Zodiac Sign: ಸಂಗಾತಿ ಒತ್ತಡ ಕಡಿಮೆ ಮಾಡೋಕೆ ಹಣಕಾಸು ಹೊಣೆ ತೆಗೆದುಕೊಳ್ಳೋ ರಾಶಿಗಳಿವು!

By Suvarna NewsFirst Published Jun 23, 2023, 5:42 PM IST
Highlights

ಪತಿಯಾಗಲೀ ಪತ್ನಿಯಾಗಲೀ ಇಬ್ಬರೂ ದುಡಿಯುವಾಗ ಪರಸ್ಪರ ಹಣಕಾಸು ಜವಾಬ್ದಾರಿಗಳನ್ನು ಶೇರ್ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಕೆಲವು ರಾಶಿಗಳ ಜನರು ಸಂಗಾತಿಯ ಎಲ್ಲ ಖರ್ಚುವೆಚ್ಚಗಳನ್ನೂ, ಮನೆಯ ಆಗುಹೋಗುಗಳನ್ನೂ ತಾವೇ ನಿರ್ವಹಣೆ ಮಾಡುತ್ತಾರೆ. ಸಂಗಾತಿಯ ಮೇಲೆ ಹಣಕಾಸು ಒತ್ತಡ ಕಡಿಮೆ ಮಾಡಬೇಕು ಎನ್ನುವ ಸದುದ್ದೇಶ ಹೊಂದಿರುತ್ತಾರೆ.

ತಮ್ಮ ಪತಿ ಅಥವಾ ಪತ್ನಿಗೆ ಕೆಲವು ಜನ ಸಾಕಷ್ಟು ಬೆಂಬಲ ನೀಡುತ್ತಾರೆ. ಅವರ ಗುರಿಗಳನ್ನು ಸಾಧಿಸಲು ಎಷ್ಟು ಬೇಕೋ ಅಷ್ಟು ಪ್ರೋತ್ಸಾಹದೊಂದಿಗೆ ವಿವಿಧ ರೀತಿಯ ನೆರವೂ ನೀಡುತ್ತಾರೆ. ಪತಿಗೆ ಹಣಕಾಸು ಸಹಕಾರ ನೀಡುವುದೂ ಇದರಲ್ಲಿ ಒಂದು. ಸಾಂಗತ್ಯವೆಂದರೆ, ಎಲ್ಲವನ್ನೂ ಶೇರ್ ಮಾಡಿಕೊಳ್ಳುವುದು ಎಂದು ನಂಬುವ ಈ ಜನ ಹಣಕ್ಕಾಗಿ ಎಂದೂ ಸಂಗಾತಿಯನ್ನು ಪೀಡಿಸುವುದಿಲ್ಲ. ಬದಲಿಗೆ, ತಾವೇ ಅವರಿಗಾಗಿ ಸಾಕಷ್ಟು ವೆಚ್ಚ ಮಾಡುತ್ತಾರೆ. ಮನೆ ವೆಚ್ಚಗಳಿಗೆ, ತಿಂಗಳ ರೇಷನ್ ಗೂ ಪತಿಯನ್ನು ಕೇಳದ ಮಹಿಳೆಯರಿದ್ದಾರೆ. ಹಾಗೆಯೇ ಪುರುಷರೂ ಇದ್ದಾರೆ. ಆದರೆ, ನಮ್ಮ ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಇದು ಪುರುಷರ ಜವಾಬ್ದಾರಿ ಆಗಿರುವುದರಿಂದ ಅವರಿಂದ ಹಣಕಾಸು ನೆರವು ಪಡೆಯದೇ ಮನೆ ನಡೆಸಿಕೊಂಡು ಹೋಗುವ ಮಹಿಳೆಯರ ಪಾತ್ರ ಇಲ್ಲಿ ಮುಖ್ಯವೆನಿಸುತ್ತದೆ. ತಮ್ಮ ಸಂಗಾತಿ ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಅವರಿಂದ ಏನನ್ನೂ ಬಯಸದ ನಿಸ್ವಾರ್ಥಿಯಾಗಿರುತ್ತಾರೆ. ಅಷ್ಟೇ ಏಕೆ? ಅವರಿಂದ ಬಿಡಿಗಾಸನ್ನೂ ಪಡೆಯದೇ ಸಹಕಾರ ನೀಡುತ್ತಾರೆ. ಈ ಗುಣವನ್ನು ಕೆಲವು ರಾಶಿಗಳ ಜನರಲ್ಲಿ ಮಾತ್ರ ಕಾಣಬಹುದು.

