ಯಾವುದೇ ರಾಶಿಯ ಮೂಲಭೂತ ಗುಣಗಳನ್ನು ಅರಿತಾಗ ನಿಮ್ಮ ಮನೆ ಅಥವಾ ಬಂಧುಗಳ ಪೈಕಿ ಇರುವ ಆ ರಾಶಿಯ ಜನರನ್ನು ಅರ್ಥೈಸಿಕೊಳ್ಳುವುದು ಸುಲಭವಾಗುತ್ತದೆ. ಅದರಂತೆ, ಮೇಷ ರಾಶಿಯ ಮಹಿಳೆಯರು ಹೇಗಿರುತ್ತಾರೆ ಎಂದು ತಿಳಿದುಕೊಳ್ಳಿ, ಅವರನ್ನು ಅರ್ಥ ಮಾಡಿಕೊಳ್ಳಿ.
ಎಲ್ಲ ಮಹಿಳೆಯರೂ ಒಂದೇ ರೀತಿ ಇರುವುದಿಲ್ಲ. ನೀವೇ ನೋಡಿರುತ್ತೀರಿ. ಮನೆಯಲ್ಲಿ ನಾಲ್ವರು ಮಹಿಳೆಯರಿದ್ದರೆ ನಾಲ್ವರೂ ವಿಭಿನ್ನ ರೀತಿಯಲ್ಲೇ ಇರುತ್ತಾರೆ. ಪ್ರತಿಯೊಬ್ಬರ ವ್ಯಕ್ತಿತ್ವ ಬೇರೆಯದೇ ಆಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿತ್ವ ಅವರ ರಾಶಿಗಳನ್ನು ಅವಲಂಬಿಸಿ ಇರುತ್ತದೆ. ಅದರಲ್ಲೂ ಮಹಿಳೆಯರು ಮತ್ತು ಪುರುಷರ ನಡುವೆ ವ್ಯತ್ಯಾಸ ಇದ್ದೇ ಇರುತ್ತದೆ. ಮಹಿಳೆಯರಲ್ಲೂ ರಾಶಿಗಳ ಪಾದಗಳಲ್ಲಿ ವ್ಯತ್ಯಾಸ ಇರುತ್ತದೆ. ಆದರೂ ಸಾಮಾನ್ಯವಾಗಿ ಒಂದು ರಾಶಿಯ ವ್ಯಕ್ತಿತ್ವವನ್ನು ಸಮಗ್ರವಾಗಿ ಹೇಳಲಾಗುತ್ತದೆ. ಜೀವನದಲ್ಲಿ ನೀವು ಒಮ್ಮೆಯಾದರೂ ಮೇಷ ರಾಶಿಯ ಮಹಿಳೆಯರನ್ನು ಭೇಟಿಯಾಗಿರುತ್ತೀರಿ. ಏಕಾಂಗಿತನ, ದಿಟ್ಟ ಹಾಗೂ ನೈಸರ್ಗಿಕ ನಾಯಕತ್ವದ ಗುಣ ಹೊಂದಿರುವ ಮೇಷ ರಾಶಿಯ ಮಹಿಳೆಯರನ್ನು ನೀವು ದೂರವಿಡಲು ಸಾಧ್ಯವಾಗುವುದಿಲ್ಲ. ಮೇಷ ರಾಶಿಯ ಮಹಿಳೆಯರು ಸ್ವಾವಲಂಬಿಯಾಗಿರುತ್ತಾರೆ. ಕಲ್ಪನಾಶಕ್ತಿ ಹೊಂದಿರುತ್ತಾರೆ. ಅದ್ಭುತ ಎನರ್ಜಿ ಹೊಂದಿದ್ದು, ಅತ್ಯುತ್ತಮವಾದುದನ್ನೇ ಮಾಡಲು ಬಯಸುತ್ತಾರೆ. ಕೆಲಸದ ಗುಣಮಟ್ಟದಲ್ಲಿ ರಾಜಿ ಆಗುವುದಿಲ್ಲ. ಈ ಗುಣ ದ್ವಾದಶ ರಾಶಿಗಳಲ್ಲಿ ಮೊದಲ ರಾಶಿ ಆಗಿರುವ ಮೇಷವನ್ನು ಸಮರ್ಥವಾಗಿ ಪ್ರತಿನಿಧಿಸುತ್ತದೆ. ಸದಾ ಉತ್ಸಾಹದಿಂದ ಕೂಡಿದ್ದು, ಸ್ಪರ್ಧಾತ್ಮಕ ಮನೋಭಾವ ಹೊಂದಿರುತ್ತಾರೆ. ಮಂಗಳ ಇವರ ಗ್ರಹದ ಅಧಿಪತಿ. ಮೇಷ ರಾಶಿಯ ಮಹಿಳೆಯರ ಪ್ರಮುಖ ಅತ್ಯುತ್ತಮ ಗುಣಗಳನ್ನು ಅರಿತುಕೊಳ್ಳಿ. ಇದು ನಿಮಗೆ ನಿಮ್ಮ ಸಂಗಾತಿ, ಅಮ್ಮ, ಸ್ನೇಹಿತೆ, ಸಹೋದರಿಯರನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.
