ಮೀನದಲ್ಲಿ ಗುರು ವಕ್ರಿ; ಈ ಮೂರು ರಾಶಿಗಳಿಗೆ ಹೆಚ್ಚಲಿರುವ ಆರ್ಥಿಕ ಸಂಕಷ್ಟ

By Suvarna News  |  First Published Jul 20, 2022, 2:33 PM IST

ಈ ತಿಂಗಳಾಂತ್ಯದಲ್ಲಿ ಗುರು ಗ್ರಹವು ಮೀನ ರಾಶಿಯಲ್ಲಿ ಹಿಮ್ಮುಖ ನಡೆ ಆರಂಭಿಸಲಿದೆ. ಗುರುವಿನ ಈ ವಕ್ರಿ ನಡೆಯಿಂದಾಗಿ ಮೂರು ರಾಶಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ನಿಮ್ಮ ರಾಶಿ ಇದರಲ್ಲಿದೆಯೇ?


ಈ ತಿಂಗಳಲ್ಲಿ ಹಲವಾರು ಗ್ರಹಗಳು ತಮ್ಮ ರಾಶಿ ಬದಲಿಸುತ್ತಿವೆ. ಬುಧ, ಶುಕ್ರ, ಶನಿ ಎಲ್ಲವೂ ಈಗಾಗಲೇ ಜುಲೈನಲ್ಲಿ ರಾಶಿಚಕ್ರ ಬದಲಿಸಿವೆ. ಶನಿಯು ಹಿಮ್ಮುಖ ಚಲನೆಯಲ್ಲಿ ಮಕರಕ್ಕೆ ಹೋಗಿದೆ. ಇದೀಗ ಗುರುವಿನ ಸರದಿ. ಗುರು ಕೂಡಾ ಹಿಮ್ಮುಖ ಚಲನೆಗೆ ಸಜ್ಜಾಗಿದೆ. 
ಹೌದು, ಜುಲೈ 29, 2022ರಂದು, ಶುಕ್ರವಾರ 01:33ಕ್ಕೆ ಬೃಹಸ್ಪತಿ ಗುರುವು ಸ್ವರಾಶಿ ಮೀನದಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ನವೆಂಬರ್ 24, 2022 ರಂದು ಗುರುವಾರ 04:36ರವೆರಗೂ ಗುರು ವಕ್ರಿ ಸ್ಥಿತಿಯಲ್ಲೇ ಇರುತ್ತಾನೆ. ವಕ್ರಿ ಎಂದರೆ ಹಿಂದಿನ ರಾಶಿಚಕ್ರಕ್ಕೆ ಹೋಗುವ ಪ್ರಕ್ರಿಯೆಯಾಗಿದ್ದು, ಗ್ರಹವು ನೇರವಾಗಿ ಹೋಗುವಾಗ ಕೊಂಚ ಬೇಗ ಚಲಿಸುತ್ತದೆ. ಹಿಮ್ಮುಖ ಚಲನೆಯಲ್ಲಿ ನಿಧಾನಗತಿ ಹೆಚ್ಚು. 
ಗುರುವನ್ನು ಗೌರವ ಮತ್ತು ಸಂತೋಷದ ಅಂಶವೆಂದು ಪರಿಗಣಿಸಲಾಗಿದೆ. ಮಕ್ಕಳು ಮತ್ತು ಸಂಪತ್ತಿಗೆ ನೇರ ಸಂಬಂಧ ಹೊಂದಿದೆ. ಗುರುವಿನ ಬಲ ಇರುವಾಗ ಮಾತ್ರ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರೆವೇರುವುದು. ವಿವಾಹ, ಉದ್ಯೋಗ, ಮಕ್ಕಳು ಇತ್ಯಾದಿ ಫಲಗಳು ಗುರುಬಲದಲ್ಲೇ ಸಾಧ್ಯವಾಗುವುದು. ಗುರುಗ್ರಹವು ಬೆಳವಣಿಗೆ, ವಿಸ್ತರಣೆ, ಚಿಕಿತ್ಸೆ, ಸಮೃದ್ಧಿ, ಅದೃಷ್ಟ ಮತ್ತು ಪವಾಡಗಳ ತತ್ವಗಳೊಂದಿಗೆ ಸಂಬಂಧ ಹೊಂದಿದೆ. ಗುರುವು ದೂರದ ಮತ್ತು ವಿದೇಶಿ ಪ್ರಯಾಣ, ದೊಡ್ಡ ವ್ಯಾಪಾರ ಮತ್ತು ಸಂಪತ್ತು, ಉನ್ನತ ಶಿಕ್ಷಣ, ಧರ್ಮ ಮತ್ತು ಕಾನೂನುಗಳನ್ನು ನಿಯಂತ್ರಿಸುತ್ತದೆ.

