ವೃಷಭದಲ್ಲಿ ಬುಧ ವಕ್ರಿ; ನಿಮ್ಮ ರಾಶಿಯ ಮೇಲೇನು ಪರಿಣಾಮವಾಗಲಿದೆ?

By Suvarna News  |  First Published May 8, 2022, 12:13 PM IST

ಬುಧ ಗ್ರಹವು ವೃಷಭ ರಾಶಿಯಲ್ಲಿ ಮೇ 10ರಂದು ಹಿಮ್ಮುಖ ಚಲನೆ ಆರಂಭಿಸಲಿದೆ. ಬುಧದ ಈ ನಡೆಯು ರಾಶಿಗಳ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ನೋಡೋಣ. 


ಬುಧ ಗ್ರಹವು ಸಂವಹನ ಮತ್ತು ವ್ಯಾಪಾರಕ್ಕೆ ಸಂಬಂಧಿಸಿರುವುದು. ಬುಧವು ಅತಿ ವೇಗವಾಗಿ ಚಲಿಸುವ ಗ್ರಹವಾಗಿದ್ದು, ಸೂರ್ಯನಿಗೆ ಹತ್ತಿರದಲ್ಲಿರುವುದರಿಂದ ಒಂದು ರಾಶಿಯಿಂದ ಮತ್ತೊಂದಕ್ಕೆ ಚಲಿಸಲು ಸಾಮಾನ್ಯವಾಗಿ 14ರಿಂದ 30 ದಿನಗಳನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಬುಧವು ಹಿಮ್ಮುಖವಾಗಿ ಚಲಿಸುತ್ತದೆ. ಭೂಮಿಯಿಂದ ನೋಡಿದಾಗ ಹಿಮ್ಮುಖ ಚಲನೆಯಲ್ಲಿರುವಂತೆ ಭಾಸವಾಗುವುದಕ್ಕೆ ವಕ್ರಿ ಎನ್ನಲಾಗುತ್ತದೆ. 
ಈ ಬಾರಿ ಮೇ 10ರಂದು ಬುಧ ವಕ್ರಿ(Mercury retrograde)ಯು ವೃಷಭ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಸಂದರ್ಭದಲ್ಲಿ ಮಾಡಿದ್ದೇ ಕೆಲಸಗಳನ್ನು ಮತ್ತೆ ಮಾಡಬೇಕಾಗುವುದು ಹೆಚ್ಚುತ್ತದೆ ಎನ್ನಲಾಗುತ್ತದೆ. ವಿಶೇಷವಾಗಿ ಬುಧ ವಕ್ರಿಯು ನಮ್ಮ ಸಂವಹನ(communication)ದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ನಿಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳಲು, ವಿವರಣೆ ನೀಡಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಸಂಬಂಧಗಳಲ್ಲಿ ವಂಚನೆ, ಮೋಸ, ಕುಟಿಲತೆ ಹೆಚ್ಚುವುದು. ಜೊತೆಗೆ ಅಭದ್ರತೆ ಮತ್ತು ಮೂಡ್ ಸ್ವಿಂಗ್‌ಗೆ ಕಾರಣವಾಗುತ್ತದೆ. ಹಣಕಾಸಿನ ವಿಚಾರದಲ್ಲೂ ಸಂವಹನ ಕೊರತೆ ದೊಡ್ಡ ಅಡೆತಡೆಯಾಗುವಂತೆ ಮಾಡುತ್ತದೆ. ಈ ಬುಧ ವಕ್ರಿಯಿಂದ ಯಾವ ರಾಶಿಯ ಮೇಲೆ ಏನು ಪರಿಣಾಮವಾಗುತ್ತದೆ ನೋಡೋಣ.

ಮೇಷ(Aries)
ಮೇಷ ರಾಶಿಯವರಿಗೆ ಬುಧ ವಕ್ರಿಯು ಜಾತಕದ ಎರಡನೇ ಮನೆಯಲ್ಲಿ ಸಂಭವಿಸುತ್ತದೆ. ಮೇ 10ರಿಂದ ಜೂನ್ 3ರವರೆಗಿನ ಸಂದರ್ಭ ನಿಮಗೆ ಕೊಂಚ ಕಠಿಣ ಎನಿಸಬಹುದು. ಖರ್ಚುಗಳು ಹೆಚ್ಚಲಿವೆ. ಈ ಸಂದರ್ಭದಲ್ಲಿ ಯಾವುದೇ ಹೊಸತನ್ನು ಪ್ರಾರಂಭಿಸಬೇಡಿ. ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಂವಹನ ಕೊರೆತೆಯಿಂದ ಕೆಲ ಬಿರುಕುಗಳು ಕಾಣಿಸಬಹುದು ಎಚ್ಚರ.

