ಶಿವನ ಕೃಪೆ ಪಡೆಯಲು ಮಹಾ ಶಿವರಾತ್ರಿಯು ಅತ್ಯಂತ ವಿಶೇಷ ದಿನವಾಗಿದೆ. ಈ ದಿನ ಭಕ್ತಿ ಶ್ರದ್ಧೆಗಳಿಂದ ಈಶ್ವರನನ್ನ ಸಕಲ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ. ಹಾಗಾಗಿ ಈ ದಿನ ರಾಶಿಯ ಅನುಸಾರ ಈ ಮಂತ್ರಗಳನ್ನು ಜಪಿಸಿದರೆ ಆಯಾ ರಾಶಿಯವರ ಮನೋಕಾಮನೆಗಳು ಈಡೇರುತ್ತವೆ. ಆ ಮಂತ್ರಗಳು ಯಾವುವು ಎಂಬುದನ್ನು ತಿಳಿಯೋಣ.
ಹಿಂದುಗಳ ಮಹತ್ವದ ಹಬ್ಬಗಳಲ್ಲೊಂದಾದ ಮಹಾ ಶಿವರಾತ್ರಿ ( Shivarathri) ಈ ಬಾರಿ ಮಾರ್ಚ್ 1ರಂದು ಬಂದಿದೆ. ಹಿಂದೂ ಪಂಚಾಂಗದ ಪ್ರಕಾರ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಶಿವರಾತ್ರಿ ಆಚರಿಸಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ಶಿವ ಪಾರ್ವತಿಯರ ವಿವಾಹವಾದ ಕಾರಣ ಇದೇ ಮಾಸದ ಚತುರ್ದಶಿಯಂದು ಈ ಶಿವರಾತ್ರಿ ವ್ರತವನ್ನು ಆಚರಿಸಲಾಗುತ್ತದೆ.
ಬೇಡಿದ್ದನ್ನು ಕೊಡುವ ಶಿವನನ್ನು ಭಕ್ತಿ ಶ್ರದ್ಧೆಯಿಂದ ಈ ದಿನ ಪೂಜಿಸಿದರೆ ಸರ್ವ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ. ಭಕ್ತಿಯಿಂದ ಭಜಿಸಿದವಗೆ ತನ್ನ ಆತ್ಮಲಿಂಗವನ್ನೇ ಕೊಟ್ಟ ಶಿವ, ಮಾನವರ ಇಷ್ಟಾರ್ಥಗಳನ್ನು ಈಡೇರಿಸದೆ ಇರುತ್ತಾನೆಯೇ? ಹಾಗಾಗಿ ಶಿವರಾತ್ರಿಯಂದು ವಿಶೇಷವಾದ ಪೂಜೆ (Pooja), ಅರ್ಚನೆ, ಜಲಾಭಿಷೇಕ ಮುಂತಾದ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಹಾಗಾದರೆ ಈ ದಿನ ರಾಶಿಯ (Zodiac sign) ಅನುಸಾರ ಯಾವ ಮಂತ್ರಗಳನ್ನು ಹೇಳಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದನ್ನು ತಿಳಿಯೋಣ....
ಮೇಷ ರಾಶಿ (Aries): ಮೇಷ ರಾಶಿಯ ವ್ಯಕ್ತಿಗಳು ಈ ದಿನ ಶಿವ ಪೂಜೆ ಮಾಡಿದ ನಂತರ 'ಹ್ರೀಂ ಓಂ ನಮಃ ಶಿವಾಯ ಹ್ರೀಂ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ.
ವೃಷಭ ರಾಶಿ (Taurus): ವೃಷಭ ರಾಶಿಯ ವ್ಯಕ್ತಿಗಳು ಈ ದಿನ ಮಲ್ಲಿಕಾರ್ಜುನನನ್ನು ಧ್ಯಾನಿಸುತ್ತಾ 'ಓಂ ನಮ ಶಿವಾಯ' ಎಂಬ ಮಂತ್ರವನ್ನು 108 ಬಾರಿ ಜಪಿಸಿದರೆ ಇಷ್ಟಾರ್ಥ ಸಿದ್ಧಿಸುವುದಲ್ಲದೆ, ಕಾರ್ಯಕ್ಷಮತೆ ಹೆಚ್ಚುತ್ತದೆ.
ಮಿಥುನ ರಾಶಿ (Gemini): ಈ ರಾಶಿಯ ವ್ಯಕ್ತಿಗಳು ಮಹಾ ಶಿವರಾತ್ರಿಯಂದು ಮಹಾಕಾಳೇಶ್ವರನನ್ನು ಧ್ಯಾನಿಸುತ್ತ ಪೂಜೆ ಮಾಡುವುದು ಮತ್ತು 'ಓಂ ನಮೋ ಭಗವತೇ ರುದ್ರಾಯ' ಎಂಬ ಮಂತ್ರವನ್ನು ಜಪಿಸುವುದರಿಂದ ಆರ್ಥಿಕ ಸಂಕಷ್ಟ ದೂರವಾಗುವುದಲ್ಲದೆ ಮನೋ ಕಾಮನೆಗಳು ಪೂರ್ಣಗೊಳ್ಳುತ್ತವೆ.
