Shiva Karma: ಸಂತೋಷವಾಗಿರಲು ಶಿವ ಹೇಳಿದ ನಿಯಮಗಳಿವು..

By Suvarna NewsFirst Published Feb 21, 2022, 6:48 AM IST
Highlights

ಶಿವಪುರಾಣದಲ್ಲಿ ಶಿವಧರ್ಮ ಹಾಗೂ ಶಿವ ಕರ್ಮದ ಬಗ್ಗೆ ವಿವರಗಳಿವೆ. ಈಗ ಶಿವಕರ್ಮದ ಏಳು ನಿಯಮಗಳೇನು ನೋಡೋಣ. ಅವನ್ನು ಅಳವಡಿಸಿಕೊಂಡರೆ ಬದುಕು ಜ್ಞಾನದ ಹಾದಿಯಾಗುತ್ತದೆ. 

ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಈಶ್ವರ ನಾಶ(Destruction) ಮಾಡುವವನು. ಆತ, ತೀರ್ಪಿನ ದಿನ ಶಿಕ್ಷೆ ಕೊಡುವವನಷ್ಟೇ ಅಲ್ಲದೆ, ಬದುಕಿನಲ್ಲೂ ನಂಬಿದವರ ಅಹಂಕಾರ, ಕೋಪತಾಪ, ನೋವುಗಳನ್ನು ನಾಶ ಮಾಡಬಲ್ಲ. ಮಾಡಿದ್ದನ್ನು ಉಣ್ಣಲೇಬೇಕೆನ್ನುವುದು ಜೀವನದ ನಿಯಮ. ಅದನ್ನೇ ಶಿವಕರ್ಮ ಹೇಳುತ್ತದೆ. ನಾವು ಅನುಭವಿಸುವ ಎಲ್ಲವೂ ನಮ್ಮ ಕರ್ಮ ಫಲವೇ ಆಗಿದೆ ಎಂಬುದೇ ಶಿವಕರ್ಮದ ತಾತ್ಪರ್ಯ. 
'ದೇವ್ ಸೆ ಮಹದೇವ್'(Dev Se Mahadev) ಎಂಬ ಚೆಂದದ ಪುಸ್ತಕವನ್ನು ಬರೆದವರು ಶಿವಪುರಾಣ(Shivpuran)ವನ್ನು ಅರೆದು ಕುಡಿದವರು. ಅವರು ಅದರಲ್ಲಿ ಬರುವ ಶಿವಕರ್ಮ(Shiva Karma)ದ ಬಗ್ಗೆ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಹೇಳಿದ್ದಾರೆ. 
ಅದರಂತೆ ಶಿವಕರ್ಮದಲ್ಲಿ ಏಳು ನಿಯಮಗಳಿವೆ. ಅವನ್ನು ಪಾಲಿಸಿದರೆ ಬದುಕಿನ ನೋವು, ದುಃಖ, ಸಮಸ್ಯೆಗಳೆಲ್ಲವೂ ಮರೆಯಾಗುತ್ತವೆ. 

1. ಸತ್ಯ(Truth)
ಶಿವಭಕ್ತರು ಮತ್ತೊಬ್ಬರಿಗೆ ಮಾತ್ರವಲ್ಲ, ತಮಗೂ ಸ್ವತಃ ಸತ್ಯವಂತರಾಗಿರಬೇಕು. ತಮ್ಮ ಮನಸ್ಸಿಗೂ ಮೋಸ ಮಾಡದೆ, ಮತ್ತೊಬ್ಬರಿಗೆ ವಂಚಿಸದೆ ನ್ಯಾಯ ಹಾಗೂ ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯಬೇಕು. ಸುಳ್ಳಿನ ಬದುಕು ಬೇಗ ಟೊಳ್ಳಾಗುತ್ತದೆ. ಭಯವನ್ನು ಒಳಗೊಂಡಿರುತ್ತದೆ. ಆದರೆ ಸತ್ಯದ ಹಾದಿಯಲ್ಲಿ ಧೈರ್ಯ ಜೊತೆಗೂಡುತ್ತದೆ, ಆತ್ಮವಿಶ್ವಾಸವೂ. 

Latest Videos

2. ಜ್ಞಾನವೇ ದೇವರು(Knowledge is God)
ಜಗತ್ತಿನ ಪೂರ್ತಿ ಜ್ಞಾನ ಅರೆದು ಕುಡಿದವನು ಬ್ರಹ್ಮಜ್ಞಾನಿಯಾಗುತ್ತಾನೆ. ಮಾನವಮಾತ್ರರಿಂದ ಅಂದು ಅಸಾಧ್ಯವೇ. ಆದರೆ, ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವಾದಷ್ಟು ಜ್ಞಾನ(knowledge)ವನ್ನು ಸಂಪಾದಿಸಬೇಕು. ಜೊತೆಗೆ, ತಮ್ಮ ಜ್ಞಾನದ ಬಲದಿಂದ ಮತ್ತಷ್ಟು ಜ್ಞಾನವನ್ನು ಜಗತ್ತಿನ ಮಡಿಲಿಗಿಡಬೇಕು. ಏಕೆಂದರೆ ಜ್ಞಾನವೇ ದೇವರು. ಕಲಿಕೆ, ಅನ್ವೇಷಣೆ ಹಾಗೂ ತಿಳಿವಳಿಕೆಯ ಹಾದಿ ಕೊನೆಯವರೆಗೂ ನಮ್ಮದಾಗಿರಬೇಕು. 

