ಈ ರಾಶಿಯವರಿಗೆ ಸೋಲು ಎದುರಿಸುವ ಛಲ ಇರುವುದಿಲ್ಲ!

By Suvarna News  |  First Published Feb 20, 2022, 4:43 PM IST

ಸೋಲೇ ಗೆಲುವಿನ ಮೆಟ್ಟಿಲು ಎಂದು ಹಿರಿಯರು ಹೇಳುತ್ತಾರೆ. ಆದರೆ, ಹೆಚ್ಚಿನ ಜನರು ಸೋಲನ್ನು ಎದುರಿಸುವಲ್ಲಿ ವಿಫಲರಾಗುತ್ತಾರೆ. ಈ ಕೆಲವು ರಾಶಿಯನ್ನು ಹೊಂದಿರುವ ಜನರು ಜನರಿಗೆ ಸೋಲಿಗೆ ಹೆದರುತ್ತಾರೆ. ಸೋಲನ್ನು ಎದುರಿಸುವ ಧೈರ್ಯ, ಛಲ ಇವರನ್ನು ಕಡಿಮೆಯಿರುತ್ತದೆ. 


ಯಾವುದೇ ಒಬ್ಬ ವ್ಯಕ್ತಿಯು ಪ್ರತಿಬಾರಿಯೂ ಗೆಲುವನ್ನು (Winning) ಕಾಣಲು ಸಾಧ್ಯವಿಲ್ಲ. ಕೆಲವೊಮ್ಮೆ ಸೋಲಬೇಕಾಗುತ್ತದೆ. ಆದರೆ, ಎಲ್ಲಿ ಸೋತಿರುತ್ತೇವೆ ಅಲ್ಲಿಯೇ ನಿಂತು, ಛಲದಿಂದ ಆ ಸೋಲನ್ನು ಎದುರಿಸಿ ಮುಂದಿನ ಗೆಲುವಿಗಾಗಿ ಹೋರಾಡಬೇಕು. ಒಮ್ಮೆ ಒಂದು ವಿಷಯದಲ್ಲಿ ಸೋತಿದ್ದೇವೆ ಎಂದ ಮಾತ್ರಕ್ಕೆ ಜೀವನವೇ ನಿಂತುಹೋಯಿತು ಎಂಬಂತೆ ದುಃಖಿಸುವ  ಬದಲಾಗಿ, ಸೋಲಿಗೆ ಕಾರಣವೇನು ಎಂಬುದನ್ನು ಹುಡುಕಿ ಅದನ್ನು ಸರಿಪಡಿಸಿಕೊಂಡು ಮುಂದೆ ನಡೆಯಬೇಕು. ಆಗಮಾತ್ರ ಗೆಲುವನ್ನು ಕೊಳ್ಳಲು ಸಾಧ್ಯ. ಸೋಲನ್ನು ಎದುರಿಸುವ ಧೈರ್ಯ (Courage) ಎಲ್ಲರಲ್ಲಿಯೂ ಇರುವುದಿಲ್ಲ. ಕೆಲವೊಬ್ಬರು ಸೋಲು ಎದುರಿಸಲು ಬಹಳ ಹೆದರುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ಕೆಲವು ರಾಶಿಯನ್ನು ಹೊಂದಿರುವ ಜನರಲ್ಲಿ ಸೋಲು ಎದುರಿಸುವ ಗುಣ ಇರುವುದಿಲ್ಲ. ಇವರು ಪ್ರತಿ ಬಾರಿಯೂ ಗೆಲುವಿನ ಕಡೆ ಮಾತ್ರ ಗಮನ ಹರಿಸುತ್ತಾರೆ. ನೀವು ಈ ರಾಶಿಯವರಾಗಿದ್ದರೆ ಇದರ ಅನುಭವ ಆಗಿರಬಹುದು. ಯಾವುದೋ ಒಂದು ಹಳೆಯ ಘಟನೆ (Past)  ನಿಮ್ಮನ್ನು ಇಂದಿಗೂ ಕಾಡುತ್ತಿರಬಹುದು. ಆ ಸೋಲನ್ನು ನಿಮ್ಮಿಂದ ಎದುರಿಸಲು ಬಹಳ ಕಷ್ಟ ಆಗಿರುತ್ತದೆ. ಇಂತಹ ಲಕ್ಷಣ ಹೊಂದಿರುವ ರಾಶಿಗಳು ಹೀಗಿದೆ..

