ಹಿಟ್ಟು ಕಲಸಲೂ ಉಂಟು ಶಾಸ್ತ್ರ, ಹೇಗೇಗೋ ಮಾಡಿದರೆ ಒಳ್ಳೇದಾಗೋಲ್ಲ

By Suvarna NewsFirst Published Nov 11, 2022, 5:00 PM IST
Highlights

ಚಪಾತಿಗೆ ಹಿಟ್ಟು ಕಲಸುವಾಗ ಹದ ಸರಿಯಾಗಿದ್ಯಾ ಅಂತಾ ನಾವು ನೋಡ್ತೇವೆ. ಇದ್ರ ಬಗ್ಗೆ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ಗಮನಿಸೋದಿಲ್ಲ. ಶಾಸ್ತ್ರದ ಪ್ರಕಾರ ನೀವು ಹಿಟ್ಟು ಕಲಸಿದ್ರೆ ಆರ್ಥಿಕ ವೃದ್ಧಿ ಜೊತೆ ಗೌರವ ಪ್ರಾಪ್ತಿಯಾಗುತ್ತದೆ.
 

ದಿನದಲ್ಲಿ ಒಂದು ಟೈಂ ಆದ್ರೂ ಚಪಾತಿ ಅಥವಾ ರೊಟ್ಟಿ ಬೇಕೇಬೇಕು ಎನ್ನುವವರು ಬಹಳ ಮಂದಿ. ಹಾಗಾಗಿ ಪ್ರತಿ ದಿನ ಅಡುಗೆ ಮನೆಯಲ್ಲಿ ಹಿಟ್ಟು ಕಲಸೋದು ತಪ್ಪೋದಿಲ್ಲ. ಮನೆಯಲ್ಲಿ ಇನ್ನೂ ಅನೇಕ ಕೆಲಸಗಳಿರುವ ಕಾರಣ ಅಥವಾ ಕಚೇರಿ ಹಾಗೂ ಮನೆ ಎರಡನ್ನೂ ನೋಡಿಕೊಳ್ಳಬೇಕು ಎನ್ನುವ ಮಹಿಳೆಯರು ಚಪಾತಿ ಹಿಟ್ಟು ಕಲಸುವಾಗ್ಲೇ ಹೆಚ್ಚು ಹಿಟ್ಟು ಕಲಸಿ ಫ್ರಿಜ್ ನಲ್ಲಿ ಇಡ್ತಾರೆ. ಮತ್ತೆ ಕೆಲವರು ಚಪಾತಿ ಲಟ್ಟಿಸಿ ಬಾಕ್ಸ್ ನಲ್ಲಿ ಹಾಕಿಡ್ತಾರೆ. ಅವರವರ ಅನುಕೂಲಕ್ಕೆ ತಕ್ಕಂತೆ ಅಡುಗೆ ಕೆಲಸ ನಡೆಯುತ್ತೆ ನಿಜ. ಆದ್ರೆ ಶಾಸ್ತ್ರ ಇವೆಲ್ಲನ್ನೂ ಒಪ್ಪಿಕೊಳ್ಳುವುದಿಲ್ಲ. ಇದ್ರಿಂದ ಗ್ರಹ ದೋಷವುಂಟಾಗುತ್ತದೆ. ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಶಾಸ್ತ್ರದಲ್ಲಿ ಚಪಾತಿ ಹಿಟ್ಟು ಕಲಸೋದ್ರಿಂದ ಹಿಡಿದು ಅದನ್ನು ಎಲ್ಲಿ ಇಡಬಾರದು ಎನ್ನುವ ಬಗ್ಗೆ ಹೇಳಲಾಗಿದೆ. ನಾವಿಂದು ಶಾಸ್ತ್ರದಲ್ಲಿ ಚಪಾತಿ ಹಿಟ್ಟಿನ ಬಗ್ಗೆ ಏನೆಲ್ಲ ಹೇಳಲಾಗಿದೆ ಎಂಬುದನ್ನ ತಿಳಿಸ್ತೆವೆ.