Daily Horoscope: ಮೇಷಕ್ಕೆ ಸಂಗಾತಿಯೊಂದಿಗೆ ಮೌನ ಯುದ್ಧ, ತುಲಾ ರಾಶಿಗೆ ವಸ್ತು ನಷ್ಟ

3. ಎಲ್ಲವೂ ಭ್ರಮೆ(Everything is an illusion)
ಇದೊಂದು ಭ್ರಮಾತ್ಮಕ ಜಗತ್ತು. ಅದರ ಅರಿವು ನಮಗಿರಬೇಕು. ನಾವೆಲ್ಲಿ ಬದುಕುತ್ತಿದ್ದೇವೆ, ಹೇಗೆ ಬದುಕುತ್ತಿದ್ದೇವೆ ಎಂಬುದು ಮುಖ್ಯವಲ್ಲ, ನಮ್ಮ ಖುಷಿ ನಾವು ಹೊಂದುವ ಭೌತಿಕ ವಸ್ತುಗಳು, ಆಸ್ತಿ, ಶ್ರೀಮಂತಿಕೆಯ ಮೇಲೆ ಅವಲಂಬನೆಯಾಗಿದ್ದರೆ ಸಂತೋಷ(happiness)ವೆನ್ನುವುದು ಕೇವಲ ನಮ್ಮ ಭ್ರಮೆಯಾಗಿರುತ್ತದೆ. ಆ ವಸ್ತು, ಹಣ ಅಥವಾ ಶ್ರೀಮಂತಿಕೆ ಕಳೆದಾಗ ಸಂತೋಷವೂ ನಮ್ಮಿಂದ ದೂರ ಓಡುತ್ತದೆ. ಹಾಗಾಗಿ, ಈ ಭ್ರಾಮಕ ಜಗತ್ತಿನಲ್ಲಿ ಸಂತೋಷದ ಕೀಲಿಕೈ ಇಡಬಾರದು. ಬದಲಿಗೆ ಈಶ್ವರನಲ್ಲಿ, ಮಾಡುವ ಕೆಲಸದಲ್ಲಿ ಸಂತೋಷ ಕಂಡುಕೊಂಡರೆ ಅದು ಸದಾ ನಮ್ಮೊಂದಿಗೇ ಇರುತ್ತದೆ. 

4. ಸಂತೋಷದಾಚೆಗೆ(Beyond happiness)
ನಾವು ಬದುಕುತ್ತಿರುವ ಜಗತ್ತು ದಿನೇ ದಿನೇ ಹೆಚ್ಚು ಸ್ವಾರ್ಥದಿಂದ ತುಂಬುತ್ತಿದೆ. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಲಾಭನಷ್ಟಗಳನ್ನು ಕ್ಷಣಕ್ಷಣವೂ ಲೆಕ್ಕ ಹಾಕುತ್ತಾರೆ. ಎಲ್ಲರಿಗೂ ತಮ್ಮ ಸಂತೋಷ, ಸುಖವಷ್ಟೇ ಮುಖ್ಯವಾಗಿದೆ. ತಮ್ಮ ಸುತ್ತಲಿನ ಜನರ ಕಷ್ಟಬವಣೆಗಳ ಮೇಲೆ ಅವರು ಜಾಣಕುರುಡು ಪ್ರದರ್ಶಿಸುತ್ತಾರೆ. ಆದರೆ, ಸ್ವಾರ್ಥ ಹೆಚ್ಚಿದಷ್ಟೂ ಸಂತೋಷ ದೂರ ಓಡುತ್ತದೆ. ಸಂತೋಷವು ಒಳಗಿನಿಂದ ಹುಟ್ಟಬೇಕೇ ಹೊರತು ಹೊರಜಗತ್ತಲ್ಲಿ ಅದು ಸಿಗುವುದಿಲ್ಲ. ನಾವು ನಮ್ಮ ಸಂತೋಷದ ಅರಸುವಿಕೆಯ ಆಚೆಗೂ ದೃಷ್ಟಿ ಹಾಯಿಸಬೇಕಿದೆ. ಏಕೆಂದರೆ, ನಿಜವಾದ ತೃಪ್ತಿ, ಸಂತೋಷ ಮಿತಿಗಳಾಚೆಗೆ(limits) ಇದ್ದು, ನಮ್ಮೊಳಗಿನ ಜ್ಞಾನದ ಬೆಳಕು ಹೆಚ್ಚಿದಾಗ ಮಾತ್ರ ಅದರ ಅನುಭವ ಸಾಧ್ಯವಾಗುತ್ತದೆ. ನಮಗೆ ಹಾಗೂ ಮತ್ತೊಬ್ಬರಿಗೆ ನ್ಯಾಯಯುತವಾಗಿ ನಾವಿದ್ದಾಗ ಸಂತೋಷದಾಚೆಯ ಜಗತ್ತನ್ನೂ ಕಾಣಬಹುದು.  

