ಕೆಲ ಮಕ್ಕಳ ಗುಣವೇ ಹಾಗೆ, ಅವರು ಹೇಳದೆಯೇ ಎಲ್ಲೆಡೆ ಮುಂದಾಳತ್ವ ವಹಿಸುತ್ತಾರೆ. ತಮ್ಮ ವಯಸ್ಸಿಗೆ ಮೀರಿದ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಅದಕ್ಕೇ ಅಲ್ಲವೇ ಹೇಳುವುದು ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂದು.
ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಕೆಲ ಮಕ್ಕಳ(children)ಲ್ಲಿ ನಾಯಕತ್ವ ಗುಣ ಅಚ್ಚರಿ ಹುಟ್ಟಿಸುವಂತಿರುತ್ತದೆ. ಮುಂದೆ ಉತ್ತಮ ನಾಯಕರಾಗುವ ಲಕ್ಷಣಗಳನ್ನು ಅವರು ತೋರಿಸುತ್ತಿರುತ್ತಾರೆ. ಹೆಚ್ಚಿನವರು ಮತ್ತೊಬ್ಬರನ್ನು ಹಿಂಬಾಲಿಸುವ ಗುಣ ಹೊಂದಿದ್ದರೆ ಈ ಕೆಲವರು ಮಾತ್ರ ಹೇಳದೆಯೇ ಎಲ್ಲ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ವಯಸ್ಸಿಗೆ ಮೀರಿದ ಜವಾಬ್ದಾರಿ(responsibility) ತೆಗೆದುಕೊಳ್ಳುತ್ತಾರೆ. ತಮಗಿಂತ ಚಿಕ್ಕ ಮಕ್ಕಳನ್ನು ಅತ್ಯಂತ ಜತನವಾಗಿ ಕಾಪಾಡುತ್ತಾರೆ. ಶಾಲೆಯಲ್ಲಿ ಉಳಿದ ಮಕ್ಕಳನ್ನು ನಿಭಾಯಿಸುವ ಛಾತಿ ತೋರಿಸಿ ಕ್ಲಾಸ್ ಲೀಡರ್ಸ್ ಆಗುತ್ತಾರೆ. ಮಾತುಗಾರಿಕೆ, ಛಲದಲ್ಲಿ ಮುಂದಿರುತ್ತಾರೆ. ಈ ಎಲ್ಲ ನಾಯಕತ್ವ ಕೌಶಲ(leadership skills)ಗಳನ್ನು ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಈ ಐದು ರಾಶಿಗೆ ಸೇರಿದವರಾಗಿರುತ್ತಾರೆ.
ಮೇಷ(Aries)
ಅಗ್ನಿ ತತ್ವಕ್ಕೆ ಸೇರಿದ ಮೇಷ ರಾಶಿಯ ಮಕ್ಕಳು ಸ್ವತಂತ್ರವನ್ನು ಬಹಳ ಪ್ರೀತಿಸುತ್ತಾರೆ. ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ಇವರಿಗೆ ಇಷ್ಟವಿಲ್ಲದ ಕಾರಣ ತಮ್ಮದೇ ಆದ ದಾರಿ ಮಾಡಿಕೊಂಡು ಬೇಕಾದಂತೆ ಇರಲು ಸಾಕಷ್ಟು ಪ್ರಯತ್ನಿಸುತ್ತಾರೆ. ಹೀಗಾಗಿ, ಅವರು ಸಾಕಷ್ಟು ನಿರ್ಧಾರ(decision)ಗಳನ್ನು ಸ್ವತಃ ತೆಗೆದುಕೊಳ್ಳಬೇಕಾಗುತ್ತದೆ. ಈ ಅವಲಂಬನೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇವರೊಳಗಿನ ನಾಯಕತ್ವ ಕೌಶಲ್ಯಗಳು ಹೆಚ್ಚು ಮೊನಚಾಗುತ್ತವೆ.