ಕರ್ಕಾಟಕ ರಾಶಿ (Cancer) : ಮಹಾ ಶಿವರಾತ್ರಿಯಂದು ಈ ರಾಶಿಯ ವ್ಯಕ್ತಿಗಳು ಮಹಾದೇವನನ್ನು ಭಜಿಸಿ ಪೂಜಿಸುವುದಲ್ಲದೆ, 'ಓಂ ಹೌ ಜೂಮ್ ಸಃ' ಎಂಬ ಮಂತ್ರವನ್ನು ಜಪಿಸುವುದರಿಂದ ಭೌತಿಕ ಸುಖ ಸಾಧನಗಳು ಲಭಿಸುತ್ತವೆ.
ಇದನ್ನು ಓದಿ: Saturday Born Personality: ಶನಿವಾರ ಜನಿಸಿದವರಿಗಿರುತ್ತಾ ಶನಿ ಕೃಪೆ?
ಸಿಂಹ ರಾಶಿ (Leo): ಸಿಂಹ ರಾಶಿಯ ವ್ಯಕ್ತಿಗಳು ಮಹಾ ಶಿವರಾತ್ರಿಯ ದಿನದಂದು 'ಹ್ರೀಂ ಓಂ ನಮ ಶಿವಾಯ ಹ್ರೀಂ' ಎಂಬ ಮಂತ್ರವನ್ನು ಐವತ್ತೊಂದು ಬಾರಿ ಜಪಿಸಿದರೆ ಸರ್ಕಾರಿ ಉದ್ಯೋಗ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಬಹು ಬೇಗ ಈಡೇರುತ್ತವೆ.
ಕನ್ಯಾ ರಾಶಿ (Virgo) : ಕನ್ಯಾ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಮಹಾ ಶಿವರಾತ್ರಿಯ ದಿನದಂದು , 'ಓಂ ನಮೋ ಭಗವತೇ ರುದ್ರಾಯ' ಎಂಬ ಮಂತ್ರವನ್ನು ಜಪಿಸಬೇಕು. ಇದರಿಂದ ಧನ ಲಾಭವಾಗುವ ಸಂಭವ ಹೆಚ್ಚಿರುತ್ತದೆ.
ತುಲಾ ರಾಶಿ (Libra) : ತುಲಾ ರಾಶಿಯ ವ್ಯಕ್ತಿಗಳು ಮಹಾ ಶಿವರಾತ್ರಿಯಂದು ಶಿವ ಪಂಚಾಕ್ಷರಿ ಮಂತ್ರವಾದ 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ.
ವೃಶ್ಚಿಕ ರಾಶಿ (Scorpio) : ಈ ರಾಶಿಯ ವ್ಯಕ್ತಿಗಳು ಮಹಾ ಶಿವರಾತ್ರಿಯಂದು ಮಹಾದೇವನನ್ನು ಭಕ್ತಿಯಿಂದ ಪೂಜಿಸಿ 'ಹ್ರೀಂ ಓಂ ನಮಃ ಶಿವಾಯ ಹ್ರೀಂ' ಎಂಬ ಮಂತ್ರವನ್ನು ಜಪಿಸಬೇಕು ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ.
ಧನು ರಾಶಿ (Sagittarius) : ಮಹಾ ಶಿವರಾತ್ರಿಯ ದಿನದಂದು ಚಂದ್ರ ನೀಚ ಸ್ಥಿತಿಯಲ್ಲಿರುತ್ತಾನೆ. ಈ ದಿನ ಧನು ರಾಶಿಯ ವ್ಯಕ್ತಿಗಳು 'ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ। ತನ್ನೋ ರುದ್ರಃ ಪ್ರಚೋದಯಾತ್' ಮಂತ್ರವನ್ನು ಜಪಿಸುವುದರಿಂದ ಚಂದ್ರನು ಬಲಗೊಳ್ಳುತ್ತಾನೆ.
ಮಕರ ರಾಶಿ (Capricorn): ಈ ರಾಶಿಯ ವ್ಯಕ್ತಿಗಳು ಶಿವನ ಕೃಪೆ ಪಡೆಯಲು 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಬೇಕು. ಇದರಿಂದ ಯಶಸ್ಸು ಲಭಿಸುತ್ತದೆ.
ಇದನ್ನು ಓದಿ: Personality Traits: ಮಾರ್ಚ್‌ನಲ್ಲಿ ಜನಿಸಿದವರ ಕ್ಯೂರಿಯಸ್ ಕಹಾನಿ!
ಕುಂಭ ರಾಶಿ (Aquarius): ಈ ರಾಶಿಯವರು ಸಹ ಶಿವರಾತ್ರಿಯಂದು ಶಿವನ ಕೃಪೆ ಪಡೆಯಲು ಓಂ ನಮ ಶಿವಾಯ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ಈ ರಾಶಿಯವರ ಆರೋಗ್ಯ ಉತ್ತಮವಾಗಿರುತ್ತದೆ.
ಮೀನರಾಶಿ (Pisces) : ಮೀನ ರಾಶಿಯ ವ್ಯಕ್ತಿಗಳು ಶಿವರಾತ್ರಿಯಂದು 'ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ। ತನ್ನೋ ರುದ್ರಃ ಪ್ರಚೋದಯಾತ್' ಮಂತ್ರವನ್ನು ಜಪಿಸುವುದರಿಂದ ಸಕಲ ಕಷ್ಟಗಳು ದೂರವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ.