Astrology Tips: ಅವಶ್ಯವಿದ್ರೂ ಮಂಗಳವಾರ ಈ ವಸ್ತು ಖರೀದಿಸಲು ಮಾತ್ರ ಹೋಗ್ಬೇಡಿ!

By Suvarna NewsFirst Published Jun 2, 2023, 3:58 PM IST
Highlights

ವಾರ, ತಿಥಿಗಳನ್ನು ನೋಡ್ದೇ ನಾವು ವಸ್ತುಗಳನ್ನು ಖರೀದಿ ಮಾಡಿರ್ತೇವೆ. ಅದ್ರಿಂದ ದೊಡ್ಡ ಸಮಸ್ಯೆ ಏನೆಲ್ಲ ಎಂದುಕೊಳ್ತೇವೆ. ಆದ್ರೆ ನಮಗೆ ಅರಿವಿಲ್ಲದೆ ನಮ್ಮ ಹಣ ಖಾಲಿಯಾಗ್ತಿರುತ್ತದೆ. ಅದಕ್ಕೆ ನಾವು ಖರೀದಿ ಮಾಡಿದ ವಸ್ತು ಹಾಗೂ ದಿನ ಎರಡೂ ಕಾರಣವಾಗಿರುತ್ತದೆ. 
 

ಹಿಂದೂ ಧರ್ಮದಲ್ಲಿ ವಾರದ ಎಲ್ಲ ದಿನವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಒಂದೊಂದು ದಿನವನ್ನು ಒಂದೊಂದು ದೇವರಿಗೆ ಅರ್ಪಣೆ ಮಾಡಲಾಗಿದೆ. ಆ ದಿನ ಆ ದೇವರನ್ನು ಪೂಜಿಸುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಬರೀ ದೇವರ ಪೂಜೆ ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಕೆಲಸವನ್ನು ಕೂಡ ವಾರದ ಪ್ರಕಾರ ಹಂಚಲಾಗಿದೆ. ಎಲ್ಲ ದಿನ ಎಲ್ಲ ಕೆಲಸ ಮಾಡುವುದು ಸೂಕ್ತವಲ್ಲ. ನಿಷೇಧಿತ ಕೆಲಸ ಮಾಡುವುದರಿಂದ ಧನಹಾನಿ ಹಾಗೂ ಮನೆಯಲ್ಲಿ ಅಶಾಂತಿ ಉಂಟಾಗಬಹುದು. 

ಮಂಗಳವಾರ (Tuesday) ವನ್ನು ಹಿಂದೂ (Hindu) ಧರ್ಮದಲ್ಲಿ ಹನುಮಂತನಿಗೆ ಅರ್ಪಿಸಲಾಗಿದೆ.  ಹನುಮಂತನ ಪೂಜೆ (Worship) ಯನ್ನು ಭಕ್ತರು, ಶ್ರದ್ಧಾ ಭಕ್ತಿಯಿಂದ ಮಾಡ್ತಾರೆ. ಹನುಮಂತನ ಅನುಗ್ರಹಕ್ಕೆ ಪಾತ್ರರಾಗ್ತಾರೆ.  ಮಂಗಳವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬಹುದು. ಹಾಗಂತ ಈ ದಿನ ಕೆಲ ಕೆಲಸಕ್ಕೆ ನಿಷೇಧವಿದೆ. ಆ ಕೆಲಸಗಳನ್ನು ನೀವು ಅಪ್ಪಿತಪ್ಪಿ ಮಾಡಿದ್ರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಮಂಗಳವಾರ ಯಾವ ವಸ್ತುವನ್ನು ಖರೀದಿ ಮಾಡಬಾರದು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

Latest Videos

ತುಲಾ ರಾಶಿಯವರಿಗೆ ಯಾರು ಉತ್ತಮ ಸಂಗಾತಿ...?

ಮಂಗಳವಾರ ಈ ಕೆಲಸ ಮಾಡ್ಬೇಡಿ  - ಈ ವಸ್ತು ಕೊಳ್ಳಬೇಡಿ :

ಹೊಸ ಮನೆ _ ಭೂಮಿ ಪೂಜೆ : ಮಂಗಳವಾರ ಹೊಸ ಮನೆಯನ್ನು ಖರೀದಿ ಮಾಡಬಾರದು. ಹೊಸ ಮನೆ ಖರೀದಿ ಮಾಡಿ, ಭೂಮಿ ಪೂಜೆ ಮಾಡಿದ್ರೆ ಆರ್ಥಿಕ ನಷ್ಟವುಂಟಾಗುತ್ತದೆ. ಕುಟುಂಬಸ್ಥರು ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ. ಮನೆಯ ಮುಖ್ಯಸ್ಥರಿಗೆ ಇದು ಹಾನಿಕಾರಕವೆನ್ನಲಾಗುತ್ತದೆ. ಮಂಗಳನನ್ನು ಭೂಮಿ ಪುತ್ರ ಎನ್ನಲಾಗುತ್ತದೆ. 