undefined
ಸಿಂಹ(Leo)
ಸಿಂಹ ಹೇಗೆ ಕಾಡಿನ ರಾಜನೋ ಹಾಗೆಯೇ ಸಿಂಹ ರಾಶಿಯ ಮಕ್ಕಳು ಬಾಲ್ಯದಿಂದಲೇ ರಾಜನ ನಾಯಕತ್ವ ಗುಣ ತೋರುವವರು. ತಮ್ಮನ್ನು ಎಲ್ಲರೂ ಹಿಂಬಾಲಿಸಬೇಕೆಂದು ಬಯಸುವವರು. ಹಾಗಾಗಿ, ಹುಟ್ಟುಗುಣದಲ್ಲೇ ಇವರಲ್ಲಿ ನಾಯಕತ್ವ ಇರುತ್ತದೆ. ಯಾವುದೇ ಗುಂಪು ಚಟುವಟಿಕೆ(group activity) ನಡೆಯುತ್ತಿದ್ದರೆ ಈ ರಾಶಿಯ ಮಕ್ಕಳು ಹೇಳದೆಯೇ ಅದರ ಸಂಪೂರ್ಣ ನಾಯಕತ್ವ ಹೊತ್ತುಕೊಳ್ಳುತ್ತಾರೆ. ನಿರೂಪಣೆ ಮಾಡುವುದು, ನೃತ್ಯ ಆರಂಭಿಸಲು ಎಲ್ಲರನ್ನೂ ಪ್ರೇರೇಪಿಸುತ್ತಾ ತಾವೇ ಕುಣಿಯಲಾರಂಭಿಸುವುದು ಹೀಗೆ.. ಎಲ್ಲರ ಗಮನದ ಕೇಂದ್ರಬಿಂದುವಾಗುವುದು ಇವರಿಗಿಷ್ಟ. ಒಟ್ನಲ್ಲಿ ಯಾವ ಚಟುವಟಿಕೆಗೂ ಹೆದರದೆ ಅದರ ಹೊಣೆ ಹೊತ್ತುಕೊಳ್ಳುತ್ತಾರೆ. \
Vastu For Health: ಉತ್ತಮ ಆರೋಗ್ಯಕ್ಕೆ ವಾಸ್ತುವಿನ 10 ಸಲಹೆಗಳು..
ಕನ್ಯಾ(Virgo)
ಈ ರಾಶಿಯ ಮಕ್ಕಳು ಬಾಲ್ಯದಿಂದಲೇ ಪರಿಶ್ರಮ ಪಡುವವರು, ಓದು, ನೃತ್ಯ, ಹಾಡು ಯಾವುದಕ್ಕಾದರೂ ಸರಿ, ಹೆಚ್ಚು ಪರಿಶ್ರಮ ಹಾಕಿ ಗೆಲ್ಲಲೇಬೇಕೆಂಬ ಛಲದವರು. ತಮ್ಮ ಗೆಲುವಿಗೆ ಸಿಗುವ ಪ್ರಶಂಸೆ ಹಾಗೂ ಗಮನವನ್ನು ಎಂಜಾಯ್ ಮಾಡುತ್ತಾ ಅದನ್ನು ಮತ್ತಷ್ಟು ಪಡೆಯಲು ಹಂಬಲಿಸುವ ಮಕ್ಕಳಿವರು. ಎಲ್ಲವೂ ಪರ್ಫೆಕ್ಟ್(perfect) ಆಗಿರಬೇಕೆಂಬ ಬಯಕೆ ಬಾಲ್ಯದಲ್ಲೇ ಇವರಲ್ಲಿ ಮೈಗೂಡಿರುತ್ತದೆ. ಹಾಗಾಗಿ, ವಿಷಯಗಳು ಪರ್ಫೆಕ್ಟ್ ಆಗಿರುವಂತೆ ಮಾಡಲು ಇವರು ತಾಳ್ಮೆ ಹಾಗೂ ಸಂಯಮ ಪ್ರದರ್ಶಿಸುತ್ತಾರೆ. ಯಾವುದಾದರೂ ಜವಾಬ್ದಾರಿ ವಹಿಸಿದರೆ, ಗೆಲ್ಲುವ ಹಟದಲ್ಲಿ ಅದನ್ನು ಅದ್ಬುತವಾಗಿ ನಿಭಾಯಿಸುತ್ತಾರೆ.
