ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!?

By Suvarna News  |  First Published Oct 16, 2020, 5:47 PM IST

ಸಂಖ್ಯಾ ಶಾಸ್ತ್ರದಲ್ಲಿ ವ್ಯಕ್ತಿಗೆ ಅದೃಷ್ಟ ತರುವ ಸಂಖ್ಯೆ ಯಾವುದೆಂದು ಹೇಳುತ್ತಾರೆ. ಹಲವರು ಕೆಲವು ವಸ್ತುಗಳು, ಬಣ್ಣಗಳು ಅಥವಾ  ನಿರ್ದಿಷ್ಟ ಸಂಖ್ಯೆ ಅದೃಷ್ಟ ತರುತ್ತದೆ ಎಂಬ ನಂಬಿರುತ್ತಾರೆ. ಕೆಲವರಿಗೆ ಹುಟ್ಟಿದ ದಿನ ಅದೃಷ್ಟ ತಂದರೆ ಮತ್ತೆ ಕೆಲವರಿಗೆ ಹಾಗಾಗುವುದಿಲ್ಲ. ರಾಶಿಯ ಆಧಾರದ ಮೇಲೆ ಪ್ರತ್ಯೇಕ ರಾಶಿಯವರಿಗೆ ಅದೃಷ್ಟ ತಂದುಕೊಡುವ ಸಂಖ್ಯೆ ಇರುತ್ತದೆ. ಹಾಗಾದರೆ ಆಯಾ ರಾಶಿಯವರ ಲಕ್ಕಿ ನಂಬರ್ ಯಾವುದೆಂದು ತಿಳಿಯೋಣ...
 


ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕ ನೋಡಿ ಅದೃಷ್ಟದ ಬಗ್ಗೆ ಹೇಳುತ್ತಾರೆ. ಹಾಗೆಯೇ ಸಂಖ್ಯಾ ಶಾಸ್ತ್ರದಲ್ಲೂ ವ್ಯಕ್ತಿಗೆ ಅದೃಷ್ಟ ತಂದುಕೊಡುವ ಸಂಖ್ಯೆ ಯಾವುದೆಂದು ಹೇಳಬಹುದಾಗಿದೆ. 

ಸಾಮಾನ್ಯವಾಗಿ ಹುಟ್ಟಿನ ದಿನಾಂಕವು ಅದೃಷ್ಟ ತರುವ ಸಂಖ್ಯೆ ಎಂದು ತಿಳಿದಿರುತ್ತೇವೆ. ಅದು ನಿಜವಾಗಬೇಕೆಂದೇನೂ ಇಲ್ಲ, ಕೆಲವರಿಗೆ ಹುಟ್ಟಿದ ದಿನ ಅದೃಷ್ಟ ತಂದರೆ ಮತ್ತೆ ಕೆಲವರಿಗೆ ಆ ಸಂಖ್ಯೆ ಲಕ್ಕಿ ಆಗಿರುವುದಿಲ್ಲ. ಜನ್ಮ ತಿಥಿಯನ್ನು ಆಧರಿಸಿ ವ್ಯಕ್ತಿತ್ವವನ್ನು ಅರಿಯಲಾಗುತ್ತದೆ. ಹಾಗೆಯೇ ರಾಶಿಯ ಆಧಾರದ ಮೇಲೆ ಅದೃಷ್ಟ ತರುವ ಸಂಖ್ಯೆ ಯಾವುದೆಂದು ಹೇಳಬಹುದಾಗಿದೆ. ಹಾಗಾದರೆ ರಾಶಿಯನುಸಾರ ಯಾವ ಸಂಖ್ಯೆ ಲಕ್ಕಿ ಎಂದು ನೋಡೋಣ....

ಮೇಷ ರಾಶಿ
ಈ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ಇವರು ಪ್ರತಿ ಕೆಲಸದಲ್ಲೂ ಅತ್ಯುತ್ತಮ ಪರಿಣಾಮವನ್ನು ಅಪೇಕ್ಷಿಸುತ್ತಾರೆ. ಇವರಿಗೆ ಅದೃಷ್ಟ ತರುವ ಸಂಖ್ಯೆ 1. ಹಾಗಾಗಿ ಮೇಷ ರಾಶಿಯವರು ಉತ್ತಮ ಕೆಲಸಗಳನ್ನು ಆರಂಭಿಸುವಾಗ ಈ ಸಂಖ್ಯೆಗೆ ಆದ್ಯತೆ ನೀಡಿದರೆ ಉತ್ತಮ. ಸಂಖ್ಯೆ 1ನ್ನು ಬಿಟ್ಟರೆ 9, 36, 13, 69, 53, 67 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

