ನವರಾತ್ರಿಯಲ್ಲಿ ರಾಶಿಯನುಸಾರ ಈ ಮಂತ್ರಗಳನ್ನು ಪಠಿಸಿದರೆ ಲಕ್ ಗ್ಯಾರಂಟಿ

By Suvarna News  |  First Published Oct 14, 2020, 7:23 PM IST

ನವರಾತ್ರಿಯು ನವದುರ್ಗೆಯರ ಆರಾಧನೆಯ ಕಾಲ. ದುಷ್ಟರನ್ನು ಸಂಹರಿಸಲು ಮಾತೆಯು ನವರೂಪ ಧಾರಣ ಮಾಡಿ ಜಗತ್ತನ್ನು ಉದ್ಧರಿಸಿದ್ದರಿಂದ, ಈ ಕಾಲವನ್ನು ನವರಾತ್ರಿಯಾಗಿ ಆಚರಿಸಲಾಗುತ್ತದೆ. ಶುಭ ನವರಾತ್ರಿಯಲ್ಲಿ ದೇವಿಯನ್ನು ಪೂಜಿಸಿ, ಆರಾಧಿಸಲಾಗುತ್ತದೆ. ದೇವಿಯನ್ನು ಪ್ರಸನ್ನಗೊಳಿಸಿ, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ರಾಶಿಯ ಅನುಸಾರ ದೇವಿಯ ಈ ಮಂತ್ರಗಳನ್ನು ಜಪಿಸಬೇಕು. ಹಾಗಾದರೆ ಮಂತ್ರಗಳು ಯಾವುವೆಂದು ತಿಳಿಯೋಣ.


ಇದೇ ಅಕ್ಟೋಬರ್ 17ರಿಂದ ಶರನ್ನವರಾತ್ರಿ ಆರಂಭವಾಗಲಿದೆ. ದೇವಿಯ ಒಂಭತ್ತು ಅವತಾರಗಳನ್ನು ಆರಾಧಿಸುವ ಮಹತ್ವದ ಹಬ್ಬ ಇದಾಗಿದೆ. ನವ ರೂಪಗಳನ್ನು ಧರಿಸಿ ಜಗತ್ತನ್ನು ಉದ್ಧರಿಸಿದ ಜಗನ್ಮಾತೆಯನ್ನು ಪೂಜಿಸಿ, ಮನೋಭಿಷ್ಟಗಳನ್ನು ಈಡೇರಿಸಿಕೊಳ್ಳುವ ಸುಸಮಯ ಇದಾಗಿರುತ್ತದೆ.

ಜಗನ್ಮಾತೆಯ ಕೃಪೆ ಪಡೆಯಲು ರಾಶಿಯನುಸಾರ ಈ ಮಂತ್ರಗಳನ್ನು ಪಠಿಸಿದರೆ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ ಮತ್ತು ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ.

ಮೇಷ ರಾಶಿ
ಮೇಷ ರಾಶಿಯವರು ಮಂಗಳಾ ಕಾಳಿ ದೇವಿಯನ್ನು ಆರಾಧಿಸಬೇಕು. ಈ ರಾಶಿಯವರು “ಓಂ ಮಂಗಳಾ ದೇವಿ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ನವರಾತ್ರಿಯಲ್ಲಿ ಈ ರಾಶಿಯವರು ದೇವಿಯ ಈ ಮಂತ್ರವನ್ನು ಪಠಿಸುವುದರಿಂದ ಸಕಲ ಇಷ್ಟಾರ್ಥ ಸಿದ್ಧಿಸುತ್ತವೆ.

ಇದನ್ನು ಓದಿ: ಶಿವಪುರಾಣದ ಪ್ರಕಾರ ಈ ಪಾಪಗಳಿಗೆ ಕ್ಷಮೆಯೇ ಇಲ್ಲ..! 

