ಪ್ರತಿ ರಾಶಿಗೂ ಒಂದೊಂದು ಚಕ್ರವು ಉಳಿದೆಲ್ಲದಕ್ಕಿಂತ ಹೆಚ್ಚು ಪ್ರಬಲವಾಗಿರುತ್ತದೆ. ಹೆಚ್ಚಿನ ಶಕ್ತಿ ನೀಡುತ್ತಿರುತ್ತದೆ. ಇದರಿಂದ ಕೆಲ ರಾಶಿಯವರು ಕೆಲ ವಿಷಯಗಳಲ್ಲಿ ಹೆಚ್ಚು ಸ್ಟ್ರಾಂಗ್ ಆಗಿರುತ್ತಾರೆ.
ಎಲ್ಲ ರಾಶಿಗಳಿಗೂ ಕೆಲ ಬಲ(strength)ಗಳಿರುತ್ತವೆ. ಆದರೆ, ಬಹುತೇಕರಿಗೆ ತಮ್ಮೊಳಗಿರುವ ಚಕ್ರಗಳಿಂದ ತಾವು ಆ ಶಕ್ತಿಯನ್ನು ಗಳಿಸುತ್ತಿರುವ ಬಗ್ಗೆ ಅರಿವೇ ಇರುವುದಿಲ್ಲ. ಎಲ್ಲ 12 ರಾಶಿಚಕ್ರಗಳಿಗೂ ಒಂದೊಂದು ಚಕ್ರ ಹೆಚ್ಚು ಪ್ರಾಬಲ್ಯ ಸಾಧಿಸಿರುತ್ತದೆ. ಅದು ವ್ಯಕ್ತಿಯ ಗುಣಗಳ ನಿರ್ಣಾಯಕವೂ ಆಗಲಿದೆ. ನಿಮ್ಮ ರಾಶಿಗೆ ಯಾವ ಚಕ್ರ ಹೆಚ್ಚು ಪ್ರಬಲ(dominant)ವಾದುದು ತಿಳಿಯಿರಿ.
ಮೇಷ(Aries): ಮೇಷಕ್ಕೆ ಮಣಿಪೂರ ಚಕ್ರ(solar plexus chakra) ಪ್ರಬಲವಾಗಿರುತ್ತದೆ. ಈ ಚಕ್ರವು ಹೊಟ್ಟೆಯಲ್ಲಿದ್ದು, ಆತ್ಮವಿಶ್ವಾಸ, ಶಕ್ತಿ ಹಾಗೂ ಸ್ವನಂಬಿಕೆ(self belief)ಯ ಮೂಲ ಶಕ್ತಿ ಕೇಂದ್ರವಾಗಿದೆ.
undefined
ವೃಷಭ(Taurus): ಈ ರಾಶಿಗೆ ಅನಾಹತ ಚಕ್ರ(green heart chakra) ಹೆಚ್ಚು ಪ್ರಬಲವಾಗಿರುತ್ತದೆ. ಈ ಚಕ್ರದ ಶಕ್ತಿಯಿಂದಲೇ ಇವರಲ್ಲಿ ಅನುಕಂಪ, ಸಹಾನುಭೂತಿ(empathy) ಕೌಶಲಗಳು ಹೆಚ್ಚು. ಇತರರೊಂದಿಗೆ ಒಳ್ಳೆಯ ಸಂಬಂಧ ಬೆಳೆಸಲು ಇದು ಸಹಾಯ ಮಾಡುತ್ತದೆ.