Shiva Karma: ಸಂತೋಷವಾಗಿರಲು ಶಿವ ಹೇಳಿದ ನಿಯಮಗಳಿವು..
ವೃಶ್ಚಿಕ(Scorpio)
ನಿಯಂತ್ರಣದ ಬಯಕೆ ವೃಶ್ಚಿಕಕ್ಕಿದ್ದಷ್ಟು ಇನ್ಯಾವ ರಾಶಿಗೂ ಇಲ್ಲ. ಇವರು ತಮ್ಮ ಮೇಲಿನ ಹಾಗೂ ತಮ್ಮ ಜೀವನದ ನಿಯಂತ್ರಣ(control) ಎಂದಿಗೂ ತಪ್ಪದಂತೆ ಸದಾ ಎಚ್ಚರ ವಹಿಸುತ್ತಲೇ ಇರುತ್ತಾರೆ. ಜೊತೆಗೆ, ಇತರರ ಮೇಲೆ ಕೂಡಾ ನಿಯಂತ್ರಣ ಸಾಧಿಸುತ್ತಾರೆ. ಜೀವನದ ಪ್ರತಿ ವಿಷಯಗಳ ಮೇಲೂ ನಿಯಂತ್ರಣ ಹೊಂದುವ ಬಯಕೆ ಇವರದು. ಇವರ ಈ ಸ್ವಭಾವದಿಂದಾಗಿ ವೃಶ್ಚಿಕ ರಾಶಿಯ ಮಕ್ಕಳು ಎಲ್ಲದರ ಮೇಲೆ ತಮ್ಮ ನಿಯಂತ್ರಣ ಸಾಧಿಸುವ ಹಂಬಲ ತೋರುತ್ತಾರೆ. ಅದಕ್ಕಾಗಿ ಪ್ರಯತ್ನ ಹಾಕುತ್ತಾರೆ. ಇದರಿಂದಾಗಿ ಇವರಲ್ಲಿ ನಾಯಕತ್ವ ಕೌಶಲ ಮೊಳಕೆಯೊಡೆಯುತ್ತದೆ.
ಮಕರ(Capricorn)
ಇವರಿಗೆ ಸದಾ ಕೆಲಸ ಮಾಡುತ್ತಲೇ ಇರಬೇಕು(workaholics). ಹಣ, ಜವಾಬ್ದಾರಿ(responsibility), ಅಧಿಕಾರ ಹಾಗೂ ಸಮನ್ವಯತೆ ಇವರನ್ನು ಸೆಳೆಯುತ್ತದೆ. ತಮಗೆ ಕೊಟ್ಟ ಕೆಲಸವನ್ನು ಚೆನ್ನಾಗಿ ಮಾಡಿ ಹೊಗಳಿಸಿಕೊಳ್ಳುವ ಬಯಕೆ ಈ ರಾಶಿಯ ಮಕ್ಕಳದು. ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸ ಮುಗಿಸಿ ಭೇಷ್ ಅನ್ನಿಸಿಕೊಳ್ಳುತ್ತಲೇ ಇವರು ನಾಯಕತ್ವ ಗುಣ ತೋರುತ್ತಾರೆ. ಜೊತೆಗೆ, ಆದರ್ಶಗಳು ಕೂಡಾ ಹೆಚ್ಚು. ಇದರಿಂದಾಗಿ ಇವರು ಹುಟ್ಟಾ ನಾಯಕರಂತೆ ವರ್ತಿಸುತ್ತಾರೆ. ಕೆಲ ಬಾರಿ ಈ ರಾಶಿಯ ಮಕ್ಕಳು ಮಾತು ಕಡಿಮೆಯಾದರೂ ಕೆಲಸದಿಂದಲೇ ನಾಯಕರಾಗುತ್ತಾರೆ.