
ಕಪ್ಪನೆಯ, ದಪ್ಪ ಕೂದಲು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೂದಲಿಗೆ ಬಗೆ ಬಗೆಯ ಆಕಾರ ನೀಡಿ ಜನರು ಸುಂದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ಕೂದಲು ಬರೀ ನಮ್ಮ ಅಂದವನ್ನು ಮಾತ್ರ ಹೇಳೋದಿಲ್ಲ. ಅದೃಷ್ಟದ ರಹಸ್ಯಗಳನ್ನು ಬಹಿರಂಗಪಡಿಸುತ್ತವೆ. ನಿಮ್ಮ ಕೂದಲು ನೋಡಿ ನಿಮ್ಮ ಭವಿಷ್ಯವನ್ನು ತಿಳಿಯಬಹುದು. ನಾವಿಂದು ಕೂದಲು ಹಾಗೂ ಶಾಸ್ತ್ರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೇವೆ.
ವೈದಿಕ (Vedic) ಗ್ರಂಥಗಳ ಪ್ರಕಾರ, ಒಂದು ಬೇರಿನಿಂದ ಒಂದೇ ಕೂದಲು (Hair) ಹೊರ ಬಂದಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಆದ್ರೆ ಒಂದು ಬೇರಿನಿಂದ ಎರಡು ಮೂರು ಕೂದಲು ಹೊರ ಬಂದಿದ್ದರೆ ದುರಾದೃಷ್ಟ ಎನ್ನಲಾಗುತ್ತದೆ. ಇವು ನಿಮ್ಮ ಶಕ್ತಿ (Strength) ಯನ್ನು ಕಡಿಮೆ ಮಾಡುತ್ತವೆ. ಈ ಜನರು ಎರಡು ಸಿದ್ಧಾಂತಗಳ ನಡುವೆ ಸಿಕ್ಕಿಹಾಕಿಕೊಳ್ಳುತ್ತಾರೆ. ಯಶಸ್ಸಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ತೆಳ್ಳನೆಯ ಕೂದಲನ್ನು ಹೊಂದಿದ್ದವರು ಖುಷಿಪಡಿ. ತೆಳ್ಳನೆಯ ಕೂದಲು ನಿಮ್ಮ ಅದೃಷ್ಟ (Goodluck) ವನ್ನು ಬೆಳಗಿಸುತ್ತದೆ. ತೆಳ್ಳನೆಯ ಕೂದಲು ಹೊಂದಿರುವವರು ದಯೆಯ ಸ್ವಭಾವ ಹೊಂದಿರುತ್ತಾರೆ. ಅವರು ಶ್ರೀಮಂತಿಕೆ ಮತ್ತು ಅದೃಷ್ಟವಂತರಾಗಿರುತ್ತಾರೆ. ಒಂದ್ವೇಲೆ ನಿಮ್ಮ ಕೂದಲು ದಪ್ಪವಾಗಿದ್ದರೆ ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಯಾಕೆಂದ್ರೆ ನಿಮ್ಮ ಸ್ನೇಹಿತರೇ ನಿಮಗೆ ಮೋಸ ಮಾಡುವ ಸಾಧ್ಯತೆಯಿರುತ್ತದೆ. ದಪ್ಪನೆ ಕೂದಲು ಹೊಂದಿರುವ ಜನರು ಆರೋಗ್ಯವಂತರಾಗಿರ್ತಾರೆ. ಜೊತೆಗೆ ಹೆಚ್ಚು ಚೈತನ್ಯ ಹೊಂದಿರುತ್ತಾರೆ.
ಯಾವ ಕೂದಲ ಸಮಸ್ಯೆಗೆ ಯಾವ ಪರಿಹಾರ ? :
ಶಾಸ್ತ್ರಗಳ ಪ್ರಕಾರ, ತಲೆ ಅಕಾಲಿಕ ಬೋಳಾಗಲು ಕಾರಣ ಸೂರ್ಯ. ಸೂರ್ಯದೇವನ ದೋಷದಿಂದ ಕೂದಲು ನಿರ್ಜೀವವಾಗುತ್ತದೆ. ತಲೆ ಮೇಲಿರುವ ಕೂದಲು ಒಂದೇ ಸಮನೆ ಖಾಲಿಯಾಗ್ತಿದೆ ಅಂದ್ರೆ ಸೂರ್ಯನಿಗೆ ಬೆಳಿಗ್ಗೆ ಜಲವನ್ನು ಅರ್ಪಿಸಿ. ಇದಲ್ಲದೆ ಆದಿತ್ಯ ಹೃದಯ ಸ್ತೋತ್ರದ ಪಠಣೆ ಮಾಡುವುದು ಪ್ರಯೋಜನಕಾರಿ.
ತಲೆ ಹೊಟ್ಟಿನ ಸಮಸ್ಯೆ ಕಾಡಿದ್ರೆ ಬುಧ ಗ್ರಹದ ದೋಷವಿದೆ ಎಂದರ್ಥ. ಬುಧ ಗ್ರಹದ ದೋಷದಿಂದ ಕೂದಲು ಹಾಳಾಗುತ್ತದೆ. ಬುಧ ಗ್ರಹ ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೆ ಕೂದಲು ನಿರ್ಜೀವವಾಗುತ್ತದೆ. ತಲೆ ಹೊಟ್ಟು ಹೋಗಿ, ಕೂದಲು ಮತ್ತೆ ಜೀವ ಪಡೆಯಬೇಕು ಎನ್ನುವವರು ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ನಿಯಮಿತವಾಗಿ ಹಚ್ಚಿ ಮಸಾಜ್ ಮಾಡಬೇಕು. ಬೇವಿನ ಎಲೆಯ ಪೇಸ್ಟ್ ಅನ್ನು ತಯಾರಿಸಿ ಅದನ್ನು ಬುಧವಾರದಂದು ತಲೆಗೆ ಹಚ್ಚಿದರೆ ಹೆಚ್ಚು ಪ್ರಯೋಜನ ಪಡೆಯಬಹುದು.
ನಿಮ್ಮ ಕೂದಲು ತೆಳ್ಳಗೆ ಹಾಗೂ ದುರ್ಬಲವಾಗಿದೆ ಎಂದಾದ್ರೆ ಚಂದ್ರನ ದೋಷವಿದೆ ಎಂದು ಅರ್ಥೈಸಿಕೊಳ್ಳಿ. ನಿಮ್ಮ ಕೂದಲು ದಪ್ಪಗಾಗ್ಬೇಕು ಎಂದಾದ್ರೆ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಹಾಲು, ಅನ್ನದ ಪಾಯಸವನ್ನು ಅಭಿಷೇಕ ಮಾಡಿದ್ರೆ ಒಳ್ಳೆಯ ಫಲ ಸಿಗುತ್ತದೆ.
ಸದಾ ಕೂದಲು ಸಿಕ್ಕುಗಟ್ಟುತ್ತಿದೆ ಎನ್ನುವವರು ಮಂಗಳನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಅಂಥವರು ಮಂಗಳವಾರ ಬಡವರಿಗೆ ಆಹಾರವನ್ನು ನೀಡಬೇಕು. ಇದ್ರಿಂದ ನಿಮ್ಮ ಯಶಸ್ಸಿನ ಮಾರ್ಗ ತೆರೆಯುತ್ತದೆ.
ಮನೆಯಲ್ಲಿ ಈ ವಿಗ್ರಹಗಳನ್ನಿಟ್ಟರೆ, ಅದೃಷ್ಟದ ಬೀಗ ತೆರೆದುಕೊಳ್ಳೋದು ಗ್ಯಾರಂಟಿ
ಶುಕ್ರ ದುರ್ಬಲವಾಗಿದ್ದರೂ ಕೂದಲಿನ ಸಮಸ್ಯೆ ಕಾಡುತ್ತದೆ. ಒತ್ತಡ ಹೆಚ್ಚಾಗಿ ಕೂದಲು ಒಡೆಯಲು ಶುರುವಾಗುತ್ತದೆ. ಶುಕ್ರವಾರದಂದು ದೇವಸ್ಥಾನಕ್ಕೆ ಹೋಗಿ ಅಕ್ಕಿ ಮತ್ತು ಹಾಲು ದಾನ ಮಾಡಿದ್ರೆ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಕೂದಲು ಯಾವ ವಯಸ್ಸಿನಲ್ಲಿ ಉದುರುತ್ತಿದೆ ಎಂಬುದು ಕೂಡ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. 23ರಿಂದ 27ನೇ ವಯಸ್ಸಿನಲ್ಲಿ ಕೂದಲು ಉದುರಲು ಶುರುವಾದ್ರೆ ರಾಹು ಇದಕ್ಕೆ ಕಾರಣ. ರಾಹುವನ್ನು ಶಾಂತಗೊಳಿಸಿದ್ರೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ನಿಮ್ಮ ಕೂದಲು 28ರಿಂದ 36 ವರ್ಷದೊಳಗೆ ಉದುರಲು ಆರಂಭಿಸಿದ್ರೆ ಮಂಗಳವಾರ ಮಕ್ಕಳಿಗೆ ಸಿಹಿ ನೀಡಬೇಕು.
ವಾಷಿಂಗ್ ಮಷಿನ್ ಇಡಲು, ಬಟ್ಟೆ ಒಗೆಯಲು ವಾಸ್ತು ಟಿಪ್ಸ್
ನಿಮ್ಮ ಕೂದಲು 37ರಿಂದ 45 ವರ್ಷದಲ್ಲಿ ಉದುರಲು ಪ್ರಾರಂಭಿಸಿದ್ರೆ ಶನಿಯನ್ನು ಶಾಂತಗೊಳಿಸಬೇಕು.