 

Tap to resize

Latest Videos



ವೃಷಭ ರಾಶಿ
ಈ ರಾಶಿಯ ಅಧಿಪತಿ ಶುಕ್ರ ಗ್ರಹ. ಇವರು ಹೆಚ್ಚಾಗಿ ರೊಮ್ಯಾಂಟಿಕ್, ತರ್ಕ ಮಾಡುವುದು ಮತ್ತು ದಯಾ ಗುಣವನ್ನು ಹೊಂದಿರುತ್ತಾರೆ. ಇವರ ಲಕ್ಕಿ ನಂಬರ್ ಎರಡು. ವೃಷಭ ರಾಶಿಯವರಿಗೆ ಸಂಖ್ಯೆ 2 ಅದೃಷ್ಟವನ್ನು ತಂದುಕೊಡುತ್ತದೆ. ಸಂಖ್ಯೆ 2ನ್ನು ಬಿಟ್ಟರೆ 6, 9, 11, 35, 50, 57, 82 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ಇದನ್ನು ಓದಿ: ಈ ನವರಾತ್ರಿಯ ದುರ್ಲಭ ಯೋಗದ ಪ್ರಭಾವ ಯಾವ ರಾಶಿಗೆ, ಹೇಗಿದೆ ಗೊತ್ತಾ..? 

ಮಿಥುನ ರಾಶಿ
ಈ ರಾಶಿಯ ಅಧಿಪತಿ ಬುಧಗ್ರಹ. ಹಾಗಾಗಿ ಇವರು ಹೆಚ್ಚು ಬುದ್ಧಿವಂತರು ಮತ್ತು ಕ್ರಿಯಾಶೀಲರಾಗಿರುತ್ತಾರೆ. ಇವರಿಗೆ ಸಂಖ್ಯೆ 8 ಅದೃಷ್ಟವನ್ನು ತರುತ್ತದೆ. ಸಂಖ್ಯೆ 8ನ್ನು ಬಿಟ್ಟರೆ 3, 12, 18, 35, 43, 52, 86 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ಕರ್ಕಾಟಕ ರಾಶಿ
ಈ ರಾಶಿಯ ಅಧಿಪತಿ ಚಂದ್ರಗ್ರಹ. ಸರಳ ಸ್ವಭಾವದ ಈ ರಾಶಿಯ ವ್ಯಕ್ತಿಗಳಿಗೆ ಸಂಖ್ಯೆ 7 ಲಕ್ಕಿ ನಂಬರ್ ಆಗಿದೆ. ಉತ್ತಮ ಕಾರ್ಯಗಳಲ್ಲಿ ಈ ಸಂಖ್ಯೆಯನ್ನು ಬಳಸಿದರೆ ಶುಭಫಲ ದೊರೆಯುತ್ತದೆ. ಸಂಖ್ಯೆ 7ನ್ನು ಬಿಟ್ಟರೆ 2, 11, 58, 24, 66, 53 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯಗ್ರಹ. ಹಠ ಸ್ವಭಾವದ ಈ ರಾಶಿಯವರು ಬೇಗ ಸೋಲೊಪ್ಪಿಕೊಳ್ಳುವುದಿಲ್ಲ. ಇವರಿಗೆ ಅದೃಷ್ಟ ತರುವ ಸಂಖ್ಯೆ 1. ಸಂಖ್ಯೆ 1ನ್ನು ಬಿಟ್ಟರೆ 4, 10, 34, 83, 59 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ಕನ್ಯಾ ರಾಶಿ
ಈ ರಾಶಿಯ ಅಧಿಪತಿ ಗ್ರಹ ಬುಧ. ಈ ರಾಶಿಯ ವ್ಯಕ್ತಿಗಳು ಸೂಕ್ಷ್ಮ ಮತ್ತು ದಯಾ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಸಂಖ್ಯೆ 5 ಅದೃಷ್ಟವನ್ನು ತಂದುಕೊಡುತ್ತದೆ. ಸಂಖ್ಯೆ 5ನ್ನು ಬಿಟ್ಟರೆ 3, 16, 90, 29, 80 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.|