ತುಲಾ ರಾಶಿ (Libra)
 ತುಲಾ ರಾಶಿಯ ಜನರಿಗೆ ಸೋಲು (Failure) ಅನುಭವಿಸುವುದು ಬಹಳ ಕಷ್ಟ. ಯಾವುದಾದರೂ ಒಂದು ವಿಷಯ ಇವರನ್ನು ಸೋಲುವಂತೆ ಮಾಡಿ ಬಿಟ್ಟರೆ. ಅದರಿಂದ ಹೊರ ಬರಲು ಹಲವಾರು ದಿನಗಳನ್ನು ತೆಗೆದುಕೊಳ್ಳುತ್ತಾರೆ. ಪದೇ ಪದೇ ನಡೆದುಹೋದ ಘಟನೆಯ (Incident) ಬಗ್ಗೆ ಯೋಚಿಸಿ ಚಿಂತಿಸುತ್ತಿರುತ್ತಾರೆ. ಅವರ ಪ್ರಯತ್ನ ವಿಫಲವಾಗಿದೆ ಹೋಯಿತು ಎಂಬ ಯೋಚನೆಯಲ್ಲಿ ತಮಗೆ ತಾವೇ ಬೈದುಕೊಳ್ಳುತ್ತಾರೆ. ತಮ್ಮ ಸೋಲಿಗೆ ನಾವೇ ಕಾರಣ ನೊಂದುಕೊಳ್ಳುತ್ತಾರೆ. ಮುಂದೆ ಆ ರೀತಿಯ ಸನ್ನಿವೇಶವನ್ನು ಎದುರಿಸುವ ಪ್ರಸಂಗ ಬಂದರೆ ಅವರು ಅದರಿಂದ ದೂರಸರಿದು ಬಿಡುತ್ತಾರೆ.

Zodiac signs: ಈ ರಾಶಿಯವರಿಗೆ ಬೇರೆಯವರಷ್ಟು ನಿಷ್ಠೆ ಇರೋಲ್ಲ!

Latest Videos

undefined

ಮೇಷ ರಾಶಿ (Aries)
ಮೇಷ ರಾಶಿಯನ್ನು ಹೊಂದಿರುವ ವ್ಯಕ್ತಿಗಳು ಕೂಡ ಸೋಲನ್ನು ಎದುರಿಸಲು ಅಸಾಧ್ಯರಾಗಿರುತ್ತಾರೆ. ಇವರ ಬಗ್ಗೆ ಇವರಿಗೆ ಹೆಚ್ಚಿನ ನಿರೀಕ್ಷೆ (Expectation) ಇರುತ್ತದೆ. ತಾವು ಗೆದ್ದೇಗೆಲ್ಲುತ್ತೇವೆ ಎಂಬ ಅವರ ಈ ನಿರೀಕ್ಷೆಯಿಂದಾಗಿ ಮುಂದೆ ಸೋಲು ಅನುಭವಿಸಿದರೆ ಎದುರಿಸಲು ಕಷ್ಟವಾಗುತ್ತದೆ. ಇಂತಹ ಸೋಲನ್ನು ಎದುರಿಸಲು ಸಾಧ್ಯವಾಗದೆ ಚಿಂತೆಗೆ ಬೀಳುತ್ತಾರೆ. ಇದರಿಂದಾಗಿ ಮಾನಸಿಕ ತೊಂದರೆಗಳನ್ನು (Depression) ಕೂಡ ಅನುಭವಿಸಬೇಕಾಗಬಹುದು.

