತಿಳಿಯೋಣ. 

ಮಹಾವೀರ ಹುಟ್ಟಿದ್ದು ಕ್ರಿ.ಪೂ. 599 ರಲ್ಲಿ. ಈಗಿನ ಬಿಹಾರ(Bihar)ದ ಬಸಾಢದಲ್ಲಿ ಅಂದಿನ ರಾಜ ಸಿದ್ಧಾರ್ಥ ಹಾಗೂ ರಾಣಿ ತ್ರಿಶಾಲಾ ದೇವಿಯ ಪುತ್ರನಾಗಿ ಜನಿಸಿದ ಇವರಿಗೆ ತಂದೆ ತಾಯಿಯಿಟ್ಟ ಹೆಸರು ವರ್ಧಮಾನ ಎಂದು. ರಾಜಕುಮಾರನಾದರೂ ವೈಭವದಲ್ಲಿ ಇವರ ಆಸಕ್ತಿ ಬೆಳೆಯಲೇ ಇಲ್ಲ. ಬದಲಿಗೆ ಧರ್ಮದ ಬಗ್ಗೆ ಹೆಚ್ಚು ಹೆಚ್ಚು ತಿಳಿಯುವುದರಲ್ಲಿ ಆಸಕ್ತಿ ತೋರಿಸಲಾರಂಭಿದರು. ಕಡೆಗೆ, 30ನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ದೇಶಸಂಚಾರ ಕೈಗೊಂಡರು. 

ವರ್ಧಮಾನ ತೀರ್ಥಂಕರರಾದ ಕತೆ
ತನ್ನ ತಂದೆ ರಾಜ ಸಿದ್ಧಾರ್ಥ ಪ್ರಜಾಪ್ರಭುತ್ವದ ತಳಹದಿಯ ಮೂಲಕ ಆರಿಸಿ  ಬಂದದ್ದನ್ನು ನೋಡಿದ್ದ ಮಹಾವೀರ, ಸ್ವತಂತ್ರದ ಕಲ್ಪನೆಯನ್ನು ಅಂದೇ ಮನಗಂಡಿದ್ದರು. ತಾನು ಸ್ವತಂತ್ರನಾಗುವುದು ಎಂದರೆ ತನ್ನ ಆತ್ಮ ಕಲ್ಯಾಣ ಮಾಡಿಕೊಳ್ಳುವುದೆಂದು ನಂಬಿದ್ದರು. ಹೀಗಾಗಿ, ಮನೆ ತೊರೆದು ದೇಶ ಸಂಚಾರ ಮಾಡುವಾಗ ಎಲ್ಲದರಿಂದ ಸ್ವಾತಂತ್ರ್ಯ ಬಯಸಿದ ಅವರು, ದಿಗಂಬರರಾದರು. ಬೆತ್ತಲಾಗುವುದೆಂದರೆ ಭೌತಿಕವಾದ ಯಾವುದೊಂದೂ ತನ್ನದಲ್ಲವೆಂದು ಅವುಗಳಿಂದ ಕಳಚಿಕೊಳ್ಳುವುದು ಎಂಬುದನ್ನು ಮನಗಂಡಿದ್ದರು. ಬಾಹ್ಯ ಸಂಗತಿಗಳ ಮೇಲಿನ ಸಂಪೂರ್ಣ ಮಮಕಾರ ಬಿಟ್ಟು, ಆತ್ಮದ ಬಗ್ಗೆ ಚಿಂತಿಸತೊಡಗಿದರು. ತಮ್ಮನ್ನು ತಾವು ಅರಿಯಲು 12 ವರ್ಷಗಳ ಕಾಲ ತಪಸ್ಸು ಮಾಡಿದರು. ತಮ್ಮೊಳಗಿನ ಪ್ರಶ್ನೆಗಳಿಗೆ ತಾವೇ ಸ್ವತಃ ಉತ್ತರಗಳನ್ನು ಕಂಡುಕೊಂಡರು. ಬಳಿಕ ಇತರರ ಆತ್ಮಕಲ್ಯಾಣ ಮಾರ್ಗವನ್ನು ತೋರಿಸಲು ಆರಂಭಿಸಿ ತೀರ್ಥಂಕರರಾದರು. 