ತುಲಾ ರಾಶಿ
ಈ ರಾಶಿಯ ಅಧಿಪತಿ ಗ್ರಹ ಶುಕ್ರ. ಹಾಗಾಗಿ ಈ ರಾಶಿಯವರು ಆದರ್ಶ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರಿಗೆ ಸಂಖ್ಯೆ 4 ಶುಭವೆಂದು ಹೇಳಬಹುದಾಗಿದೆ. ಸಂಖ್ಯೆ 4ನ್ನು ಬಿಟ್ಟರೆ 6, 7, 20, 55, 35 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ವೃಶ್ಚಿಕ ರಾಶಿ
ಈ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಹೆಚ್ಚು ಕ್ರಿಯಾಶೀಲರು ಮತ್ತು ಸ್ವಂತತ್ರವನ್ನು ಇಷ್ಟಪಡುವವರು. ಇವರಿಗೆ ಸಂಖ್ಯೆ 9 ಅದೃಷ್ಟವನ್ನು ತರುತ್ತದೆ. ಸಂಖ್ಯೆ 9ನ್ನು ಬಿಟ್ಟರೆ 11, 17, 27, 45, 53 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ಇದನ್ನು ಓದಿ: ನವರಾತ್ರಿಯಲ್ಲಿ ರಾಶಿಯನುಸಾರ ಈ ಮಂತ್ರಗಳನ್ನು ಪಠಿಸಿದರೆ ಲಕ್ ಗ್ಯಾರಂಟಿ...

ಧನು ರಾಶಿ
ಈ ರಾಶಿಯ ಅಧಿಪತಿ ಗುರುಗ್ರಹ. ಅಂದುಕೊಂಡ ಗುರಿ ಸಾಧಿಸುವವರೆಗೂ ಛಲ ಬಿಡದ ಸ್ವಭಾವ ಇವರದ್ದು. ಇವರಿಗೆ ಸಂಖ್ಯೆ 3 ಅದೃಷ್ಟವನ್ನು ತರುತ್ತದೆ. ಸಂಖ್ಯೆ 3ನ್ನು ಬಿಟ್ಟರೆ 5, 15, 12, 21, 30 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ಮಕರ ರಾಶಿ
ಈ ರಾಶಿಯ ಅಧಿಪತಿ ಶನಿ ಗ್ರಹ. ಹೆಚ್ಚು ಆತ್ಮವಿಶ್ವಾಸವುಳ್ಳ ಈ ರಾಶಿಯವರು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಇವರಿಗೆ ಸಂಖ್ಯೆ 4 ಅದೃಷ್ಟವನ್ನು ತಂದುಕೊಡುತ್ತದೆ. ಸಂಖ್ಯೆ 4ನ್ನು ಬಿಟ್ಟರೆ 1, 10, 13, 17, 22, 25 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ಕುಂಭ ರಾಶಿ
ಈ ರಾಶಿಯ ಅಧಿಪತಿ ಗ್ರಹ ಶನಿದೇವ. ಈ ರಾಶಿಯವರು ಕ್ರಿಯಾಶೀಲರು ಮತ್ತು ವಿದೇಯ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಸಂಖ್ಯೆ 8 ಶುಭವನ್ನು ತರುತ್ತದೆ. ಸಂಖ್ಯೆ 8ನ್ನು ಬಿಟ್ಟರೆ 4, 13, 17, 40, 61 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

ಇದನ್ನು ಓದಿ: ಶಿವಪುರಾಣದ ಪ್ರಕಾರ ಈ ಪಾಪಗಳಿಗೆ ಕ್ಷಮೆಯೇ ಇಲ್ಲ..! 

ಮೀನ ರಾಶಿ
ಈ ರಾಶಿಯ ಅಧಿಪತಿ ಗುರುಗ್ರಹ. ಈ ರಾಶಿಯವರು ಸಮಸ್ಯೆಗಳನ್ನು ಬಹುಬೇಗ ನಿವಾರಿಸಿಕೊಳ್ಳುವ ಚತುರತೆಯನ್ನು ಹೊಂದಿರುತ್ತಾರೆ. ಇವರಿಗೆ ಅದೃಷ್ಟ ತರುವ ಸಂಖ್ಯೆ 3. ಸಂಖ್ಯೆ 3ನ್ನು ಬಿಟ್ಟರೆ 12, 27, 30, 34, 61 ಈ ಸಂಖ್ಯೆಗಳು ಲಕ್ಕಿ ಎಂದು ಹೇಳಬಹುದಾಗಿದೆ.

click me!