ಈ ಮೂರು ರಾಶಿಯವರ ನಡೆ ಊಹಿಸೋಕೇ ಆಗಲ್ವಂತೆ..!

Suvarna News   | Asianet News
Published : Sep 28, 2021, 03:39 PM IST
ಈ ಮೂರು ರಾಶಿಯವರ ನಡೆ ಊಹಿಸೋಕೇ ಆಗಲ್ವಂತೆ..!

ಸಾರಾಂಶ

ವ್ಯಕ್ತಿಗಳ ಸ್ವಭಾವವನ್ನು ಊಹಿಸುವುದು ಕಷ್ಟ. ಹಾಗಂತ ಕೆಲವರು ತಮ್ಮ ಬಗ್ಗೆ ತಮ್ಮ ಕಾರ್ಯಯೋಜನೆಗಳ ಬಗ್ಗೆ ಪಾರದರ್ಶಕವಾಗಿ ಇರುತ್ತಾರೆ. ಹಾಗೆಯೇ ಇನ್ನೂ ಕೆಲವರು ತಮ್ಮ ಭವಿಷ್ಯದ(Future) ಯೋಜನೆಗಳ ಬಗ್ಗೆ ಸುಳಿವು ಸಹ ಸಿಗದಂತೆ ಇರುತ್ತಾರೆ. ಕೆಲವು ರಾಶಿಯ ವ್ಯಕ್ತಿಗಳ ನಡೆಯನ್ನು ಊಹಿಸುವುದು ಕಷ್ಟವೆಂದು ಹೇಳಲಾಗುತ್ತದೆ. ಆ ರಾಶಿಯ ವ್ಯಕ್ತಿಗಳ ಬಗ್ಗೆ ತಿಳಿಯೋಣ.  

ಹೆಣ್ಣಿನ ಮನಸ್ಸು, ಮೀನಿನ ಹೆಜ್ಜೆಯನ್ನು ಅರಿಯಲು ಆಗುವುದಿಲ್ಲ ಎಂಬ ನಾಣ್ಣುಡಿ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅಂದರೆ, ಯಾರ ಊಹೆಗೂ ನಿಲುಕದ್ದು, ಹೇಗೆ ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಹೇಗೆ ಐದೂ ಬೆರಳುಗಳು ಒಂದೇ ರೀತಿ ಇರುವುದಿಲ್ಲವೋ, ವ್ಯಕ್ತಿಗಳ ಸ್ವಭಾವ, ವ್ಯಕ್ತಿತ್ವವೂ (Personality) ಅಷ್ಟೇ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಅವರ ನಡೆಯೂ ಅಷ್ಟೇ ನಿಗೂಢ.

ಕೆಲವು ವ್ಯಕ್ತಿಗಳು ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಅಂದರೆ ಭವಿಷ್ಯದಲ್ಲಿ ಏನು ಮಾಡಬೇಕು, ಯಶಸ್ಸು ಗಳಿಸಲು ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಕೆಲವು ವ್ಯಕ್ತಿಗಳು ತಮ್ಮ ಯಾವ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ ಕೆಲವು ವ್ಯಕ್ತಿಗಳ ಭವಿಷ್ಯದ ನಡೆಯನ್ನು ಊಹಿಸಬಹುದಾಗಿರುತ್ತದೆ. ಇನ್ನೂ ಕೆಲವು ವ್ಯಕ್ತಿಗಳು ಇತರರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ. ಅಲ್ಲದೆ ಅವರ ನಡೆಯನ್ನು ಊಹಿಸುವುದೂ ಅಸಾಧ್ಯವಾಗಿರುತ್ತದೆ.