ಮಿಥುನ(Gemini): ವಿಶುದ್ಧಿ ಚಕ್ರ(Throat chakra) ಮಿಥುನದವರ ಬಲ. ಈ ಚಕ್ರವು ಸಂವಹನ ಹಾಗೂ ಕ್ರಿಯಾತ್ಮಕತೆ(creativity)ಯ ಶಕ್ತಿ ಕೇಂದ್ರವಾಗಿದೆ. ಹಾಗಾಗಿ, ಮಿಥುನ ರಾಶಿಯವರು ಯಾರ ನಂಬಿಕೆಯನ್ನು ಬೇಕಾದರೂ ಸುಲಭವಾಗಿ ಗೆಲ್ಲಲು ಸಾಧ್ಯವಾಗುತ್ತದೆ. ಜೊತೆಗೆ, ತಮ್ಮ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಬಲ್ಲರು.
ಕಟಕ(Cancer): ಈ ರಾಶಿಯು ಆರನೇ ಚಕ್ರವಾದ ಆಜ್ಞಾ ಚಕ್ರ(third eye chakra)ದ ಪ್ರಾಬಲ್ಯತೆ ಹೊಂದಿರುತ್ತಾರೆ. ಈ ಚಕ್ರವನ್ನು ಆತ್ಮದ ಕೇಂದ್ರ ಎನ್ನಲಾಗುತ್ತದೆ. ಹಣೆಯಲ್ಲಿರುವ ಇದು ಕಟಕ ರಾಶಿಯವರಿಗೆ ದೂರದೃಷ್ಟಿಯನ್ನು ಒದಗಿಸಿಕೊಡುತ್ತದೆ.
Eclipse 2022: ಈ ವರ್ಷ ನಾಲ್ಕು ಬಾರಿ ಬರಲಿದೆ ಗ್ರಹಣ..
ಸಿಂಹ(Leo): ಸಿಂಹ ರಾಶಿಗೆ ಸಹಸ್ರಾರ ಚಕ್ರ(crown chakra) ಪ್ರಬಲವಾಗಿರುತ್ತದೆ. ಇದು ಇವರಿಗೆ ಎಲ್ಲ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಯೋಚಿಸಲು ಸಹಾಯಕವಾಗಿದೆ. ಜೊತೆಗೆ, ಯಾವುದೇ ಸಮಸ್ಯೆಗೆ ಸುಲಭವಾಗಿ ಪರಿಹಾರ(solution) ಹುಡುಕಬಲ್ಲರು.
ಕನ್ಯಾ(Virgo): ಮಿಥುನ ರಾಶಿಯವರಂತೆ ಕನ್ಯಾ ರಾಶಿಗೂ ವಿಶುದ್ಧಿ ಚಕ್ರದ್ದೇ ಪ್ರಾಬಲ್ಯ. ಇದೇ ಕಾರಣದಿಂದ ಇವರು ಸಾರ್ವಜನಿಕವಾಗಿ ಬಹಳ ಚೆನ್ನಾಗಿ ಮಾತನಾಡಬಲ್ಲರು. ಸಂವಹನ ಕಲೆ ಚೆನ್ನಾಗಿರುತ್ತದೆ.
ತುಲಾ(Libra): ಅನಾಹತ ಚಕ್ರವು ತುಲಾ ರಾಶಿಯ ಶಕ್ತಿ ಕೇಂದ್ರ. ಈ ಚಕ್ರವು ಭಾವನೆಗಳ ನಿಗ್ರಹ, ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿರುತ್ತದೆ. ಇದರಿಂದ ತುಲಾ ರಾಶಿಯವರು ಹೆಚ್ಚಿನ ಜನರೊಂದಿಗೆ ಸುಲಭವಾಗಿ ಬೆರೆಯುವ ಜೊತೆಗೆ ಹೆಚ್ಚು ಜನ ಸಂಪಾದನೆ ಮಾಡಬಲ್ಲರು.
ಈ 4 ರಾಶಿ ಹುಡುಗಿಯರು ರಿಲೇಶನ್ ಶಿಪ್ ನಲ್ಲಿ ಬೆಸ್ಟ್!
ವೃಶ್ಚಿಕ(Scorpio): ಇವರೂ ಮೇಷ ರಾಶಿಯವರಂತೆ ಮಣಿಪೂರ ಚಕ್ರದ ಪ್ರಾಬಲ್ಯ ಹೊಂದಿರುವವರು. ಇದರಿಂದಾಗಿ ಇವರಿಗೆ ತಮ್ಮ ಭಾವನೆಗಳ(emotions) ಮೇಲೆ ಅತಿಯಾದ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ. ಇದರ ಮೂಲಕ ಇವರು ತಮ್ಮೆಲ್ಲ ಭಯಗಳನ್ನು ಗೆಲ್ಲಬಲ್ಲರು.
ಧನುಸ್ಸು(Sagittarius): ಧನು ರಾಶಿಯವರಿಗೆ ಸ್ವಾದಿಷ್ಣ ಚಕ್ರ(sacral chakra)ದ ಬಲವಿರುತ್ತದೆ. ಇದು ಗುರು ಗ್ರಹದ ನಿಯಂತ್ರಣದಲ್ಲಿರುತ್ತದೆ. ಇದೇ ಕಾರಣಕ್ಕೆ ಈ ರಾಶಿಯವರು ಹೆಚ್ಚು ಧನಾತ್ಮಕ(optimistic) ಮನಸ್ಥಿತಿ ಹೊಂದಿರುವ ಜೊತೆಗೆ, ತಾವು ಮಾಡುವ ಕೆಲಸದ ಬಗ್ಗೆ ಅತಿಯಾದ ಪ್ರೀತಿ ಹೊಂದಿರುತ್ತಾರೆ.
ಮಕರ(Capricorn): ಮಕರ ರಾಶಿಯವರಿಗೆ ಮೂಲಾಧಾರ ಚಕ್ರ(root chakra)ದ ಬಲ. ಇದು ಸಾಮಾನ್ಯ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ.
Zodiac Sign and Diamond: ಯಾವ ರಾಶಿಯ ಜನರು ವಜ್ರ ಧರಿಸಿದರೆ ಅಶುಭ?
ಕುಂಭ(Aquarius): ಕುಂಭ ರಾಶಿಯವರು ತಮ್ಮ ಶಕ್ತಿಯನ್ನು ಬೆನ್ನುಹುರಿಯ ಮೂಲದಿಂದ ಪಡೆಯುತ್ತಾರೆ. ಅಂದರೆ ಇವರಲ್ಲಿ ಕೂಡಾ ಮಕರದಂತೆ ಮೂಲಾಧಾರ ಚಕ್ರದ ಪ್ರಬಲವಾಗಿರುತ್ತದೆ. ಇದರಿಂದಾಗಿ ಇವರು ಹೆಚ್ಚು ಜಂಭ ಇಲ್ಲದವರೂ, ಪ್ರೋತ್ಸಾಹಕರಾಗಿಯೂ ಇರುತ್ತಾರೆ.
ಮೀನ(Pisces): ಸ್ವಾದಿಷ್ಣ ಚಕ್ರವು ಮೀನ ರಾಶಿಗೆ ಅತಿ ಪ್ರಬಲ ಪರಿಣಾಮಗಳನ್ನು ಬೀರುತ್ತದೆ. ಈ ರಾಶಿಯವರ ಲೈಂಗಿಕ ಜೀವನ(sex life) ಹಾಗೂ ಇಂದ್ರಿಯ ವಿಷಯಗಳಿಗೆ ಈ ಚಕ್ರ ಬಹಳ ಚಟುವಟಿಕೆಯಿಂದಿರುತ್ತದೆ. ಅದಲ್ಲದೆ, ಇವರ 6ನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುವುದಕ್ಕೂ ಇದು ಕಾರಣವಾಗಿದೆ. ಭಾವನೆಗಳು ಹಾಗೂ ಸೃಜನಶೀಲತೆ ಇವರಲ್ಲಿ ಹೆಚ್ಚಿರುತ್ತದೆ.