Astro Money: ಚಿಕ್ಕ ವಯಸ್ಸಲ್ಲೇ ಹಣವಂತರಾಗುವ 5 ರಾಶಿಯವರು ಯಾರು?

5. ಆಕಾರರಹಿತರಾಗಿ(Be formless)
ನೀರಿನಂತೆ ಆಕಾರರಹಿತವಾಗಿರಬೇಕು. ಶೇಖರಿಸಿದ ಪಾತ್ರೆಯ ಆಕಾರ ಹೊಂದುವ ಗುಣ ಇರಬೇಕು. ಆಗ ಮಾತ್ರ ನಮ್ಮನ್ನು ಯಾರು ಎಲ್ಲಿಯೇ ತೆಗೆದುಕೊಂಡು ಹೋಗಿ ಬಿಟ್ಟರೂ ನಮ್ಮತನ ಕಳೆದುಕೊಳ್ಳದೇ ಅಲ್ಲಿಯ ಪರಿಸ್ಥಿತಿಗೆ ಒಗ್ಗಬಹುದು. ಬೇಕಿದ್ದರೆ, ನಿಮ್ಮ ಸುತ್ತಲಿರುವ ಜನರಲ್ಲಿ ಯಾರು ಹೆಚ್ಚು ಸಂತೋಷವಾಗಿರುವರು ಎನಿಸುತ್ತದೋ ಅವರನ್ನು ಗಮನಿಸಿ- ಅವರೊಬ್ಬ ಸಾಧುವೇ ಆಗಿರಬಹುದು, ಸಜ್ಜನವೇ ಆಗಿರಬಹುದು- ಈ ಭ್ರಾಮಕ ಜಗತ್ತಿನ ವಸ್ತು ಸಂತೋಷಗಳು ಅವರನ್ನು ತಾಕುವುದಿಲ್ಲ. ನೀವವರನ್ನು ಎಲ್ಲಿಯೇ ಬಿಟ್ಟರೂ, ಎಂಥ ಪರಿಸ್ಥಿತಿಗೆ ಒಡ್ಡಿದರೂ ಅವರು ಶಾಂತಚಿತ್ತರಾಗಿ ನಿಭಾಯಿಸಬಲ್ಲರು. 

6. ಎಲ್ಲ ಇಂದ್ರಿಯಗಳ ಬಳಕೆ(Using all your senses)
ನಮ್ಮ ಮನಸ್ಸು ನೆಮ್ಮದಿ ಹಾಗೂ ಶಾಂತಿಯಿಂದಿದ್ದಾಗ ನಾವು ಆತ್ಮವನ್ನು ಅರ್ಥಮಾಡಿಕೊಳ್ಳಬಲ್ಲೆವು. ಈ ಸಂದರ್ಭದಲ್ಲಿ ನಮ್ಮೆಲ್ಲ ಇಂದ್ರಿಯಗಳೂ ಒಟ್ಟಾಗಿ ಕೆಲಸ ಮಾಡುತ್ತವೆ. ಭೌತಿಕವಾಗಿ ಈ ಹಂತಕ್ಕೆ ನೀವು ಹೋದರೆ ಸಿಗುವ ಅನುಭೂತಿಯನ್ನು ಹೋಲಿಸಲು ಬೇರೇನೂ ಸಿಗಲಾರದು.

ಈ ರಾಶಿಯವರಿಗೆ ಸೋಲು ಎದುರಿಸುವ ಛಲ ಇರುವುದಿಲ್ಲ!

7. ಜ್ಞಾನೋದಯದ ಜಾಗೃತವಾಗುವಿಕೆ( Enlightenment is awakening)
ಶಿವಕರ್ಮದ ಈ ನಿಯಮಗಳು ನಿಮ್ಮನ್ನು ಜ್ಞಾನೋದಯದತ್ತ ಕರೆದೊಯ್ಯುತ್ತವೆ. ಇದು ಮನುಷ್ಯನ ಅತಿ ಎತ್ತರದ ರೂಪ. ಈ ಹಂತದಲ್ಲಿ ಮಾತ್ರ ನೀವು ಪ್ರಕೃತಿ(nature) ಹಾಗೂ ವಾಸ್ತವವನ್ನು ಸರಿಯಾಗಿ ಗ್ರಹಿಸಬಲ್ಲಿರಿ. ಪ್ರಾಪಂಚಿಕ, ಸಾಂಸಾರಿಕ ಜೀವನದಲ್ಲಿದ್ದೇ ಜ್ಞಾನೋದಯವನ್ನು ಸಂಪಾದಿಸಲು ಸಾಧ್ಯವಿದೆ ಎಂಬುದು ನೆನಪಿರಲಿ. 

click me!