Tap to resize

Latest Videos

ವೃಷಭ(Taurus)
ಇದೇ ರಾಶಿಯಲ್ಲಿ ಬುಧ ವಕ್ರಿಯಾಗುವುದು. ಹಾಗಾಗಿ, ಮುಂದಿನ 24 ದಿನಗಳು ಕಷ್ಟದ ದಿನಗಳಾಗಲಿವೆ. ಹಣಕಾಸಿನ ವಿಚಾರದಲ್ಲಿ ಕೊಂಚ ಕಷ್ಟಗಳು ಎದುರಾಗಲಿವೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಹಾಗಾಗಿ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ. ವಿವಾಹಿತ ಜೋಡಿಗಳ ನಡುವೆ ಜಗಳ ಹೆಚ್ಚಲಿದೆ. ವೃತ್ತಿನಿರತರು ಕಷ್ಟನಷ್ಟ ಎದುರಿಸಬೇಕಾಗುತ್ತದೆ. 

ಮಿಥುನ(Gemini)
ಮಿಥುನ ರಾಶಿಗೆ, ಬುಧವು 12ನೇ ಮನೆಯಿಂದ ಹಿಮ್ಮುಖವಾಗಿ ತಿರುಗುತ್ತದೆ. ಜೂನ್ 3ರವರೆಗಿನ ಅವಧಿಯು ವಿವಾಹಿತ ಜನರಿಗೆ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ವ್ಯಾಪಾರ ಅಥವಾ ಉದ್ಯೋಗದಲ್ಲಿರುವವರು ಈ ಸಮಯದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ಆದ್ದರಿಂದ ನೀವು ಜಾಗರೂಕರಾಗಿರಬೇಕು ಮತ್ತು ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕು. ಇದಲ್ಲದೆ, ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಬಹುದು. ನಿಮ್ಮ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರಲಿದೆ. 

ಕರ್ಕಾಟಕ(Cancer)
ಕರ್ಕಾಟಕ ರಾಶಿಯವರಿಗೆ, ಬುಧ  ಗ್ರಹವು 11ನೇ ಮನೆಯಿಂದ ತಿರುಗಲು ಪ್ರಾರಂಭಿಸುತ್ತದೆ. ವಕ್ರಿ ಸಂದರ್ಭದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಹೂಡಿಕೆಗೆ ಸಮಯವು ಅನುಕೂಲಕರವಾಗಿಲ್ಲ. ಕಷ್ಟಪಟ್ಟು ಗಳಿಸಿದ ಹಣವನ್ನು ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಸೂಕ್ತವಾಗಿದೆ. ಇದಲ್ಲದೆ, ವ್ಯಾಪಾರ ಅಥವಾ ಉದ್ಯೋಗಗಳಲ್ಲಿ, ಲಾಭ ಅಥವಾ ಆದಾಯವನ್ನು ಪಡೆಯುವ ಸಾಧ್ಯತೆಗಳು ಕಡಿಮೆ. ವಿವಾಹಿತರಿಗೆ ಅಥವಾ ಸಂಬಂಧದಲ್ಲಿರುವವರಿಗೆ ಸಮಯ ಅನುಕೂಲಕರವಾಗಿದೆ.

ಉಜ್ಜೈನಿ ಪೀಠದಲ್ಲೊಂದು  ವಿಶಿಷ್ಟ ಆಚರಣೆ, ದೇವಸ್ಥಾನದ ಗೋಪುರಕ್ಕೆ ಸುರಿಯುತ್ತಾರೆ ಎಣ್ಣೆ!