ಕಪ್ಪು ಬಟ್ಟೆ ಹಾಗೂ ಕಬ್ಬಿಣದ  ವಸ್ತು : ಮಂಗಳವಾರ ನೀವು ಕಪ್ಪು ಬಣ್ಣದ ಬಟ್ಟೆಯನ್ನು ಖರೀದಿಸುವ ಸಹವಾಸಕ್ಕೆ ಹೋಗ್ಬೇಡಿ. ಹಾಗೆಯೇ ಮಂಗಳವಾರದ ದಿನ ಕಪ್ಪು ಬಟ್ಟೆಯನ್ನು ಧರಿಸಬೇಡಿ. ಮಂಗಳವಾರ ನೀವು ಕೆಂಪು ಹಾಗೂ ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸಬೇಕು. ನಿಮ್ಮ ಜಾತಕದಲ್ಲಿ ಮಂಗಳ ದೋಷವಿದ್ದರೆ ಇದ್ರಿಂದ ದೋಷ ಕಡಿಮೆಯಾಗುತ್ತದೆ. ಇದಲ್ಲದೆ ನೀವು ಯಾವುದೇ ಕಬ್ಬಿಣದ ವಸ್ತುವನ್ನು ಮಂಗಳವಾರ ಖರೀದಿ ಮಾಡಬೇಡಿ. ಕಬ್ಬಿಣದ ವಸ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಒಂದಿಲ್ಲೊಂದು ಅಶುಭ ಘಟನೆ ಮನೆಯಲ್ಲಿ ನಡೆಯುತ್ತದೆ.

ಇದು ಸಮುದ್ರ ಶಾಸ್ತ್ರ: ದಯೆ ಮತ್ತು ಪ್ರಾಮಾಣಿಕರ ಸಂಕೇತ ಈ ಬೆರಳು

ಗಾಜಿನ ವಸ್ತುಗಳು : ಮಂಗಳವಾರ ನೀವು ಗಾಜಿನ ವಸ್ತುಗಳನ್ನು ಕೂಡ ಖರೀದಿ ಮಾಡದಿರುವುದು ಒಳ್ಳೆಯದು. ಹಣಕಾಸಿನ ಸಮಸ್ಯೆ ಮನೆ ಮಾಡುತ್ತದೆ. ಮನೆಯಲ್ಲಿ ಅಶಾಂತಿ, ಜಗಳಕ್ಕೆ ಇದು ಕಾರಣವಾಗುತ್ತದೆ. ಮಂಗಳವಾರದ ದಿನ ಗಾಜಿನ ಯಾವುದೇ ವಸ್ತುವನ್ನು ಉಡುಗೊರೆಯಾಗಿ ನೀಡಬೇಡಿ, ಉಡುಗೊರೆಯಾಗಿ ಪಡೆಯಬೇಡಿ. ಇದ್ರಿಂದ ಹಣದ ನಷ್ಟವಾಗುತ್ತದೆ.

ಶೃಂಗಾರದ ವಸ್ತುಗಳು (Cosmetics) : ಮಂಗಳವಾರ ಮಹಿಳೆಯರು ಮನೆಗೆ ಯಾವುದೇ ಹೊಸ ವಸ್ತುಗಳನ್ನು ತರಬಾರದು. ವಿವಾಹಿತ ಮಹಿಳೆಯರು ಶೃಂಗಾರದ ವಸ್ತುಗಳನ್ನು ಕೂಡ ಖರೀದಿ ಮಾಡಬಾರದು. ಮಂಗಳವಾರ ಹನುಮಂತನಿಗೆ ಕುಂಕುಮವನ್ನು ಅರ್ಪಿಸಲಾಗುತ್ತದೆ. ಹಾಗಾಗಿ ಆ ದಿನ ಕುಂಕುಮ ಖರೀದಿ ಮಾಡಬಾರದು ಎನ್ನಲಾಗುತ್ತದೆ. ಇದ್ರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪತಿ – ಪತ್ನಿ ಮಧ್ಯೆ ಗಲಾಟೆ, ಜಗಳವಾಗುತ್ತದೆ.

ಹಾಲಿನ ಸ್ವೀಟ್ (Milk Sweet) : ಮಂಗಳವಾರದ ದಿನ ಹಾಲಿನಿಂದ ಮಾಡಿದ ಯಾವುದೇ ಸಿಹಿಯನ್ನು ಖರೀದಿ ಮಾಡಬಾರದು. ಮನೆಯಲ್ಲಿ ಧನಹಾನಿ, ಸಮಸ್ಯೆಗೆ ಇದು ಕಾರಣವಾಗುತ್ತದೆ. ಹಾಲು ಚಂದ್ರನ ಅಂಶ. ಮಂಗಳ ಹಾಗೂ ಚಂದ್ರ ಪರಸ್ಪರ ವಿರುದ್ಧ. ಮಂಗಳವಾರದ ದಿನ ನೀವು ಹನುಮಂತನಿಗೆ ಹಾಲಿನ ಸಿಹಿಯನ್ನು ನೈವೇದ್ಯಕ್ಕೆ ನೀಡಬಾರದು. ಯಾರಿಗೂ ಹಾಲಿನ ಸಿಹಿಯನ್ನು ದಾನ ಕೂಡ ಮಾಡಬೇಡಿ.

ಸಾಸಿವೆ ಎಣ್ಣೆ (Mustard Oil) : ಮಂಗಳವಾರ ಸಾಸಿವೆ ಎಣ್ಣೆಯನ್ನು ಖರೀದಿ ಮಾಡಬಾರದು. ನೀವು ದಾನದ ರೂಪದಲ್ಲೂ ಸಾಸಿವೆ ಎಣ್ಣೆಯನ್ನು ನೀಡಬೇಡಿ. ಈ ದಿನ ನೀವು ಮಲ್ಲಿಗೆ ಎಣ್ಣೆಯನ್ನು ಖರೀದಿ ಮಾಡಬಹುದು. 
 

click me!