ಕರ್ಕಾಟಕ ರಾಶಿ (Cancer)
 ಇವರು ಕೂಡ ಸೋಲನ್ನು ಎದುರಿಸುವ ಗುಣ ಹೊಂದಿಲ್ಲ. ಇವರು ಪ್ರತಿಬಾರಿಯೂ ಇತರರಿಗಿಂತ ತಾವೇ ಮೊದಲು ಆಗಿರಬೇಕು ಎಂದು ಇಚ್ಚಿಸುತ್ತಾರೆ. ಅವರಿಗಿಂತ ಬೇರೆ ಯಾರಾದರೂ ಮೊದಲ ಆದ್ಯತೆ ಅಥವಾ ಸ್ಥಾನ (First place) ಪಡೆದುಕೊಂಡರೆ ಅದನ್ನು ಇವರಿಂದ ಸಹಿಸಲು ಸಾಧ್ಯವಾಗುವುದಿಲ್ಲ. ಅದು ಅವರ ಮನಸ್ಸನ್ನು ಹಾನಿಗೊಳಿಸುತ್ತದೆ. ತಮ್ಮ ಭ್ರಮಾ ಲೋಕದಿಂದ ಹೊರಬಂದು ಜಗತ್ತಿನ ಆಗುಹೋಗುಗಳ ಬಗ್ಗೆ ಗಮನಿಸಿದಾಗ ಸತ್ಯ ಸಂಗತಿ ಅಂದರೆ ಸೋಲು-ಗೆಲುವು ಜೀವನದ ಅಂಗ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

Personality Traits: ಈ ರಾಶಿಯವರನ್ನು ಅರ್ಥ ಮಾಡ್ಕೊಳೋದು ಕಷ್ಟ ಕಷ್ಟ

ಧನು ರಾಶಿ (Sagittarius)
ಇವರು ಕೂಡ ಈ ಮೇಲಿನ ರೀತಿಯ ಜನರಿಂದ ಹೆಚ್ಚು ಭಿನ್ನವಾಗಿ ಇರುವುದಿಲ್ಲ. ಇವರು ತಮ್ಮನ್ನು ತಾವು ಎದುರಿಸಲು ಹಾಗೂ ತಮ್ಮಲ್ಲಿರುವ ವೈಫಲ್ಯಗಳನ್ನು (Defect) ಎದುರಿಸಲು ಬಹಳ ಕಷ್ಟಪಡುತ್ತಾರೆ. ಹಿಂದೆ ನಡೆದು ಹೋದ ಘಟನೆ ಮತ್ತೆ ಮತ್ತೆ ನೆನಪಿಸಿಕೊಂಡು ಕೊರಗುತ್ತಾರೆ. ಮುಂದಿನ ಜೀವನದ ಕಡೆ ಗಮನ ನೀಡಿ ನಡೆದು ಹೋದ ತಪ್ಪನ್ನು ತಿದ್ದಿಕೊಳ್ಳುವ ಬದಲಾಗಿ ಅದೇ ಯೋಚನೆಯಲ್ಲಿ ದಿನ ಕಳೆಯುತ್ತಾರೆ.

ಸೋಲು ಜೀವನದ ಒಂದು ಅಂಗವೆ ಹೊರತು ಅದೇ ಜೀವನವಲ್ಲ. ಒಮ್ಮೆ ಸೋಲು ಕಂಡರೆ ಆ ಸೋಲನ್ನು ಧೈರ್ಯವಾಗಿ ಎದುರಿಸಿ ಮುನ್ನುಗ್ಗಬೇಕು. ಸಾಧಿಸುವ ಛಲ ಹೆಚ್ಚಿಸಿಕೊಳ್ಳಬೇಕು. 

click me!