ಜೂನ್‌ನಲ್ಲಿ ಏರಿಳಿತ ಕಾಣುವ ರಾಶಿಗಳಿವು: ಈ ತಿಂಗಳಲ್ಲಿ ನಿಮ್ಮ ಭವಿಷ್ಯ ಏನು?

By Sushma Hegde  |  First Published Jun 2, 2023, 5:45 PM IST

ರಾಶಿಚಕ್ರ ಚಿಹ್ನೆಗಳು   ಆರ್ಥಿಕವಾಗಿ, ವೃತ್ತಿ ಜೀವನ ದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಯಾರಿಗೆ ಅದೃಷ್ಟದ ಯೋಗವಿದೆ, ಯಾರಿಗೆ ಅಲ್ಪ ಅದೃಷ್ಟ, ಯಾರಿಗೆ ನಷ್ಟವಾಗಲಿದೆ ಎನ್ನುವುದರ ಸೂಚನೆ ನೀಡುತ್ತವೆ. ಅದೇ ರೀತಿ ಜೂನ್ ತಿಂಗಳಿನಲ್ಲಿ ಕಟಕ, ಸಿಂಹ ಹಾಗೂ ವೃಶ್ಚಿಕ ರಾಶಿಗಳಲ್ಲಿ ಏನಾಗಲಿದೆ ಎಂಬ ಸಂಪೂರ್ಣ ಮಾಹಿತಿ ನೀಡಲಾಗಿದೆ. 
 


ಪ್ರತಿಯೊಂದು ರಾಶಿಚಕ್ರ (Zodiac) ಚಿಹ್ನೆಗಳು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿದ್ದು, ಅವುಗಳು ಮನುಷ್ಯ ವ್ಯಕ್ತಿತ್ವ (personality)ವನ್ನು ವ್ಯಾಖ್ಯಾನಿಸುತ್ತದೆ. ರಾಶಿಗಳು ಆರ್ಥಿಕವಾಗಿ, ವೃತ್ತಿ ಜೀವನ (career life)ದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಯಾರಿಗೆ ಅದೃಷ್ಟದ ಯೋಗವಿದೆ, ಯಾರಿಗೆ ಅಲ್ಪ ಅದೃಷ್ಟ, ಯಾರಿಗೆ ನಷ್ಟವಾಗಲಿದೆ ಎನ್ನುವುದರ ಸೂಚನೆ ನೀಡುತ್ತವೆ. ಅದೇ ರೀತಿ ಜೂನ್ (June) ತಿಂಗಳಿನಲ್ಲಿ ಕಟಕ, ಸಿಂಹ ಹಾಗೂ ವೃಶ್ಚಿಕ ರಾಶಿಗಳಲ್ಲಿ ಏನಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 

ಕಟಕ (Cancer)
ಕಟಕ ರಾಶಿಯವರಿಗೆ ಜನ್ಮದಿನವು ಸಮೀಪಿಸುತ್ತಿದ್ದಂತೆ ಸಮಸ್ಯೆ (problem)ಗಳು ಎದುರಾಗುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿ ವರ್ಷದ ಮುಂದಿನ ದಿನಗಳಲ್ಲಿ ನಾನು ಏನು ಮಾಡಬೇಕು ಎಂಬ ಚಿಂತೆ ಶುರುವಾಗಲಿದ್ದು, ಅನೇಕ ಪ್ರಶ್ನೆಗಳು ಕಾಡಲಾರಂಭಿಸಲಿವೆ. ಆದ್ದರಿಂದ ಜೂನ್ ತಿಂಗಳು ನಿಮಗೆ ಅತಿಯಾದ ಚಿಂತೆ (worry)ಯನ್ನು ತರುತ್ತದೆ. ಇನ್ನು ಮುಖ್ಯವಾಗಿ ನೀವು ಜೀವನದ ಬಗ್ಗೆ ಆಲೋಚನೆ ಮಾಡಲು ಶುರು ಮಾಡುತ್ತೀರಿ. 

Tap to resize

Latest Videos

ಕೆಲ ಯೋಜನೆಗಳನ್ನು ಸ್ನೇಹಿತ (friend)ರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡುವಿರಿ. ಆದರೆ ಈ ಕುರಿತು ನಿಮ್ಮ ಸ್ನೇಹಿತರು ಸಹಾಯ ಹಾಗೂ ಸಲಹೆ ನೀಡುವ ಮೊದಲು ನೀವು ಜಾಗರುಕರಾಕಿ ಸಲಹೆ ಕೇಳಬೇಡಿ. ಜೂನ್‌ನಲ್ಲಿ ಕೆಲ ವಿಚಾರಗಳ ಬಗ್ಗೆ ನಿಮಗೆ ವಿಷಾದ (regret)ಉಂಟಾಗಲಿದೆ. ನಿಮ್ಮ ಆರೋಗ್ಯವು ಕೆಲವು ಅಡಚಣೆಯನ್ನು ಉಂಟಾಗುವ ಸಾಧ್ಯತೆ ಇದ್ದು, ಕೆಲಸದ ಜೊತೆಗೆ ಆರೋಗ್ಯದ ಬಗ್ಗೆಯೂ ನೀವು ವಿಶೇಷ ಗಮನ ಹರಿಸಬೇಕಾಗುತ್ತದೆ. 

