ಶಬರಿಮಲೆ: ಲಕ್ಷಾಂತರ ಭಕ್ತರಿಗೆ ಮಕರಜ್ಯೋತಿ ದರ್ಶನ

By Kannadaprabha NewsFirst Published Jan 15, 2023, 7:04 AM IST
Highlights

ಮಕರ ಸಂಕ್ರಾಂತಿ ನಿಮಿತ್ತ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ ಆಗಿದ್ದು, ದೇವಸ್ಥಾನದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.  

ತಿರುವನಂತಪುರ: ಮಕರ ಸಂಕ್ರಾಂತಿ ನಿಮಿತ್ತ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ ಆಗಿದ್ದು, ದೇವಸ್ಥಾನದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.  ನಿನ್ನೆ ಜ.14 ರ ಸಾಯಂಕಾಲ 6.50ರ ಸುಮಾರಿಗೆ ಅಯ್ಯಪ್ಪ ದೇವಸ್ಥಾನ ಎದುರಿರುವ ಪೊನ್ನಂಬಲಮೇಡುವಿನಲ್ಲಿ ಪವಿತ್ರ ಜ್ಯೋತಿಯ ದರ್ಶನವಾಯಿತು. ಮಕರ ಸಂಕ್ರಾಂತಿಯ ಪ್ರಯುಕ್ತ ಶಬರಿಮಲೆ ದೇಗುಲದಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಪಂದಳ ರಾಜಮನೆತನದ ಆಭರಣಗಳನ್ನು ತಂದು ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಕರಜ್ಯೋತಿ ದರ್ಶನ ಪಡೆದುಕೊಳ್ಳುವ ಉದ್ದೇಶದಿಂದ ಸಂಕ್ರಾಂತಿಯ ದಿನ ಶಬರಿಮಲೆಗೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿತ್ತು. ರಾತ್ರಿ 8.45ಕ್ಕೆ ಮಕರಸಂಕ್ರಮಣದ ವಿಶೇಷ ಪೂಜೆ ನೆರವೇರಿಸಲಾಗಿದ್ದು, 1.25 ಲಕ್ಷ ಮಂದಿ ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಶಬರಿಮಲೆಗೆ ಹದಿನೇಳೇ ದಿನದಲ್ಲಿ 310 ಕೋಟಿ ರೂ. ಆದಾಯ

 

click me!