ಕೆಲವು ವ್ಯಕ್ತಿಗಳು ಇತರರ ಯೋಜನೆಗಳ ಬಗ್ಗೆ ಯಶಸ್ಸಿನ ಗುಟ್ಟಿನ ಬಗ್ಗೆ ತಿಳಿದುಕೊಳ್ಳಲು ಕುತೂಹಲ ತೋರಿಸುತ್ತಾರೆ. ಹಾಗಂತ ತಮ್ಮ ಬಗ್ಗೆಯಾಗಲಿ ಅಥವಾ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಆಗಲಿ ಹೇಳಿಕೊಳ್ಳುವುದಿಲ್ಲ. ಅವುಗಳ ಸುಳಿವು ಸಹ ಸಿಗದಂತೆ ರಹಸ್ಯ (Secret) ಕಾಪಾಡಿಕೊಳ್ಳುತ್ತಾರೆ. ತಮ್ಮ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಕೆಲವು ರಾಶಿಯವರು ಇಷ್ಟಪಡುವುದಿಲ್ಲ. ಹಾಗಾಗಿ ಅಂತಹ ವ್ಯಕ್ತಿಗಳ ಮುಂದಿನ ನಡೆಯನ್ನು ಊಹಿಸುವುದು ಕಷ್ಟಕರವಾಗಿರುತ್ತದೆ. ಹಾಗೆಯೇ ಆ ವ್ಯಕ್ತಿಗಳ ಸ್ವಭಾವ ಮತ್ತು ವ್ಯಕ್ತಿತ್ವವು ಸಹ ವಿಚಿತ್ರವಾಗಿರುತ್ತದೆ.

ಇದನ್ನು ಓದಿ: ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

ಜ್ಯೋತಿಷ್ಯ ಶಾಸ್ತ್ರ (Astrology) ಹೇಳುವಂತೆ ರಾಶಿಚಕ್ರಗಳ (Zodiac sign) ಸ್ವಭಾವ ಭಿನ್ನವಾಗಿರುತ್ತದೆ. ಕೆಲವು ರಾಶಿಯವರ ವ್ಯಕ್ತಿತ್ವ ನೇರವಾಗಿದ್ದರೆ, ಮತ್ತೆ ಕೆಲವರ ಸ್ವಭಾವ ವಿಚಿತ್ರವಾಗಿರುತ್ತದೆ. ಹಾಗೆಯೇ ಇಲ್ಲಿ ಕೆಲವು ರಾಶಿಗಳ ಬಗ್ಗೆ ತಿಳಿಸಲಾಗಿದೆ. ಈ ರಾಶಿಯ ವ್ಯಕ್ತಿಗಳ ನಡೆಯನ್ನು ಊಹಿಸುವುದು ಅಸಾಧ್ಯವೆಂದು ಶಾಸ್ತ್ರ ಹೇಳುತ್ತದೆ. ಅವುಗಳಾದ ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯ ವ್ಯಕ್ತಿಗಳ ಬಗ್ಗೆ ಊಹಿಸುವುದು ಕಷ್ಟವೆಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ .....

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು!

ಸಿಂಹ ರಾಶಿ (Leo)

ಸಿಂಹ ರಾಶಿಯವರ ಸ್ವಭಾವವನ್ನು ಸರಿಯಾಗಿ ತಿಳಿದುಕೊಳ್ಳುವುದು ಅಸಾಧ್ಯ. ಈ ಕ್ಷಣ ಖುಷಿಯಾಗಿದ್ದರೆ, ಮರುಕ್ಷಣ ಸಿಟ್ಟಿನಿಂದ ಕೂಗಾಡುತ್ತಾರೆ. ಹಾಗಾಗಿ ಸಿಂಹ ರಾಶಿಯವರು ಮುಂದಿನ ಕ್ಷಣ ಮತ್ತೇನು ಮಾಡಬಹುದು ಎಂದು ಊಹಿಸುವುದು ಅಸಾಧ್ಯ. ಈ ವ್ಯಕ್ತಿಗಳು ತಮ್ಮ ಭವಿಷ್ಯದ ನಿರ್ಧಾರಗಳನ್ನು ತಾವೇ ಸ್ವತಃ ತೆಗೆದುಕೊಳ್ಳುತ್ತಾರೆ. ಸಿಂಹ ರಾಶಿಯ ವ್ಯಕ್ತಿಗಳು ಇತರರು ಅಂದುಕೊಂಡಂತೆ ಖಂಡಿತ ಇರುವುದಿಲ್ಲ. ಹಾಗಂದುಕೊಂಡರೆ ಅದು ಕಲ್ಪನೆಯಷ್ಟೇ ಆಗಿರುತ್ತದೆ. ಹಾಗಾಗಿ ಸಿಂಹ ರಾಶಿಯವರ ನಡೆ ಹೀಗೆಯೇ ಇರುತ್ತದೆ ಎಂದು ಹೇಳುವುದು ಅಸಾಧ್ಯ.

