ಪ್ರತಿ ರಾತ್ರಿ ಮಲಗಿದಾಗಲೂ ಕನಸುಗಳು ಬೀಳುತ್ತಲೇ ಇರುತ್ತವೆ. ಕೆಲವೊಂದು ಖುಷಿ ಕೊಟ್ಟರೆ ಮತ್ತೆ ಕೆಲವು ಆತಂಕ ಹುಟ್ಟಿಸುತ್ತವೆ. ಈ ಕನಸುಗಳಲ್ಲಿ ಅಪ್ಪ ಅಮ್ಮ, ಪತಿ, ಮಕ್ಕಳು, ಗೆಳೆಯರು, ಅಪರಿಚಿತರು ಹೀಗೆ ಸಾಕಷ್ಟು ಜನ ಬಂದು ಹೋಗುತ್ತಿರುತ್ತಾರೆ. ಯಾವ ವ್ಯಕ್ತಿ ಬಂದರೆ ಏನರ್ಥ ತಿಳಿಯಿರಿ.
ನಮ್ಮ ಕನಸುಗಳಲ್ಲಿ(dreams) ಹಲವಾರು ಪರಿಚಿತರ ಅಪರಿಚಿತರ ಮುಖಗಳು ಕಾಣುತ್ತಲೇ ಇರುತ್ತವೆ. ಕೆಲವೊಮ್ಮೆ ಬಾಲಿವುಡ್, ಸ್ಯಾಂಡಲ್‌ವುಡ್ ನಟರೆಲ್ಲ ಖಾಸಾ ದೋಸ್ತರಂತೆ ಬಂದರೆ, ಮತ್ತೆ ಕೆಲವೊಮ್ಮೆ ಪರಿಚಿತರೇ ಅಪರಿಚಿತರ ಹಾಗೆ ಕಾಣುತ್ತಾರೆ. ಈ ಕನಸುಗಳೇ ವಿಚಿತ್ರ. ಅವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಆದರೆ, ಜ್ಯೋತಿಷ್ಯದಲ್ಲಿ ಕನಸುಗಳ ಅರ್ಥವನ್ನು ಬಿಡಿಸಿ ನೋಡಲು ಸಾಧ್ಯವಿದೆ. ಕನಸಿನಲ್ಲಿ ಯಾವ ಪಾತ್ರ(character) ಬಂದರೆ ಏನರ್ಥ ಎಂಬುದನ್ನು ನಾವಿಂದು ನೋಡೋಣ.
ಕನಸಿನಲ್ಲಿ ಅಮ್ಮ ಬಂದರೆ(Seeing mother in dreams)
ಕನಸಿನ ಜ್ಯೋತಿಷ್ಯದ ಪ್ರಕಾರ ತಾಯಿಯನ್ನು ನಿಮ್ಮ ಕನಸಿನ ಕೆಲವು ಪಾತ್ರವಾಗಿ ನೋಡುವುದು ನಿಮ್ಮ ಸ್ವಭಾವದ ಪೋಷಣೆಯ ಭಾಗವನ್ನು ತೋರಿಸುತ್ತದೆ. ಅಲ್ಲದೆ, ವ್ಯಕ್ತಿಯು ದೊಡ್ಡವನಾದಂತೆಲ್ಲ ತಾಯಿಯಿಂದ ಪ್ರತ್ಯೇಕವಾಗಿ ತನ್ನನ್ನು ಕಂಡುಕೊಳ್ಳಬೇಕಾಗುತ್ತದೆ. ಎಲ್ಲದಕ್ಕೂ ಅಮ್ಮನನ್ನು ಎದುರು ನೋಡುವುದು ಬಿಟ್ಟು ಜಗತ್ತನ್ನು ಸ್ವತಃ ಅನುಭವಿಸಬೇಕಾಗುತ್ತದೆ. ಈ ಬದಲಾವಣೆಯ ಘಟ್ಟದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ, ಕನಸಿನಲ್ಲಿ ತಾಯಿ ಬಂದರೆ ಅದು ನಿಮ್ಮ ಬೆಳವಣಿಗೆ(development) ಮತ್ತು ವೈಶಿಷ್ಠ್ಯತೆ(uniqueness)ಯನ್ನು ಸೂಚಿಸುತ್ತದೆ.
