ವಿಜಯಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ನೆನಪಿಗೆ ಜಾತ್ರೆ ಮೀರಿಸುವ ಕಾರ್ಯಕ್ರಮ

By Sathish Kumar KH  |  First Published Jun 1, 2023, 10:18 PM IST

ರಾಜ್ಯದಲ್ಲಿ ದೇವರು ಹಾಗೂ ದೇವತಾ ಮನುಷ್ಯರ ಹೆಸರಿನಲ್ಲಿ ಪೂಜೆ, ಜಾತ್ರೆಗಳನ್ನು ಮಾಡಲಾಗುತ್ತದೆ. ಆದರೆ, ವಿಜಯಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಇಂಚಗೇರಿ ಮಠದ ಮಾಧವಾನಂದ ಪ್ರಭು ಹೆಸರಲ್ಲಿ ಜಾತ್ರೆ ರೀತಿಯಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ. 


ವರದಿ- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಜೂ 01): ದೇವರಿಗೆ ಜಾತ್ರೆಗಳು ನಡೆಯುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ದೇವರ ತೇರು ಎಳೆದು ಜಾತ್ರೆ ನಡೆಸಿ ಸಂಭ್ರಮಿಸೋದು ವಾಡಿಕೆ. ಆದರೆ, ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿಯೋಗಿಯ ಜಾತ್ರೆ ನಡೆಯುತ್ತಿದೆ. ಅದು ಕೂಡ ಸಪ್ತಾಹ ರೀತಿಯಲ್ಲಿ ನಡೆಯುತ್ತಿದ್ದ ಪುಣ್ಯಸ್ಮರಣೆ ಈಗ ಜಾತ್ರೆ ರೀತಿಯಲ್ಲಿ ನಡೆಯುತ್ತಿದೆ. 

Latest Videos

undefined

ಕ್ರಾಂತಿಯೋಗಿ ಮಹಾದೇವರ ಪುಣ್ಯಸ್ಮರಣೆ: ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ಸ್ವಾತಂತ್ರ್ಯ ಸೇನಾನಿ  ಶ್ರೀಗಳ ಸ್ಮರಣೋತ್ಸವ ಜಾತ್ರೆಯಂತೆ ಸಂಭ್ರಮದಿಂದ ನಡೀತು. ಬ್ರಿಟಿಷರ ವಿರುದ್ಧ ಹೋರಾಡಿದ್ದ ಸಶಸ್ತ್ರವಾಗಿ ಹೋರಾಟ ನಡೆಸಿದ್ದ ಚಡಚಣ ತಾಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದ ಮಾಧವಾನಂದ ಶ್ರೀಗಳು 43ನೇ ಪುಣ್ಯ ಸ್ಮರಣೆ ಅಂಗವಾಗಿ‌ ದೇಶ-ವಿದೇಶಗಳಲ್ಲಿರುವ ಅವರ ಅಸಂಖ್ಯಾತ ಭಕ್ತರು ಮೂರು ದಿನಗಳ ವರೆಗೆ ಜಾತ್ರೆಯನ್ನ ವಿಜೃಂಭಣೆಯಿಂದ ಆಚರಿಸಿದರು. ಆರಾಧನೆಯ ಕೊನೆಯ ದಿನವಾದ ಇಂದು ಮಠದ ಮೂಲ ಪುರುಷರು ಗುರುಲಿಂಗ ಜಂಗಮ ಮಹಾರಾಜರ ಗದ್ದುಗೆಯಿಂದ ತೇರಿನಲ್ಲಿಟ್ಟಿದ್ದ  ಮಾಧವಾನಂದ ಶ್ರೀಗಳ ಕಂಚಿನ ಮೂರ್ತಿಯನ್ನ ಮೆರವಣಿಗೆ ಮಾಡಲಾಯಿತು. ಮಠದ ಸದ್ಗುರುಗಳಾದ ರೇವಣಸಿದ್ದೇಶ್ವರ ಮಹಾರಾಜರ ನೇತೃತ್ವದಲ್ಲಿ ಪುಣ್ಯಸ್ಮರಣೆ ಜರುಗಿತು.

ನಡೆದಾಡುವ ದೇವರನ್ನೇ ವಿಧಾನಸೌಧದಿಂದ ಹೊರಹಾಕಿದ ಕಾಂಗ್ರೆಸ್‌! ಕೇಸರಿ ಮೇಲಿನ ದ್ವೇಷವೆಂದ ಬಿಜೆಪಿ

ಸ್ವಾತಂತ್ರ್ಯಕ್ಕಾಗಿ ಜೀವ ಪಣಕ್ಕಿಟ್ಟು ಹೋರಾಡಿದ್ದ ಮಹಾದೇವರು:  1945ರ ವೇಳೆ ಮಹಾತ್ಮಾ ಗಾಂಧೀಜಿ ಕರೆಕೊಟ್ಟಿದ್ದ ಕಾನೂನು ಭಂಗ ಚಳುವಳಿ, ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹಗಳಲ್ಲಿ ಮಾಧವಾನಂದರು ತಮ್ಮ ಶಿಷ್ಯ ಬಳಗದೊಂದಿಗೆ ಪಾಲ್ಗೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟದ ಧಿಕ್ಕನ್ನೆ ಬದಲಾಯಿಸಿದ್ದರು. ವಿಜಯಪುರ, ಬಾಗಲಕೋಟೆ, ಹಳೆ ದಾರವಾಡ, ದಾವಣಗೇರೆ ಭಾಗಗಳಲ್ಲಿ ಗುಪ್ತ ಸಭೆಗಳನ್ನ ನಡೆಸಿ ತಮ್ಮ ಶಿಷ್ಯರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುತ್ತಿದ್ದರು.

ಸುಭಾಷಚಂದ್ರ ಬೋಸ್ ಜೊತೆಗೆ ಗುಪ್ತ ಸಭೆ: 1945 ರ ವೇಳೆ ಹುಬ್ಬಳ್ಳಿಯ ಗಿರೀಶ ಆಶ್ರಮದಲ್ಲಿ ನಡೆದ ಗುಪ್ತ ಸಭೆಗಳಲ್ಲಿ ಸುಭಾಷ್ ಚಂದ್ರ ಬೋಸ್ ಕೂಡ ಪಾಲ್ಗೊಂಡು ಸ್ವಾತಂತ್ರ್ಯ ಹೋರಾಟದ ಕುರಿತು ಮಾಧವಾನಂದ ಪ್ರಭುಗಳೊಂದಿಗೆ ಚರ್ಚಿಸಿದ್ದರು. ಗೋವಾ ವಿಮೋಚನೆಗಾಗಿ, ಪೋರ್ಚುಗೀಜರ ಹಾವಳಿಯ ವಿರುದ್ಧ ಮಹಾದೇವರು ಹೋರಾಟ ನಡೆಸಿದ್ದರು. ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ಬದುಕನ್ನೆ ಮೀಸಲಿಟ್ಟು ತಮ್ಮ 48 ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.

25 ಸಾವಿರ ಅಂತರ್ ಜಾತಿ-ಧರ್ಮಗಳ ವಿವಾಹ: ಇನ್ನು ಜಾತಿ, ಧರ್ಮಗಳ ನಡುವೆ ಸಂಘರ್ಷಗಳು ನಡೆಯುತ್ತಿದ್ದ ವೇಳೆಯಲ್ಲಿ ಮಾಧವಾನಂದರು ತಮ್ಮ ಮಠದ ಸಪ್ತಾಹಗಳಲ್ಲಿ 25 ಸಾವಿರಕ್ಕೂ ಅಧಿಕ ಅಂತರ್ ಜಾತಿ, ಧರ್ಮಗಳ ವಿವಾಹ ಮಾಡಿದ್ದಾರೆ. ಕೆಲ ಮೂಲಭೂತವಾಧೀಗಳು ಅವರ ನಡೆಯ ಬಗ್ಗೆ ಸಂಶಯ ವ್ಯಕ್ತ ಪಡೆಸಿದಾಗ ತಮ್ಮ ಸ್ವಂತ ಮೊಮ್ಮಗಳನ್ನ ಮುಸ್ಲಿಂದ ಕುಟುಂಬಕ್ಕೆ ಮದುವೆ ಮಾಡಿಕೊಟ್ಟು, ಮುಸ್ಲಿಂ ಧರ್ಮಿಯ ಹೆಣ್ಣು ಮಗಳನ್ನ ತಮ್ಮ ಅಣ್ಣನ ಮಗನಿಗೆ ಕೊಟ್ಟು ಮದ್ವೆ ಮಾಡಿದ್ದರು. ಮೇ 29ರಿಂದ ಮೇ 31ವರೆಗೆ ಮೂರು ದಿನಗಳ ಕಾಲ ಸ್ಮರಣೋತ್ಸವ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನೂತನವಾಗಿ ಆಯ್ಕೆಯಾದ ಹಲವಾರು ಶಾಸಕರು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡರು. ಅಥಣಿ ಶಾಸಕ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ರಾಯಭಾಗ ಶಾಸಕ ದುರ್ಯೋಧನ ಐಹೋಳೆ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ‌‌ ಸೇರಿ ಅನೇಕರು ಪಾಲ್ಗೊಂಡರು. 

ಇಂಚಗೇರಿ ಗುರುಗಳ ಅಂತಃಕರಣದಿಂದಲೇ ನನ್ನ ಗೆಲವು:  ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಶ್ರೀಗಳ ಅಂತಃಕರಣ ಪ್ರೇರಣೆಯಿಂದಾಗಿ ರಾಜ್ಯದಲ್ಲಿ ಅತಿ ಹೆಚ್ಚು ಮತ ಪಡೆದು ಗೆದ್ದವರಲ್ಲಿ ಎರಡನೇ ಸ್ಥಾನ ಪಡೆದಿದ್ದೇನೆ ಎಂದರು. ಹುಟ್ಟು ಸಾವಿನ ಮಧ್ಯೆ ಬದುಕಿನಲ್ಲಿ ನಾವೇನು ಪರೋಪಕಾರಿ ಮಾಡಿದ್ದೇವೆ ಅನ್ನೋದು ಮುಖ್ಯ, ಅಧಿಕಾರ, ಅಂತಸ್ತು ಶಾಶ್ವತವಲ್ಲ. ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು ಅಂತಃಕರಣ ಸದಾಕಾಲವೂ ನನ್ನ ಮೇಲಿದೆ ಎಂದರು. ಅಂತ್ಯಕಾಲದಲ್ಲಿ ಜನ ನಮ್ಮನ್ನು ಸ್ಮರಿಸುವುದು ಆಗಿರಬೇಕು, ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ನನಗೆ ಇಂಚಗೇರಿ ಶ್ರೀಗಳಿಂದ ಸನ್ಮಾನ ಆಗಿದ್ದು, ಇದು ನನಗೆ ರಕ್ಷಾ ಕವಚವಿದ್ದಂತೆ ಎಂದರು.

ನಮ್ಮನ್ನ ಬಳಸ್ಕೊಂಡು ಅಕ್ರಮವಾಗಿ ಹಣ ಗಳಿಸಿರೋ ಜನಾರ್ಧರೆಡ್ಡಿ, ನಮಗೇ ರಣಹೇಡಿಗಳು ಅಂತಾನೆ!

ನಾನು ಇಂಚಗೇರಿ ಮಠದ ಬಲದ ಮೇಲೆ ಗೆದ್ದಿದ್ದೀನಿ:  ವೇದಿಕೆಯಲ್ಲಿ ಮಾತನಾಡಿದ ರಾಯಭಾರ ಬಿಜೆಪಿ ಶಾಸಕ ದುರ್ಯೋಧನ ಐಹೋಳೆ ನಾನು ಇಂಚಗೇರಿ ಮಠದ ಕಟ್ಟಾ ಶಿಷ್ಯ. ಮೊದಲಿನಿಂದಲೂ ಇಂಚಗೇರಿ ಸಾಂಪ್ರದಾಯದ ಜೊತೆಗೆ ನನ್ನ ನಂಟಿದೆ. ಕಾಂಗ್ರೆಸ್ ನ ಬಹಳ ಶಾಸಕರು ಗ್ಯಾರಂಟಿಗಳ ಮೇಲೆ ಗೆದ್ದರೆ, ನಾನು ಇಂಚಗೇರಿ ಮಠದ ಗುರುಗಳ ಆಶೀರ್ವಾದದಿಂದ ಗೆದ್ದಿದ್ದೇನೆ. ಬಳಿಕ ಮಠಕ್ಕೆ ಭೇಟಿ ನೀಡಿದ ಎಲ್ಲ‌ ನೂತನ ಶಾಸಕರು ಮಠದಲ್ಲಿರುವ ಎಲ್ಲ ಗುರುಗಳ‌ ಗದ್ದುಗೆಗಳಿಗೆ ಭೇಟಿ ನೀಡಿ ನಮಿಸಿದರು. ಕಾರ್ಯಕ್ರಮದಲ್ಲಿ ಮಠದ ಪೀಠಾಧಿಪತಿ ರೇವಣಸಿದ್ದೇಶ್ವರ ಸ್ವಾಮೀಜಿ, ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ,ನಾಗಠಾಣ ಮೀಸಲು ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ್ ಸೇರಿದಂತೆ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದರು.

click me!