· ಸ್ಪರ್ಧೆ (Competition) ಅಂದ್ರೆ ಇಷ್ಟ
ಯಾವುದೇ ಕಷ್ಟದ (Difficult) ಸನ್ನಿವೇಶದಲ್ಲಿ ಮೇಷ (Aries) ರಾಶಿಯ ಮಹಿಳೆಯರು (Women) ಉತ್ತಮ ಧೈರ್ಯ (Boldness) ಪ್ರದರ್ಶಿಸುತ್ತಾರೆ. ಮಾಡಬೇಕು ಎಂದುಕೊಂಡಿರುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಾರೆ. ಇತರರ ಮೇಲೆ ಸ್ವಲ್ಪ ಡಾಮಿನೇಟ್ (Dominate) ಮಾಡಲು ಬಯಸುವ ಇವರು ಸ್ಪರ್ಧೆಯ ಮೂಲಕವಾದರೂ ಗೆಲ್ಲಬೇಕೆಂಬ ಹಠ ಹೊಂದಿರುತ್ತಾರೆ. ಸಾಮಾಜಿಕವಾಗಿ ಬೆರೆಯುವ ಗುಣ ಎಲ್ಲರನ್ನೂ ಹತ್ತಿರಕ್ಕೆ ಸೇರಿಸುತ್ತದೆ. ನಾಯಕತ್ವದ (Leadership) ಗುಣ ಪ್ರಮುಖವಾಗಿರುತ್ತದೆ.
Zodiac Sign: ಈ ರಾಶಿಗಳ ಮಂದಿ ಸುಲಭವಾಗಿ ಜನರ ಕೇಂದ್ರಬಿಂದುವಾಗ್ತಾರೆ
· ಸಿಕ್ಕಾಪಟ್ಟೆ ಪ್ರಾಮಾಣಿಕತೆ (Honesty)
ಮೇಷ ರಾಶಿಯ ಮಹಿಳೆಯರು ಅತ್ಯಂತ ಪ್ರಾಮಾಣಿಕ ನಿಲುವು ಹೊಂದಿರುತ್ತಾರೆ. ಯಾವುದೇ ಕಾರಣಕ್ಕೆ ನಾಟಕ (Drama) ಮಾಡಲು ಇವರಿಂದ ಸಾಧ್ಯವಿಲ್ಲ. ಯಾವುದಾದರೂ ಒಂದು ವಿಷಯದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರೆ ಮತ್ತೊಮ್ಮೆ ಕೇಳುವ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದು ಇವರ ದೊಡ್ಡ ಗುಣ. ಇತರರ ಗುಣಾವಗುಣ, ಕೆಟ್ಟ ಸಂಗತಿಗಳ ಬಗ್ಗೆ ಮಾತನಾಡುವುದರಿಂದ ದೂರವಿರುತ್ತಾರೆ. ಗಾಸಿಪ್ (Gossip) ಎಂದರೆ ಇವರಿಗೆ ಆಗುವುದಿಲ್ಲ. ಎಲ್ಲರೆದುರು ಸತ್ಯವನ್ನೇ ಹೇಳುವ ಧೈರ್ಯ ಹೊಂದಿರುತ್ತಾರೆ.
