ತುಲಾ ರಾಶಿಯವರಿಗೆ ಯಾರು ಉತ್ತಮ ಸಂಗಾತಿ...?

By Sushma Hegde  |  First Published Jun 2, 2023, 11:02 AM IST

ಮನುಷ್ಯನ ಜೀವನದಲ್ಲಿ ರಾಶಿಚಕ್ರಗಳಿಗೆ ಬಹಳ ಪ್ರಾಮುಖ್ಯತೆ ಇದ್ದು, ಮೊದಲಿಂದಲೂ ಕೂಡ ಜ್ಯೋತಿಷ್ಯದ ಬಗ್ಗೆ ಜನರಿಗೆ ನಂಬಿಕೆ ಇದೆ. ಪ್ರೀತಿ, ಮದುವೆ ಹಾಗೂ ಸಂಸಾರ ಸೇರಿ ಪ್ರತಿಯೊಂದು ಬಂಧನಕ್ಕೂ ರಾಶಿಚಕ್ರದ ನಂಟಿದೆ. ಅದೇ ರೀತಿ ತುಲಾ ರಾಶಿಯವರು ಯಾವ ರಾಶಿಯವರ ಜೊತೆ ಹೊಂದಿಕೊಳ್ಳುತ್ತಾರೆ ನೋಡಿ ಇಲ್ಲಿದೆ ಮಾಹಿತಿ .


ಮನುಷ್ಯನ ಜೀವನದಲ್ಲಿ ರಾಶಿಚಕ್ರ (Zodiac)ಗಳಿಗೆ ಬಹಳ ಪ್ರಾಮುಖ್ಯತೆ ಇದ್ದು, ಮೊದಲಿಂದಲೂ ಕೂಡ ಜ್ಯೋತಿಷ್ಯದ ಬಗ್ಗೆ ಜನರಿಗೆ ನಂಬಿಕೆ ಇದೆ. ಪ್ರೀತಿ, ಮದುವೆ ಹಾಗೂ ಸಂಸಾರ ಸೇರಿ ಪ್ರತಿಯೊಂದು ಬಂಧನಕ್ಕೂ ರಾಶಿಚಕ್ರದ ನಂಟಿದೆ. ಅದೇ ರೀತಿ ತುಲಾ ರಾಶಿ (Libra)ಯವರು ಯಾವ ರಾಶಿಯವರ ಜೊತೆ ಹೊಂದಿಕೊಳ್ಳುತ್ತಾರೆ. ಯಾರೊಂದಿಗೆ ಉತ್ತಮ ಜೀವನವನ್ನು ಮುನ್ನಡೆಸುತ್ತಾರೆ ಹಾಗೂ ಯಾರ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ತುಲಾ ಮತ್ತು ಮೇಷ
ತುಲಾ ಮತ್ತು ಮೇಷ ರಾಶಿ (Aries)ಯ ಜನರು ಆಕರ್ಷಣೆಗೆ ಉಂಟಾಗುವುದು ಸಾಮಾನ್ಯ. ತುಲಾ ರಾಶಿಯವರು ಮೋಡಿಯಿಂದ ಮೇಷ ರಾಶಿಯವರನ್ನು ತಮ್ಮತ್ತ ಸೆಳೆಯುತ್ತಾರೆ. ತುಲಾ ಮತ್ತು ಮೇಷ ರಾಶಿಯವರು ಕೆಲವೊಮ್ಮೆ ಭಾವನೆ (feeling)ಗಳಿಗೆ ಮಹತ್ವ ಕೊಡಲ್ಲ. ಇವರ ನಡುವೆ ಅನೇಕ ರೀತಿಯ ಸಮಸ್ಯೆಗಳು ಎದುರಾಗಬಹುದು. ಆದರೆ ಅದನ್ನು ನಿಭಾಯಿಸಿ ಹೇಗೆ ಮುನ್ನಡೆಸಿಕೊಂಡು ಹೋಗಬೇಕೆಂಬುದನ್ನು ಇವರು ಅರಿತಿರುತ್ತಾರೆ.

