ಏಕಾಂತದಲ್ಲೇ ಆತ್ಮಾನಂದ ಕಾಣುವ ರಾಶಿಯವರಿವರು

By Suvarna News  |  First Published Mar 29, 2022, 4:49 PM IST

ಒಂಟಿ ಒಂಟಿಯಾಗಿರುವುದು ಸೂಪರೋ ಸೂಪರು ಎನ್ನುವವರು ಈ ನಾಲ್ಕು ರಾಶಿಗಳಿಗೆ ಸೇರಿರುತ್ತಾರೆ. 


ಸಾಮಾನ್ಯವಾಗಿ ಬಹುತೇಕರಿಗೆ ಒಬ್ಬರೇ ಇರುವುದೆಂದರೆ ಬೋರು. ಯಾವಾಗಲೂ ಜೊತೆಗೆ ಯಾರಾದರೂ ಇರಬೇಕು. ಕನಿಷ್ಠ ಪಕ್ಷ ಫೋನಲ್ಲಾದರೂ ಮೆಸೇಜ್ ಮಾಡುತ್ತಾ, ಮಾತಾಡುತ್ತಾ ಇರಬೇಕು. ಇಲ್ಲದಿದ್ದರೆ ಜೀವನವೇ ನಶ್ವರ ಎಂಬ ಮಟ್ಟಿಗೆ ಬೇಜಾರು ಕಾಡುತ್ತದೆ. ಒಂಟಿಯಾಗಿದ್ದಾಗಲೇ ಹಳೆಯ ನೋವುಗಳು ಹೊರ ಬರುತ್ತವೆ. ಯಾರಾದರೂ ಮಾತಾಡಲು ಸಿಕ್ಕರೆ ಸಾಕಪ್ಪಾ ಎಂದುಕೊಳ್ಳುತ್ತಾರೆ. ಆದರೆ ಮತ್ತೆ ಕೆಲವರಿರುತ್ತಾರೆ. ಅವರಿಗೆ ಏಕಾಂತದ ಸಮಯದಷ್ಟು ಸೊಗಸಾದುದು ಮತ್ತೊಂದಿಲ್ಲ. ಸುಮ್ಮನೆ ಕಿಟಕಿ ಬಳಿ ಕುಳಿತು ಮಳೆ ನೋಡುವುದು, ಪುಸ್ತಕ ಓದುವುದು, ತಮ್ಮ ಕಲ್ಪನಾ ಲೋಕದಲ್ಲಿ ವಿಹರಿಸುವುದು, ಭವಿಷ್ಯದ ಬಗ್ಗೆ ಗುರಿಗಳನ್ನು ಹಾಕಿಕೊಳ್ಳುವುದು, ಕವಿತೆ, ಕತೆ ಬರೆಯುವುದು- ಹೀಗೆ ಏಕಾಂತದ ಸಮಯ ಎಂದರೆ ತಮ್ಮ ಸಮಯ ಎಂದು ಸಂತೋಷವಾಗಿ ಕಾಲ ಕಳೆಯುವವರು ಇವರು. ಹೀಗೆ ಏಕಾಂತವನ್ನು ಪ್ರೀತಿಸುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?

ಸಿಂಹ(Leo)
ಸಿಂಹ ರಾಶಿಯವರಿಗೆ ಒಂಟಿಯಾಗಿರಲು(loneliness) ಬಹಳ ಇಷ್ಟ. ಮಿ ಟೈಂ ಎಂಜಾಯ್ ಮಾಡುವವರಿವರು. ಇವರಲ್ಲಿ ಹೆಚ್ಚಿನವರು ಅಂತರ್ಮುಖಿ(introverts)ಗಳಾಗಿದ್ದರೆ ಮತ್ತೆ ಕೆಲವರು ಮೂಡಿ(ambiverts)ಗಳಾಗಿರುತ್ತಾರೆ. ಒಮ್ಮೊಮ್ಮೆ ಅಂತರ್ಮುಖಿಯಾಗಿದ್ದು, ಮತ್ತೊಮ್ಮೆ ಬಹಿರ್ಮುಖಿಯಾಗಿರುತ್ತಾರೆ. ಮೌನವಾಗಿರುವುದನ್ನು ಅನುಭವಿಸುತ್ತಾರೆ. ತಮ್ಮ ಆಲೋಚನೆಗಳ ಬಗ್ಗೆ ಸ್ಪಷ್ಟತೆಗಾಗಿ, ಜೀವನದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು, ತಮ್ಮನ್ನು ತಾವು ಮೌಲ್ಯಮಾಪನ ಮಾಡಲು ಒಂಟಿಯಾಗಿರುವ ಸಮಯವೊಂದು ಒಳ್ಳೆಯ ಅವಕಾಶ ಎಂದು ಇವರು ಭಾವಿಸುತ್ತಾರೆ. ತಮಗೆ ಹೊಂದಿಕೆಯಾಗದವರೊಂದಿಗೆ ಇರುವುದಕ್ಕಿಂತ ಒಂಟಿಯಾಗಿರುವುದೇ ಲೇಸು ಎಂದುಕೊಳ್ಳುತ್ತಾರೆ. ಏಕಾಂತವು ಇವರಿಗೆ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತದೆ. 