· ಸಾಧನೆಯ (Achievement) ಹಂಬಲ
ಅಡೆತಡೆಗಳನ್ನು ಮೀರಿ ಏನಾದರೂ ಸಾಧಿಸುವ ಹಂಬಲ ಹೊಂದಿರುತ್ತಾರೆ. ಹೀಗಾಗಿ, ಸದಾಕಾಲ ಕೆಲಸ ಮಾಡುತ್ತಾರೆ. ಶ್ರಮ, ಕಷ್ಟಸಹಿಷ್ಣುತೆಯ ಗುಣವಿರುತ್ತದೆ. ಎಲ್ಲರನ್ನೂ ಹಿಂದಿಕ್ಕಿ ಸಾಧನೆಯ (Success) ಶಿಖರ ಏರುವ ತುಡಿತ ಹೊಂದಿರುತ್ತಾರೆ.
Negative Stress: ಋಣಾತ್ಮಕ ಒತ್ತಡಕ್ಕೂ, ಇವರಿಗೂ ಭಾರೀ ನಂಟು!
· ಸ್ನೇಹಶೀಲ (Friendly) ಮತ್ತು ಉದಾರತೆ (Generosity)
ಈ ರಾಶಿಯ ಮಹಿಳೆಯರು ಸ್ನೇಹಶೀಲರಾಗಿರುತ್ತಾರೆ ಹಾಗೂ ಉದಾರ ಬುದ್ಧಿ ಹೊಂದಿರುತ್ತಾರೆ. ಹರ್ಷಚಿತ್ತರಾಗಿದ್ದು, ಕೆಲಸದಲ್ಲಿ ಯಾರೊಂದಿಗಾದರೂ ಕೈ ಜೋಡಿಸಲು ಹಿಂದೇಟು ಹಾಕುವುದಿಲ್ಲ. ರೋಮ್ಯಾಂಟಿಕ್ ಲವರ್ (Romantic Lover) ಅನ್ನು ಇಷ್ಟಪಡುತ್ತಾರೆ. ಭಯರಹಿತ ಗುಣದಿಂದಾಗಿ ಅತ್ಯಂತ ಭಾವೋದ್ರಿಕ್ತರಾಗುತ್ತಾರೆ. ನಿಜವಾದ ಪ್ರೀತಿ (Love) ದೊರೆತರೆ ಸಂಗಾತಿಗಾಗಿ ಎಲ್ಲವನ್ನೂ ಅರ್ಪಿಸಬಲ್ಲರು.
· ಸ್ವಯಂಪ್ರೇರಿತ (Volunteering) ಕಾರ್ಯಕ್ಕೆ ಹೆಸರುವಾಸಿ
ಗಂಭೀರವಾಗಿ ಸಾಧನೆಯ ತುಡಿತ ಹೊಂದಿರುವ ಮೇಷ ರಾಶಿಯ ಮಹಿಳೆಯರು ಚಾರಿಟಿ (Charity) ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಾರೆ. ರಾಜಕೀಯ (Politics) ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಲ್ಲರು. ಉತ್ತಮ ಮಾರ್ಗದರ್ಶಕರಾಗಬಲ್ಲರು. ಇತರರ ಬಗ್ಗೆಯೂ ಕಾಳಜಿ ಹೊಂದಿದ್ದು, ಅವರು ಖುಷಿಯಾಗಿರಲಿ ಎಂದು ಬಯಸುತ್ತಾರೆ. ಹೀಗಾಗಿ, ಸ್ವಯಂಪ್ರೇರಿತರಾಗಿ ಸಮಾಜಸೇವೆ (Social Work) ಮಾಡುತ್ತಾರೆ. ಇದರಿಂದ ಭಾರೀ ನೆಮ್ಮದಿ ಕಾಣುತ್ತಾರೆ. ಉತ್ತಮ ಸಂಘಟನಾ ಚಾತುರ್ಯ, ಸಾಹಸಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಸ್ವತಂತ್ರ (Independent) ಧೋರಣೆ ಇವರ ನೈಸರ್ಗಿಕ ಗುಣ.