ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಬೆಳಕಿನ ಹಬ್ಬ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿ ವಿಭಿನ್ನವಾಗಿ ಆಚರಣೆಗೆ ಒಳಪಡುವ ದೀಪಾವಳಿ ಹಬ್ಬವನ್ನು ಮಲೆನಾಡಿನ ಜನರು ಕೂಡ ವಿಶಿಷ್ಟ ಬಗೆಯಾಗಿ ಆಚರಣೆ ಮಾಡುತ್ತಾರೆ. ಅವುಗಳಲ್ಲಿ ದೀಪಾವಳಿಗೆ ಹುಲಿ ಕುಣಿತ, ಕರಡಿ ಕುಣಿತ ಪ್ರಮುಖ ಆಕರ್ಷಣೆ.
ಚಿಕ್ಕಮಗಳೂರು (ಅ.24): ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಬೆಳಕಿನ ಹಬ್ಬ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿ ವಿಭಿನ್ನವಾಗಿ ಆಚರಣೆಗೆ ಒಳಪಡುವ ದೀಪಾವಳಿ ಹಬ್ಬವನ್ನು ಮಲೆನಾಡಿನ ಜನರು ಕೂಡ ವಿಶಿಷ್ಟ ಬಗೆಯಾಗಿ ಆಚರಣೆ ಮಾಡುತ್ತಾರೆ. ಅದರಲ್ಲೂ ಮಲೆನಾಡು ಕರಾವಳಿಯ ಸಂಪರ್ಕದ ಗ್ರಾಮಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆ ಮೀರಿರುತ್ತದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕರಾವಳಿಯ ಹುಲಿವೇಷದ ತಂಡ ಮಲೆನಾಡಿಗೆ ಆಗಮಿಸಿ ಹಬ್ಬದ ಶುಭಾಶಯಗಳನ್ನು ಕೋರುವ ವಾಡಿಕೆ ಬೆಳೆದು ಬಂದಿದೆ.
ಮನೆ ಮನೆಗೆ ತೆರಳಿ ನೃತ್ಯ :
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಲೆನಾಡಿಗೆ ಕರಾವಳಿಯ ಹುಲಿವೇಷದ ತಂಡ ಆಗಮಿಸಿದ್ದು, ಮನೆ ಮನೆಗೆ ತೆರಳಿ ನೃತ್ಯ ಮಾಡುತ್ತಿರುವುದು ಕಂಡು ಬರುತ್ತಿದೆ. ಹತ್ತು ಹದಿನೈದು ದಿನಗಳ ಹಿಂದಿನಿಂದಲೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಪಟ್ಟಣದ ಸುತ್ತಮುತ್ತ ದೀಪಾವಳಿ ಸಂಭ್ರಮ ಇಮ್ಮಡಿಗೊಳಸಲು ಪ್ರತಿ ವರ್ಷದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಂಪ್ರದಾಯಿಕ ಹುಲಿ ಮತ್ತು ಸಿಂಹವೇಷಧಾರಿಗಳ ತಂಡ, ಶಿವಮೊಗ್ಗದಿಂದ ಆಂಜನೇಯ ವೇಷಧಾರಿ, ಸ್ಥಳೀಯ ವಿವಿಧ ಕಲಾತಂಡಗಳು ಆಗಮಿಸಿ ಮನೆ ಮನೆಗೆ ಭೇಟಿ ನೀಡಿ ಮನರಂಜನೆ ನೀಡುತ್ತಿವೆ.
ವಿವಿದೆಡೆಯಿಂದ ಬಂದಿರುವ ಸಾಂಪ್ರದಾಯಿಕ ವೇಷಧಾರಿಗಳು, ಸ್ಥಳೀಯ ಯುವಕರ ಕರಡಿ ಕುಣಿತ, ಕೊರಗನ ನೃತ್ಯ ಹಾಗೂ ಸ್ಥಳೀಯ ಗ್ರಾಮೀಣ ಪ್ರದೇಶದವರ ಜನಪದ ಹಾಡಿನ ಕಾರ್ಯಕ್ರಮವೂ ನಡೆಯುತ್ತಿದೆ.
Chikkamagaluru: ದೇವಿರಮ್ಮ ದರ್ಶನಕ್ಕೆ ಹರಿದು ಬಂತು ಜನಸಾಗರ!