ಅಗತ್ಯವಿರುಷ್ಟೆ ಹಿಟ್ಟು (Flour) ಕಲಸಿ : ಮೊದಲೇ ಹೇಳಿದಂತೆ ಅಗತ್ಯಕ್ಕಿಂತ ಹೆಚ್ಚು ಹಿಟ್ಟನ್ನು ಕಲಸಿಡೋದು ಅನೇಕರ ಅಭ್ಯಾಸ. ಶಾಸ್ತ್ರದಲ್ಲಿ ಇದನ್ನು ತಪ್ಪು ಎನ್ನಲಾಗಿದೆ. ಹಿಟ್ಟನ್ನು ಅಗತ್ಯಕ್ಕಿಂತ ಹೆಚ್ಚು ಕಲಸಿ, ಆ ಹಿಟ್ಟನ್ನು ಮನೆಯಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ ಹಿಟ್ಟನ್ನು ಅಡುಗೆ ಮಾಡುವ ಸ್ವಲ್ಪ ಸಮಯದ ಮೊದಲು ಕಲಸಬೇಕು. ಒಂದು ದಿನ ಮೊದಲೇ ಕಲಿಸಿಟ್ಟರೂ ಇದು ನಕಾರಾತ್ಮಕ ಶಕ್ತಿ (Negative  Energy) ಹೆಚ್ಚಳಕ್ಕೆ ಕಾರಣವಾಗುತ್ತದೆ. ನಿಮಗೆ ಶಾಸ್ತ್ರದಲ್ಲಿ ನಂಬಿಕೆ ಇಲ್ಲದಿರಬಹುದು, ಆದ್ರೆ ಬರೀ ಶಾಸ್ತ್ರ ಮಾತ್ರ ವಿಷ್ಯನ್ನು ಹೇಳ್ತಿಲ್ಲ. ವೈದ್ಯರು (Doctor) ಕೂಡ ಆರೋಗ್ಯ (Health)  ದೃಷ್ಟಿಯಿಂದ ಇದು ಒಳ್ಳೆಯದಲ್ಲ ಎನ್ನುತ್ತಾರೆ. 

ಹಿಟ್ಟನ್ನು ಫಿಜ್ ನಲ್ಲಿ ಇಡಬೇಡಿ : ಹಿಟ್ಟನ್ನು ಸ್ವಲ್ಪ ನಾದಿ ಅದನ್ನು ಫ್ರಿಜ್ ನಲ್ಲಿಡುವವರ ಸಂಖ್ಯೆ ಹೆಚ್ಚಿದೆ. ಚಪಾತಿ ಮಾಡಿ ಉಳಿದ ಹಿಟ್ಟನ್ನು ಕೂಡ ಫ್ರಿಜ್ ನಲ್ಲಿ ಇಡ್ತಾರೆ. ಇವೆರಡೂ ಶಾಸ್ತ್ರಗಳ ಪ್ರಕಾರ ತಪ್ಪು. ಇದ್ರಿಂದ  ಮನೆಯಲ್ಲಿ ಬಡತನ ಆವರಿಸುತ್ತದೆ. ಕಷ್ಟಗಳು ಬರಲು ಶುರುವಾಗುತ್ತವೆ. 

ಮದುವೆಯಂಥ ಶುಭ ಸಂದರ್ಭದಲ್ಲಿಯೂ ಕಪ್ಪು ಬಳೆ ಧರಿಸುವುದೇಕೆ?

ಹಿಟ್ಟಿನ ಮೇಲೆ ಕೈ ಅಚ್ಚು : ಹಿಟ್ಟನ್ನು ನಾದಿದ ನಂತ್ರ ಮಿಶ್ರಣವನ್ನು ಹಾಗೆ ಇಡುವುದು ಸರಿಯಲ್ಲ. ಅದಕ್ಕೆ ಮನೆಯ ಹೆಣ್ಮಕ್ಕಳು ಅಥವಾ ಸೊಸೆಯ ಕೈ ಅಚ್ಚನ್ನು ಇಡಬೇಕು. ಏಕೆಂದರೆ ಮನೆಯ ಲಕ್ಷ್ಮಿ ಅಂದರೆ ಮಗಳು ಅಥವಾ ಸೊಸೆಯ ಬೆರಳಚ್ಚು  ಹಿಟ್ಟಿನ ಮೇಲೆ ಬಿದ್ದಾಗ ಮನೆಯಲ್ಲಿ ಹಣದ ಕೊರತೆ ಎಂದಿಗೂ ಕಾಡುವುದಿಲ್ಲ ಎಂದು ನಂಬಲಾಗಿದೆ.