ವೃಷಭ ರಾಶಿ
ವೃಷಭ ರಾಶಿಯವರು ಕಾತ್ಯಾಯನಿ ದೇವಿಯನ್ನು ಆರಾಧಿಸಬೇಕು. ಕಾತ್ಯಾಯನಿ ದೇವಿಯ ಕೃಪೆ ಪಡೆಯಲು “ಓಂ ಕಾತ್ಯಾಯನಿ ನಮಃ” ನಾಮ ಮಂತ್ರದ ಜಪವನ್ನು ಮಾಡಬೇಕು. ಇದರಿಂದ ಮನೋಕಾಮನೆಗಳು ಈಡೇರುತ್ತವೆ.

ಮಿಥುನ ರಾಶಿ
ಮಿಥುನ ರಾಶಿಯವರು ನವರಾತ್ರಿಯಲ್ಲಿ ದೇವಿ ದುರ್ಗೆಯ ಆರಾಧನೆ ಮಾಡಿ ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಲಭಿಸುತ್ತವೆ. ಈ ರಾಶಿಯವರು “ಓಂ ದುರ್ಗಾಯೇ ನಮಃ” ಎಂಬ ಮಂತ್ರವನ್ನು ಜಪಿಸಬೇಕು.

ಕರ್ಕಾಟಕ ರಾಶಿ
ಈ ರಾಶಿಯವರು ಶಕ್ತಿ ದೇವತೆ ಶಿವತ್ರಿಯ ಆರಾಧನೆ ಮಾಡುವುದರ ಜೊತೆಗೆ ಶಿವನ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. ಮಾತೆಯ ಆರಾಧನೆ ಮಾಡುವುದರಿಂದ ಈ ಮಂತ್ರವನ್ನು “ಓಂ ಶಿವಾಯ ನಮಃ” ಎಂದು ಉಚ್ಛಾರಣೆ ಮಾಡಬೇಕು.

ಸಿಂಹ ರಾಶಿ
ನವರಾತ್ರಿಯಲ್ಲಿ ದೇವಿಯ ಕೃಪೆ ಪಡೆಯಲು ದೇವಿ ಭದ್ರಕಾಳಿಯ ಆರಾಧನೆ ಮಾಡಬೇಕು. “ಓಂ ಕಾಲರೂಪಿಣ್ಯೈ ನಮಃ” ಎಂಬ ಮಂತ್ರವನ್ನು ಜಪಿಸುವುದರಿಂದ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ನವರಾತ್ರಿಯಲ್ಲಿ ದೇವಿಯ ಕೃಪೆ ಪಡೆಯಲು ಅಂಬಾ ಮಾತೆಯನ್ನು ಆರಾಧಿಸಬೇಕು. “ಓಂ ಅಂಬೇ ನಮಃ” ಎಂಬ ಮಂತ್ರವನ್ನು ಜಪಿಸಬೇಕು. ಮಾತೆಯ ಕೃಪೆಯಿಂದ ಸಕಲೈಶ್ವರ್ಯವು ಪ್ರಾಪ್ತಿಯಾಗುತ್ತದೆ.

ತುಲಾ ರಾಶಿ
ಈ ರಾಶಿಯವರು ಮಾತೆ ಆದಿಶಕ್ತಿಯನ್ನು ಆರಾಧಿಸಬೇಕು. ಆದಿಶಕ್ತಿಯ ಕೃಪೆಗೆ “ಓಂ ದುರ್ಗಾದೇವ್ಯೈ ನಮಃ” ಎಂಬ ಮಂತ್ರವನ್ನು ಪಠಿಸುವುದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.