ಗುರು ಗ್ರಹವು ಸೌರವ್ಯೂಹದ ಅತಿದೊಡ್ಡ ಗ್ರಹಗಳಲ್ಲಿ ಒಂದಾಗಿದ್ದು, ಬೃಹತ್ ಗುರು(Jupiter)ವಿನ ಈ ಬದಲಾವಣೆಯು ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಆದರೆ ಮೂರು ರಾಶಿಚಕ್ರದ ಚಿಹ್ನೆಗಳು(Zodiac signs) ಹೆಚ್ಚು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಯಾರ ಬಜೆಟ್ ಹದಗೆಡುತ್ತದೆ ಎಂಬುದನ್ನು ತಿಳಿಯೋಣ. 

Tap to resize

Latest Videos

ಶ್ರಾವಣ ಮಾಸದಲ್ಲಿ ಕೂದಲು ಕತ್ತರಿಸಬಾರದು, ಯಾಕೆ ತಿಳಿದಿದೆಯೇ?

ಸಿಂಹ ರಾಶಿ(Leo)
ಸಿಂಹ ರಾಶಿಯ ಜನರು ಜುಲೈ 29ರ ನಂತರ ನಾಲ್ಕು ತಿಂಗಳ ಕಾಲ ತಮ್ಮ ವೃತ್ತಿ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲಸದ ಬಗ್ಗೆ ಮಾತನಾಡುವುದಾದರೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಇದು ಹಣಕಾಸಿನ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸಬಹುದು. ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ಪಡೆಯಲು ನಿಮ್ಮ ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ.

ತುಲಾ ರಾಶಿ(Libra)
ತುಲಾ ರಾಶಿಯವರಿಗೆ, ಗುರುಗ್ರಹದ ಹಿಮ್ಮುಖ ಚಲನೆಯ ಪರಿಣಾಮ ಅವರ ಜೀವನದಲ್ಲಿ ಕೋಲಾಹಲವನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ, ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಿ. ಅಲ್ಲದೆ, ಕೆಲಸಕ್ಕೆ ಸಂಬಂಧಿಸಿದ ಎಲ್ಲವನ್ನೂ ನಿಮ್ಮ ಹಿತೈಷಿಗಳೊಂದಿಗೆ ಹಂಚಿಕೊಳ್ಳಬೇಡಿ. ಈ ಅವಧಿಯಲ್ಲಿ ನೀವೇ ನಿಮ್ಮನ್ನು ಮೋಸಗೊಳಿಸಿಕೊಳ್ಳಬಹುದು. ಅಥವಾ ಹಿತೈಷಿಗಳಂತೆ ತೋರುವವರಿಂದ ಮೋಸ ಹೋಗಬಹುದು. ಮಾನಸಿಕ ಸಮಸ್ಯೆಗಳು ಹೆಚ್ಚಾಗಬಹುದು, ಆದ್ದರಿಂದ ಎಚ್ಚರಿಕೆಯಿಂದಿರಿ. ಅನಾವಶ್ಯಕ ಖರ್ಚು ಕೂಡ ಆಗುವ ಸಾಧ್ಯತೆ ಇದೆ.

ಸತ್ಯವಾಗುತ್ತಿದೆಯೇ 2022ಕ್ಕೆ ನಾಸ್ಟ್ರಾಡಾಮಸ್ ನುಡಿದ ಭಯಾನಕ ಭವಿಷ್ಯವಾಣಿ?

ಮಕರ ರಾಶಿ(Capricorn)
ಗುರುಗ್ರಹದ ಹಿನ್ನಡೆಯಿಂದ ಮಕರ ರಾಶಿಯವರ ಆತ್ಮವಿಶ್ವಾಸ ಕಡಿಮೆಯಾಗಬಹುದು. ಈ ಸಮಯದಲ್ಲಿ, ಜನರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದದಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಇರಿಸಿ. ಆತುರದ ನಿರ್ಧಾರವು ಹಣದ ನಷ್ಟಕ್ಕೆ ಕಾರಣವಾಗಬಹುದು. ವ್ಯವಹಾರದಲ್ಲಿ ಹಣದ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಿ. ಸಮಾಜದಲ್ಲಿ ಗೌರವ ಮತ್ತು ಮನ್ನಣೆಯನ್ನು ಉಳಿಸಿಕೊಳ್ಳಲು ಯಾವುದೇ ಕೆಟ್ಟ ಕೆಲಸ ಮಾಡಬೇಡಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!