•    ತುಲಾ (Libra)
ಸಾಕಷ್ಟು ಜನ ತಮ್ಮ ವೃತ್ತಿಯ (Profession) ನಡುವೆ ಕುಟುಂಬಕ್ಕೆ ಹೆಚ್ಚಿನ ಸಮಯ (Time) ನೀಡುವುದಿಲ್ಲ. ಆದರೆ, ತುಲಾ ರಾಶಿಯ ಜನ ಹಾಗಲ್ಲ. ಎಂಥದ್ದೇ ವೃತ್ತಿ, ಉದ್ಯೋಗ, ಉದ್ಯಮದಲ್ಲಿದ್ದರೂ ಸಂಗಾತಿಗೆ ಸಮಯ ನೀಡುತ್ತಾರೆ. “ಐ ಲವ್ ಯೂ’ ಎನ್ನುತ್ತ ಯಾವುದಾದರೂ ರೆಸ್ಟೋರೆಂಟಿಗೆ ಕರೆದೊಯ್ಯಲು ಇವರ ಬಳಿ ಸಮಯವಿರುತ್ತದೆ. ಸದಾಕಾಲ ತಾವೇ ಹಣ (Money) ನೀಡುತ್ತಾರೆ. ತಮ್ಮ ಸಂಗಾತಿ ಹಣಕ್ಕಾಗಿ ತಮ್ಮ ಮೇಲೆ ಆಧರಿಸಿದ್ದಾರೆ ಎನ್ನುವುದನ್ನು ಅರಿತುಕೊಂಡು ವರ್ತಿಸುತ್ತಾರೆ. ಸಂಗಾತಿಯ (Partner) ಬಗ್ಗೆ ಸಾಕಷ್ಟು ಸಹಾನುಭೂತಿ ಹೊಂದಿರುತ್ತಾರೆ. ಬಿಕ್ಕಟ್ಟಿನ ಸನ್ನಿವೇಶಗಳಲ್ಲೂ ತಾಳ್ಮೆ ತೋರುತ್ತಾರೆ. ಸಂಗಾತಿಯ ಪ್ರತಿ ಅಗತ್ಯಗಳನ್ನೂ ಆದ್ಯತೆ ಮೇರೆಗೆ ಪೂರೈಸುತ್ತಾರೆ. 

Latest Videos

ಇವರದು ಸೂಜಿಗಲ್ಲಿನ ನೋಟ: ಈ ರಾಶಿಯವರು ಎಲ್ಲರನ್ನೂ ಆಕರ್ಷಿಸುತ್ತಾರೆ..!

•    ಸಿಂಹ (Leo)
ಸ್ನೇಹಪರರಾಗಿರುವ ಸಿಂಹ ರಾಶಿಯ ಜನ ತಮ್ಮ ಪತಿ (Husband) ಅಥವಾ ಪತ್ನಿಯ (Wife) ಅತಿ ಸಣ್ಣದೊಂದು ಅಗತ್ಯವನ್ನೂ ಈಡೇರಿಸುವ ಭಾವನೆ ಹೊಂದಿರುತ್ತಾರೆ. ಜನರೊಂದಿಗೆ ಅತ್ಯುತ್ತಮವಾಗಿ ವ್ಯವಹರಿಸುವಂತೆಯೇ ಸಂಗಾತಿಯೊಂದಿಗೂ ಕಾಳಜಿಯಿಂದ (Care) ವರ್ತಿಸುತ್ತಾರೆ. ಸಂಪೂರ್ಣ ಹಣಕಾಸು ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುತ್ತಾರೆ. ಸೌಜನ್ಯದಿಂದ ಕಾಣುತ್ತಾರೆ. ಮಕ್ಕಳು ಮತ್ತು ಸಂಗಾತಿ ಖುಷಿಯಾಗಿರಲು ತಾವು ಗಳಿಸಿದ ಹಣವನ್ನು ವಿನಿಯೋಗಿಸಲು ಹಿಂದೆಮುಂದೆ ನೋಡುವುದಿಲ್ಲ. ತಾವೇ ಕುಟುಂಬದ (Family) ಪ್ರಮುಖ ಆದಾಯ ಮೂಲಕ ಎನ್ನುವುದನ್ನು ಅರಿತು ಡಾಮಿನೇಟ್ ಮಾಡುವುದಿಲ್ಲ.