ಸಿಂಹ (Leo )
ಜೂನ್‌ ತಿಂಗಳಲ್ಲಿ ನೀವು ಇತರರಿಗಿಂತ ಉತ್ತಮರು ಎಂದು ನೀವು ಭಾವಿಸಬಹುದು. ಈ ತಿಂಗಳಲ್ಲಿ ನಿಮಗೆ ಯಶಸ್ಸು (success) ಸಿಗಲಿದೆ. ನಿಮಗೆ ನಿಮ್ಮ ಸ್ನೇಹಿತರ ಬೆಂಬಲ ಕೂಡ ದೊರೆಯಲಿದೆ. ಆದರೆ ನಿಮಗೆ ಆರ್ಥಿಕ (financial) ಸ್ಥಿತಿಯಲ್ಲಿ ಏರಿಳಿತಗಳಾಗುವ ಸಾಧ್ಯತೆಯಿದೆ. ವೃತ್ತಿ ಜೀವನದಲ್ಲಿ ಸವಾಲುಗಳನ್ನು ಎದುರಿಸುವಿರಿ, ಇದರಿಂದ ಯಶಸ್ಸನ್ನು ಸಿಗಲಿದೆ. 

ನಿಮ್ಮ ಕೌಟುಂಬಿಕ, ವೈವಾಹಿಕ, ಆರ್ಥಿಕ, ಆರೋಗ್ಯ (health) ಹಾಗೂ ಶೈಕ್ಷಣಿಕ ಜೀವನದಲ್ಲಿ ಬದಲಾವಣೆಗಳು ಆಗಲಿವೆ. ನಿಮಗೆ ಪ್ರಯೋಜನಕಾರಿಯಾದ ವಸ್ತು ಅಥವಾ ನಿಮಗೆ ಬೇಕಾದ ಆಪ್ತರನ್ನು ಕಳೆದುಕೊಳ್ಳುವ ಬಗ್ಗೆ ತುಂಬಾ ಚಿಂತೆ ಮಾಡುವಿರಿ. ಆದರೆ ಇತರರ ಭಾವನೆ (feeling)ಗಳ ಬಗ್ಗೆ ನೀವು ಸ್ವಲ್ಪವೂ ಚಿಂತಿಸುವುದಿಲ್ಲ. ಇನ್ನು ಆರೋಗ್ಯ ಸಾಮಾನ್ಯವಾಗಿರುತ್ತದೆ.

ನೀವು ಸಂಜೆ ನಿದ್ದೆ ಮಾಡುತ್ತೀರಾ?: ಹಾಗಾದ್ರೆ ದರಿದ್ರ ನಿಮ್ಮ ಹೆಗಲು ಏರುವುದು ಪಕ್ಕಾ..!

 

ವೃಶ್ಚಿಕ (Scorpio)
ಈ ರಾಶಿಯವರಿಗೆ ಜೂನ್ ತಿಂಗಳು ಸ್ವಲ್ಪ ಕಷ್ಟಕರವಾಗಲಿದೆ. ನೀವು ಆತಂಕ (anxiety)ಕ್ಕೆ ಒಳಗಾಗುವ ಸಾಧ್ಯತೆ ಇದೆ. ನಿಮ್ಮ ಜೀವನದ ಮೇಲೆ ಅನೇಕ ವಿಚಾರಗಳು ಪರಿಣಾಮ ಬೀರುತ್ತದೆ. ಜೂನ್ ತಿಂಗಳ ಆರಂಭವು ವೃತ್ತಿ ಜೀವನ (career life)ದಲ್ಲಿ ಶುಭಕರ ಇದೆ. ಈ ತಿಂಗಳು ಆರೋಗ್ಯ ಮತ್ತು ಸಂಬಂಧಗಳ ವಿಚಾರದಲ್ಲಿ ಸ್ವಲ್ಪ ಚಿಂತಾಜನಕ (worrisome)ವಾಗಿರುತ್ತದೆ. ನೀವು ಇತರ ಜನರ ಜೀವನದ ಕುರಿತು ಚಿಂತಿಸಿ ಬಹಳಷ್ಟು ಸಮಯವನ್ನು ಕಳೆಯುತ್ತೀರಿ. 

ನಿಮ್ಮ ಮನದ ಮಾತನ್ನು ನಂಬಲು ಪ್ರಾರಂಭಿಸುತ್ತೀರಿ. ಯಾವುದೇ ಅಂದುಕೊಂಡದ್ದು ನಡೆಯುವ ಸಾಧ್ಯತೆ ಕಡಿಮೆ ಇರಲಿದೆ. ಸರಿಯಾದ ಪ್ಲಾನ್ (Plan)ಇರದ ಕಾರಣ ನಿಮ್ಮ ಜೀವನದಲ್ಲಿ ಕೆಲ ಅಡೆತಡೆಗಳು ಬರುವ ಸಾಧ್ಯತೆ ಇದೆ. ಆದರೆ ಈ ತಿಂಗಳು ನಿಮ್ಮ ವೃತ್ತಿ ಮತ್ತು ವ್ಯವಹಾರವನ್ನು ನಡೆಸಲು ನಿಮಗೆ ಉತ್ತಮ ಅವಕಾಶಗಳು ಬರಲಿವೆ. ಹಾಗೂ ನಾನು ಯಾವಾಗಲೂ ಸರಿಯಾಗಿದ್ದೇನೆ ಎಂಬ ಮನಸ್ಥಿತಿ (Mood)ನಿಮ್ಮಲ್ಲಿ ಇರಲಿದೆ.


 

click me!