ಕರಾವಳಿ ದೀಪಾವಳಿಯಲ್ಲೂ ಕಾಂತಾರದ್ದೇ ಹವಾ!

By Ravi Janekal  |  First Published Oct 24, 2022, 3:07 PM IST

ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ದೀಪಾವಳಿ ಹಬ್ಬದ ಆಚರಣೆಯಲ್ಲೂ ಕಾಂತಾರದ್ದೇ ಹವಾ. ಕರಾವಳಿ ಸಂಸ್ಕೃತಿಗೆ ಕನ್ನಡಿ ಹಿಡಿದಂತಿರುವ ಕಾಂತಾರ ಸಿನಿಮಾದ ಗುಂಗಿನಿಂದ ಇನ್ನು ಕೂಡ ಉಡುಪಿ ಜಿಲ್ಲೆಯ ಜನರು ಹೊರಬಂದಿಲ್ಲ. ದೀಪಾವಳಿ ಹಬ್ಬದ ಆಚರಣೆಯಲ್ಲೂ ಕಾಂತಾರ ಚಲನಚಿತ್ರ ಸಕತ್ ಪ್ರಭಾವ ಭೀರಿದೆ.


ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಅ.24) : ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ದೀಪಾವಳಿ ಹಬ್ಬದ ಆಚರಣೆಯಲ್ಲೂ ಕಾಂತಾರದ್ದೇ ಹವಾ. ಕರಾವಳಿ ಸಂಸ್ಕೃತಿಗೆ ಕನ್ನಡಿ ಹಿಡಿದಂತಿರುವ ಕಾಂತಾರ ಸಿನಿಮಾದ ಗುಂಗಿನಿಂದ ಇನ್ನು ಕೂಡ ಉಡುಪಿ ಜಿಲ್ಲೆಯ ಜನರು ಹೊರಬಂದಿಲ್ಲ. ದೀಪಾವಳಿ ಹಬ್ಬದ ಆಚರಣೆಯಲ್ಲೂ ಕಾಂತಾರ ಚಲನಚಿತ್ರ ಸಕತ್ ಪ್ರಭಾವ ಭೀರಿದೆ.

Tap to resize

Latest Videos

undefined

'ಪೊನ್ನಿಯಿನ್ ಸೆಲ್ವನ್‌'ಗೆ ಸೆಡ್ಡು ಹೊಡೆದ 'ಕಾಂತಾರ'; ಮೊದಲ ವೀಕೆಂಡ್ ಹಿಂದಿಯಲ್ಲಿ ಭರ್ಜರಿ ಕಲೆಕ್ಷನ್

ಕರಾವಳಿ ಜನರಿಗೆ ದೀಪಾವಳಿ(Diwali) ಅತಿ ದೊಡ್ಡ ಹಬ್ಬ. ಹಲವು ರೀತಿಯ ಸಾಂಪ್ರದಾಯಿಕ ಆಚರಣೆಗಳು ಇವತ್ತಿಗೂ ಈ ಭಾಗದಲ್ಲಿ ಜೀವಂತವಾಗಿದೆ. ಕೃಷಿ ಪದ್ಧತಿಯೊಂದಿಗೆ ತಳುಕು ಹಾಕಿಕೊಂಡಿರುವ ದೀಪಾವಳಿ ಆಚರಣೆಯಲ್ಲಿ ಈ ಬಾರಿ ಹಲವು ಹೊಸತನಗಳು ಕಂಡು ಬಂದಿವೆ. ಕಾಂತಾರ ಸಿನಿಮಾ ಗೆ ಫಿದಾ ಆಗಿರುವ ಕರಾವಳಿಯ ಜನ ಹಬ್ಬದ ಆಚರಣೆಯಲ್ಲೂ, ಕಾಂತಾರದ ಗುಣಗಾನ ಮಾಡುತ್ತಿದ್ದಾರೆ.

ಉಡುಪಿ(Udupi) ಜಿಲ್ಲೆ ಸಾಲಿಗ್ರಾಮ(Saligrama)ದ ಯುವ ಕಲಾವಿದರು ಕಾಂತಾರದ ರಂಗವಲ್ಲಿ ಬಿಡಿಸುವ ಮೂಲಕ ಕಣ್ಮನ ಸೆಳೆದಿದ್ದಾರೆ.ಈ ಅಪರೂಪದ ರಂಗೋಲಿ ಕಲಾವಿದರು, ಹಿಂದೆಯೂ ಅನೇಕ ಕಲಾತ್ಮಕ ಚಿತ್ರ ಬಿಡಿಸಿ ಹೆಸರುವಾಸಿಯಾಗಿದ್ದಾರೆ. ಸಾಲಿಗ್ರಾಮದ ಅಶ್ವತ್ಥ ಆಚಾರ್ಯ ಮತ್ತು ಸ್ಪೂರ್ತಿ ಆಚಾರ್ಯ ಈ ಅಪರೂಪದ ಕಲಾವಿದರು.