Tap to resize

Latest Videos

ತುಲಾ ಮತ್ತು ವೃಷಭ
ತುಲಾ ಹಾಗೂ ವೃಷಭ ರಾಶಿ (Taurus)ಯವರು ಉತ್ತಮ ಜೀವನ ನಡೆಸಲು ಇಷ್ಟಪಡುತ್ತಾರೆ. ಇದು ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆಯಾಗಲು ಸಹಕಾರಿ ಆಗುತ್ತದೆ. ಈ ಎರಡೂ ರಾಶಿಚಕ್ರದವರು ಜೀವನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನ ಪಡುತ್ತಾರೆ. ಇದರಿಂದ ಇಬ್ಬರು ಪ್ರೇಮ ಪಕ್ಷಿ (love bird)ಗಳಂತೆ ಹತ್ತಿರ ಇರುತ್ತಾರೆ. ತುಲಾ ರಾಶಿಯವರ ಜೀವನ ಶೈಲಿಗೆ ವೃಷಭ ರಾಶಿಯವರು ಆಕರ್ಷಿತರಾಗುತ್ತಾರೆ.

ತುಲಾ ಮತ್ತು ಮಿಥುನ
ತುಲಾ ಮತ್ತು ಮಿಥುನ ರಾಶಿ (Gemini)ಯವರ ನಡುವೆ ಪ್ರೇಮಾಂಕುರ ಆಗಲಿದೆ. ಈ ಎರಡು ರಾಶಿಯವರು ಸುಲಭವಾಗಿ ಬಾಂಧವ್ಯ ಹೊಂದುತ್ತಾರೆ. ಎಲ್ಲಾ ವಿಚಾರಗಳನ್ನು ಪರಸ್ಪರ ಹಂಚಿಕೊಂಡು ಆರಾಮ ಜೀವನ ನಡೆಸುತ್ತಾರೆ. ತುಲಾ (Libra)ಆತ್ಮ ಸಂಗಾತಿಯ ಸಾಲಿನಲ್ಲಿ ಮೊದಲನೆಯದು ಮಿಥುನ ರಾಶಿ ಆಗಿದ್ದು, ಇಬ್ಬರ ನಡುವೆ ಗಂಟೆಗಟ್ಟಲೇ ಸಂಭಾಷಣೆ ನಡೆಯಲಿದೆ.

ತುಲಾ ಮತ್ತು ಕಟಕ
ತುಲಾ ಮತ್ತು ಕಟಕ ರಾಶಿ (Cancer)ಯವರ ನಡುವಿನ ಸಂಬಂಧದಲ್ಲಿ ಏರಿಳಿತ ಇರಲಿದೆ. ಇಬ್ಬರ ನಡುವೆ ಕುತೂಹಲಕಾರಿ ಸಂಗತಿಗಳು ಸಂಭವಿಸಲಿವೆ. ಇಬ್ಬರ ನಡುವೆ ಹೊಂದಾಣಿಕೆ ಸ್ವಲ್ಪ ಕಡಿಮೆಯಾಗಲಿದೆ. ಕಟಕ ರಾಶಿಯವರು ಹೆಚ್ಚು ಸಂವೇದನಾಶೀಲ (Sensitive)ರಾಗಿದ್ದು, ಭಾವನೆಳಿಗೆ ಸ್ಪಂದಿಸಲಿದ್ದಾರೆ.

Daily Horoscope: ಮೇಷಕ್ಕೆ ಆತ್ಮೀಯರ ಕಡೆಯಿಂದ ಅಹಿತಕರ ಸುದ್ದಿ

 