ಇನ್ನು ಅಮ್ಮನೊಂದಿಗೆ ಮಾತಾಡುತ್ತಿರುವಂತೆ ಕಂಡರೆ, ನಿಮ್ಮ ಮನಸ್ಸು ಯಾವುದೋ ವಿಷಯಕ್ಕಾಗಿ ಚಿಂತೆಯಲ್ಲಿ ಬಿದ್ದಿದೆ ಎಂದರ್ಥ. ವಾಸ್ತವದಲ್ಲಿ ಬದುಕಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಹೀಗೆ ಕನಸು ಬೀಳಬಹುದು. ಅಲ್ಲದೆ, ತಾಯಿಯೊಂದಿಗೆ ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾಗಲೂ ಹೀಗಾಗುತ್ತದೆ. ಇದು ನೀವು ನಿಮ್ಮನ್ನು ನೀವು ತಾಯಿಯಂತೆ ಪೋಷಿಸಿಕೊಳ್ಳಬೇಕು ಎಂದು ಸೂಚಿಸುತ್ತದೆ.
ವಿವಾಹ ಸಮಯದಲ್ಲಿ ಕೈಕಾಲಿಗೆ Henna ಹಾಕುವುದೇಕೆ?
ಕನಸಿನಲ್ಲಿ ಸ್ನೇಹಿತರನ್ನು ನೋಡುವುದು(Seeing friends in dreams)
ನಿಮ್ಮ ಕನಸಿನಲ್ಲಿ ಸ್ನೇಹಿತರನ್ನು ಪಾತ್ರಗಳಾಗಿ ನೋಡುವುದರ ಹಿಂದಿನ ಅರ್ಥ ದೊಡ್ಡದಿದೆ. ಗೆಳೆಯರು ನಿಮ್ಮಲ್ಲಿಲ್ಲದ ಗುಣ ಸ್ವಭಾವಗಳನ್ನು ಹೊಂದಿರುತ್ತಾರೆ. ಜೀವನದಲ್ಲಿ ನಿಮ್ಮಲ್ಲಿ ಕೊರತೆ ಇರುವ ಸ್ವಭಾವಗಳನ್ನವರು ತುಂಬುತ್ತಾರೆ. ಜೊತೆಗೆ, ಕನಸ್ಸಲ್ಲವರು ನಿಮಗೇನೋ ಕಲಿಸಲು ಬಂದಿರುತ್ತಾರೆ. ಅದು ನಿಮ್ಮ ಈಗಿನ ಬದುಕಿಗೆ ಸಂಬಂಧಿಸಿದ್ದಿರಬಹುದು ಇಲ್ಲವೇ, ನೀವು ಬಹಳ ಕಾಲದಿಂದ ಎದುರಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದ್ದಾಗಿರಬಹುದು.
ಸ್ನೇಹಿತರು ನಿಮ್ಮೊಂದಿಗೆ ಮಾತಾಡುತ್ತಿರುವಂತೆ ಕಂಡರೆ ಅವರ ಹಾಗೂ ನಿಮ್ಮ ನಡುವೆ ಕೆಲ ಭಿನ್ನಾಭಿಪ್ರಾಯ ಅಥವಾ ಜಗಳ ಇರಬಹುದು ಹಾಗೂ ಅದನ್ನು ಬೇಗ ಪರಿಹರಿಸಿಕೊಳ್ಳಬೇಕು ಎಂದರ್ಥ.
