ಈ ನವರಾತ್ರಿಯ ದುರ್ಲಭ ಯೋಗದ ಪ್ರಭಾವ ಯಾವ ರಾಶಿಗೆ, ಹೇಗಿದೆ ಗೊತ್ತಾ..?

By Suvarna NewsFirst Published Oct 15, 2020, 7:54 PM IST
Highlights

ಶರನ್ನವರಾತ್ರಿಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿ ನವರಾತ್ರಿಯನ್ನು ಒಂಭತ್ತು ದಿನಗಳು ಆಚರಿಸಲಾಗುತ್ತದೆ. 58 ವರ್ಷಗಳ ನಂತರ ಶನಿಯು ಮಕರದಲ್ಲಿ ಮತ್ತು ಗುರುವು ಧನು ರಾಶಿಯಲ್ಲಿ ಸ್ಥಿತರಾಗಿರುವ ಕಾರಣ ಈ ಬಾರಿಯ ನವರಾತ್ರಿಯು ದುರ್ಲಭ ಯೋಗವನ್ನುಂಟು ಮಾಡಿದೆ. ನವರಾತ್ರಿ ದೇವಿಯನ್ನು ಶ್ರದ್ಧೆಯಿಂದ ಪೂಜಿಸಿದರೆ ಸಕಲ ಸಂಕಷ್ಟವನ್ನು ಕಳೆದು ಸುಖವನ್ನು ನೀಡುತ್ತಾಳೆ. ಶುಭಾಶುಭ ಫಲಗಳನ್ನು ನೀಡುವ ಈ ದುರ್ಲಭ ಯೋಗವು ಯಾವ ರಾಶಿಗೆ ಯಾವ ಯೋಗವನ್ನುಂಟು ಮಾಡುತ್ತದೆ? ತಿಳಿಯೋಣ...

ದೇವಿಯ ಎಲ್ಲ ರೂಪಗಳನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆರಾಧಿಸಲ್ಪಡುವ ಆಚರಣೆಯೇ ನವರಾತ್ರಿ. ಹಿಂದೂ ಧರ್ಮದಲ್ಲಿ ನವರಾತ್ರಿಗೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಈ ಬಾರಿಯ ನವರಾತ್ರಿಯು ಅಕ್ಟೋಬರ್ 17ರಿಂದ 25 ರ ವರೆಗೆ ನಡೆಯಲಿದೆ. ಈ ಸಮಯದಲ್ಲಿ ಅತ್ಯಂತ ವಿಶೇಷ ಶುಭ ಯೋಗವುಂಟಾಗಲಿದೆ. 

ಈ ಬಾರಿಯ ನವರಾತ್ರಿಯ ಸಮಯದಲ್ಲಿ ಶನಿಯು ಮಕರದಲ್ಲಿ ಮತ್ತು ಗುರುವು ಧನು ರಾಶಿಯಲ್ಲಿ ಸ್ಥಿತರಾಗಿದ್ದಾರೆ. ಈ ರೀತಿಯ ಯೋಗ 1962ರಲ್ಲಿ ಬಂದಿತ್ತು, ಅದೇ ದುರ್ಲಭ ಯೋಗವು ಈ ನವರಾತ್ರಿಯಲ್ಲಿ ಉಂಟಾಗಿರುವುದು ವಿಶೇಷವೆಂದು ಹೇಳಲಾಗುತ್ತಿದೆ. 

ಒಂಭತ್ತು ದಿನಗಳ ನವರಾತ್ರಿ
ಈ ಬಾರಿಯು 9 ದಿನಗಳ ಕಾಲ ನವರಾತ್ರಿ ಆಚರಿಸಲ್ಪಡುತ್ತದೆ. ಈ ಬಾರಿ ನವರಾತ್ರಿಯು ಶನಿವಾರದಿಂದ ಆರಂಭವಾಗುತ್ತಿರುವುದರಿಂದ ದೇವಿಯ ವಾಹನ ಅಶ್ವ (ಕುದುರೆ)ವಾಗಿದೆ. ನವರಾತ್ರಿ ಯಾವ ದಿನ ಆರಂಭವಾಗುತ್ತದೆಯೋ ಅದಕ್ಕನುಸಾರವಾಗಿ ದೇವಿಯ ವಾಹನವಿರುತ್ತದೆ. ಸೋಮವಾರ ಅಥವಾ ಭಾನುವಾರ ನವರಾತ್ರಿ ಆರಂಭವಾದರೆ ದೇವಿಯ ವಾಹನ ಆನೆಯಾಗಿರುತ್ತದೆ. ಶನಿವಾರ ಅಥವಾ ಮಂಗಳವಾರವಾದರೆ ಕುದುರೆ ದೇವಿಯ ವಾಹನವಾಗಿರುತ್ತದೆ. ಗುರವಾರ ಅಥವಾ ಶುಕ್ರವಾರ ಆರಂಭವಾದ ನವರಾತ್ರಿಯಲ್ಲಿ ದೇವಿಯ ವಾಹನ ರಥವಾಗಿರುತ್ತದೆ. ಅದೇ ಬುಧವಾರವಾದರೆ ದೇವಿಯ ವಾಹನ ದೋಣಿಯಾಗಿರುತ್ತದೆ.