ತುಲಾ ಮತ್ತು ಸಿಂಹ
ತುಲಾ ಹಾಗೂ ಸಿಂಹ ರಾಶಿ (Leo)ಯವರ ನಡುವೆ ಉತ್ತಮ ಸಂಬಂಧ ಇರಲಿದೆ. ಇವರಲ್ಲಿ ಹೆಚ್ಚಿನ ಪ್ರಾಮಾಣಿಕತೆ ಕಂಡುಬರುತ್ತದೆ. ನಿಷ್ಠೆ ಮತ್ತು ಬದ್ಧತೆಯಿಂದ ಪ್ರೀತಿಯೇ ಅವರ ಬಂಧವನ್ನು ಗಟ್ಟಿಗೊಳಿಸುತ್ತದೆ. ಸಿಂಹ ರಾಶಿಯ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವು ತುಲಾ ರಾಶಿಯವರು ಇಷ್ಟವಾಗುತ್ತದೆ. ಹಾಗೂ ಇದರ ಜೊತೆ ಇಬ್ಬರ ನಡುವೆ ಕೆಲ ಗೊಂದಲ (confused)ಗಳು ಮೂಡುವ ಸಾಧ್ಯತೆ ಇರಲಿದೆ. ಕೆಲ ವಿಚಾರದಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ಇದ್ದು, ಸಂಬಂಧದಲ್ಲಿ ಸಮಸ್ಯೆಗಳನ್ನು ಸೃಷ್ಟಿಯಾಗಬಹುದು.

ತುಲಾ ಮತ್ತು ಕನ್ಯಾರಾಶಿ
ಈ ಎರಡು ರಾಶಿಯವರ ನಡುವಿನ ವಿಭಿನ್ನ ಸ್ವಭಾವಗಳು ಮತ್ತು ವ್ಯತಿರಿಕ್ತ ವ್ಯಕ್ತಿತ್ವಗಳು ಇರಲಿದ್ದು, ತುಲಾ ರಾಶಿಯವರು ಆರಂಭದಲ್ಲಿ ಕನ್ಯಾ ರಾಶಿಯವರ ಜೊತೆ ಗೊಂದಲಕ್ಕೊಳಗಾಗುವ ಸಾಧ್ಯತೆ ಇರಲಿದೆ. ನಂತರದಲ್ಲಿ ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗುತ್ತಾರೆ. ಕನ್ಯಾ ರಾಶಿಯವರು ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಸ್ಸೀಮರು. ಇವರು ತುಲಾ ರಾಶಿಯವರಿಗೆ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ.

ತುಲಾ ಮತ್ತು ತುಲಾ
ಇಬ್ಬರು ತುಲಾ ರಾಶಿಯವರು ಪ್ರೇಮ (Love) ಸಂಬಂಧದಲ್ಲಿ ಒಟ್ಟಿಗೆ ಸೇರಿದಾಗ ಉತ್ತಮ ಸಂಬಂಧ ಹೊಂದುತ್ತಾರೆ. ಪ್ರಣಯ ಮತ್ತು ಜೀವನದಲ್ಲಿ ನಡೆಯುವ ಸಂತೋಷ ಘಟನೆಗಳನ್ನು ಆನಂದಿಸುತ್ತಾರೆ. ಇಬ್ಬರ ನಡುವಿನ ಸಂಬಂಧ ಸಕಾರಾತ್ಮಕತೆಯಿಂದ ಕೂಡಲಿದೆ.

ತುಲಾ ಮತ್ತು ವೃಶ್ಚಿಕ
ತುಲಾ ಮತ್ತು ವೃಶ್ಚಿಕ ರಾಶಿಯವರು ಪರಸ್ಪರ ನಂಬಿಕೆ (faith) ಯಿಂದ ಜೀವನ ಸಾಗಿಸುತ್ತಾರೆ. ಒಬ್ಬರಿಗೊಬ್ಬರು ಮೆಚ್ಚುಗೆಯ ಮೇಲೆ ಪರಿಪೂರ್ಣ ಸಂಬಂಧ ಹೊಂದಿರುತ್ತಾರೆ. ಇವರ ನಡುವೆ ಸೌಂದರ್ಯವನ್ನು ಮೆಚ್ಚಿಸುವ ಗುಣಗಳು ಇರಲಿವೆ. ತೀವ್ರವಾದ ಭಾವೋದ್ರಿಕ್ತ ವೃಶ್ಚಿಕ ರಾಶಿ (Scorpio)ಯವರಿಂd ತುಲಾ ರಾಶಿಯವರು ಹೆಚ್ಚಿನ ಸೌಕರ್ಯವನ್ನು ಪಡೆಯುತ್ತಾರೆ. ವೃಶ್ಚಿಕ ರಾಶಿಯವರ ಪ್ರೀತಿಗೆ ತುಲಾ ರಾಶಿಯವರು ಆಕರ್ಷಿತರಾಗುತ್ತಾರೆ. 