ಸಿಂಹ(Leo)
ಸಿಂಹ ರಾಶಿಯವರಿಗೆ, ಹಿಮ್ಮುಖ ಬುಧವು 10ನೇ ಮನೆಯಿಂದ ತನ್ನ ಹಿಮ್ಮುಖ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಈ ಅವಧಿಯು ನಿಮಗೆ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳೆರಡನ್ನೂ ತರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಗಳು ಕಡಿಮೆ ಇರುವುದರಿಂದ ನೀವು ಅಲ್ಪಾವಧಿಯಲ್ಲಿ ಹೂಡಿಕೆ ತಪ್ಪಿಸಬೇಕು. ಅಲ್ಲದೆ, ವ್ಯಾಪಾರಿಗಳು ಮತ್ತು ಉದ್ಯೋಗಿಗಳು ತಮ್ಮ ಕೆಲಸ ಮತ್ತು ವ್ಯವಹಾರದ ಬಗ್ಗೆ ಹೆಚ್ಚು ಗಮನ ಹರಿಸಲು ಸಲಹೆ ನೀಡಲಾಗುತ್ತದೆ.

ಕನ್ಯಾ(Virgo)
ಕನ್ಯಾ ರಾಶಿಯವರಿಗೆ, ಬುಧವು 9ನೇ ಮನೆಯಿಂದ ಹಿಮ್ಮುಖವಾಗಿ ತಿರುಗುತ್ತದೆ. ವಕ್ರಿ ಅವಧಿಯು ನಿಮಗೆ ಏರಿಳಿತಗಳಿಂದ ತುಂಬಿರುತ್ತದೆ. ಈ ಸಮಯದಲ್ಲಿ, ನೀವು ಸಣ್ಣ ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು. ಆರ್ಥಿಕವಾಗಿ, ನಿಮ್ಮ ನಡವಳಿಕೆಯ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದಲ್ಲಿ ಅದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ, ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ವೈವಾಹಿಕ ಜೀವನ ಸುಗಮವಾಗಿರುತ್ತದೆ. 

Weekly Horoscope: ಕಟಕಕ್ಕೆ ಧನನಷ್ಟ, ಮಿಥುನಕ್ಕೆ ಸಿಗದು ಮನಃಶಾಂತಿ

ತುಲಾ(Libra)
ತುಲಾ ರಾಶಿಯವರು ಬುಧ ವಕ್ರಿ ಅವಧಿಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಈ ಹಂತದಲ್ಲಿ, ನಿಮ್ಮ ಆರೋಗ್ಯದಲ್ಲಿ ನೀವು ಸಣ್ಣ ತೊಂದರೆಗಳನ್ನು ಎದುರಿಸಬಹುದು. ಕೆಲವು ಅನಿರೀಕ್ಷಿತ ವೆಚ್ಚಗಳ ಸಾಧ್ಯತೆಗಳಿವೆ. ಆದಾಗ್ಯೂ, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರು ಸಮಸ್ಯೆಗಳನ್ನು ತಪ್ಪಿಸಲು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇದಲ್ಲದೆ, ವಿವಾಹಿತರಿಗೆ ಅಥವಾ ಸಂಬಂಧದಲ್ಲಿರುವವರಿಗೆ ಸಮಯವು ಅನುಕೂಲಕರವಾಗಿಲ್ಲ.

ವೃಶ್ಚಿಕ(Scorpio)
ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಸಮಯವು ನಿಮಗೆ ಅನುಕೂಲಕರವಾಗಿಲ್ಲದ ಕಾರಣ, ದೀರ್ಘಾವಧಿಯ ಹೂಡಿಕೆಯನ್ನು ತಪ್ಪಿಸುವುದು ಒಳ್ಳೆಯದು. ಹೆಚ್ಚುವರಿಯಾಗಿ, ಕೆಲಸ ಮಾಡುವ ಉದ್ಯೋಗಿಗಳು ಮತ್ತು ವ್ಯಾಪಾರಸ್ಥರು ನಿರೀಕ್ಷೆಗಿಂತ ಕಡಿಮೆ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವಿವಾಹಿತ ದಂಪತಿಯ ನಡುವಿನ ಸಂಬಂಧವು ಸಾಮಾನ್ಯವಾಗಿ ಉಳಿಯಲಿದೆ.