ವೃಶ್ಚಿಕ ರಾಶಿ (Scorpio)

ಈ ರಾಶಿಯವರು ತಮ್ಮ ಮಾತು ಮತ್ತು ಕಾರ್ಯವೈಖರಿಗಳಿಂದ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತಾರೆ. ವೃಶ್ಚಿಕ ರಾಶಿಯ ವ್ಯಕ್ತಿಗಳು ಕೋಮಲ ಹೃದಯದ ವರು ಮತ್ತು ದಯಾ ಸ್ವಭಾವವನ್ನು ಉಳ್ಳವರೆಂದು ಕಂಡರೂ, ಈ ವ್ಯಕ್ತಿಗಳ ನಡೆಯನ್ನು ಊಹಿಸುವುದು ಕಷ್ಟಕರ. ಇವರ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಗಾಳಿಗೆ ಹೋಲಿಸಲಾಗುತ್ತದೆ. ಋತುಗಳು ಬದಲಾದಂತೆ ಇವರ ಸ್ವಭಾವವೂ ಸಹ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ತಮ್ಮ ಜೀವನಕ್ಕೆ ಬೇಕಾದಂತೆ ವ್ಯಕ್ತಿತ್ವವನ್ನು  ಬದಲಾಯಿಸಿಕೊಳ್ಳುತ್ತಾರೆ. ಹಾಗಾಗಿ ಈ ರಾಶಿಯವರು ಹೀಗೆಯೇ ಎಂದು ಹೇಳುವುದು ಕಷ್ಟ.

ಇದನ್ನು ಓದಿ: ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ…

ಮೀನ ರಾಶಿ (Pisces)

ಈ ರಾಶಿಯವರ ಸ್ವಭಾವವನ್ನು ಊಹಿಸುವುದು ಅತ್ಯಂತ ಕಷ್ಟ. ಒಂದು ಕ್ಷಣ ನೀವೇ ಇವರ ಆದ್ಯತೆ ಎಂದು ಹೇಳಿದರೂ ಸಹ, ಮರುಕ್ಷಣವೇ ನೀವು ಅವರ ಜೀವನದಲ್ಲಿ ಯಾವುದೇ ಪ್ರಾಮುಖ್ಯತೆಯನ್ನು ಪಡೆದಿಲ್ಲ ಎಂಬಂತೆ ವರ್ತಿಸುತ್ತಾರೆ. ಮೀನ ರಾಶಿಯವರು ಮಧುರವಾಗಿ ಮಾತನಾಡುತ್ತಾರೆ. ಹಾಗಂತ ಅವರು ಹೇಳಿದ್ದನ್ನೆಲ್ಲ ನಂಬುವಂತಿಲ್ಲ. ಈ ರಾಶಿಯವರ ಸ್ವಭಾವವನ್ನು ಊಹಿಸುವುದು ಸುಲಭವಲ್ಲ, ಮೀನಿನ ಹೆಜ್ಜೆಯಂತೆ ಇವರ ನಡೆ ಎನ್ನಬಹುದಾಗಿದೆ. ಹಾಗಾಗಿ ಮೀನ ರಾಶಿಯವರ ಬಗ್ಗೆ ಊಹಿಸುವುದು ಕಷ್ಟ ಎಂದು ಹೇಳಲಾಗುತ್ತದೆ.

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