ಇದನ್ನು ಓದಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದುರ್ಲಭ ಯೋಗವು ಹಲವು ರಾಶಿಯವರಿಗೆ ಶುಭವನ್ನುಂಟು ಮಾಡುತ್ತದೆ. ಕೆಲವರಿಗೆ ಅಶುಭ ಫಲವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ಫಲ? ಎಂದು ತಿಳಿಯೋಣ..

ಮೇಷ ರಾಶಿ
ಮೇಷ ರಾಶಿಯವರಿಗೆ ಕಂಕಣ ಬಲ ಕೂಡಿ ಬಂದು ವಿವಾಹವಾಗುವ ಯೋಗವಿದೆ. ಪ್ರೀತಿಯ ವಿಷಯದಲ್ಲಿದ್ದವರಿಗೆ ಪರಿವಾರದ ಸಹಕಾರ ದೊರೆಯಲಿದೆ. 

ವೃಷಭ ರಾಶಿ
ಈ ರಾಶಿಯವರು ಶತ್ರುಗಳ ವಿರುದ್ಧ ಜಯ ಸಿಗಲಿದೆ. ರೋಗಗಳಿಂದ ಮುಕ್ತಿ ಸಿಗಲಿದೆ.

ಮಿಥುನ ರಾಶಿ
ಈ ರಾಶಿಯವರಿಗೆ ಸಂತಾನ ಫಲ ಪ್ರಾಪ್ತಿಯಾಗಲಿದೆ.ಧನ-ಧಾನ್ಯ ವೃದ್ಧಿಯಾಗಲಿದೆ ಮತ್ತು ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರ ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ. ಕೆಲಸ-ಕಾರ್ಯಗಳಲ್ಲಿ ಉತ್ತಮ ಯಶಸ್ಸು ಸಿಗಲಿದೆ.

ಇದನ್ನು ಓದಿ: ಶಿವಪುರಾಣದ ಪ್ರಕಾರ ಈ ಪಾಪಗಳಿಗೆ ಕ್ಷಮೆಯೇ ಇಲ್ಲ..! 

ಸಿಂಹ ರಾಶಿ
ಈ ರಾಶಿಯವರ ಶಕ್ತಿ ವೃದ್ಧಿಸಲಿದೆ. ಸಹೋದರ, ಸಹೋದರಿಯಿಂದ ಉತ್ತಮ ಸಹಾಯ-ಸಹಕಾರ ದೊರೆಯಲಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಧನ ಲಾಭವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಸುಖ ಮತ್ತು ಶಾಂತಿಯ ವಾತಾವರಣ ನೆಲೆಸಲಿದೆ.



ತುಲಾ ರಾಶಿ
ತುಲಾ ರಾಶಿಯವರು ಅಂದು ಕೊಂಡ ರಾರ್ಯಗಳು ನಿರ್ವಿಘ್ನವಾಗಿ ನಡೆಯಲಿವೆ. ಈ ನವರಾತ್ರಿಯು ಜೀವನದಲ್ಲಿ ಮತ್ತಷ್ಟು ಖುಷಿಯನ್ನು ತರಲಿದೆ.

ವೃಶ್ಚಿಕ ರಾಶಿ
ಈ ರಾಶಿಯವರಿಗೆ ಅನಾವಶ್ಯಕ ಖರ್ಚುಗಳು ಹೆಚ್ಚಲಿದೆ. ಕುಟುಂಬದ ಬಗೆಗಿನ ಚಿಂತೆ ಕಾಡಲಿದೆ. ನವರಾತ್ರಿಯಲ್ಲಿ ದೇವಿಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆರಾಧಿಸಿದರೆ ಕಷ್ಟಗಳು ತಗ್ಗಲಿವೆ.

ಧನು ರಾಶಿ
ಈ ರಾಶಿಯವರಿಗೆ ಉತ್ತಮ ಲಾಭವುಂಟಾಗುವ ಸಾಧ್ಯತೆ ಇದೆ. ಯಾವುದೇ ದೊಡ್ಡ ಚಿಂತೆಯಿಂದ ಮುಕ್ತಿ ಸಿಗಲಿದೆ.

ಮಕರ ರಾಶಿ
ಈ ರಾಶಿಯವರಿಗೆ ಮಾನಸಿಕ ಚಿಂತೆ ಹೆಚ್ಚಾಗಲಿದೆ. ಖರ್ಚು ಸಹ ಹೆಚ್ಚಲಿದೆ.

ಇದನ್ನು ಓದಿ: ಲಕ್ಷ್ಮೀ ನೆಲೆಸಬೇಕೆಂದರೆ ನಿಮ್ಮ ಮನೆಯಲ್ಲಿ ಈ ನಾಲ್ಕು ವಸ್ತುಗಳನ್ನಿಡಿ..! 

ಕುಂಭ ರಾಶಿ
ಈ ರಾಶಿಯವರಿಗೆ ಕೆಲಸ- ಕಾರ್ಯಗಳಲ್ಲಿ ಅದೃಷ್ಟ ಜೊತೆಗಿರುತ್ತದೆ. ಸ್ನೇಹಿತರಿಂದ ಸಹಾಯ ದೊರೆಯಲಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ಶತ್ರುಗಳಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ದುರ್ಘಟನೆಗಳು ಜರುಗುವ ಸಂಭವವಿದ್ದು ಎಚ್ಚರಿಕೆಯಿಂದ ಇರುವುದು ಉತ್ತಮ.

click me!