Chikkamagaluru: ಹಿರೇಮಗಳೂರಿನಲ್ಲಿ ಕೋದಂಡರಾಮ ಜಾತ್ರೆ ಸಂಭ್ರಮ

By Suvarna News  |  First Published Mar 3, 2023, 7:53 PM IST

ಚಿಕ್ಕಮಗಳೂರು ತಾಲೂಕಿನ ಹಿರೇಮಗಳೂರಿನಲ್ಲಿ ಸಂಭ್ರಮ ಸಡಗರ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ಪ್ರತಿವರ್ಷದಂತೆ  ಶ್ರೀ ಕೋದಂಡರಾಮಚಂದ್ರಸ್ವಾಮಿ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು  ವಿಜೃಂಭಣೆಯಿಂದ ನೆರವೇರಿತು.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಫೆ.3): ಚಿಕ್ಕಮಗಳೂರು ತಾಲೂಕಿನ ಹಿರೇಮಗಳೂರಿನಲ್ಲಿ ಸಂಭ್ರಮ ಸಡಗರ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ಹಿರೇಮಗಳೂರಿನ ಐತಿಹಾಸಿಕ ಭಾರ್ಗವಪುರಿ ಶ್ರೀ ಕೋದಂಡರಾಮಚಂದ್ರಸ್ವಾಮಿ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು  ವಿಜೃಂಭಣೆಯಿಂದ ನೆರವೇರಿತು. ಸರ್ವಾಲಂಕೃತವಾದ ರಥದಲ್ಲಿ ಕೋಂದಡರಾಮಚಂದ್ರಸ್ವಾಮಿ ವಿರಾಜಮಾನನಾದ ನಂತರ ಶುಭ ಅಭಿಜಿನ್ ಲಗ್ನದಲ್ಲಿ ಮಧ್ಯಾಹ್ನ 12.15 ಕ್ಕೆ ಸರಿಯಾಗಿ ರಥೋತ್ಸವ ಆರಂಭಗೊಂಡಿತು. ಶ್ರೀರಾಮಚಂದ್ರನಿಗೆ ಜೈಕಾರ ಹಾಕುತ್ತಾ ಭಕ್ತರು ರಥವನ್ನು ಎಳೆದರು.

Tap to resize

Latest Videos

ಗ್ರಾಮ ಪ್ರದಕ್ಷಿಣೆ:
ನಂತರ ದೇವಸ್ಥಾನವನ್ನು ಬಳಸಿಕೊಂಡು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರಥವು ಸಂಜೆ ವೇಳಗೆ ದೇವಸ್ಥಾನದ ಹೆಬ್ಬಾಗಿಲ ಬಳಿಗೆ ಹಿಂತಿರುಗಿತು. ಮಾರ್ಗದುದ್ದಕ್ಕೂ ರಥಕ್ಕೆ ಹೂವು, ಹಣ್ಣುಗಳನ್ನು ಎಸೆದು ಭಕ್ತರು ಹರಕೆ ತೀರಿಸಿದರು. ನಿವಾಸಿಗಳು ರಸ್ತೆಗೆ ನೀರು, ರಂಗೋಲಿ ಹಾಕಿ ರಾಮಚಂದ್ರಸ್ವಾಮಿಯನ್ನು ಬರಮಾಡಿಕೊಂಡರು. ದಾರಿಯುದ್ದಕ್ಕೂ ದೇವರ ಜಪ, ಜೈಕಾರಗಳು ಕೇಳಿಬಂದವು. ರಥೋತ್ಸವದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ,ನಗರಸಭಾ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ , ಕಾಂಗ್ರೆಸ್ ಮುಖಂಡರಾದ ಎಚ್ ಡಿ ತಮ್ಮಯ್ಯ , ಪುಟ್ಟಸ್ವಾಮಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು

ಹಬ್ಬದೂಟ-ಪಾನಕ ವಿತರಣೆ:
ಹಿರೇಮಗಳೂರು ಸೇರಿದಂತೆ ಅಕ್ಕ ಪಕ್ಕದ ಪ್ರತಿ ಮನೆಗಳಲ್ಲೂ ಹಬ್ಬದ ಅಡುಗೆ, ಪಾನಕ ತಯಾರಿಸಿ ಬಂಧು ಬಳಗದೊಂದಿಗೆ ಸೇರಿ ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಭಕ್ತಿ ಭಾವದಿಂದ ರಥೋತ್ಸವದಲ್ಲಿ ಪಾಲ್ಗೊಂಡರು. ಸ್ಥಳೀಯ ನಿವಾಸಿಗಳು ಸೇದಂತೆ ಬಹುತೇಕ ಭಕ್ತರು ಸಾಂಪ್ರದಾಯಿಕ ಉಡುಪು ಧರಿಸಿ ಭಕ್ತಿ ಸಮರ್ಪಿಸಿದರು. 

