ಮಾನವೀಯತೆ ಎಂಬುದು ಅಮೂಲ್ಯವಾದ ಆಸ್ತಿ. ಈ ಗುಣ ಎಲ್ಲರಲ್ಲಿ ಇರಲ್ಲ. ಕಾಳಜಿ ತೋರುವುದರಲ್ಲಿ ಹಾಗೂ ಸಹಾಯ ಮಾಡುವುದರಲ್ಲಿ ಕೆಲವರು ಮಾತ್ರ ಸದಾ ಮುಂದಿರುತ್ತಾರೆ. ಅವರು ತಮ್ಮವರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಕಾಳಜಿಯುಳ್ಳ ಮತ್ತು ಬೆಂಬಲಕ್ಕೆ ಹೆಸರುವಾಸಿಯಾದ 5 ರಾಶಿಚಕ್ರ ಚಿಹ್ನೆಗಳು ಇವೆ.
ಮಾನವೀಯತೆ ಎಂಬುದು ಅಮೂಲ್ಯವಾದ ಆಸ್ತಿ. ಈ ಗುಣ ಎಲ್ಲರಲ್ಲಿ ಇರಲ್ಲ. ಕಾಳಜಿ ತೋರುವುದರಲ್ಲಿ ಹಾಗೂ ಸಹಾಯ ಮಾಡುವುದರಲ್ಲಿ ಕೆಲವರು ಮಾತ್ರ ಸದಾ ಮುಂದಿರುತ್ತಾರೆ. ಅವರು ತಮ್ಮವರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಕಾಳಜಿಯುಳ್ಳ ಮತ್ತು ಬೆಂಬಲಕ್ಕೆ ಹೆಸರುವಾಸಿಯಾದ 5 ರಾಶಿಚಕ್ರ (Zodiac) ಚಿಹ್ನೆಗಳು ಇವೆ. ಅವುಗಳ ಮಾಹಿತಿ ಇಲ್ಲಿದೆ.
ಮನುಷ್ಯನಿಗೆ ಕಾಳಜಿ ಹಾಗೂ ಸಹಾಯ ಮಾಡಲು ಗುಣ ಇರಬೇಕು. ಕೆಲವರಲ್ಲಿ ಇತರರನ್ನು ಪ್ರೀತಿ (love) ಸುವ ಮತ್ತು ಕಾಳಜಿ ವಹಿಸುವ ಸಾಮರ್ಥ್ಯ ಹುಟ್ಟಿನಿಂದಲೇ ಬಂದಿರುತ್ತದೆ. ಅದಕ್ಕೆ ಕಾರಣ ರಾಶಿಚಕ್ರ. ಯಾವ ರಾಶಿಯವರಿಗೆ ಈ ಗುಣ ಇದೆ ಎಂಬ ಮಾಹಿತಿ ಇಲ್ಲಿದೆ.
ಕಟಕ ರಾಶಿ (Cancer)
ಇವರು ಸಾಮಾನ್ಯವಾಗಿ ಕಾಳಜಿ ಮತ್ತು ಪೋಷಣೆಯ ಮಾಡುವ ವ್ಯಕ್ತಿಗಳು. ಇವರು ಇತರರೊಂದಿಗೆ ಭಾವನಾತ್ಮಕ (Emotional) ವಾಗಿ ಹೊಂದಿಕೊಳ್ಳುತ್ತಾರೆ. ಇವರು ಸಹಾನುಭೂತಿಗಳು. ತಮ್ಮ ಪ್ರೀತಿಪಾತ್ರರಿಗೆ ಅಚಲವಾದ ಬೆಂಬಲವನ್ನು ನೀಡಲು ಯಾವಾಗಲೂ ಸಿದ್ಧವಾಗಿರುತ್ತಾರೆ. ಇವರು ಬೆಚ್ಚಗಿನ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಆದ್ಯತೆ ನೀಡುತ್ತಾರೆ. ಇವರ ಸಹಜವಾದ ದಯೆ ಮತ್ತು ಸಹಾನುಭೂತಿ (Sympathy) ಅವರನ್ನು ಅಸಾಧಾರಣ ಆರೈಕೆದಾರರನ್ನಾಗಿ ಮಾಡುತ್ತದೆ.
ಮೀನ ರಾಶಿ (Pisces)
ಮೀನ ರಾಶಿಯವರು ತುಂಬಾ ಸಹಾನುಭೂತಿಯ ವ್ಯಕ್ತಿಗಳು. ಇವರು ಇತರರ ನೋವನ್ನು ಅರ್ಥಮಾಡಿಕೊಳ್ಳುವ ಮತ್ತು ಪ್ರಾಮಾಣಿಕ (honest) ಬೆಂಬಲವನ್ನು ನೀಡುವ ಸಹಜ ಸಾಮರ್ಥ್ಯವನ್ನು ಹೊಂದಿದ್ದಾರೆ. ನಿಸ್ವಾರ್ಥ ಮತ್ತು ತ್ಯಾಗದ ಗುಣ ಇವರದು. ದುಃಖವನ್ನು ನಿವಾರಿಸಲು ಮತ್ತು ಸುತ್ತಮುತ್ತಲಿನ ಜನರನ್ನು ಸಾಂತ್ವನಗೊಳಿಸುತ್ತಾರೆ. ಇವರು ತಮ್ಮನ್ನು ನಂಬಿದವರ ಕಾಳಜಿಯನ್ನು ಸದಾ ಮಾಡುತ್ತಾರೆ.