ತುಲಾ ಮತ್ತು ಧನು ರಾಶಿ
ತುಲಾ ರಾಶಿಯವರಿಗೆ ಧನು ರಾಶಿ (Sagittarius) ಯವರು ಉತ್ತಮ ಸಂಗಾತಿಯಾಗಬಲ್ಲರು. ಇಬ್ಬರು ಇತರರಿಗಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಪರಿಪೂರ್ಣ ಕೆಲಸ-ಜೀವನದ ಸಮತೋಲನವನ್ನು ಹುಡುಕುವ ಇಬ್ಬರು ಸಹಕಾರಿ ಆಗುತ್ತಾರೆ. ಇವರ ಪ್ರಣಯ ಸಂಬಂಧ (relationship) ಗಳಲ್ಲಿ ಬಿರುಕುಗಳು ಕಾಣಬಹುದು. ಆದ್ದರಿಂದ ಉತ್ತಮ ಬಂಧವನ್ನು ಬೆಳೆಸಲು ಇಬ್ಬರು ಪ್ರಯತ್ನಿಸಬೇಕು.

Vastu Tips: ರಾಶಿ ಪ್ರಕಾರ ನಿಮ್ಮ ಮನೆಯನ್ನು ಹೇಗೆ ಅಲಂಕರಿಸಬೇಕು?

 

ತುಲಾ ಮತ್ತು ಕುಂಭ
ತುಲಾ ಮತ್ತು ಕುಂಭ ರಾಶಿ (Aquarius) ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿಗಳು. ಇಬ್ಬರ ನಡುವೆ ಭಾವನಾತ್ಮಕ ಹಾಗೂ ಪ್ರೀತಿಯ ಹೊಂದಾಣಿಕೆ ಆಗಲಿದೆ. ಇಬ್ಬರ ನಡುವೆ ಬೆಂಬಲಿಸುವ ಗುಣ ಇರಲಿದೆ. ಒಬ್ಬರಿಗೊಬ್ಬರು ವಿಭಿನ್ನ ವಿಚಾರಗಳ ಅಭಿಪ್ರಾಯ ಪ್ರಸ್ತುತಪಡಿಸಲು ಇಷ್ಟಪಡುತ್ತಾರೆ. ಭಿನ್ನಾಭಿಪ್ರಾಯಗಳ ಹೊರತಾಗಿಯೂ ಇಬ್ಬರ ಸಂಬಂಧ ಗಟ್ಟಿಯಾಗಿರಲಿದೆ.

ತುಲಾ ಮತ್ತು ಮೀನ
ಮೀನ ಮತ್ತು ತುಲಾ ಎಲ್ಲಾ ರೀತಿಯಲ್ಲೂ ಅತ್ಯಂತ ಹೊಂದಾಣಿಕೆಯ ರಾಶಿಚಕ್ರದ ಜೋಡಿಗಳಾಗಿವೆ. ಸೌಂದರ್ಯ (beauty) ಮತ್ತು ಸೌಂದರ್ಯದ ಬಗ್ಗೆ ಒಲವಿನಂತಹ ಕೆಲವು ಸಾಮಾನ್ಯ ಗುಣಲಕ್ಷಣಗಳಿಂದಾಗಿ ಈ ಎರಡೂ ಚಿಹ್ನೆಗಳು ಪರಸ್ಪರ ಸಾಮೀಪ್ಯವನ್ನು ಪಡೆಯಬಹುದು. ಸ್ವಲ್ಪ ಹಿಂದೆ ಸರಿಯುವುದು ಮತ್ತು ನಿರ್ಣಯಿಸದಿರುವುದು ಈ ಎರಡೂ ನಕ್ಷತ್ರಗಳ ಸಾಮಾನ್ಯ ತೊಂದರೆಯಾಗಿವೆ.

click me!