ವೃಶ್ಚಿಕ ರಾಶಿ
ಈ ರಾಶಿಯವರು ಮಾತೆ ಅಂಬಿಕೆಯನ್ನು ಆರಾಧಿಸಬೇಕು. “ಓಂ ಅಂಬಿಕೇ ನಮಃ” ಎಂಬ ಮಂತ್ರವನ್ನು ಜಪಿಸುತ್ತಾ ದೇವಿಯ ಧ್ಯಾನವನ್ನು ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ಇದನ್ನು ಓದಿ: ಲಕ್ಷ್ಮೀ ನೆಲೆಸಬೇಕೆಂದರೆ ನಿಮ್ಮ ಮನೆಯಲ್ಲಿ ಈ ನಾಲ್ಕು ವಸ್ತುಗಳನ್ನಿಡಿ..! 

ಧನು ರಾಶಿ
ಧನು ರಾಶಿಯವರು ದುರ್ಗಾ ಮಾತೆಯನ್ನು ಆರಾಧಿಸಬೇಕು. ದುರ್ಗೆಯನ್ನು ಪೂಜಿಸುತ್ತಾ “ಓಂ ದುರ್ಗಾಯ ನಮಃ ” ಎಂಬ ಮಂತ್ರವನ್ನು ಪಠಿಸುವುದರಿಂದ ಮನೆಯಲ್ಲಿ ಶಾಂತಿ ನೆಲೆಸುವುದಲ್ಲದೇ, ಸಂಪತ್ತು ವೃದ್ಧಿಯಾಗುತ್ತದೆ.

ಮಕರ ರಾಶಿ
ಮಕರ ರಾಶಿಯವರು ಜಗನ್ಮಾತೆಯ ಕೃಪೆ ಪಡೆಯಲು ಶಕ್ತಿ ಸ್ವರೂಪಿಣಿಯನ್ನು ಆರಾಧಿಸಬೇಕು. ಶ್ರದ್ಧೆಯಿಂದ “ಓಂ ದೈತ್ಯ ಮರ್ದಿನಿ ನಮಃ” ಎಂಬ ಮಂತ್ರವನ್ನು ಪಠಿಸುವುದರ ಮೂಲಕ ಶಕ್ತಿ ದೇವತೆಯ ಕೃಪೆಗೆ ಪಾತ್ರರಾಗಬಹುದಾಗಿದೆ.

ಕುಂಭ ರಾಶಿ
ಈ ರಾಶಿಯವರು ನವರಾತ್ರಿಯಲ್ಲಿ ಚಾಮುಂಡಿ ದೇವಿಯನ್ನು ಭಜಿಸಬೇಕು. ಚಾಮುಂಡಿ ಕೃಪೆಗೆ ಪಾತ್ರರಾಗಬೇಕೆಂದರೆ, ಶ್ರದ್ಧೆ ಮತ್ತು ಭಕ್ತಿಯಿಂದ “ಓಂ ಚಾಮುಂಡಾಯೈ ನಮಃ” ಎಂಬ ಮಂತ್ರವನ್ನು ಜಪಿಸಬೇಕು.

ಇದನ್ನು ಓದಿ: ಈ ಜೀವಿಗಳನ್ನು ಕನಸಿನಲ್ಲಿ ಕಂಡರೆ ಧನಲಾಭ..! 

ಮೀನ ರಾಶಿ
ಮೀನ ರಾಶಿಯವರು ದೇವಿ ಕೃಪೆಗೆ ಪಾತ್ರರಾಗಬೇಕೆಂದರೆ ಭವಾನಿಯನ್ನು ಆರಾಧಿಸಬೇಕು. “ಓಂ ತುಳಜಾ ದೇವ್ಯೈ ನಮಃ” ಎಂಬ ಮಂತ್ರವನ್ನು ಶ್ರದ್ಧಾಭಕ್ತಿಯಿಂದ ಜಪಿಸಿ, ದೇವಿಯನ್ನು ಪೂಜಿಸಿದಲ್ಲಿ ದೇವಿಯ ಕೃಪೆ ಲಭಿಸಿ, ಇಷ್ಟಾರ್ಥ ಸಿದ್ಧಿಸುತ್ತದೆ.

click me!