ತೆಲಂಗಾಣದಲ್ಲಿ ಸೃಷ್ಟಿಯಾಗ್ತಿದೆ ಜಗತ್ತಿನ ಮೊದಲ 3ಡಿ ಪ್ರಿಂಟೆಡ್‌ ದೇವಸ್ಥಾನ

By Kannadaprabha NewsFirst Published Jun 2, 2023, 6:23 AM IST
Highlights

3ಡಿ ಪ್ರಿಂಟಿಂಗ್‌ ತಂತ್ರಜ್ಞಾನ ಬಳಸಿ ಬೆಂಗಳೂರಿನಲ್ಲಿ ದೇಶದ ಮೊದಲ ಅಂಚೆ ಕಚೇರಿ ನಿರ್ಮಿಸಿದ್ದಾಯ್ತು. ಇದೀಗ ತೆಲಂಗಾಣದಲ್ಲಿ ಜಗತ್ತಿನ ಮೊದಲ 3ಡಿ ಪ್ರಿಂಟೆಡ್‌ ದೇಗುಲವೊಂದನ್ನು ಸೃಷ್ಟಿಸುವ ಕಾರ್ಯ ಆರಂಭವಾಗಿದೆ.

ಹೈದರಾಬಾದ್‌: 3ಡಿ ಪ್ರಿಂಟಿಂಗ್‌ ತಂತ್ರಜ್ಞಾನ ಬಳಸಿ ಬೆಂಗಳೂರಿನಲ್ಲಿ ದೇಶದ ಮೊದಲ ಅಂಚೆ ಕಚೇರಿ ನಿರ್ಮಿಸಿದ್ದಾಯ್ತು. ಇದೀಗ ತೆಲಂಗಾಣದಲ್ಲಿ ಜಗತ್ತಿನ ಮೊದಲ 3ಡಿ ಪ್ರಿಂಟೆಡ್‌ ದೇಗುಲವೊಂದನ್ನು ಸೃಷ್ಟಿಸುವ ಕಾರ್ಯ ಆರಂಭವಾಗಿದೆ. ಸಿದ್ದಿಪೇಟೆಯ ಬುರುಗುಪಲ್ಲಿಯಲ್ಲಿರುವ ‘ಚಾರ್ವಿತಾ ಮೆಡೋಸ್‌’ ಎಂಬ ಗೇಟೆಡ್‌ ವಿಲ್ಲಾ ಕಮ್ಯುನಿಟಿಯಲ್ಲಿ 3ಡಿ ಪ್ರಿಂಟೆಡ್‌ ದೇಗುಲವನ್ನು 3800 ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಇದಕ್ಕಾಗಿ ಅಪ್ಸುಜಾ ಇನ್‌ಫ್ರಾಟೆಕ್‌ ಕಂಪನಿಯು (Apsuja Infratech Company) ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್‌ (Simpliforge Creations) ಜತೆ ಒಪ್ಪಂದ ಮಾಡಿಕೊಂಡಿದೆ. ಈ ದೇಗುಲದಲ್ಲಿ ಮೂರು ಭಾಗಗಳು ಇರುತ್ತವೆ. ಮೂರು ಗರ್ಭಗುಡಿಗಳು ಇರುತ್ತವೆ. ಮೋದಕ ಆಕಾರದಲ್ಲಿ (Modaka shape) ಗಣೇಶನ ದೇಗುಲ, ಕಮಲದ ಆಕಾರದಲ್ಲಿ ಪಾರ್ವತಿಯ ಗುಡಿ (Parvati temple) ಹಾಗೂ ಶಿವಾಲಯ ಪರಿಕಲ್ಪನೆಯಲ್ಲಿ ಶಿವನ ದೇಗುಲ ಇರುತ್ತದೆ. ಶಿವಾಲಯ ಹಾಗೂ ಮೋದಕ ಕಾಮಗಾರಿ ಮುಕ್ತಾಯವಾಗಿದೆ. ಕಮಲ ಆಕಾರದ ದೇಗುಲದ ಕಾಮಗಾರಿ ನಡೆಯುತ್ತಿದೆ. ಮೋದಕ ಆಕಾರದ ಗಣೇಶನ ಗುಡಿಯನ್ನು 10 ದಿನಗಳ ಕಾಲ 6 ಗಂಟೆಗಳಲ್ಲಿ ನಿರ್ಮಿಸಲಾಗಿದೆ.

Yangqu Hydropower: ಕೃತಕ ಬುದ್ಧಿಮತ್ತೆ ಬಳಸಿ 3ಡಿ ಮುದ್ರಿತ ಅಣೆಕಟ್ಟು ನಿರ್ಮಿಸಲಿರುವ ಚೀನಾ

ಸಾಂಪ್ರದಾಯಿಕ ವಿಧಾನದಲ್ಲಿ ಯಾವ ವಿನ್ಯಾಸವನ್ನು ಮಾಡುವುದು ಕಷ್ಟಇದೆಯೋ ಅದನ್ನು 3ಡಿ ತಂತ್ರಜ್ಞಾನ ಬಳಸಿ ಸುಲಭವಾಗಿ ಮಾಡಬಹುದಾಗಿದೆ ಎಂದು ಸಿಂಪ್ಲಿಫೋರ್ಜ್‌ ಕಂಪನಿಯ ಸಿಇಒ ಧ್ರುವ್‌ ಗಾಂಧಿ (Dhruv Gandhi) ತಿಳಿಸಿದ್ದಾರೆ.

