ಹುಟ್ಟಿದ ವಾರ ವ್ಯಕ್ತಿಯ ಜೀವನದುದ್ದಕ್ಕೂ ಹಲವು ರೀತಿಯ ಪ್ರಭಾವವನ್ನು ಬೀರುತ್ತಲೇ ಇರುತ್ತದೆ. ಜತೆಗೆ ಅವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿಯೂ ಇದರ ಪಾತ್ರ ಬಹಳ ದೊಡ್ಡದಿದೆ. ಶನಿವಾರವನ್ನು ಶನಿಗ್ರಹವು ಆಳುತ್ತದೆ. ಹೀಗಾಗಿ ಶನಿವಾರ ಜನಿಸಿದವರ ಬಗ್ಗೆ ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಶನಿ ಗ್ರಹ (Saturn Planet) ಶಕ್ತಿಶಾಲಿ ಗ್ರಹವಾಗಿದೆ. ಜಾತಕದಲ್ಲಿ ಶನಿಯ ಸ್ಥಾನ ಮತ್ತು ಚಲನೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಗ್ರಹವು ಕಠಿಣ ಪರಿಶ್ರಮ, ಸ್ಥಿರತೆ, ಶಿಸ್ತು ಮತ್ತು ನ್ಯಾಯವನ್ನು (Hard work, stability, discipline and justice) ಪ್ರತಿನಿಧಿಸುತ್ತದೆ. ಶನಿವಾರ ಜನಿಸಿದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ? ಶನಿ ಗ್ರಹವು ಅವರ ವ್ಯಕ್ತಿತ್ವ, ಪಾತ್ರ ಮತ್ತು ಜೀವನದಲ್ಲಿ (Life) ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ತಿಳಿಯೋಣ.
ಶನಿವಾರ ಜನಿಸಿದವರು ಹೇಗೆ? (Saturday Born)
ಶನಿವಾರ ಜನಿಸಿದವರು ದೃಢ ಸ್ವಭಾವದ (Strong-natured) ವ್ಯಕ್ತಿಗಳು. ಕಠಿಣ ಪರಿಶ್ರಮಿಗಳಾಗಿದ್ದು, ಶಿಸ್ತುಬದ್ಧರಾಗಿರುತ್ತಾರೆ. ಇವರು ಇತರ ವ್ಯಕ್ತಿಗಳಿಗಿಂತ ತುಸು ಭಿನ್ನರೇ ಸರಿ. ಬುದ್ಧಿವಂತರಾಗಿದ್ದು, ವೃತ್ತಿಪರ (Intelligent and professional) ಸ್ವಭಾವ ಉಳ್ಳವರು. ಸಖತ್ ಪ್ರಾಕ್ಟಿಕಲ್ (Practical) ಆಗಿರುವ ಇವರು ತಮ್ಮದೇ ಆದ ಒಂದು ಚೌಕಟ್ಟನ್ನು ಹಾಕಿಕೊಂಡಿರುತ್ತಾರೆ. ಅಲ್ಲದೆ, ಹಠಮಾರಿ ವ್ಯಕ್ತಿತ್ವ (Stubborn personality) ಇವರದ್ದಾಗಿರುತ್ತದೆ. ಅತ್ಯಂತ ಪ್ರಬುದ್ಧ ವ್ಯಕ್ತಿಗಳಾಗಿರುವ ಇವರು, ತಮ್ಮ ಪಾತ್ರ (Role) ಮತ್ತು ಜವಾಬ್ದಾರಿಗಳನ್ನು (Responsibility) ಪ್ರಬುದ್ಧತೆಯಿಂದ ನಿರ್ವಹಿಸುತ್ತಾರೆ.