•    ಕರ್ಕಾಟಕ (Cancer)
ಈ ರಾಶಿಯವರು ಮದುವೆಯಾದ (Marriage) ಬಳಿಕ ಸಂಗಾತಿಯನ್ನು ಎಂದಿಗೂ ಟೇಕನ್ ಫಾರ್ ಗ್ರ್ಯಾಂಟೆಡ್ ರೀತಿ ನೋಡುವುದಿಲ್ಲ. ಬದಲಿಗೆ, ನಂಬಿಕೆ ಮತ್ತು ಗುರಿಗಳನ್ನು ಪರಸ್ಪರ ಹಂಚಿಕೊಳ್ಳಬೇಕು ಎಂದು ಬಯಸುತ್ತಾರೆ. ತಮ್ಮ ಸಂಗಾತಿಗೆ ತಮ್ಮಿಂದ ಸ್ವಲ್ಪ ಅಂತರ (Space) ಬೇಕು ಎನ್ನುವುದನ್ನು ಅರಿತು ಅದನ್ನು ದೊರಕಿಸಿಕೊಡುತ್ತಾರೆ. ಹಾಗೆಯೇ, ಹಣಕಾಸು (Financial) ವಿಚಾರದಲ್ಲೂ ಸಹ ಸಂಗಾತಿಯನ್ನು ಸಂಪೂರ್ಣವಾಗಿ ರಕ್ಷಿಸುತ್ತಾರೆ. ಜಂಟಿ ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಉಳಿತಾಯ ಆರಂಭಿಸುತ್ತಾರೆ. ಸಂಗಾತಿ ಯಾವಾಗ ಬೇಕಿದ್ದರೂ ಹಣ ತೆಗೆಯುವ ಸ್ವಾತಂತ್ರ್ಯ (Freedom) ಹೊಂದಿರುತ್ತಾರೆ. 

Zodiac Sign: ಲೈಂಗಿಕವಾಗಿ ಹೆಚ್ಚು ಆ್ಯಕ್ಟಿವ್‌ ಆಗಿರೋ ರಾಶಿಗಳ ಜನರು ಇವರು

•    ಮಕರ (Capricorn)
ಮಕರ ರಾಶಿಯ ಜನ ತಮ್ಮ ಸಂಗಾತಿಯೊಂದಿಗೆ ಅತ್ಯಂತ ಶಕ್ತಿಯುತ, ಸದೃಢ ಬಾಂಧವ್ಯ ಹೊಂದಿರುತ್ತಾರೆ. ಸಂಗಾತಿಗಾಗಿ ಎಷ್ಟು ಬೇಕಿದ್ದರೂ ಖರ್ಚು ಮಾಡುತ್ತಾರೆ. ಸಂಗಾತಿಗೆ ಬೇಕು-ಬೇಡದುದನ್ನೆಲ್ಲ ಖರೀದಿಸಿ ತರುತ್ತಾರೆ. ಈ ಮೂಲಕ ಇವರು ತಮ್ಮ ಸಂಗಾತಿಯನ್ನು ಓಲೈಸಲು ಇಷ್ಟಪಡುತ್ತಾರೆ. ಸಂಗಾತಿಯ ಹಣಕಾಸು ಒತ್ತಡ (Stress) ಕಡಿಮೆ ಮಾಡಬೇಕು ಎನ್ನುವುದು ಇವರ ಉದ್ದೇಶವಾಗಿರುತ್ತದೆ.

click me!