ವಿಶೇಷ ಪೂಜಾ ಕೈಂಕರ್ಯ:
ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಬೆಳಗಿನಿಂದಲೇ ಚತುಸ್ಥಾನಾರ್ಚನೆ, ಬಲಿಹರಣ, ಶ್ರೀ ಕೃಷ್ಣಗಂಧೋತ್ಸವ, ವಸಂತಸೇವೆ, ತೋಮಾಲೆ ಸೇವೆ, ಪುಷ್ಪಾಲಂಕಾರ ಸೇವೆ ಹಾಗೂ ಮಂಟಪ ಸೇವೆ ಸೇರಿದಂತೆ  ವಿಶೇಷ ಪೂಜೆ, ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಎಲ್ಲಾ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ತಂತ್ರ-ಮಂತ್ರಗಳಲ್ಲಿ ಬಳಸಲಾಗೋ ತರಕಾರಿಗಳಿಂದ ಸಮಸ್ಯೆಗಳು ದೂರ

ರಥೋತ್ಸವದಲ್ಲಿ ಮಕ್ಕಳ ಬೆಂಡು ಬತ್ತಾಸು, ತಿಂಡಿ ತಿನಿಸುಗಳ ಅಂಗಡಿಗಳು, ಆಟಿಕೆ ಅಂಗಡಿಗಳು, ಬಟ್ಟೆ, ದಿನೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.ರಥೋತ್ಸವ ವೇಳೆಯಲ್ಲಿ ಮಾತಾಡಿದ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್, ಹಿರೇಮಗಳೂರಿನ ಕನ್ನಡ ರಾಮನ ಗುಡಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ, ಆಡಳಿತ ಮಂಡಳಿ ಸಹಕಾರದೊಂದಿಗೆ ಬ್ರಹ್ಮರಥೋತ್ಸವ ವಿಜಭಣೆಯಿಂದ ನೆರವೇರಿದೆ ಎಂದರು. ಪ್ರೀತಿ, ಪ್ರೇಮ, ವಿಶ್ವಾಸ, ಸೌಹಾರ್ಧದ ಸಂಕೇತವಾಗಿ ರಥೋತ್ಸವ ನಡೆದಿದೆ.

ಎಷ್ಟು ಸುತ್ತಿನ ಕಾಲುಂಗುರ ಧರಿಸಬೇಕು?; ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕಾಲುಂಗುರದ ಮಹತ್ವ

ಇಡೀ ಊರಿನ ಸಹಭಾಗಿತ್ವದಲ್ಲಿ ಜಾತ್ಯತೀತ ಮನೋಭೂಮಿಕೆಯಲ್ಲಿ ನಾವೆಲ್ಲಾ ಒಂದು, ಬಂಧು ಎನ್ನುವ ಹಾಗೆ ದಲಿತ ಬಂಧುಗಳು ಶ್ರದ್ಧಾ, ಭಕ್ತಿ ಪೂರಕವಾಗಿ ಇಡೀ ರಥಕ್ಕೆ ಹೂಮಾಲೆಯನ್ನು ಸಮರ್ಪಿಸಿದ್ದಲ್ಲದೆ, ವಿಶ್ವಮಾನವತ್ವಕ್ಕೆ ಸಂಕೇತವಾಗುವ ರೀತಿ ಶ್ರೀರಾಮಚಂದ್ರ ಸೀತಾ ಮಾತೆ ಜೊತೆ ರಥಾರೂಢರಾಗುವ ಮೊದಲು ದಲಿತ ಬಂಧುಗಳ ಮೊದಲ ಪೂಜೆ ಸ್ವೀಕರಿಸುವ ಕಾರಣ ಇಲ್ಲಿ ನಡೆಯುವ ಕಾರ್ಯಕ್ರಮ ಬಲು ವಿಶೇಷ ಎಂದರು.ಸಂಭ್ರಮದ ಉತ್ಸವ ಎಲ್ಲರಿಗೂ ಉಲ್ಲಾಸ ತಂದು ಕೊಟ್ಟಿದೆ. ದೇಶಕ್ಕೆ, ಸಮಾಜಕ್ಕೆ, ಸಂಸ್ಕೃತಿಗೆ, ಜಗತ್ತಿಗೆ ಸನ್ಮಂಗಳವನ್ನುಂಟು ಮಾಡಲೆಂದು ಎಲ್ಲರೂ ಕನ್ನಡದಲ್ಲಿ ಪ್ರಾರ್ಥನೆ ಮಾಡಿದ್ದು ಗಮನಾರ್ಹ ಎಂದರು.

click me!