ವ್ಯಕ್ತಿತ್ವ, ಗುಣಲಕ್ಷಣಗಳು (Personality, Characteristics)
ಶನಿವಾರ ಜನಿಸಿದವರು ಸಾಮಾನ್ಯವಾಗಿ ಗಂಭೀರ ಸ್ವಭಾವದವರಾಗಿರುತ್ತಾರೆ. ಆದರೆ ಇವರೊಂದಿಗೆ ಸ್ನೇಹ ಮಾಡಿದರೆ ಅವರೊಬ್ಬ ವಿಶಿಷ್ಟ ವ್ಯಕ್ತಿಯೆಂಬುದನ್ನು ತೋರಿಸಿಕೊಡುತ್ತಾರೆ. ಇವರು ತಪ್ಪು ಮಾಡುವುದಿಲ್ಲವೆಂದಲ್ಲ. ಆದರೆ, ಆ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುತ್ತಾರೆ. ಇವರಿಗೆ ಉತ್ತಮ ಸಾಂಸ್ಥಿಕ ಕೌಶಲ್ಯಗಳಿವೆ. ಇವರು ಮಹತ್ವಾಕಾಂಕ್ಷಿಗಳಾಗಿದ್ದು (Ambitious), ಗುರಿಸಾಧನೆಗೆ (Target Achieve) ಶ್ರಮ ವಹಿಸುತ್ತಾರೆ. ಇವರು ಪುಸ್ತಕ ಜ್ಞಾನಕ್ಕಿಂತ ಪ್ರಾಯೋಗಿಕ ಅನುಭವಕ್ಕೆ (Experience) ಹೆಚ್ಚು ಮನ್ನಣೆ ಕೊಡುತ್ತಾರೆ. ಸ್ವಭಾವತಃ ಅಂತರ್ಮುಖಿಗಳಾಗಿರುವ ಇವರು, ಅಪಾರ ತಾಳ್ಮೆಯನ್ನು (Patience) ಹೊಂದಿರುತ್ತಾರೆ. ಹೀಗಾಗಿ ಇವರಿಗೆ ಸುಲಭವಾಗಿ ಕೋಪಗೊಳ್ಳುವುದಿಲ್ಲ (Anger). ದಯಾಪರರಾಗಿದ್ದು, ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ,
ಇದನ್ನು ಓದಿ : Relationship Tips: ಹೀಗಿದ್ದರೆ ಸತಿ ಪತಿ, ಸಂಬಂಧ ಅಧೋಗತಿ; ಇದು ಚಾಣಕ್ಯ ನೀತಿ
ವೃತ್ತಿ ಭವಿಷ್ಯ (Career Future)
ಇವರಿಗೆ ಅಪಾರ ಬುದ್ಧಿವಂತಿಕೆ ಇದ್ದು, ತೀಕ್ಷ್ಣ ವ್ಯವಹಾರ ಕೌಶಲ್ಯವೂ (Business Skills) ಇದೆ. ಬದ್ಧತೆಯುಳ್ಳವರಾಗಿದ್ದರಿಂದ ಮಾಡುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸುತ್ತಾರೆ. ಹೀಗಾಗಿ ಇವರು ಯಾವುದೇ ಉದ್ಯೋಗ (Job) ಅಥವಾ ವೃತ್ತಿ ಕ್ಷೇತ್ರದಲ್ಲಿದ್ದರೂ ಯಶಸ್ಸಿಗೆ ಕಾರಣವಾಗುತ್ತದೆ.