ಭಾರತೀಯ ಸೇನೆಯಿಂದ ನಿರ್ಮಾಣವಾಯ್ತು ಮೊದಲ 3D ಮನೆ

ಗುಜರಾತ್‌ನಲ್ಲಿ ಭಾರತೀಯ ಸೇನೆ ಜವಾನರಿಗಾಗಿ ಮೊದಲ 3D ಮನೆಗಳನ್ನು ನಿರ್ಮಿಸಿದೆ. ಗುಜರಾತ್‌ನ ಗಾಂಧಿನಗರದಲ್ಲಿರುವ ಸೌತ್ ವೆಸ್ಟರ್ನ್ ಏರ್ ಕಮಾಂಡ್‌ನಲ್ಲಿ ಮೊಟ್ಟಮೊದಲ 3ಡಿ-ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ. ಹೆಂಚು, ಮುಳಿಹುಲ್ಲು, ಮಾಡಿನ ಮನೆಗಳ ಕಾಲ ಹೋಗಿ ಎಷ್ಟು ಕಾಲಗಳಾಗಿದೆ. ಈಗ ಎಲ್ಲಿ ನೋಡಿದರಲ್ಲಿ ಕಾಂಕ್ರೀಟ್ ಮನೆಗಳು, ಅದರಲ್ಲೂ ಈಗ ತ್ರಿಡಿ ತಂತ್ರಜ್ಞಾನದ ಯುಗವಿದು. ಚಿತ್ರಗಳಲ್ಲಿ, ಸಿನಿಮಾಗಳಲ್ಲಿ ನೀವು ತ್ರಿಡಿ ತಂತ್ರಜ್ಞಾನವನ್ನು ನೋಡಿರಬಹುದು. ಆದರೆ ಈಗ ಮನೆಗಳಿಗೂ ತ್ರಿಡಿ ತಂತ್ರಜ್ಞಾನ ಕಾಲಿಟ್ಟಿದೆ. ಹೌದು ಈಗ ಭಾರತೀಯ ಸೇನೆಯು ಇತ್ತೀಚೆಗೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಿಬ್ಬಂದಿಗೆ ಎರಡು ಮನೆಗಳನ್ನು ನಿರ್ಮಿಸಿದೆ. ಗುಜರಾತ್‌ನ ಗಾಂಧಿನಗರದಲ್ಲಿರುವ ಸೌತ್ ವೆಸ್ಟರ್ನ್ ಏರ್ ಕಮಾಂಡ್‌ನಲ್ಲಿ ಮೊಟ್ಟಮೊದಲ 3ಡಿ ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ.

ಭಾರತೀಯ ಸೇನೆಯ (Indian Army) ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು (MES) ಎರಡು ಮನೆಗಳನ್ನು ನಿರ್ಮಿಸಲು ನಾಲ್ಕು ವಾರಗಳನ್ನು ತೆಗೆದುಕೊಂಡಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಇಂಜಿನಿಯರ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ( Harpal Singh) ಅವರ ಉಪಸ್ಥಿತಿಯಲ್ಲಿ ಈ 3ಡಿ ಮುದ್ರಿತ ಮನೆಗಳನ್ನು ಉದ್ಘಾಟಿಸಲಾಯಿತು.ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು 3D ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ನಾಲ್ಕು ವಾರಗಳಲ್ಲಿ ಎರಡು ಮನೆಗಳನ್ನು ನಿರ್ಮಿಸಿವೆ. ಭಾರತೀಯ ಸೇನೆಯು ಹೊಸದಾಗಿ ನಿರ್ಮಿಸಲಾದ ಈ ಕ್ವಾರ್ಟರ್ಸ್‌ನ ಅದ್ಭುತ ಫೋಟೋಗಳನ್ನು ವೀಡಿಯೊದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಬೆಂಗ್ಳೂರಲ್ಲಿ ದೇಶದ ಮೊದಲ ‘3ಡಿ’ ಪ್ರಿಂಟಿಂಗ್‌ ಅಂಚೆ ಕಚೇರಿ ನಿರ್ಮಾಣ..!

3ಡಿ ಪ್ರಿಂಟಿಂಗ್ ಪ್ರಕ್ರಿಯೆಯೊಂದಿಗೆ ಮನೆಗಳ ನಿರ್ಮಾಣವನ್ನು ಹೇಗೆ ಕೈಗೊಳ್ಳಲಾಗಿದೆ ಎಂಬುದರ ವೇಗದ ಆವೃತ್ತಿಯನ್ನು ವೀಡಿಯೊ ತೋರಿಸಿದೆ. ಮೊದಲಿಗೆ, ಅಡಿಪಾಯವನ್ನು ಹಾಕಲಾಯಿತು. ನಂತರ ಬೃಹತ್ 3D ಮುದ್ರಕಗಳನ್ನು ಬಳಸಿ ಮಾಡಿದ ಗೋಡೆಗಳನ್ನು ಇರಿಸಲಾಯಿತು. ಎಲ್ಲವನ್ನೂ ಒಟ್ಟಿಗೆ ಜೋಡಿಸಿ ನಂತರ ಅಂತಿಮ ಸ್ಪರ್ಶ ನೀಡಲಾಯಿತು. ವೀಡಿಯೊದಲ್ಲಿ ಮನೆಗಳ ಒಳಭಾಗವನ್ನು ಸಹ ತೋರಿಸಲಾಗಿದೆ. 

click me!