Tap to resize

Latest Videos

ವೃಶ್ಚಿಕ(Scorpio)  
ವೃಶ್ಚಿಕ ರಾಶಿಯವರು ಕೂಡ ಒಂಟಿತನಕ್ಕೆ ಆದ್ಯತೆ ನೀಡುತ್ತಾರೆ. ಇವರು ಸಮಯವನ್ನು ತಾವು ಮತ್ತು ತಮ್ಮ ಸಂಗಾತಿ ಇಬ್ಬರೇ ಕಳೆಯಬೇಕೆಂದು ಬಯಸುತ್ತಾರೆ. ಕೆಲವೊಮ್ಮೆ ಪುಸ್ತಕ ಅಥವಾ ಒಂದು ಕಪ್ ಕಾಫಿ ಇದ್ದರೆ ಸಾಕು ಎಂದುಕೊಳ್ಳುತ್ತಾರೆ. ವೃಶ್ಚಿಕ ರಾಶಿಯವರು ಜನರೊಂದಿಗೆ ಚೆನ್ನಾಗಿ ಬಾಂಧವ್ಯ ಹೊಂದಿದ್ದರೂ, ಅವರು ಯಾವಾಗಲೂ ಜನರಿಂದ ಸುತ್ತುವರಿಯಲು ಇಷ್ಟಪಡುವವರಲ್ಲ. ಏಕಾಂತವು ವೃಶ್ಚಿಕಕ್ಕೆ ಸ್ವಂತದ ಬೆಳವಣಿಗೆಗೆ ಕಾರಣವಾಗಿಸುತ್ತದೆ. 

Vijayapura: ಯುಗಾದಿಗೆ ಕತ್ನಳ್ಳಿ ಕಾಲಜ್ಞಾನ, ಭಕ್ತರಲ್ಲಿ ಗರಿಗೆದರಿದ ಕುತೂಹಲ..!

ಕಟಕ(Cancer)
ನೀವು ಕರ್ಕಾಟಕ ರಾಶಿಯವರಾಗಿದ್ದರೆ ಅಥವಾ ಅವರೊಂದಿಗಿದ್ದರೆ, ಅವರ ಒಂಟಿತನದ ಪ್ರೀತಿ ನಿಮಗೆ ತಿಳಿದಿರುತ್ತದೆ. ಕಟಕ ರಾಶಿಯವರು ಒಂಟಿಯಾಗಿರುವುದಕ್ಕೆ ಎಂದಿಗೂ ಹೆದರುವವರೇ ಅಲ್ಲ. ಯಾವಾಗಲೂ ಏಕಾಂತದ ಪ್ರವಾಸಗಳು ಅಥವಾ ವಿಹಾರಕ್ಕೆ ಆದ್ಯತೆ ನೀಡುತ್ತಾರೆ. ತಮ್ಮದೇ ಕೋಣೆಯನ್ನು ಬೇಕೆಂದಂತೆ ಅಲಂಕರಿಸಿಕೊಂಡು ಅದರಲ್ಲಿರುವುದು ಅವರಿಗಿಷ್ಟ. ಅದೇ ಜಗತ್ತಾಗಿ ಕಾಣುತ್ತಾರೆ. ಇದಕ್ಕೆ ಅವರ ಅಭದ್ರತೆಗಳು, ಬಾಲ್ಯದ ಅನುಭವಗಳು ಕಾರಣವಿರಬಹುದು. ಆದರೆ, ಜನರೊಂದಿಗೆ ಬೆರೆಯುವುದು ಇವರಿಗೆ ಕಷ್ಟವೆನಿಸುತ್ತದೆ. ಒಬ್ಬರೇ ಇದ್ದಾಗ ಮನಸ್ಸಿಗೆ ಬಂದಂತೆ ಆರಾಮದಾಯಕವಾಗಿ ಇರಬಹುದು ಎಂಬ ಯೋಚನೆ ಇವರದ್ದು. 

Ugadi 2022: ಬದುಕಿನ ಪಾಠ ಹೇಳುವ ಬೇವು ಬೆಲ್ಲ.. ಈ ಕಾರಣಕ್ಕೆ ಸೇವಿಸಿ

ತುಲಾ(Libra)
ತುಲಾ ರಾಶಿಯವರು ಕೂಡ ಒಂಟಿತನವನ್ನು ಇಷ್ಟ ಪಡುವ ಜನರು. ಅವರು ಯಾವಾಗಲೂ ತಮ್ಮ ಮನೆಯಲ್ಲಿ ಇರಲು ಬಯಸುತ್ತಾರೆ. ಮನೆಯ ಆರಾಮ ಸ್ಥಿತಿಗಾಗಿ ಪಾರ್ಟಿಗಳು, ಚಲನಚಿತ್ರ ಮತ್ತಿತರೆ ಎಂಜಾಯ್‌ಮೆಂಟ್‌ಗಳನ್ನು ಬೇಕಿದ್ದರೂ ತ್ಯಾಗ ಮಾಡುವವರು ಇವರು. ಇವರು ಎಲ್ಲರೊಂದಿಗೆ ಸ್ನೇಹಶೀಲರಾಗಿರುತ್ತಾರೆ. ಆದರೆ, ಏಕಾಂತದಲ್ಲೂ ಸಂತೋಷ ಕಾಣುತ್ತಾರೆ. ತಮ್ಮ ಗುರಿಗಳನ್ನು ಸ್ಪಷ್ಟಪಡಿಸಿಕೊಳ್ಳಲು, ಯೋಜನೆ ರೂಪಿಸಲು ಮುಂತಾದ ಕಾರಣಗಳಿಗೆ ಏಕಾಂತವೇ ಸ್ವರ್ಗದಂತೆ ಇವರಿಗೆನಿಸುತ್ತದೆ. ಏಕಾಂತವೆಂದರೆ ಇವರ ಪ್ರಕಾರ ಕೇವಲ ಒಂಟಿಯಾಗಿರುವುದಲ್ಲ, ಕುಟುಂಬದ ಜೊತೆ ಇರುವುದನ್ನು ಬಯಸುವವರು ಇವರು. ಏಕಾಂತವೇ ಧ್ಯಾನ ಎಂದುಕೊಂಡವರು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!