ಹೃದಯವಂತರು
ಶನಿವಾರ ಜನಿಸಿದವರು ವಿಶಾಲ ಹೃದಯಿಗಳು. ತಮ್ಮ ಸಂಗಾತಿಯನ್ನು ( Partner) ಅತಿಯಾಗಿ ಪ್ರೀತಿಸುವ (Love) ಇವರು ಉತ್ತಮವಾಗಿ ನೋಡಿಕೊಳ್ಳುತ್ತಾರೆ. ಸ್ವಭಾವತಃ ಸಂಕೋಚದ ಸ್ವಭಾವ ಇವರದ್ದಾಗಿದ್ದು, ಚ್ಯೂಸಿಯೂ ಆಗಿರುತ್ತಾರೆ. ಇನ್ನು ಪ್ರೀತಿಸುವುದಕ್ಕಿಂತ ಮೊದಲು ಆ ವ್ಯಕ್ತಿಯ ಸ್ವಭಾವ ಮತ್ತು ಮನೋಧರ್ಮವನ್ನು ಪರೀಕ್ಷಿಸಿಕೊಳ್ಳುತ್ತಾರೆ. ಇವರು ತಮ್ಮ ಹೃದಯದ ಮಾತನ್ನು ಮಾತ್ರ ಕೇಳುವವರಾಗಿದ್ದು, ಪ್ರೀತಿ ವಿಷಯದಲ್ಲಿ ಇತರರ ಸಲಹೆಯನ್ನು (Suggestion) ಕೇಳುವವರಲ್ಲ.
ವೈವಾಹಿಕ ಜೀವನ (Married life)
ಇವರು ಸಂಪೂರ್ಣ ವೃತ್ತಿಪರರಾಗಿರುವುದರಿಂದ ಕೆಲಸದ ಮೇಲೆ ವಿಶೇಷ ಆಸಕ್ತಿ ಹಾಗೂ ಸಮಯವನ್ನು ನೀಡುತ್ತಾರೆ. ಇದು ಇವರ ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳನ್ನು ತಂದೊಡ್ಡಬಹುದಾಗಿದೆ. ಆದರೆ, ಕುಟುಂಬದವರ ಬಗ್ಗೆಯೂ ಕಾಳಜಿಯನ್ನು ಹೊಂದಿದ್ದು, ಅವರ ಸಂತೋಷಕ್ಕೂ (Happiness) ಬದ್ಧರಾಗಿರುತ್ತಾರೆ. ಇನ್ನು ತಮ್ಮ ಸಂಗಾತಿಗೆ ಯಾವುದು ಇಷ್ಟು, ಯಾವುದು ಕಷ್ಟ ಎಂದು ಅಷ್ಟಾಗಿ ತಿಳಿದುಕೊಳ್ಳುವ ಸ್ವಭಾವ ಇವರದ್ದಲ್ಲ. ತಮ್ಮ ಸಂಕೋಚ (Shyness) ಸ್ವಭಾವವನ್ನು ಬಿಟ್ಟು ಮುನ್ನಡೆದರೆ ನಿಭಾಯಿಸಬಹುದಾಗಿದೆ.
ಇದನ್ನು ಓದಿ : Aries Character Traits: ಮೇಷ ರಾಶಿಯ ಹುಡುಗ ನಿಮ್ಮವನಾದರೆ ಅವನ ಕುರಿತ ಈ 9 ವಿಷಯಗಳು ತಿಳಿದಿರಲಿ..
8 ಲಕ್ಕಿ ನಂಬರ್ (Lucky number)
ಶನಿವಾರದಂದು ಹುಟ್ಟಿದವರ ಲಕ್ಕಿ ನಂಬರ್ 8. ಈ ದಿನದಂದು ಪ್ರಮುಖ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬಹುದಾಗಿದೆ. ಹೊಸ ಉದ್ಯಮ ಪ್ರಾರಂಭಿಸುವುದಿದ್ದರೂ ಈ ದಿನ ಹೆಚ್ಚು ಸೂಕ್ತ. ಇವರು ಶಿವ ದೇವಾಲಯಕ್ಕೆ (Lord Shiva Temple) ಭೇಟಿ ನೀಡಬೇಕು. ಶನಿವಾರದಂದು ಶಿವನಿಗೆ ಪ್ರಾರ್ಥನೆ ಮಾಡಬೇಕು, ದಾನ, ಧರ್ಮಗಳನ್ನು ಮಾಡಿದರೆ ಒಳ್ಳೆಯದು.