ಧನು(Sagittarius)
ಧನು ರಾಶಿಯವರಿಗೆ, ಹಿಮ್ಮುಖ ಬುಧವು ಅನುಕೂಲಕರ ಫಲಿತಾಂಶಗಳನ್ನು ಒದಗಿಸುವುದಿಲ್ಲ. ಕೆಲಸ ಮಾಡುವ ವೃತ್ತಿಪರರು ಮತ್ತು ವ್ಯಾಪಾರಸ್ಥರು ಈ ಸಮಯದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಲ್ಲಿ ವಿವಾದಗಳ ಸಾಧ್ಯತೆಗಳಿವೆ. ಇದಲ್ಲದೆ, ಯಾವುದೇ ರೀತಿಯ ಹೂಡಿಕೆ ಮಾಡುವಾಗ ಜಾಗರೂಕರಾಗಿರಿ. ವಿವಾಹಿತ ದಂಪತಿ ನಡುವೆ ವಾಗ್ವಾದಗಳು ಉಂಟಾಗುವ ಸಾಧ್ಯತೆಯಿದೆ. ಆರೋಗ್ಯವು ಉತ್ತಮವಾಗಿರುತ್ತದೆ.

Lunar Eclipse 2022: ಈ ಎರಡು ರಾಶಿಗಳ ಜನರು ಎಚ್ಚರ, ಕಟ್ಟೆಚ್ಚರ!

ಮಕರ(Capricorn)
ಮಕರ ರಾಶಿಯ ವಿವಾಹಿತ ದಂಪತಿಗಳು ಮತ್ತು ಸಂಬಂಧದಲ್ಲಿರುವವರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಹಣಕಾಸಿನ ಯೋಜನೆಯಲ್ಲಿ ನೀವು ಜಾಗರೂಕರಾಗಿರಬೇಕು, ಸರಿಯಾದ ಯೋಜನೆ ಇಲ್ಲದೆ, ನೀವು ಬಯಸಿದ ಫಲಿತಾಂಶಗಳನ್ನು ಪಡೆಯದಿರಬಹುದು. ಸಂಬಳದಾರರು ಮತ್ತು ವ್ಯಾಪಾರಸ್ಥರು ತಮ್ಮ ಕೆಲಸದಲ್ಲಿ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇಲ್ಲದಿದ್ದರೆ ಅದು ಭವಿಷ್ಯದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು.

ಕುಂಭ(Aquarius)
ಕುಂಭ ರಾಶಿಗೆ ಈ ಅವಧಿಯು ಸವಾಲಾಗಿರುತ್ತದೆ. ನಿಮ್ಮ ಆರೋಗ್ಯದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬಹುದು. ಯಾವುದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಅಲ್ಪಾವಧಿಯ ಹೂಡಿಕೆಗೆ ಅನುಕೂಲಕರ ಸಮಯವಲ್ಲ. ಉದ್ಯೋಗಿಗಳು ಮತ್ತು ವ್ಯಾಪಾರಸ್ಥರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ವಿವಾಹಿತರು ತಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ, ಹೊಂದಾಣಿಕೆ ಮನಸ್ಥಿತಿಯಿದ್ದರ ವೈವಾಹಿಕ ಜೀವನ ಉತ್ತಮವಾಗಿರಲಿದೆ. 

Name Astrology: ಈ ಹೆಸರಿನ ಹುಡುಗಿ ಕೈ ಹಿಡಿದ್ರೆ ಅದೃಷ್ಟವೋ ಅದೃಷ್ಟ!

ಮೀನ(Pisces)
ಮೀನ ರಾಶಿಯವರಿಗೆ, ಹಿಮ್ಮುಖ ಬುಧವು ಕೆಲವು ಉದ್ವಿಗ್ನ ಸಂದರ್ಭಗಳನ್ನು ತರಬಹುದು. ಆರೋಗ್ಯವು ಉತ್ತಮವಾಗಿರುತ್ತದೆ. ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕು. ಪಾಲುದಾರಿಕೆಗೆ ಸಂಬಂಧಿಸಿದಂತೆ ನೀವು ಕೆಲವು ಎಚ್ಚರಿಕೆ ತೆಗೆದುಕೊಳ್ಳಬೇಕು. ಉದ್ಯೋಗಿಗಳು ಮತ್ತು ವ್ಯಾಪಾರಸ್ಥರಿಗೆ ಸಮಯವು ಮಧ್ಯಮವಾಗಿರುತ್ತದೆ. ವಿವಾಹಿತ ದಂಪತಿಯ ನಡುವೆ ಘರ್ಷಣೆಯ ಸಾಧ್ಯತೆಗಳಿವೆ.

click me!