ವೃಷಭ ರಾಶಿ (Taurus)
ವೃಷಭ ರಾಶಿಯವರು ವಿಶ್ವಾಸಾರ್ಹರು ಮತ್ತು ಯಾವಾಗಲೂ ಸಹಾಯ ಹಸ್ತವನ್ನು ನೀಡಲು ಸಿದ್ಧರಿರುತ್ತಾರೆ. ವೃಷಭ ರಾಶಿಯವರು ತಮ್ಮ ಪ್ರೀತಿಪಾತ್ರರ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಸದಾ ಪ್ರೀತಿಪಾತ್ರರಿಗೆ ಬೆಂಬಲವನ್ನು ಒದಗಿಸುತ್ತಾರೆ. ಈ ಗುಣ ವಿಶ್ವಾಸಾರ್ಹ (Reliable) ಮತ್ತು ಕಾಳಜಿಯುಳ್ಳ ಪಾಲುದಾರರನ್ನಾಗಿ ಮಾಡುತ್ತದೆ. ಇವರು ತಮ್ಮ ಸ್ವಂತ ಸಂತೋಷವನ್ನು ತ್ಯಾಗ ಮಾಡಿಯಾದರೂ, ಇತರರ ಅಗತ್ಯಕ್ಕೆ ಹೆಚ್ಚು ಕಿವಿಯಾಗುತ್ತಾರೆ.
ಈ ರಾಶಿಯವರು ಕೂಡ ತುಂಬಾ ಕಾಳಜಿಯ ಸ್ವಭಾವದವರು. ಇವರು ಯಾವಾಗಲೂ ಇತರರ ಬಗ್ಗೆ ಕಾಳಜಿ ವಹಿಸುವ ಸ್ವಾಭಾವಿಕ ಒಲವನ್ನು ಹೊಂದಿರುತ್ತಾರೆ. ಅವರ ಅಗತ್ಯತೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ ಮತ್ತು ಸಹಾಯವನ್ನು ಮಾಡುತ್ತಾರೆ. ಇವರು ನಂಬಲಾಗದಷ್ಟು ವಿಶ್ವಾಸಾರ್ಹರು. ಸುತ್ತಲಿನವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ. ತಮ್ಮ ಪ್ರೀತಿಪಾತ್ರರ ಸುರಕ್ಷತೆಗೆ ಆದ್ಯತೆ ನೀಡುತ್ತಾರೆ.
ತುಲಾ ರಾಶಿ (Libra)
ತುಲಾ ರಾಶಿಯವರು ಕೂಡ ಕಾಳಜಿಯ ಸ್ವಭಾವದ ವ್ಯಕ್ತಿಗಳು. ಇವರು ಅತ್ಯುತ್ತಮ ಕೇಳುಗರು ಮತ್ತು ಶಾಂತಿ ಸ್ವಭಾದವರು. ಇವರು ಇತರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರವೀಣರಾಗಿದ್ದಾರೆ. ಎಲ್ಲರಿಗೂ ಪೋಷಣೆ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಲು ಶ್ರಮಿಸುತ್ತಾರೆ. ಅವರು ಇತರರ ಅಗತ್ಯತೆಗಳು ಮತ್ತು ಯೋಗಕ್ಷೇಮ (well-being) ವನ್ನು ಗೌರವಿಸುತ್ತಾರೆ.
‘ಬಾಳಿನ ಪಥ’ ನಿರ್ಧರಿಸುವ ಶನಿ; ಈ ಗೃಹದ ಸಿದ್ಧಾಂತಗಳೇನು?
ಮಕರ ರಾಶಿ (Capricorn)
ಇವರದು ತುಂಬಾ ಕಾಳಜಿಯುಳ್ಳ ಮತ್ತು ಜವಾಬ್ದಾರಿಯುತ ಸ್ವಭಾವ. ಇವರು ತಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಮತ್ತು ಬೆಂಬಲಿಸಲು ಪ್ರಯತ್ನಿಸುತ್ತಾರೆ. ಇವರ ಅಚಲ ನಿಷ್ಠೆ ಮತ್ತು ಬದ್ಧತೆಯು ಅವರನ್ನು ವಿಶ್ವಾಸಾರ್ಹ ಮತ್ತು ಕಾಳಜಿ (concern) ಯುಳ್ಳ ಸ್ನೇಹಿತರನ್ನಾಗಿ ಮಾಡುತ್ತದೆ.
ಮೇಷ, ಮಿಥುನ, ಸಿಂಹ (lion) , ವೃಶ್ಚಿಕ, ತುಲಾ, ಕುಂಭ ರಾಶಿಯವರು ಕಾಳಜಿಯುಳ್ಳವರಾಗಿರಬಹುದು, ಆದರೆ ಅವರು ಮೇಲೆ ತಿಳಿಸಿದ ಇತರ ರಾಶಿಚಕ್ರಗಳಂತೆ ವ್ಯಕ್ತಪಡಿಸುವುದಿಲ್ಲ.