ಕಾಂತಾರ ಸಿನಿಮಾದ ಪೋಸ್ಟರ್ ನಲ್ಲಿ ಕಂಡುಬರುವ, ನಟ ರಿಷಬ್ ಶೆಟ್ಟಿ(Rishab Shetty)ಯ ಆರ್ಭಟದ ಚಿತ್ರಣ ಈ ರಂಗವಲ್ಲಿಯಲ್ಲೂ ಕಣ್ಣು ಕೋರೈಸುತ್ತಿದೆ. ಕಂಬಳದ ಕೋಣ ಓಡಿಸುವ ದೃಶ್ಯ ಮತ್ತು ಪಂಜುರ್ಲಿ ದೈವದ ಮುಖವರ್ಣಿಕೆಯ ಅಪರೂಪದ ಚಿತ್ರಣ ಅತ್ಯಂತ ಸಹಜವಾಗಿ ರಂಗವಲ್ಲಿಯಲ್ಲಿ ಮೂಡಿಬಂದಿದೆ. ಸಾಲಿಗ್ರಾಮದ ವಿಶ್ವಕರ್ಮ ಸಭಾಭವನದಲ್ಲಿ ಈ ಕಲಾಕೃತಿ ಗಮನ ಸೆಳೆಯುತ್ತಿದೆ.

ಭೂಮಿಯ ಮೇಲೆ ಛಾಯಾಚಿತ್ರವನ್ನು ಬಿಡಿಸಿಟ್ಟಂತೆ ಕಾಣುವ ಈ ರಂಗೋಲಿ ಸದ್ಯ ನೋಡುಗರ ಗಮನ ಸೆಳೆದಿದೆ. ಸುಮಾರು 40 ಗಂಟೆಗೂ ಅಧಿಕ ಕಾಲ ಶ್ರಮವಹಿಸಿ ಕಲಾವಿದರು ಈ ರಂಗವಲ್ಲಿ ರಚಿಸಿದ್ದಾರೆ. ಭಾವಚಿತ್ರದ ಯಥಾಪ್ರತಿಯಂತೆ ಕಾಣುವ ಈ ರಂಗೋಲಿ ಸಹಜ ಬಣ್ಣಗಳಿಂದ ಕಂಗೊಳಿಸುತ್ತಿದೆ.

ಕಾಂತಾರ ಗೂಡುದೀಪ:

ಅಶ್ವತ್ಥದ ಎಲೆಯಲ್ಲಿ ಹಲವು ಚಿತ್ರಗಳನ್ನು ಮೂಡಿಸಿ ಹೆಸರುವಾಸಿಯಾದ ಉಡುಪಿಯ ಮರ್ಣೆಯ ಕಲಾವಿದ ಮಹೇಶ್ , ಕಾಂತಾರ ಗೂಡು ದೀಪ ರಚಿಸಿದ್ದಾರೆ. ದೈವರಾಧನೆಯಲ್ಲಿ ಕಂಡುಬರುವ ಅರ್ಧಚಂದ್ರಾಕಾರದ ಅಣಿಯ ತದ್ರೂಪದಂತೆ ಗೂಡು ದೀಪ ರಚಿಸಿದ್ದಾರೆ. ಕೆಳಭಾಗದಲ್ಲಿ ಕೆಂಪು ಪಟ್ಟಿ ಬಿಡಿಸಿದ್ದಾರೆ. ಕಾಂತಾರದ ಪ್ರೇರಣೆಯಿಂದಲೇ ರಚಿತಗೊಂಡಿರುವ ಈ ಗೂಡು ದೀಪ ಸದ್ಯ ಎಲ್ಲರ ಆಕರ್ಷಣೆಗೆ ಪಾತ್ರವಾಗಿದೆ.

ಗೂಡು ದೀಪದಲ್ಲಿ ಪ್ರಜ್ವಲಿಸಿದ ಕಾಂತಾರ ಬಿತ್ತಿ ಚಿತ್ರ,,!

ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ  ಮಾಡುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಕನ್ನಡ ಚಿತ್ರದ ದೈವಾವೇಶದ ಚಿತ್ರವನ್ನು ಗೂಡು ದೀಪಕ್ಕೆ ಅಳವಡಿಸಿ.. ಅಂದಗಾಣಿಸಿದ್ದಾರೆ. 

ಎಲ್ಲೆಲ್ಲೂ ಕಾಂತಾರ ಆರಾಧನೆ: ರಿಷಬ್ ಶೆಟ್ಟಿಯಲ್ಲಿ ದೇವರನ್ನು ಕಂಡ ಫ್ಯಾನ್ಸ್

ರಾತ್ರಿ ಹೊತ್ತಿನಲ್ಲಿ  ವಿದ್ಯುತ್ ದೀಪ ಅಳವಡಿಸಿದಾಗ ಬಹಳ ಸುಂದರವಾಗಿ ಕಾಣುವ ಕಾಂತಾರ ಚಿತ್ರದ ದೈವದ ಚಿತ್ರವನ್ನು ಗೂಡು ದೀಪಕ್ಕೆ ಅಳವಡಿಸಿದವರು ಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳೇಬೆಟ್ಟು(Ganesh Raj saralebettu) ಅವರ ಪುತ್ರ ಸಮರ್ಥ್ ರಾಜ್(Samartha raj) ಅವರು ಜೊತೆಗೂಡಿ ಸಹಕರಿಸಿದ್ದಾರೆ ಗೂಡುದೀಪವನ್ನು ರಚನೆ ಮಾಡಲು ಎರಡು ದಿನತಗಲಿದೆ. ಇದನ್ನು ಬನ್ನಂಜೆಯಲ್ಲಿ  ನಡೆಯುವ ಗೂಡು ದೀಪ ಸ್ಪರ್ಧೆಯಲ್ಲಿ ಬಳಸಲಾಗುವುದೆಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

click me!