ಹಿಟ್ಟು ಕಲಸಿದ್ಮೇಲೆ ಮುಚ್ಚಿಡಿ : ಚಪಾತಿ ಹಿಟ್ಟನ್ನು ಕಲಸಿದ ನಂತ್ರ ಅದನ್ನು ಹಾಗೆಯೇ ತೆರೆದು ಇಡಬಾರದು. ಅದನ್ನು ಮುಚ್ಚಿಡಬೇಕು. ತೆರೆದಿಟ್ಟರೆ ಧೂಳು, ಕೀಟಗಳು ಅದ್ರಲ್ಲಿ ಬೀಳುವ ಸಾಧ್ಯತೆಯಿರುತ್ತದೆ. ಮುಚ್ಚಿಟ್ಟಾಗ ಹಿಟ್ಟು ಸುರಕ್ಷಿತವಾಗಿರುತ್ತದೆ. ಶಾಸ್ತ್ರಗಳ ಪ್ರಕಾರ ಹಿಟ್ಟನ್ನು ಮುಚ್ಚಿಟ್ಟರೆ ಅದು ಕುಟುಂಬ ಸದಸ್ಯರ ಗೌರವವನ್ನು ಕಾಪಾಡುತ್ತದೆ. ಅವರ ಗೌರವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ಹಿಟ್ಟು ಕಲಸುವಾಗ ಇದನ್ನು ಗಮನಿಸಿ : ಹಿಟ್ಟನ್ನು ಬೆರೆಸುವಾಗ ಯಾವಾಗಲೂ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು. ದೇವರಿಗೆ ನೀಡುವ ಆಹಾರ ಯಾವಾಗ್ಲೂ ಶುದ್ಧವಾಗಿರಬೇಕು. ತಾಮ್ರವನ್ನು ಪವಿತ್ರ ಲೋಹವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹಿಟ್ಟನ್ನು ಕಲಸುವ ವೇಳೆ ಯಾವಾಗಲೂ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಇದು ಆರೋಗ್ಯದ ದೃಷ್ಟಿಯಿಂದ ಕೂಡ ಒಳ್ಳೆಯದು. ತಾಮ್ರದಲ್ಲಿ ನೀರು ಸೇವನೆ ಮಾಡುವುದ್ರಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ. 

Friday Remedy: ಶುಕ್ರವಾರದ ದಿನ ಈ ಕೆಲಸ ಮಾಡಿದ್ರೆ ಬಡತನ ಕಾಡುತ್ತೆ!

ಹಿಟ್ಟು ಕಲಸಿ ಉಳಿದ ನೀರನ್ನು ಏನು ಮಾಡ್ಬೇಕು ಗೊತ್ತಾ? : ಒಂದು ಪಾತ್ರೆಯಲ್ಲಿ ಹಿಟ್ಟು, ಇನ್ನೊಂದು ಲೋಟದಲ್ಲಿ ನೀರು ತೆಗೆದುಕೊಂಡು, ನೀರನ್ನು ಹಿಟ್ಟಿಗೆ ಹಾಕಿ ಕಲಸಲು ಶುರು ಮಾಡ್ತೇವೆ. ಸಾಕಷ್ಟು ನೀರು ಹಾಕಿದ ನಂತ್ರ ಲೋಟದಲ್ಲಿ ನೀರು ಹಾಗೆ ಉಳಿಯುತ್ತದೆ. ಅದನ್ನು ನಾವು ಚೆಲ್ಲುತ್ತೇವೆ. ಆದ್ರೆ ಆ ನೀರನ್ನು ಚೆಲ್ಲುವ ಬದಲು ಗಿಡಕ್ಕೆ ಹಾಕುವುದು ಮಂಗಳಕರವೆಂದು ಹೇಳಲಾಗುತ್ತದೆ. ಶಾಸ್ತ್ರದಲ್ಲಿ ಹೇಳಿದೆ ಎಂಬ ಕಾರಣಕ್ಕೆ ಮಾತ್ರವಲ್ಲ ಪರಿಸರ ರಕ್ಷಣೆಗೆ ಕೂಡ ಇದು ಒಳ್ಳೆಯ ಅಭ್ಯಾಸವಾಗಿದೆ.  
 

click me!