ಕನಸಿನಲ್ಲಿ ಭೂತದಂಥ ಆಕೃತಿ ಕಂಡರೆ(ghostly figure)
ಕನಸಿನಲ್ಲಿ ಏನೋ ಭಯಾನಕವಾದುದು, ವಿಚಿತ್ರವಾದ ಆಕೃತಿ ಕಂಡರೆ, ಅದೇನೆಂದು ತಿಳಿಯದೆ ಹೋಗವಂಥದ್ದಾಗಿದ್ದರೆ, ಅದು ನೀವು ನಿಮ್ಮನ್ನು ಹೆಚ್ಚು ಪ್ರೀತಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂಬ ಪಾಠ ಹೇಳಲು ಬಂದಿದೆ ಎಂದು ಅರ್ಥ ಮಾಡಿಕೊಳ್ಳಿ.
ಇನ್ನು ನಿಮಗೆ ಅದೊಂದು ಕತ್ತಲ ವಾತಾವರಣ ನೋಡಿ ಭಯವಾದಂತೆ ಕಂಡರೆ, ಯಾವುದೋ ಸಮಸ್ಯೆ ಎದುರಿಸಲು ನಿಮ್ಮ ಬುದ್ಧಿಶಕ್ತಿ ಹಾಗೂ ವ್ಯಕ್ತಿತ್ವದ ಸದ್ಬಳಕೆ ಸಾಧ್ಯವಾಗುತ್ತಿಲ್ಲ ಎಂದರ್ಥ. ಇದಕ್ಕಾಗಿ ಮೊದಲು ನೀವು ನಿಮ್ಮ ಬಗ್ಗೆ ಮೆಚ್ಚುಗೆ ಹೊಂದುವುದು ಅಗತ್ಯವಾಗಿರುತ್ತದೆ. ಇನ್ನು ಯಾರೋ ನಿಮ್ಮ ಸುತ್ತ ಸುಳಿದಾಡುತ್ತಿದ್ದಾರೆ, ಅವರ ಹಿಂದೆ ಬೆಳಕಿದೆ ಎಂಬಂತೆ ಕಂಡರೆ, ಭವಿಷ್ಯದಲ್ಲಿ ಉತ್ತಮವಾದದ್ದು ಸಂಭವಿಸಲಿರುವ ಸ್ಪಷ್ಟ ಸೂಚನೆ ಅದಾಗಿರುತ್ತದೆ.
Weekly Horoscope: ಸಾಡೇಸಾತಿಯಿಂದ ನಲುಗಿರುವ ಈ ರಾಶಿಗೀಗ ಶುಭ ಫಲಗಳ ಆರಂಭ
ಸಂಗಾತಿ ಕಂಡರೆ(Seeing your partner)
ನೀವು ಹುಡುಗಿಯಾಗಿದ್ದು ಕನಸಲ್ಲಿ ನಿಮ್ಮ ಕ್ರಶ್ ಅಥವಾ ಸಂಗಾತಿ ಅಥವಾ ಬಾಯ್‌ಫ್ರೆಂಡ್ ಕಂಡರೆ, ರೊಮ್ಯಾಂಟಿಕ್ ಟೈಂ ಹತ್ತಿರದಲ್ಲಿದೆ ಎಂದರ್ಥ. ಬಹುಷಃ ನಿಮ್ಮ ಪಾರ್ಟ್‌ನರ್ ನಿಮಗಾಗಿ ಮರೆಯಂಥ ರೊಮ್ಯಾಂಟಿಕ್ ಸರ್ಪ್ರೈಸ್ ನೀಡಬಹುದು ಇಲ್ಲವೇ, ಜೀವನಪೂರ್ತಿ ಜೊತೆಗಿರುವ ಬದ್ಧತೆ ಪ್ರದರ್ಶಿಸಬಹುದು. ಆದರೆ, ಹುಡುಗರು ತಮ್ಮ ಸಂಗಾತಿಯನ್ನು ಕನಸಿನಲ್ಲಿ ಕಂಡರೆ, ಸಧ್ಯದಲ್ಲೇ ಅರ ಸಂಬಂಧದಲ್ಲಿ ಸಾಕಷ್ಟು ಭಾವನಾತ್ಮಕ ಏರುಪೇರುಗಳನ್ನು ಎದುರಿಸಬೇಕಾಗುತ್ತದೆ ಎಂದರ್ಥ.