ರಾಮ ತುಳಸಿ, ಶ್ಯಾಮ ತುಳಸಿಯಲ್ಲಿ ಯಾವುದು ಬೆಸ್ಟ್?

By Suvarna NewsFirst Published Jul 12, 2022, 12:57 PM IST
Highlights

ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಪೂಜೆ ನಡೆಯುತ್ತದೆ. ತುಳಸಿಯನ್ನು ಲಕ್ಷ್ಮಿಯಂತೆ ಭಕ್ತರು ಪೂಜೆ ಮಾಡ್ತಾರೆ. ಆದ್ರೆ ಕೆಲವರಿಗೆ ತುಳಸಿ ಗಿಡದಲ್ಲಿರುವ ವ್ಯತ್ಯಾಸ ತಿಳಿದಿಲ್ಲ. ಯಾವ ತುಳಸಿಗೆ ಯಾವ ಮಹತ್ವವಿದೆ ಎಂಬುದು ತಿಳಿದಿಲ್ಲ. 
 

ಮನೆ (House) ಮುಂದೊಂದು ತುಳಸಿ (Tulsi) ಗಿಡವಿದ್ರೆ ಮನೆಗೆ ಶುಭ. ಮನೆಯಲ್ಲಿ ತುಳಸಿ ಗಿಡವಿದ್ರೆ ಲಕ್ಷ್ಮಿ(Lakshmi) ನೆಲೆಸಿರ್ತಾಳೆಂದು ನಂಬಲಾಗಿದೆ. ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ತುಳಸಿಯನ್ನು ನಿಯಮಿತವಾಗಿ ಪೂಜೆ ಮಾಡಲಾಗುತ್ತದೆ. ವಾಸ್ತು ಶಾಸ್ತ್ರದಲ್ಲೂ ತುಳಸಿಗೆ ಉನ್ನತ ಸ್ಥಾನ ನೀಡಲಾಗಿದೆ. ತುಳಸಿ ಗಿಡವನ್ನು ಎಲ್ಲಿ ನೆಡಬೇಕು ಎನ್ನುವುದ್ರಿಂದ ಹಿಡಿದು, ತುಳಿಸಿ ಗಿಡವನ್ನು ಹೇಗೆ ಪೂಜೆ ಮಾಡಬೇಕು ಎನ್ನುವವರೆಗೆ ಎಲ್ಲವನ್ನೂ ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಪ್ರತಿ ದಿನ ತುಳಸಿ ಪೂಜೆ ಮಾಡಿದ್ರೆ ಮನೆಯಲ್ಲಿ ಧನಾತ್ಮಕತೆ ಮತ್ತು ಸಂತೋಷ ಮತ್ತು ಸಮೃದ್ಧಿ ಸದಾ ಇರುತ್ತದೆ. ತುಳಸಿ ಗಿಡವನ್ನು ದೇವರೆಂಬ ಕಾರಣಕ್ಕೆ ಮಾತ್ರ ಬೆಳೆಸೋದಿಲ್ಲ. ಅದನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ಅನೇಕ ರೋಗಗಳಿಗೆ ತುಳಸಿ ಮದ್ದು. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿ ತುಳಸಿ ಗಿಡವಿರುತ್ತದೆ. ತುಳಸಿಯಲ್ಲಿ ಎರಡು ವಿಧವಿದೆ. ಒಂದು ರಾಮ ತುಳಸಿ ಇನ್ನೊಂದು ಶ್ಯಾಮ ತುಳಸಿ. ಈ ತುಳಸಿಯಲ್ಲಿ ಯಾವುದು ಶ್ರೇಷ್ಠ? ಹಾಗೆ ಯಾವುದಕ್ಕೆ ಪ್ರತಿ ದಿನ ಪೂಜೆ ಮಾಡ್ಬೇಕು? ಯಾವುದನ್ನು ಮನೆಯಲ್ಲಿ ನೆಡಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಇಂದು ನಾವು ಇದಕ್ಕೆ ಉತ್ತರ ನೀಡುವ ಪ್ರಯತ್ನ ನಡೆಸ್ತೇವೆ.

ಮನೆಯಲ್ಲಿ ಯಾವ ತುಳಸಿ ಗಿಡ ಬೆಳೆಸುವುದು ಶ್ರೇಷ್ಠ ? :  
ರಾಮ ತುಳಸಿ :
ರಾಮ ತುಳಸಿಯ ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ. ರಾಮ ತುಳಸಿಯ ಎಲೆಗಳು ಸಿಹಿಯಾಗಿರುತ್ತವೆ. ಶ್ರೀರಾಮನಿಗೆ ರಾಮ ತುಳಸಿ ತುಂಬಾ ಪ್ರಿಯ. ರಾಮ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ದೊರೆಯುತ್ತದೆ. ಇದನ್ನು ಮನೆಯಲ್ಲಿಟ್ಟುಕೊಂಡರೆ ತುಂಬಾ ಶುಭ.

Latest Videos

ಸಣ್ಣಪುಟ್ಟದ್ದಕ್ಕೂ ನೋಯುವ, ಸಿಟ್ಟಾಗುವ, ಅಳುವ ರಾಶಿಚಕ್ರಗಳಿವು..

ಶ್ಯಾಮ ತುಳಸಿ : ಶ್ಯಾಮ ತುಳಸಿಯನ್ನು ಮನೆಯಲ್ಲಿ ನೆಡುವುದು ತುಂಬಾ ಮಂಗಳಕರ. ಹಾಗೆಯೇ ಆಯುರ್ವೇದದಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶ್ಯಾಮ ತುಳಸಿಯನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಶ್ಯಾಮ ತುಳಸಿಯ ಎಲೆಗಳು ಕಪ್ಪು ಅಥವಾ ನೇರಳೆ ಬಣ್ಣದಲ್ಲಿರುತ್ತವೆ. ಇದು ಶ್ರೀಕೃಷ್ಣನಿಗೆ ಸಂಬಂಧಿಸಿದೆ.

ತುಳಸಿ ಗಿಡಕ್ಕೆ ಸಂಬಂಧಿಸಿದ ಪ್ರಮುಖ ನಿಯಮಗಳು :

ಮನೆಯಲ್ಲಿ ತುಳಸಿ ನೆಡಲು ಗುರುವಾರ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನ ತುಳಸಿ ನೆಟ್ಟರೆ ಉತ್ತಮ.
ಪೂರ್ವದಲ್ಲಿ ತುಳಸಿ ಗಿಡವನ್ನು ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. 

Numerology Today: ಈ ಸಂಖ್ಯೆಗಿಂದು ಕೆಲಸಗಳಲ್ಲಿ ಯಶಸ್ಸು

- ಬಾಲ್ಕನಿ ಅಥವಾ ಕಿಟಕಿಯ ಬಳಿ ಇಡುತ್ತಿದ್ದರೆ ಅದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಸರಿ. ವಾಸ್ತು ಪ್ರಕಾರ ಉತ್ತರ ದಿಕ್ಕು ಜಲದ ದಿಕ್ಕಾಗಿದೆ. ಉತ್ತರ ದಿಕ್ಕಿನಲ್ಲಿ ತುಳಸಿ ಗಿಡ ಬೆಳೆಸಿದ್ರೆ ಸಕಾರಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ. ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. 
- ಮನೆಯಲ್ಲಿ ಒಂದು, ಮೂರು ಅಥವಾ ಐದು ತುಳಸಿ ಗಿಡಗಳನ್ನ ನೆಡಬೇಕು. ಸಮ ಸಂಖ್ಯೆಯಲ್ಲಿ ಗಿಡವನ್ನು ಬೆಳೆಸಬಾರದು.
-ತುಳಸಿ ಗಿಡದ ಆಸುಪಾಸು ಶುದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ಕೊಳಕಿನ ಪ್ರದೇಶದಲ್ಲಿ ತುಳಸಿ ಗಿಡ ಬೆಳೆಸಬೇಡಿ. ಡಸ್ಟ್ ಬಿನ್, ಪೊರಕೆ ಅಥವಾ ಮನೆ ಸ್ವಚ್ಛಗೊಳಿಸುವ ಬಟ್ಟೆಗಳನ್ನು ತುಳಸಿ ಗಿಡದ ಬಳಿ ಇಡಬೇಡಿ.
- ಮನೆಯಲ್ಲಿ ಬೆಳೆಸಿದ ತುಳಸಿ ಗಿಡ ಒಣಗಲು ಬಿಡಬೇಡಿ. ಒಣಗಿದ ತುಳಸಿ ಗಿಡವು ಮನೆಯಲ್ಲಿ ನಕಾರಾತ್ಮಕತೆ ಮತ್ತು ಸಮಸ್ಯೆಯನ್ನು ತರುತ್ತದೆ.
- ತುಳಸಿ ಗಿಡಕ್ಕೆ ಹಾಲಿನ ಅಭಿಷೇಕ ಮಾಡಲು ಬಯಸುವವರು ಕಚ್ಚಾ ಹಾಲನ್ನು ಹಾಕಬಾರದು. ಹಾಲಿಗೆ ನೀರನ್ನು ಬೆರೆಸಿಯೇ ಅಭಿಷೇಕ ಮಾಡಬೇಕು. 
- ತುಳಸಿ ಗಿಡದ ಪಕ್ಕದಲ್ಲಿ ಬೇರೆ ಹೂವಿನ ಗಿಡಗಳು ಇರುವಂತೆ ನೋಡಿಕೊಳ್ಳಿ. ಗಿಡಕ್ಕೆ ಸೂರ್ಯನ ಬೆಳಕು ಬೀಳಬೇಕು.

click me!