Mahashivratri 2022: ಈ ಶಿವರಾತ್ರಿಗೆ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾಗಿರಿ..

Suvarna News   | Asianet News
Published : Feb 23, 2022, 11:24 AM ISTUpdated : Feb 28, 2022, 09:07 AM IST
Mahashivratri 2022: ಈ ಶಿವರಾತ್ರಿಗೆ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾಗಿರಿ..

ಸಾರಾಂಶ

ಶಿವರಾತ್ರಿಗೆ ತಯಾರಿ ಶುರುವಾಗಿದೆ. ಭೋಲೆನಾಥನ ಆರಾಧನೆಗೆ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಶಿವರಾತ್ರಿಯಂದು ಜ್ಯೋತಿರ್ಲಿಂಗದ ದರ್ಶನ ಪಡೆಯುವ ಆಲೋಚನೆಯಲ್ಲಿದ್ದರೆ ದೇಶದಲ್ಲಿ ಎಲ್ಲೆಲ್ಲಿ ಜ್ಯೋತಿರ್ಲಿಂಗವಿದೆ ಎಂಬ ವಿವರ ಇಲ್ಲಿದೆ.   

ಮಾರ್ಚ್ ಒಂದರಂದು ಮಹಾಶಿವರಾತ್ರಿ (Mahashivaratri). ಭಗವಂತ ಭೋಲೆನಾಥ್ (Bholenath) ಮತ್ತು ತಾಯಿ ಪಾರ್ವತಿ (Parvati) ವಿವಾಹ (Wedding)ವಾದ ದಿನ . ಈ ದಿನ ಶಿವನಿಗೆ ವಿಶೇಷ ಆರಾಧನೆ ನಡೆಯುತ್ತದೆ. ಶ್ರದ್ಧೆ ಮತ್ತು ಭಕ್ತಿಯಿಂದ ಭಗವಂತ ಶಿವನನ್ನು ಪೂಜಿಸಿದರೆ ಮತ್ತು ಆತನ ಮುಂದೆ ಪ್ರಾರ್ಥನೆ ಮಾಡಿದ್ರೆ, ಭಕ್ತ ಕೇಳಿದ್ದನ್ನು ಭೋಲೆನಾಥ್ ನೀಡುತ್ತಾನೆ ಎಂಬ ನಂಬಿಕೆಯಿದೆ. ಮಹಾಶಿವರಾತ್ರಿಯಲ್ಲಿ ಶಿವನ ಭಕ್ತರು ರಾತ್ರಿ ಪೂರ್ತಿ ಜಾಗರಣೆ ಮಾಡಿ, ಶಿವನನ್ನು ಪ್ರಾರ್ಥಿಸುತ್ತಾರೆ. ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ದೇವಸ್ಥಾನದಲ್ಲೂ ಶಿವರಾತ್ರಿಯಂದು ರುದ್ರಾಭಿಷೇಕ ನಡೆಯುತ್ತದೆ. ದೇಶದಲ್ಲಿ 12 ಜ್ಯೋತಿರ್ಲಿಂಗಗಳಿವೆ. ಇಲ್ಲಿ ಶಿವನು ಜ್ಯೋತಿರ್ಲಿಂಗದ ರೂಪದಲ್ಲಿ ಬಂದು ನೆಲೆಸಿದ್ದಾನೆ.. ಮಹಾಶಿವರಾತ್ರಿಯ ಸಂದರ್ಭದಲ್ಲಿ  ಜೋತಿರ್ಲಿಂಗದ ದರ್ಶನ ಬಯಸಿದ್ದರೆ ಅವು ಎಲ್ಲಿವೆ ಎಂಬುದನ್ನು ನಾವಿಂದು ನೋಡೋಣ.

ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳು 
ಸೋಮನಾಥ್ ಜ್ಯೋತಿರ್ಲಿಂಗ ಗುಜರಾತ್ : ದೇಶದ ಮೊದಲ ಜ್ಯೋತಿರ್ಲಿಂಗ ಗುಜರಾತಿ(Gujarat)ನ ಸೌರಾಷ್ಟ್ರದಲ್ಲಿದೆ. ಅರಬ್ಬಿ ಸಮುದ್ರದ ತೀರದಲ್ಲಿರುವ ಈ ಜ್ಯೋತಿರ್ಲಿಂಗದ ಹೆಸರು ಸೋಮನಾಥ ಜ್ಯೋತಿರ್ಲಿಂಗ. ಪುರಾಣಗಳ ಪ್ರಕಾರ, ಪ್ರಜಾಪತಿ ದಕ್ಷನು ಕ್ಷಯರೋಗಕ್ಕೆ ಚಂದ್ರನನ್ನು ಶಪಿಸಿದಾಗ, ಈ ಸ್ಥಳದಲ್ಲಿ ಚಂದ್ರ(Moon)ನು ಶಿವನನ್ನು ಪೂಜಿಸಿದನು ಮತ್ತು ಶಾಪ ವಿಮೋಚನೆಗಾಗಿ ಈ ಸ್ಥಳದಲ್ಲಿ ತಪಸ್ಸು ಮಾಡಿದನು. ಈ ಸ್ಥಳದಲ್ಲಿ ಚಂದ್ರದೇವ ಸ್ವತಃ ಜ್ಯೋತಿರ್ಲಿಂಗವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ.

RAHU KAAL: ಈ ಕೆಲಸಗಳನ್ನು ರಾಹು ಕಾಲದಲ್ಲಿಯೇ ಮಾಡಿ!

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಆಂಧ್ರಪ್ರದೇಶ : ಎರಡನೆಯ ಜ್ಯೋತಿರ್ಲಿಂಗವು ಆಂಧ್ರಪ್ರದೇಶ(Andra Pradesh)ದ ಕೃಷ್ಣಾ ನದಿಯ ದಡದಲ್ಲಿರುವ ಶ್ರೀಶೈಲಂ ಪರ್ವತದ ಮೇಲೆ ನೆಲೆಗೊಂಡಿದೆ. ಆಂಧ್ರಪ್ರದೇಶದಲ್ಲಿರುವ ಈ ಜ್ಯೋತಿರ್ಲಿಂಗದ ಹೆಸರು ಮಲ್ಲಿಕಾರ್ಜುನ ಜ್ಯೋತಿರ್ಲಿಂಗ.

ಮಹಾಕಾಳೇಶ್ವರ  ಜ್ಯೋತಿರ್ಲಿಂಗ  ಮಧ್ಯಪ್ರದೇಶ : ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದೆ. ಈ ಜ್ಯೋತಿರ್ಲಿಂಗದ ಬಳಿ ಕ್ಷಿಪ್ರಾ ನದಿ ಹರಿಯುತ್ತದೆ. ದಕ್ಷಿಣಾಭಿಮುಖವಾಗಿರುವ ಜ್ಯೋತಿರ್ಲಿಂಗ ಇದೊಂದೆ. ಪ್ರತಿನಿತ್ಯ ಭಸ್ಮ ಆರತಿ ಇದಕ್ಕೆ ನಡೆಯುತ್ತದೆ. ಇದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.

ಓಂಕಾರೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ ಎರಡು ಜ್ಯೋತಿರ್ಲಿಂಗಗಳಿವೆ. ಮಹಾಕಾಳೇಶ್ವರ ಜ್ಯೋತಿರ್ಲಿಂಗದ ಹೊರತಾಗಿ, ಓಂಕಾರೇಶ್ವರ ಜ್ಯೋತಿರ್ಲಿಂಗವು ಮಾಳ್ವಾ ಪ್ರದೇಶದಲ್ಲಿ ನರ್ಮದಾ(Narmada River) ನದಿಯ ದಡದಲ್ಲಿರುವ ಪರ್ವತದ ಮೇಲೆ ನೆಲೆಗೊಂಡಿದೆ.  

ಕೇದಾರನಾಥ ಜ್ಯೋತಿರ್ಲಿಂಗ, ಉತ್ತರಾಖಂಡ : ಕೇದಾರನಾಥ ಧಾಮವು ಉತ್ತರಾಖಂಡ(Uttarakhand)ದ ನಾಲ್ಕು ಧಾಮಗಳಲ್ಲಿ ಒಂದಾಗಿದೆ. ಇಲ್ಲಿ ಕೇದಾರನಾಥ ಜ್ಯೋತಿರ್ಲಿಂಗವಿದೆ. ಈ ಜ್ಯೋತಿರ್ಲಿಂಗವು ಅಲಕನಂದಾ ಮತ್ತು ಮಂದಾಕಿನಿ ನದಿಗಳ ದಡದಲ್ಲಿ ಕೇದಾರ ಶಿಖರದಲ್ಲಿದೆ. ಇದನ್ನು ಶಿವನ ಮನೆ ಎಂದು ಪರಿಗಣಿಸಲಾಗಿದೆ.

Hindu Religion: ಮನೆಯಲ್ಲಿ ಪವಿತ್ರ ಗಂಗಾಜಲವಿದ್ರೆ ಈ ತಪ್ಪು ಮಾಡ್ಬೇಡಿ

ಭೀಮಾಶಂಕರ ಜ್ಯೋತಿರ್ಲಿಂಗ, ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಮೂರು ಜ್ಯೋತಿರ್ಲಿಂಗಗಳಿವೆ. ಮೊದಲನೆಯದು ಪುಣೆಯಿಂದ 100 ಕಿಮೀ ದೂರದಲ್ಲಿರುವ ಡಾಕಿನಿಯಲ್ಲಿದೆ. ಇದನ್ನು ಭೀಮಾಶಂಕರ ಜ್ಯೋತಿರ್ಲಿಂಗ ಎಂದು ಕರೆಯಲಾಗುತ್ತದೆ. ಈ ಶಿವಲಿಂಗದ ಗಾತ್ರವು ಸಾಕಷ್ಟು ದಪ್ಪವಾಗಿದೆ. ಆದ್ದರಿಂದ ಇದನ್ನು ಮೋಟೇಶ್ವರ ಮಹಾದೇವ ಎಂದೂ ಕರೆಯುತ್ತಾರೆ.

ವಿಶ್ವನಾಥ್ ಜ್ಯೋತಿರ್ಲಿಂಗ, ಉತ್ತರ ಪ್ರದೇಶ : ಉತ್ತರ ಪ್ರದೇಶದ ಪವಿತ್ರ ವಾರಣಾಸಿ(Varanasi)ಯಲ್ಲಿ ವಿಶ್ವನಾಥ ಜ್ಯೋತಿರ್ಲಿಂಗವಿದೆ. ಈ ಸ್ಥಳವನ್ನು ಧರ್ಮ ನಗರಿ ಕಾಶಿ ಎಂದೂ ಕರೆಯುತ್ತಾರೆ. ಇದನ್ನು ಭಗವಾನ್ ಭೋಲೆನಾಥನ ನೆಚ್ಚಿನ ಸ್ಥಳವೆಂದು ಪರಿಗಣಿಸಲಾಗಿದೆ. ಗಂಗಾನದಿಯ ದಂಡೆಯ ಮೇಲೆ ಬಾಬಾ ವಿಶ್ವನಾಥನ ದೇವಾಲಯವಿದೆ. ಶಿವನು ಕೈಲಾಸವನ್ನು ತೊರೆದು ಕಾಶಿಯನ್ನು ಶಾಶ್ವತ ವಾಸಸ್ಥಾನವನ್ನಾಗಿ ಮಾಡಿದನೆಂದು ಹೇಳಲಾಗುತ್ತದೆ.

ತ್ರಯಂಬಕೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಮತ್ತೊಂದು ಜ್ಯೋತಿರ್ಲಿಂಗವಿದೆ. ಇದನ್ನು ತ್ರಯಂಬಕೇಶ್ವರ ಜ್ಯೋತಿರ್ಲಿಂಗ ಎಂದು ಕರೆಯಲಾಗುತ್ತದೆ. ಇದು ನಾಸಿಕ್‌ನಿಂದ ಪಶ್ಚಿಮಕ್ಕೆ 30 ಕಿಮೀ ದೂರದಲ್ಲಿ ಗೋದಾವರಿ ನದಿಯ ದಡದಲ್ಲಿದೆ. ಗೌತಮ ಋಷಿ ಮತ್ತು ಗೋದಾವರಿಯ ಪ್ರಾರ್ಥನೆಯ ಮೇರೆಗೆ ಶಿವನು ಈ ಸ್ಥಳದಲ್ಲಿ ನೆಲೆಸಿದ್ದಾನೆ ಎಂದು  ನಂಬಲಾಗಿದೆ.

ಬೈದ್ಯನಾಥ ಜ್ಯೋತಿರ್ಲಿಂಗ ಜಾರ್ಖಂಡ : ಬೈದ್ಯನಾಥ ಜ್ಯೋತಿರ್ಲಿಂಗವು ಜಾರ್ಖಂಡ್‌ನ ದಿಯೋಘರ್‌ನಲ್ಲಿದೆ. ಈ ದೇವಾಲಯವನ್ನು ಬೈದ್ಯನಾಥಧಾಮ ಎಂದು ಕರೆಯಲಾಗುತ್ತದೆ. ಇದನ್ನು ರಾವಣೇಶ್ವರ ಧಾಮ ಎಂದೂ ಕರೆಯುತ್ತಾರೆ.

ನಾಗೇಶ್ವರ ಜ್ಯೋತಿರ್ಲಿಂಗ ಗುಜರಾತ್ : ಸೋಮನಾಥ ಅಲ್ಲದೆ, ನಾಗೇಶ್ವರ ಜ್ಯೋತಿರ್ಲಿಂಗವು ಗುಜರಾತ್‌ನಲ್ಲಿದೆ. ಬರೋಡಾ ಜಿಲ್ಲೆಯ ಗೋಮತಿ ದ್ವಾರಕಾ ಬಳಿ  ಈ ದೇವಾಲಯವಿದೆ. 

Maha Shivratri: ರಾಶಿಯನುಸಾರ ಶಿವರಾತ್ರಿಯಂದು ಈ ಮಂತ್ರಗಳನ್ನು ಜಪಿಸಿದರೆ ಫಲಸಿದ್ಧಿ..

ರಾಮೇಶ್ವರಂ ಜ್ಯೋತಿರ್ಲಿಂಗ, ತಮಿಳುನಾಡು : 11 ನೇ ಜ್ಯೋತಿರ್ಲಿಂಗವು ತಮಿಳುನಾಡಿನ ರಾಮನಾಥಂ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಶ್ರೀರಾಮನು ಲಂಕಾದ ಮೇಲೆ ಆಕ್ರಮಣ ಮಾಡುವ ಮೊದಲು ಶಿವಲಿಂಗವನ್ನು ಸ್ಥಾಪಿಸಿದ ಸ್ಥಳವೆಂದು ನಂಬಲಾಗಿದೆ.  

ಗೃಷ್ಣೇಶ್ವರ ಜ್ಯೋತಿರ್ಲಿಂಗ  ಮಹಾರಾಷ್ಟ್ರ : ಮಹಾರಾಷ್ಟ್ರದ ಮೂರನೇ ಜ್ಯೋತಿರ್ಲಿಂಗ ಮತ್ತು ಭಗವಾನ್ ಶಿವನ 12 ನೇ ಜ್ಯೋತಿರ್ಲಿಂಗ ಗೃಷ್ಣೇಶ್ವರ ಜ್ಯೋತಿರ್ಲಿಂಗವಾಗಿದ್ದು, ಇದು ಸಂಭಾಜಿನಗರ ಬಳಿಯ ದೌಲತಾಬಾದ್‌ನಲ್ಲಿದೆ.  

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