ಸ್ವ ಅರಿವೇ ಮೋಕ್ಷಕ್ಕೆ ದಾರಿ ಎಂದ ಮಹಾವೀರ

ಅಹಿಂಸೆ ಎಂದರೆ ಹೀಗಿರಬೇಕು..
ಹನ್ನೆರಡು ವರ್ಷಗಳ ತಮ್ಮ ಅರಿವನ್ನು ವಿಸ್ತರಿಸಲು ಹಾಗೂ ಪಸರಿಸಲು ಬಿಹಾರದ ಸುತ್ತ 30 ವರ್ಷಗಳ ಕಾಲ ಸಂಚಾರ ನಡೆಸುವ ಮಹಾವೀರರು, ಜಾತಿಪದ್ಧತಿಯನ್ನು ವಿರೋಧಿಸುತ್ತಾರೆ. ಅಷ್ಟೇ ಅಲ್ಲ, ಮನುಷ್ಯನಿಗೆ ಬದುಕಲಿರುವಷ್ಟೇ ಹಕ್ಕು, ಕ್ರಿಮಿಕೀಟ, ಪ್ರಾಣಿ ಪಕ್ಷಿಗಳಿಗೂ ಇದೆ ಎಂದು ಪ್ರತಿಪಾದಿಸಿ, ಬಲಿ ಕೊಡುವುದನ್ನು ವಿರೋಧಿಸಿದರು. ಅಹಿಂಸೆಯ ಪಾಠ ಹೇಳಿದರು. ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಹೇಳಬೇಕಾದುದನ್ನು ಹೇಳುತ್ತಾ ಹೆಚ್ಚು ಹೆಚ್ಚು ಬೆಂಬಲಿಗರನ್ನು ಪಡೆದರು. ಇಂದಿಗೂ ದಿಗಂಬರ ಮುನಿಗಳು ತಾವು ಕುಳಿತುಕೊಳ್ಳುವ ಸ್ಥಳವನ್ನು ಮೊದಲು ಬಿದ್ದಿದ್ದರಿಂದ ಆರಿಸಿಟ್ಟುಕೊಂಡ ನವಿಲುಗರಿಗಳಿಂದ ಸ್ವಚ್ಛ ಮಾಡಿಕೊಳ್ಳುತ್ತಾರೆ. ಇದರಿಂದ ಅಲ್ಲಿ ಒಂದು ಇರುವೆಯೂ ಸಾಯಬಾರದು ಎಂಬ ಉದ್ದೇಶ ಪಾಲನೆಯಾಗುತ್ತದೆ. ಆಹಾ, ಯಾರಿಗೂ ಹಿಂಸೆ ನೀಡದ ಈ ಚಿಂತನೆ ಜಗತ್ತಿನುದ್ದಕ್ಕೂ ಇದ್ದರೆ ಇದೊಂದು ಸ್ವರ್ಗ ಲೋಕವೇ ಆಗಿರುತ್ತಿತ್ತೇನೋ!?

ವಿಶ್ವಧರ್ಮ
ಮಹಾವೀರರು ಜಗತ್ತಿಗೆ ಐದು ತತ್ವಗಳನ್ನು ಪಾಲಿಸಲು ಕರೆ ನೀಡುತ್ತಾರೆ. ಅವೆಂದರೆ  ಅಹಿಂಸೆ, ಸತ್ಯ, ಅಸ್ತೇಯ(ಮತ್ತೊಬ್ಬರಿಂದ ಏನನ್ನೂ ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ(ಅವಿವಾಹಿತರಾಗಿ ಉಳಿಯುವುದಲ್ಲ, ಪತ್ನಿಯೊಬ್ಬಳು ಬಿಟ್ಟು ಮತ್ತೆಲ್ಲರೂ ಸಹೋದರಿಯರು ಎಂಬ ಭಾವನೆ) ಮತ್ತು ಅಪರಿಗ್ರಹ(ಸರಳ ಜೀವನ, ಜೀವನಕ್ಕೆ ಎಷ್ಟು ಬೇಕೋ ಅದಕ್ಕಿಂತ ಹೆಚ್ಚಿನ ಸಂಗ್ರಹದಲ್ಲಿ ತೊಡಗದಿರುವುದು. ಜೊತೆಗೆ ನಾನು, ನನ್ನದು ಎಂಬ ಭಾವದಿಂದ ಹೊರಗುಳಿಯುವುದು). 

ಈ ರಾಶಿಯವರಿಗೆ ಸ್ವಲ್ಪ ಹೆಚ್ಚೇ Arrogance!

ಧನಾತ್ಮಕ ಚಿಂತನೆ
ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಎಂಬ ಜೈನ ತತ್ವಗಳನ್ನು ಮಹಾವೀರರು ಜನರ ಭಾಷೆಯಲ್ಲಿ ತಿಳಿಸುತ್ತಾರೆ. ಎಲ್ಲದರಲ್ಲಿಯೂ ಒಳ್ಳೆಯದನ್ನೇ ನೋಡು, ಇದರಿಂದ ಒಳ್ಳೆಯ ಜ್ಞಾನ ಗಳಿಸು ಹಾಗೂ ಒಳ್ಳೆಯ ನಡತೆ ತೋರು ಎಂಬ ಮಹಾವೀರರ ಮಾತುಗಳು ಸಾರ್ವಕಾಲಿಕ ಪಾಠವಾಗಿವೆ. ಇದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. 
 

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